ಕಾಲೇಜಿಗೆ ಹೋಗುವ ಸೊಸೆ


Team Udayavani, Dec 14, 2018, 6:00 AM IST

21.jpg

ನಮ್ಮಜ್ಜಿ ಕಾಲದಿಂದಲೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಈ ಕಾಲಕ್ಕೆ ಅದನ್ನು ಅನ್ವಯಗೊಳಿಸಬೇಕಾದರೆ, ಪ್ರತಿಯೊಬ್ಬ ಹೆಣ್ಣಿನ ಏಳಿಗೆಯ ಹಿಂದೆ ಒಬ್ಬ ಗಂಡಿರುತ್ತಾನೆ ಎಂದು ಹೇಳಬೇಕು. ಜೊತೆಗೆ ಆಕೆಗೆ ಅವರಿಗೆ ಆಸರೆಯಾಗಿ ನಿಂತ ಹಲವಾರು ಜೀವಗಳಿರುತ್ತವೆ. ಅವರ ಪ್ರೀತಿ, ಹೆಗಲು, ಬೆಂಬಲ, ಧೈರ್ಯ ಅವಳನ್ನು ಸಮಾಜದಲ್ಲಿ ಎತ್ತಿ ಹಿಡಿಯುತ್ತದೆ. 

ಆಗ ತಾನೆ ಪಿಯು ಮುಗಿಸಿ ಡಿಗ್ರಿಗೆ ಸೇರಿದ್ದೆ. ಹೊಸ ಜಾಗ,
ಕಾಲೇಜು, ಹೊಸ ಸ್ನೇಹಿತರು. ಕಾಲೇಜು ಎಂಬ ಬಣ್ಣದ ಲೋಕ ತೆರೆದುಕೊಳ್ಳತೊಡಗಿತ್ತು. ನಿಧಾನವಾಗಿ ಒಬ್ಬೊಬ್ಬರೇ ಸ್ನೇಹಿತರಾಗ ತೊಡಗಿದ್ದರು. ಇವರೆಲ್ಲರ ಮಧ್ಯೆ ವಿಶೇಷವಾಗಿ ಕಂಡವಳು ನೀಲು.  ಮೂವತ್ತು ಜನ ಹುಡುಗಿಯರ ಗುಂಪಿನಲ್ಲಿ ನೀಲು ನಮ್ಮೆಲ್ಲರಿಗಿಂತ ಭಿನ್ನ. ಅವಳ ಕೊರಳಲ್ಲಿ ತಾಳಿ, ಕಾಲಲ್ಲಿ ಕಾಲುಂಗುರ ಎದ್ದು ಕಾಣುತ್ತಿತ್ತು. ಅವುಗಳಿಂದಲೇ ಅವಳಿಗೆ ಹತ್ತಿರವಾಗಲು ನಾವೆಲ್ಲರೂ ಸ್ವಲ್ಪ ಹಿಂದೇಟು ಹಾಕುತ್ತಿ¨ªೆವು. ಮಾತನಾಡುವಾಗಲೂ ಅಷ್ಟೇ, “ನೀವು-ಹೋಗಿ-ಬನ್ನಿ’ ಎಂದು ಗೌರವ ತೋರಿಸುತ್ತಿದ್ದುದೇ ಹೆಚ್ಚು. ಅವಳು ಬಂದಳೆಂದರೆ ಸಾಕು ತರಲೆ ಮಾತುಗಳನ್ನೆಲ್ಲ ನಿಲ್ಲಿಸಿ ಗಪ್‌ಚುಪ್‌ ಆಗಿ ಬಿಡುತ್ತಿದ್ದೆವು. ಅವಳನ್ನು ಕಂಡರೆ ನಮಗೆ ಒಂಥರಾ ಭಯಮಿಶ್ರಿತ ಗೌರವ. ಬದುಕಿನಲ್ಲಿ ನಮಗಿಂತ ಸ್ವಲ್ಪ ಮುಂದುವರೆದಿದ್ದಾಳೆಂಬ ಭಾವನೆ. 

