ಸ್ಲೈಡ್ ಸ್ಲೈಟ್‌  ಕುರ್ತಾ


Team Udayavani, Dec 14, 2018, 12:55 PM IST

14-december-11.gif

ಫ್ಯಾಶನ್‌ ಜಗತ್ತೇ ಹಾಗೆ. ಅದು ಮಾಡುವ ಮೋಡಿ ಅನನ್ಯ. ಈ ಫ್ಯಾಶನ್‌ ಜಗತ್ತಿನ ವೇಗವೂ ಹಾಗೆಯೇ. ಕಣ್ಣು ಮುಚ್ಚಿ ಬಿಡುವುದರೊಳಗೆ ಫ್ಯಾಶನೇಬಲ್‌ ಆಗಿದ್ದ ಉಡುಗೆಯೋ, ಧರಿಸುವ ಇತರ ವಸ್ತುಗಳ್ಳೋ ಹಳೆಯದಾಗಿರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳ ಫ್ಯಾಶನ್‌ ಲೋಕದೊಳಗೊಂದು ಅದ್ಭುತದ ಆನಂದವೇ ಇರುತ್ತದೆ.

ಕುರ್ತಾ ಕಮಾಲ್‌ ಈಗಿನದು. ಹೆಣ್ಣು ಮಕ್ಕಳ ನೆಚ್ಚಿನ ದೈನಂದಿನ ತೊಡುಗೆಯಾದ ಕುರ್ತಾದಲ್ಲೂ ನಿತ್ಯ ನಿರಂತರ ಫ್ಯಾಶನ್‌ ನದ್ದೇ ಹವಾ. ಪ್ರತಿ ಬಾರಿ ಮಾರುಕಟ್ಟೆಗೆ ತೆರಳಿದಾಗಲೂ ಹೊಸತನ್ನು ಆರಿಸಿ ತರುವ ಮನಸ್ಸಾಗದೆ ಇರದು ಎಂಬಷ್ಟು ರೀತಿಯಲ್ಲಿ ಕುರ್ತಾದಲ್ಲಿ ಫ್ಯಾಶನ್‌ಗಳು ಬರುತ್ತಿವೆ.

ಸಿಂಪಲ್‌ ಉಡುಗೆಯಿದು
ಕುರ್ತಾ ಸಿಂಪಲ್‌ ಉಡುಗೆಯೆಂದೇ ಖ್ಯಾತಿಯಾಗಿದೆ. ಈ ಸಿಂಪಲ್‌ ಉಡುಗೆಯಲ್ಲಿಯೂ ಒಂದಷ್ಟು ಫ್ಯಾಶನ್‌ ಬೆರೆತು ಮಾಡರ್ನ್ ಲುಕ್‌ ನೀಡುವಲ್ಲಿ ಸಫಲವಾಗಿದೆ. ಮೊಣಕಾಲುದ್ದದ ಕುರ್ತಾ ಟಾಪ್‌ನಿಂದ ಹಿಡಿದು ಲಾಂಗ್‌ ಕುರ್ತಾದವರೆಗೆ ಸಾಕಷ್ಟು ಹೊಸ ರೀತಿಯ ಕುರ್ತಾಗಳನ್ನು ಧರಿಸಿ ನೋಡಿದ್ದಾಯಿತು. ಕುರ್ತಾ ಟಾಪ್‌ನಲ್ಲಿಯೇ ಶಾರ್ಟ್‌ ಮತ್ತು ಲಾಂಗ್‌ ಓವರ್‌ ಕೋಟ್‌ ಧರಿಸಿಯೂ ನೋಡಿದ್ದಾಯಿತು. ಶಾಲಿನಂತ ಧಿರಿಸನ್ನು ಕುರ್ತಾಕ್ಕೆ ಬೆಸೆದದ್ದಾಯಿತು. ಎರಡೂ ಕಡೆ ಕಟ್‌ ಹೊಂದಿರುವ ಕುರ್ತಾಗಳು, ಅಂಬ್ರಲ್ಲ ಮಾದರಿಯ ಕುರ್ತಾಗಳೂ ಹೆಣ್ಮಕ್ಕಳ ಸೌಂದರ್ಯವನ್ನು ಹೆಚ್ಚಿಸಲು ಮತ್ತು  ಆಕರ್ಷಣೀಯ ಲುಕ್‌ ನೀಡಲು ಕಾರಣವಾದವು. ಆ ಸಾಲಿಗೆ ಸೈಡ್‌ ಸ್ಲೈಟ್‌ ಕುರ್ತಾಗಳು ಹೊಸ ಸೇರ್ಪಡೆ.

