ಕಾರ್ ಕ್ರೇಜ್, ಸಣ್ಣ ಕಾರುಗಳಿಗೆ ಬೇಡಿಕೆ
Team Udayavani, Dec 14, 2018, 12:34 PM IST
ಪ್ರತಿಷ್ಠೆಗಾಗಿ ಕಾರು ಕಾರುಕೊಳ್ಳುವ ಕ್ರಮ ಆಗಿತ್ತು. ಆದರೆ ಈಗ ಹಾಗಲ್ಲ. ಕಾರೊಂದಿದ್ದರೆ ಸಾಲದು ಅದರಲ್ಲೇನಿದೇ ಎನ್ನುವ ಕುತೂಹಲ. ಇದಕ್ಕಾಗಿಯೇ ವಿವಿಧ ಕಂಪೆನಿಗಳು ವಿಭಿನ್ನ ರೀತಿಯ, ವಿಶಿಷ್ಟ ವಿನ್ಯಾಸದ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಗ್ರಾಹಕರೂ ಕೂಡ ಹೊಸ-ಹೊಸ ಕಾರುಗಳಿಗೆ ಮನಸೋಲುತ್ತಿದ್ದಾರೆ.
ನೆಮ್ಮದಿಯ ಮತ್ತು ಸುಖ ಪ್ರಯಾಣಕ್ಕೆ ಕಾರೊಂದು ಬೇಕೇಬೇಕು. ಬಜೆಟ್‌ಗೆ ಅನುಗುಣವಾಗಿ ಕಾರು ಖರೀದಿಸಿ ಆನಂದಿಸುವುದು ಇದ್ದೇ ಇದೆ. ಆದರೆ ಅದೇ ಕಾರು ಪ್ರಯಾಣದ ಜತೆಗೆ ನಗರದ ಆವಶ್ಯಕತೆಯ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಬೇಕಾದುದು ಅಗತ್ಯ. ಅದಕ್ಕಾಗಿಯೇ ಹ್ಯಾಚ್‌ಬ್ಯಾಕ್, ಎಸ್‌ಯುವಿ ಮಾದರಿ ಕಾರುಗಳಿಗೆ ಬೇಡಿಕೆಯೂ ಜಾಸ್ತಿ. ಜತೆಗೆ ಕಾರು ಮಾರುಕಟ್ಟೆಯಲ್ಲಿ ಹೊಸತೇನಿದೆ ಎಂಬ ಕುತೂಹಲವೂ ಯುವಕರದ್ದು.
ಮಂಗಳೂರಿನಲ್ಲಿ ಹ್ಯಾಚ್‌ಬ್ಯಾಕ್ ಮಾದರಿಯ ಕಾರುಗಳನ್ನು ಕೊಳ್ಳುವವರೇ ಜಾಸ್ತಿ. ಹಿಂಭಾಗ ಡಿಕ್ಕಿ ರಹಿತವಾಗಿರುವ ಈ ಮಾದರಿಯ ಕಾರುಗಳು, ನೋಡಲು ಸಣ್ಣದಾಗಿರುತ್ತವೆ. ರೆನಾಲ್ಟ್ ಶೋರೂಂನ ಸಿಬಂದಿ ಪ್ರಕಾರ, ಸದ್ಯಕ್ಕೆ ಹ್ಯಾಚ್‌ಬ್ಯಾಕ್ ಕಾರುಗಳು ಹೆಚ್ಚು ಮಾರಾಟವಾಗುತ್ತಿವೆ. ಮಂಗಳೂರಿಗೆ ಈ ಮಾದರಿಯ ಕಾರುಗಳೇ ಹೆಚ್ಚು ಸೂಕ್ತವಾಗಿರುತ್ತದೆ ಎನ್ನುತ್ತಾರೆ. ಸ್ವಿಪ್ಟ್, ಐ20, ಆಲ್ಟೋ, ಸೆಲೆರಿಯೋ ಮುಂತಾದ ಕಾರುಗಳು ಮಾರುಕಟ್ಟೆಗೆ ಬಂದು ಸಮಯವಾದರೂ, ಕೊಳ್ಳುವವರ ಸಂಖ್ಯೆ ಇಳಿದಿಲ್ಲ ಎನ್ನುತ್ತಾರೆ ಅವರು.