ಆದರೆ, ಅವಳು ಹಾಗಲ್ಲ. ಒಂದು ದಿನ ಲಂಚ್‌ ಬ್ರೇಕ್‌ ಸಮಯದಲ್ಲಿ ಮೇಲೆದ್ದವಳೇ, “”ನನಗೆ ಹೀಗೆಲ್ಲ ಗೌರವ ತೋರಿಸಿ ದೂರ ಮಾಡಬೇಡ್ರಿ ಕಣೆ. ನನ್ನನ್ನು ಕೂಡ ನಿಮ್ಮಲ್ಲಿ ಒಬ್ಬಳಾಗಿ ಕಾಣಿ. ನನಗೆ ಮದುವೆ ಆಗಿದೆ ಅಷ್ಟೆ. ನನ್ನ ಹೆಸರಿನಲ್ಲಿನ ಕುಮಾರಿ ಹೋಗಿ ಶ್ರೀಮತಿ ಬಂದಿರಬಹುದು. ಹಾಗಂತ ನನ್ನಲ್ಲೇನು ಬದಲಾವಣೆಯಾಗಿಲ್ಲ. ಈಗಲೂ ನಾನು ನಿಮ್ಮಲ್ಲಿ ಒಬ್ಬಳೆಂದೇ ಎನ್ನುವ ಭಾವನೆ. ನನ್ನೊಳಗಿನ ಸ್ವಂತಿಕೆಗೆ ಮದುವೆ ಎನ್ನುವ ಬೇಲಿ ಪೊರೆಯುತ್ತಿದೆಯೇ ಹೊರತು ನನ್ನ ಬೆಳವಣಿಗೆಗೆ, ಸ್ವಾತಂತ್ರ್ಯಕ್ಕೆ ಮಾರಕವಾಗಿಲ್ಲ. ನಾನು ನಿಮ್ಮೊಟ್ಟಿಗಿ¨ªಾಗ ಮುಚ್ಚುಮರೆ ಮಾಡುವುದು ಬೇಕಿಲ್ಲ. ನೀವು ನನ್ನನ್ನು ಹೀಗೆ ದೂರ ತಳ್ಳಿದರೆ ನಾನು ಯಾವುದೋ ಗ್ರಹದಿಂದ ಬಂದವಳು ಎಂದು ನನಗೇ ಅನ್ನಿಸತೊಡಗುತ್ತದೆ. ಇದು ಓದಬೇಕೆನ್ನುವ ನನ್ನ ಮಹದಾಸೆಯನ್ನು ತಣ್ಣಗಾಗಿಸಬಹುದು. ದಯವಿಟ್ಟು ಅದಕ್ಕೆ ನೀವೇ ಕಾರಣರಾಗಬೇಡಿ”  ಎಂದು ತನ್ನೊಳಗಿನ ಭಾವನೆಗಳನ್ನು ಹೇಳಿಕೊಂಡಳು. ಜೊತೆಗೆ, “”ಹೀಗೆ ನೀವುಗಳು ನಡೆದುಕೊಂಡರೆ ಕೊಂದು ಬಿಡುತ್ತೇನೆ ಹುಶಾರ್‌” ಎಂದು ನಮ್ಮೆಲ್ಲರಿಗೂ ತಾಕೀತು ಮಾಡಿದಳು. 