ದೈನಂದಿನ ಕಚೇರಿ ಕೆಲಸಕ್ಕೆ, ಶಾಲಾ-ಕಾಲೇಜಿಗಳಲ್ಲದೆ ಯಾವುದೇ ತರಹದ ಫಂಕ್ಷನ್‌, ಟ್ರಿಪ್‌ ಗಳಿಗೂ  ಈ ಮಾದರಿಯ ಕುರ್ತಾ ಧರಿಸಿದರೆ ಆಕರ್ಷಕವಾಗಿ ಕಾಣುತ್ತದೆ. ಟ್ರಿಪ್‌ ತೆರಳುವಾಗ ಈ ಸೈಡ್‌ ಸ್ಲೈಟ್‌ ಕುರ್ತಾವನ್ನು ಜೀನ್ಸ್‌ ಪ್ಯಾಂಟ್‌ನೊಂದಿಗೆ ಧರಿಸಿ ಕೂಲಿಂಗ್‌ ಗ್ಲಾಸ್‌ ಧರಿಸಿದರೆ ಆಧುನಿಕ ಮತ್ತು ಬೋಲ್ಡ್‌ ಲುಕ್‌ ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಾಗಿ ಇದನ್ನು ಜೀನ್ಸ್‌ ಪ್ಯಾಂಟ್‌ ಗೇ ಧರಿಸುವುದಾದರೂ, ಡಿಸೈನ್ಡ್  ಮತ್ತು ಎಂಬ್ರಾಯ್ಡರಿ ವರ್ಕ್‌ ಹೊಂದಿರುವ ಕುರ್ತಾಗಳನ್ನು ಪ್ಲೈನ್‌ ಪ್ಯಾಂಟ್‌ ಅಥವಾ ಲೆಗ್ಗಿಂಗ್ಸ್‌ಗಳಿಗೆ ಧರಿಸಿದರೂ ಚೆನ್ನಾಗಿ ಕಾಣುತ್ತದೆ. ಪ್ಲೈನ್‌ ಕುರ್ತಾವನ್ನು ಡಿಸೈನ್ಡ್ ಪ್ಯಾಂಟ್‌ಗಳಿಗೆ ಧರಿಸಬಹುದು. ಆದರೆ ಎರಡೂ ಕೂಡ ಡಿಸೈನ್ಡ್  ಅಥವಾ ಪ್ಲೈನ್‌ ಆಗಿದ್ದರೆ ಚೆನ್ನಾಗಿ ಒಪ್ಪುವುದಿಲ್ಲ.

ಬೋಟ್‌ ನೆಕ್‌ ಇರಲಿ
ಸೈಡ್‌ ಸ್ಲೈಟ್‌ ಕುರ್ತಾಗಳನ್ನು ಆಯ್ಕೆ ಮಾಡುವಾಗ ಆದಷ್ಟು ಬೋಟ್‌ ನೆಕ್‌ ಹೊಂದಿರುವ ಕುರ್ತಾಗಳನ್ನೇ ಆಯ್ಕೆ ಮಾಡಿದರೊಳಿತು. ಏಕೆಂದರೆ ಬೋಟ್‌ ನೆಕ್‌ ಎಲ್ಲ ವಯೋಮಾನದ ಮಹಿಳೆಯರಿಗೂ ಚೆನ್ನಾಗಿ ಒಪುತ್ತದೆ. ಸಪೂರ ಶರೀರವನ್ನು ಹೊಂದಿರುವವರಿಗೆ ಬೋಟ್‌ ನೆಕ್‌ ಮಾದರಿಯ ಕುರ್ತಾಗಳೇ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. 

ಏನಿದು ಸೈಡ್‌ ಸ್ಲೈಟ್‌ ಕುರ್ತಾ
ಸದ್ಯಕ್ಕೆ ಫ್ಯಾಶನ್‌ ಲೋಕಕ್ಕೆ ಹೊಸ ಎಂಟ್ರಿ. ಸಿಂಪಲ್ಲಾದರೂ, ಮಾಡರ್ನ್ ಲುಕ್‌ ನೀಡುವ ಕುರ್ತಾಗಳಿವು. ಲಾಂಗ್‌ ಕುರ್ತಾ ಮಾದರಿಯಲ್ಲಿರುವ ಇದು, ಎಡ ಬದಿಯಲ್ಲಿ ಉದ್ದನೆಯ ಕಟ್‌ ಹೊಂದಿರುತ್ತದೆ. ಅರ್ಥಾತ್‌ ಸುಮಾರು ಕಾಲಿನಿಂದ ಹೊಟ್ಟೆಯ ಭಾಗದ ತನಕ ಎಡ ಬದಿಯಲ್ಲಿ ಕಟ್‌ ಇರುತ್ತದೆ. ಹೊಸ ಸ್ಟೈಲಿನ ಕುರ್ತಾ ಉಡುಗೆಯಾದ್ದರಿಂದ ಸಮಾರಂಭಗಳಿಗೂ ಧರಿಸಿ ನೋಡಬಹುದು.

 ಡಿ.ಬಿ.

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.