ಹ್ಯಾಚ್‌ಬ್ಯಾಕ್ ಹೊರತುಪಡಿಸಿದರೆ ಎಸ್‌ಯುವಿ ಮಾದರಿಯ ಕಾರುಗಳು ಚಲನೆಯಲ್ಲಿವೆ. ಕಾರು ಕ್ರೇಝ್ಯು ವಕರಲ್ಲಂತೂ ಹೆಚ್ಚೇ ಇರುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಹೊಸತೇನಿದೆ ಎಂದು ನೋಟ ಹರಿಸುವುದು ಸಾಮಾನ್ಯ. ಯುವ ಜಮಾನದ ಅಭಿಲಾಷೆಗಳಿಗೆ ತಕ್ಕಂತೆ ಕಾರು ತಯಾರಿಕಾ ಕಂಪೆನಿಗಳೂ ಹೊಸ ಫೀಚರ್ ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಲೇ ಇರುತ್ತವೆ.
ವಿಭಿನ್ನ ಫೀಚರ್ ಗಳು
ಟಾಟಾ ಕಂಪೆನಿಯವರ ಟಾಟಾ ಹೆರಿಯರ್ ಹೊಸ ಮಾದರಿಯ ಕಾರು ಯುವ ಜಮಾನಕ್ಕೆ ತಕ್ಕಂತೆಯೇ ಹೊಸತನದೊಂದಿಗೆ ಸಿದ್ಧವಾಗಿ ನಿಂತಿದೆ. ಈ ಕಾರು 2019 ಜನವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದೆ. ಆದರೆ ಬಿಡುಗಡೆಗೂಮುನ್ನವೇ ಕಾರು ಬಗ್ಗೆ ವಿಚಾರಿಸಲು ಗ್ರಾಹಕರು ಬರುತ್ತಲೇ ಇರುತ್ತಾರೆ. ಇದು ಈ ಹಿಂದಿನ ಕಾರುಗಳಿಗಿಂತ ಹೆಚ್ಚಿನ ಫೀಚರ್ಸ್ ರ್ನ್ನು ಒಳಗೊಂಡಿರುತ್ತದೆ. ಆದರೆ ಬಿಡುಗಡೆ ಸಂದರ್ಭದಲ್ಲಷ್ಟೇ ಫೀಚರ್ ಮಾಹಿತಿಗಳು ಲಭ್ಯವಾಗಲಿವೆ ಎಂದು ಹೋಂಡಾ ಮ್ಯಾಟ್ರಿಕ್ಸ್‌ನ ಪ್ರಶಾಂತ್ ತಿಳಿಸಿದ್ದಾರೆ.
ಇನ್ನು ನೆಕ್ಸ್ಟ್ ಜನರೇಶನ್ ಕಾರು ಎಂದೇ ಬಿಂಬಿಸಲ್ಪಡುವ ಹುಂಡೈ ಸ್ಯಾಂಡ್ರೋ ಹೊಸ ಮಾದರಿಯ ಕಾರು ಈಗಾಗಲೇ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆಗೊಂಡಿದೆ. ಅತೀ ಕಡಿಮೆ ಅಂದರೆ 4.83 ಲಕ್ಷ ರೂ. ಆರಂಭಿಕ ಬೆಲೆ ಹೊಂದಿರುವ ಈ ಕಾರಿಗೆ ಮಂಗಳೂರಿನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬಂದಿರುವ ಈ ಕಾರು ವಿವಿಧ ಸೌಲಭ್ಯಗಳಿಗಾಗಿ ಮನ್ನಣೆ ಗಳಿಸಿದೆ. ಅಲ್ಲದೆ ಹೊಸತಾಗಿ ಪರಿಚಯವಾಗುತ್ತಿರುವ ರೆನಾಲ್ಟ್ ಕ್ವಿಡ್ ಕಾರು ಕೂಡ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿವೆ. ಇಷ್ಟೇ ಅಲ್ಲದೆ, ವಿವಿಧ ಕಾರು ಕಂಪೆನಿಗಳು ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧವಾಗಿವೆ.