ಅಂದಿನಿಂದ ನಾವು ಅವಳಿಗಲ್ಲ, ಅವಳೇ ನಮಗೆಲ್ಲ ಹೊಂದಿಕೊಂಡು ನಮಗಿಂತ ಹೆಚ್ಚು ತರಲೆ ಪುಟ್ಟಿಯಾಗಿ ಓದಿನಲ್ಲೂ ತಾನಂದುಕೊಂಡದ್ದನ್ನು ಸಾಧಿಸಿಯೇ ಬಿಟ್ಟಳು. ಈಗ ದೊಡ್ಡ ಕಂಪೆನಿಯಲ್ಲಿ ಮ್ಯಾನೇಜರ್‌ ಹುದ್ದೆಯನ್ನು ಅಲಂಕರಿಸಿ ಎಲ್ಲರಿಂದಲೂ ಸೈ ಎನ್ನಿಸಿಕೊಂಡೂ ಬಿಟ್ಟಳು. ಮದುವೆಯಾದ ಮೇಲೆ ಇನ್ನೇನು ಉಳಿದಿದೆ. ಮನೆಯೇ ಗುಡಿಯಮ್ಮ, ಪತಿಯೇ ದೇವರಮ್ಮ ಎಂದು ತಿಳಿದು ತಮ್ಮ ಕಾಲಮೇಲೆ ತಾವೇ ಕಲ್ಲು ಹಾಕಿಕೊಳ್ಳುವವರಿದ್ದಾರೆ. ಮದುವೆ ಮಾಡಿ ತಂದೆತಾಯಿ ನನ್ನ ಜೀವನವ ಹಾಳು ಮಾಡಿದರು ಎಂದು ಅವರ ಮೇಲೆ ಗೂಬೆ ಕೂರಿಸುವವರೂ ಇದ್ದಾರೆ. ಆದರೆ, ಇಂಥವರ ಮಧ್ಯೆ ನೀಲು ಅಂತವರು ವಿಶೇಷವಾಗಿ ಕಾಣುತ್ತಾರೆ ಮತ್ತು ತಾನಂದುಕೊಂಡದ್ದನ್ನು ಸಾಧಿಸಿಯೂ ಬಿಡುತ್ತಾರೆ. ಆದರೆ, ಅವರ ಹಾದಿ ಅಷ್ಟು ಸುಲಭದ್ದಾಗಿರುವುದಿಲ್ಲ. ಮನೆಯಲ್ಲಿ ಗಂಡ, ಅವನ ಮನೆಯವರನ್ನು ಒಪ್ಪಿಸಿ ಮನೆಯಿಂದ ಹೆಜ್ಜೆ ಹೊರಗಿಡುವುದರಿಂದ ಹಿಡಿದು ಓದಿನ ವೆಚ್ಚದವರೆಗೆ, ಹೊರಗೊಗಿ ಏನೇನು ಮಾಡುತ್ತಾಳೆ ಎನ್ನುವ ಅವರ ಅನುಮಾನಗಳಿಗೆ ಪ್ರತಿದಿನ ಅವಳು ಉತ್ತರಿಸಬೇಕಾಗುತ್ತದೆ. ಅವೆಲ್ಲವನ್ನು ಸಮಾಧಾನದಿಂದ ನಿಭಾಯಿಸಿ ಗೆಲ್ಲುವವಳು ಮಾತ್ರ ಸಾಧಿಸಲು ಸಾಧ್ಯ. ಇಲ್ಲವಾದರೆ ತನ್ನ ವ್ಯಕ್ತಿತ್ವವನ್ನೇ ಮರೆತು ಬಾಳಬೇಕಾಗುತ್ತದೆ.

ಇದು ಎಲ್ಲರ ಬದುಕಿನಲ್ಲೂ ಬರುವ ಹಂತವಲ್ಲ. ಈ ಹಂತದ ಒಳಗೆ ನುಸುಳಿ ಜೀವನದ ಮೆಟ್ಟಿಲ ಏರಬಯಸುವವರಿಗೆ ತನ್ನ ಮೇಲೆ ಅಗಾಧ ನಂಬಿಕೆ ಇರಬೇಕು, ಸಾಧಿಸುವ ಛಲ ಇರಬೇಕು, ಇದೆಲ್ಲದಕ್ಕೂ ಮುಖ್ಯವಾಗಿ ಗಂಡ ಮತ್ತು ಅವನ ಮನೆಯವರು ಅವಳ ಬೆನ್ನೆಲುಬಾಗಿ ನಿಲ್ಲಬೇಕು. ನಮ್ಮ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣಿನ ಆಸೆ-ಆಕಾಂಕ್ಷೆಗಳನ್ನು ಮುರುಟಿಯೋ ಅಥವಾ ತಿಳಿದೂ ತಿಳಿಯದ ಹಾಗೆ ನಟಿಸಿಯೋ ಅಥವಾ ತುಳಿದೋ ಮುನ್ನುಗ್ಗುವ ಗಂಡು ಪ್ರಾಣಿಗಳೇ ಹೆಚ್ಚು. ಆದರೆ, ಎಲ್ಲರೂ ಹಾಗಲ್ಲ. ಹೆಣ್ಣು ಕೂಡ ನಮ್ಮ ಹಾಗೆಯೇ ಒಂದು ಜೀವ. ಅದಕ್ಕೂ ನೂರೆಂಟು ಕನಸುಗಳಿರುತ್ತವೆ. ಎಲ್ಲವನ್ನೂ ಈಡೇರಿಸಲು ಸಾಧ್ಯವಾಗದಿದ್ದರೂ ಕೆಲವೊಂದನ್ನಾದರೂ ಪ್ರಯತ್ನಪಡಬಹುದೆಂದು ಆಲೋಚಿಸುವ ಗಂಡಸರಿ¨ªಾರೆ. ಅವಳು ಹತ್ತುವ ಮೆಟ್ಟಿಲುಗಳಲ್ಲಿ ಆಸರೆಯಾಗುವ ಗಂಡನ ಮನೆಯವರಿ¨ªಾರೆ. ಸಾಮಾನ್ಯ ಸಮಾಜದ ಮುಂದೆ ಇಂತಹವರು ಎದ್ದು ಕಾಣುತ್ತಾರೆ.

ಆದರೆ, ಅವರ ಹಾದಿ ಅಷ್ಟು ಸುಲಭದ್ದಲ್ಲ. ಸಮಾಜದ ಕಟ್ಟುಪಾಡಿಗೆ, ಮೂದಲಿಕೆಗೆ ಬೆನ್ನು ಮಾಡಿ ಮುನ್ನುಗ್ಗಬೇಕಾಗುತ್ತದೆ. ಅವಳನ್ನು ಓದಿಸುವ ಸಮಯ, ಅದು ಅವಳೊಬ್ಬಳ ಪರೀಕ್ಷೆಯಲ್ಲ. ಒಂದಿಡೀ ಕುಟುಂಬದ ಸತ್ವ ಪರೀಕ್ಷೆ. ಅವಳಿಗೇನು ಬಂದಿದೆ ಏನೊಓದ್ತಾಳಂತೆ ಇವರು ಓದಿಸ್ತಾರಂತೆ, ಅತ್ತೆಮನೆಯವರಿಗಾದರೂ ಬುದ್ಧಿ ಬೇಡವೆ ? ಮಗನಿಗೇನಕ್ಕೆ ಮದುವೆ ಮಾಡಿ¨ªಾರೆ? ಅತ್ತೆಗೂ ವಯಸ್ಸಾಯ್ತು ರಾಮಾ-ಕೃಷ್ಣ ಅಂತ ಕುಂತು ತಿನ್ನೋ ವಯಸ್ಸಿನಲ್ಲಿ ಮಗನ ಜೊತೆಗೆ ಸೊಸೆಗೂ ಮಾಡಿ ಬಡಿಸುತ್ತಿ¨ªಾಳಂತೆ. ಮೊಮ್ಮಕ್ಕಳ ಆಡಿಸುವ ವಯಸ್ಸಿನಲ್ಲಿ ಇದೇನ್‌ ಕರ್ಮ. ಇಷ್ಟೇ ಅಲ್ಲಾ, ಕಾಲೇಜಿನಲ್ಲಿ ಯಾವನ್ನಾದರೂ ಕಟ್ಟಿಕೊಂಡು ಅವಳು ಓಡಿ ಹೋದರೆ ಇವರಿಗೆ ಬುದ್ಧಿ ಬರುತ್ತದೆ- ಹೀಗೆ ಕೇಳಲು ಅಸಾಧ್ಯವಾದ ಮಾತುಗಳನ್ನೂ ಎದುರಿಸಬೇಕಾಗುತ್ತದೆ.