ಸಣ್ಣ ಕಾರುಗಳಿಗೆ ಮನ್ನಣೆ
ಮಂಗಳೂರಿನಂತಹ ಬೆಳೆಯುತ್ತಿರುವ ನಗರದಲ್ಲಿ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆಯೇ ಅತಿಯಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು. ಆಲ್ಟೋ ಕಾರು ಗಾತ್ರದಲ್ಲಿ ಕಿರಿದಾಗಿರುವುದರಿಂದ ಇತರ ಕಾರುಗಳಿಗೆ ಹೋಲಿಸಿದರೆ ಹೆಚ್ಚು ಆರಾಮದಾಯಕ ಪ್ರಯಾಣ ಅನುಭವಿಸಲು ಸಾಧ್ಯವಿರುತ್ತದೆ. ಮಧ್ಯಮ ವರ್ಗದ ಮಂದಿಗೆ ಹೇಳಿ ಮಾಡಿಸಿದ ಕಾರು ಇದಾಗಿರುವುದರಿಂದ ಮತ್ತು ನಿರ್ವಹಣಾ ವೆಚ್ಚ ಅತಿ ಕಡಿಮೆಯಾದ್ದರಿಂದ ಈ ಕಾರಿಗೆ ಬೇಡಿಕೆ ಇದೆ. ಆಲ್ಟೋ ಕೆ10 ಕಾರು ಆಲ್ಟೋ ವೈಕೆ ಎಂಬ ಹೆಸರಿನೊಂದಿಗೆ ರೀಲಾಂಚ್ ಆಗುತ್ತಿದೆ. ಇವೆಲ್ಲ ಸಾಮಾನ್ಯ ವರ್ಗದ ಕಾರುಗಳಾದ್ದರಿಂದ ಮಂಗಳೂರು ನಗರದಲ್ಲಿ ದಿನನಿತ್ಯದ ಬಳಕೆಗೆ ಈ ಕಾರು ಬಳಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ.
ಯೋಚಿಸಿ ಯೋಜಿಸಿ
ಕಾರು ಖರೀದಿಸುವ ಮುನ್ನ ನೀವಿರುವ ಪ್ರದೇಶದ ಒಟ್ಟು ಆಗು ಹೋಗುಗಳ ಬಗ್ಗೆ ಯೋಚಿಸಿ ಅನಂತರ ಖರೀದಿಗೆ ಮುಂದಾಗಿ. ಪ್ರಯಾಣದ ಜತೆಗೆ ವಾಹನನಿಬಿಡ ರಸ್ತೆಗಳಲ್ಲಿ ಸಂಚಾರ, ಖರೀದಿಯ ನಂತರದ ನಿರ್ವಹಣಾ ಖರ್ಚು ವೆಚ್ಚಗಳು, ಪಾರ್ಕಿಂಗ್ ಸ್ಥಳಾವಕಾಶವನ್ನು ಗಮನದಲ್ಲಿಟ್ಟುಕೊಂಡು ಕಾರು ಖರೀದಿಸಿದರೆ ಉತ್ತಮ. ಗ್ರಾಮೀಣ ಭಾಗಗಳಲ್ಲಿ ಕಾರೆಂದರೆ ಎತ್ತರ, ಅಗಲ ಸೇರಿ ಗಾತ್ರದಲ್ಲಿ ಹಿರಿದಾಗಿರಬೇಕೆಂದು ಬಯಸುವವರೇ ಹೆಚ್ಚು. ಆದರೆ ಅದೇ, ನಗರ ಪ್ರದೇಶಕ್ಕೆ ಬಂದಾಗ ಕನಿಷ್ಠ ಗಾತ್ರದ, ಕುಟುಂಬದ ಸುಖ ಪ್ರಯಾಣಕ್ಕೆ ಹೊಸ ಅನುಭೂತಿ ನೀಡುವಂತಿರಬೇಕೆಂಬುದೇ ಹಲವರ ಆಶಯ. ಅದಕ್ಕಾಗಿಯೇ ನಗರವಾಸಿಗಳು ಸಣ್ಣ ಕಾರುಗಳ ಮೊರೆ ಹೋಗುವುದೇ ಹೆಚ್ಚು.
ಬೇಡಿಕೆಯಲ್ಲಿರುವ ಕಾರುಗಳು
ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುವ ರಿಟ್ಜ್, ಇಯಾನ್, ಸ್ಯಾಂಟ್ರೋ ಕಾರುಗಳೂ ನಗರದಲ್ಲಿ ಬೇಡಿಕೆ ಪಡೆಯುತ್ತಿವೆ. ಪ್ರಮುಖವಾಗಿ ಡಿವೈಡರ್ ಕ್ರಾಸ್ ಮಾಡಲು, ಸುಲಭ ಪಾರ್ಕಿಂಗ್‌ಗಾಗಿ ಸ್ಯಾಂಟ್ರೋ ಕಾರು ಬಳಕೆಯಾಗುತ್ತದೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.