ಇವೆಲ್ಲದರ ಮಧ್ಯೆ ಎಲ್ಲವನ್ನೂ ಎದುರಿಸಿ ಹೆಣ್ಣೊಬ್ಬಳ ಆಸೆಗೆ, ಕನಸಿಗೆ ನೀರೆರೆಯುವ ಬಹಳಷ್ಟು ಮಂದಿ ನಮ್ಮ ಮಧ್ಯೆಯೇ ಇ¨ªಾರೆ. ಅಂತವರು ಅವಳ ದೃಷ್ಟಿಯಲ್ಲಿ ವಿಶೇಷ ಸ್ಥಾನವನ್ನು ಅಲಂಕರಿಸಿಬಿಡುತ್ತಾರೆ. ನಾಲ್ಕು ದಿನ ನಾಲ್ಕುನೂರು ಮಾತನಾಡಿದ ಸಮಾಜವೇ ಅವರನ್ನು ಮುಂದೊಂದು ದಿನ ಹೊಗಳಲು ಪ್ರಾರಂಭಿಸುತ್ತದೆ. ಇದೆಲ್ಲದಕ್ಕೂ ತಾಳ್ಮೆ ಇರಬೇಕು ಅವಳಲ್ಲಿಯೂ, ಗಂಡನಲ್ಲಿಯೂ ಮತ್ತು ಅವನ ಮನೆಯವರಲ್ಲಿಯೂ. ಈ ತಾಳ್ಮೆ ಸಹನೆ ಬೇರೆ ಯಾರೋ ಹೇಳಿ ಬರುವಂತಹುದಲ್ಲ. ಸೊಸೆಯೂ ನಮ್ಮ ಮಗಳಿದ್ದ‌ಂತೆಯೇ ಎನ್ನುವ ಭಾವನೆ ಅತ್ತೆಮನೆಯವರಲ್ಲಿ, ಹಾಗೆಯೇ ಹೆಂಡತಿಯೂ ನನ್ನಂತೆಯೇ ಒಂದು ಮಹಾತ್ವಾಕಾಂಕ್ಷೆಯನ್ನುಹೊತ್ತ ಜೀವ ಎಂದು ಗಂಡನಿಗೆ ಅನ್ನಿಸಬೇಕು. ಅದು ಸಾಧ್ಯವಾದರೆ ಮಾತ್ರ ಹೆಣ್ಣೊಬ್ಬಳ ಏಳಿಗೆಯಾಗುತ್ತದೆ.

ಏಕೆಂದರೆ, ಕೆಲವೊಮ್ಮೆ ಅದರಲ್ಲೂ ಹಳ್ಳಿ ಕಡೆ, ತವರು ಮನೆಯಲ್ಲಿ ಹೆಣ್ಣಿಗೆ ಪ್ರೋತ್ಸಾಹ ಸಿಗುವುದು ತುಂಬಾ ಕಡಿಮೆ. ಒಂದು ಹೋಗಿ ಮತ್ತೂಂದಾದರೆ ಮಗಳನ್ನು ಮದುವೆಯಾಗುವವರಾರು? ಚಿಕ್ಕವಯಸ್ಸಿನಲ್ಲೇ ಮದುವೆ ಮಾಡಿದರೆ ಸರಿ, ವಯಸ್ಸಾದ ಮೇಲೆ ಹುಡುಗ ಸಿಗುವುದು ಕಷ್ಟ ಎನ್ನುವ ಭಾವನೆ ಅವರದು. ಇಂತಹ ಸಂದರ್ಭದಲ್ಲಿ ಗಂಡನ ಮನೆಯ ಪ್ರೋತ್ಸಾಹ ಅವಳಿಗೆ ಬೇಕಾಗುತ್ತದೆ. ಅದಲ್ಲದೆ ಇವಳು ಕಾಲೇಜಿಗೆ ಹೋದರೆ ಮನೆಯ ಕೆಲಸಗಳಲ್ಲಿ ಕೈಜೋಡಿಸಲು ಸಾಧ್ಯವಾಗದೆ ಕೆಲವೊಮ್ಮೆ ಅತ್ತೆ-ಸೊಸೆಯ ಮಧ್ಯೆ, ಗಂಡ- ಹೆಂಡತಿಯ ಮಧ್ಯೆ ಶೀತಲ ಸಮರದ ಸಂದರ್ಭಗಳು ಎದುರಾಗುತ್ತವೆ. ಅದೆಲ್ಲವನ್ನೂ ನಿಭಾಯಿಸಿಕೊಂಡು ಸಾಗುವ ಜೀವಗಳು ಜೀವನದ ಇನ್ನೊಂದು ಮಜಲನ್ನು ಹತ್ತುತ್ತವೆ. ಇಲ್ಲಿ ಮೆಟ್ಟಿಲು ಹತ್ತಿದವರಿಗೆ ಮಾತ್ರವಲ್ಲ, ಅವಳಿಗೆ ಸಾಥ್‌ ನೀಡಿದ ಪ್ರತಿಯೊಬ್ಬರಿಗೂ ಅವಳ ಗೆಲುವಿನ ಹಿರಿಮೆ ಸಲ್ಲುತ್ತದೆ.

ನಮ್ಮಜ್ಜಿ ಕಾಲದಿಂದಲೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಈ ಕಾಲಕ್ಕೆ ಅದನ್ನು ಅನ್ವಯಗೊಳಿಸಬೇಕಾದರೆ, ಪ್ರತಿಯೊಬ್ಬ ಹೆಣ್ಣಿನ ಏಳಿಗೆಯ ಹಿಂದೆ ಒಬ್ಬ ಗಂಡಿರುತ್ತಾನೆ ಎಂದು ಹೇಳಬೇಕು. ಜೊತೆಗೆ ಆಕೆಗೆ ಅವರಿಗೆ ಆಸರೆಯಾಗಿ ನಿಂತ ಹಲವಾರು ಜೀವಗಳಿರುತ್ತವೆ. ಅವರ ಪ್ರೀತಿ, ಹೆಗಲು, ಬೆಂಬಲ, ಧೈರ್ಯ ಅವಳನ್ನು ಸಮಾಜದಲ್ಲಿ ಎತ್ತಿ ಹಿಡಿಯುತ್ತದೆ. ಅವಳ ಯಶಸ್ಸಿಗೆ ಅವರು ತಮ್ಮನ್ನು ಧಾರೆ ಎರೆದಿರುತ್ತಾರೆ. ಇಂತಹುದೇ ಅದೆಷ್ಟೋ ಸಂಬಂಧಗಳು, ಗಂಡ, ಅತ್ತೆ-ಮಾವ ನಮ್ಮೆಲ್ಲರ ಮಧ್ಯೆಯೇ ಇದ್ದಾರೆ ಮತ್ತು ಹೆಣ್ಣುಮಕ್ಕಳ ಏಳಿಗೆಗೆ ದಾರಿದೀಪಗಳಾಗುತ್ತಿದ್ದಾರೆ.

ಜಮುನಾರಾಣಿ ಎಚ್‌. ಎಸ್‌.

ಟಾಪ್ ನ್ಯೂಸ್

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.