ವಿಶ್ ಟ್ರೀ : ಅನಾಥ ಮಕ್ಕಳಿಗೆ ಇದುವೇ ಕಲ್ಪವೃಕ್ಷ
Team Udayavani, Dec 15, 2018, 2:20 PM IST
ಇದು ಇಷ್ಟಾರ್ಥಗಳನ್ನು ಈಡೇರಿಸುವ ಮರ… ವಿಶ್ ಟ್ರೀ. ಅಸಂಖ್ಯ ಮಕ್ಕಳ ಕನಸನ್ನು ನನಸಾಗಿಸಿ ಅವರ ಕಂಗಳನ್ನು ಮಿನುಗಿಸುವ, ಮಕ್ಕಳ ಬಾಳಲ್ಲಿ ಮಂದಹಾಸ ಮೂಡಿಸುವ ಟ್ರೀ ಇದು. “ವಿಶ್ ಟ್ರೀ’ ತಂಡದ ಜೊತೆ ಕೈಜೋಡಿಸಿ ಯಾರು ಬೇಕಾದರೂ ಸಾಂತಾಕ್ಲಾಸ್ ಆಗಬಹುದು…
ಬಯಸಿದ್ದನ್ನೆಲ್ಲ ಕೊಡುವ ಮರ, ಕಲ್ಪವೃಕ್ಷ ಎಂಬ ನಂಬಿಕೆ ನಮ್ಮಲ್ಲಿದೆ. ದೇವಲೋಕದ ಆ ಮರ, ನಮ್ಮ ಎಲ್ಲ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎನ್ನುವುದು ಕಲ್ಪನೆಯಷ್ಟೇ. ಆದರೆ, ವಾಸ್ತವದಲ್ಲಿಯೂ ಅಂಥ ಮರವೊಂದಿದೆ. “ವಿಶ್ ಟ್ರೀ’ ಎಂಬ ಈ ಮರ, ಅನಾಥ ಮಕ್ಕಳ ಬೇಡಿಕೆಗಳನ್ನು ಪೂರೈಸುವ ಸಾಂತಾಕ್ಲಾಸ್‌ನಂತೆಯೇ ಜೋಳಿಗೆ ಹಿಡಿದು ನಿಂತಿದೆ.
ಏನಿದು ವಿಶ್ ಟ್ರೀ?
“ವಿಶ್ ಟ್ರೀ’ ಎಂಬುದು “ದೃಕ್ಷ್ಯಾ ಟ್ರಸ್ಟ್’ ಪ್ರಾರಂಭಿಸಿರುವ ಯೋಜನೆ. 4 ವರ್ಷಗಳ ಹಿಂದೆ, ಕೇರಳದ ಒಂದು ಮಾಲ್‌ನಲ್ಲಿ ಪ್ರಾರಂಭವಾಯ್ತು. ಟ್ರಸ್ಟ್‌ನವರು, ವಿವಿಧ ಅನಾಥಾಶ್ರಮಗಳಿಗೆ ಹೋಗಿ ಮಕ್ಕಳಿಗೆ ಏನು ಗಿಫ್ಟ್ ಬೇಕೆಂದು ಕೇಳಿದರು. ಆಗ 60 ಮಕ್ಕಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು. ನಂತರ ಮಾಲ್‌ನಲ್ಲಿ “ವಿಶ್ ಟ್ರೀ’ ಹೆಸರಿನಲ್ಲಿ, ಕ್ರಿಸ್‌ಮಸ್ ಗಿಡ ನೆಟ್ಟು, ಅದರ ರೆಂಬೆ- ಕೊಂಬೆಗಳಿಗೆ ಮಕ್ಕಳ ಬೇಡಿಕೆಗಳಿದ್ದ ಚೀಟಿಗಳನ್ನು ಅಂಟಿಸಲಾಯ್ತು. ಕ್ರಿಸ್‌ಮಸ್ ವೇಳೆ ಗಿಜಿಗಿಡುವ ಮಾಲ್‌ಗೆ ಬಂದ ಜನರು, ಆ ಬೇಡಿಕೆಗಳನ್ನು ಓದಿದರು. ತಮ್ಮ ಕೈಲಾದ ಗಿಫ್ಟ್ ಅನ್ನು ಖರೀದಿಸಿ, ಟ್ರಸ್ಟ್‌ನ ಸ್ವಯಂ ಸೇವಕರಿಗೆ ನೀಡಿದರು. ಹೀಗೆ ಆ ವರ್ಷದ ಕ್ರಿಸ್‌ಮಸ್‌ನಲ್ಲಿ 60 ಮಕ್ಕಳಿಗೂ ಗಿಫ್ಟ್ ಸಿಕ್ಕಿತು.
ಬೆಂಗಳೂರಿಗೆ ಕಾಲಿಟ್ಟ “ವಿಶ್ ಟ್ರೀ’…
ಕಳೆದ 4 ವರ್ಷಗಳಲ್ಲಿ, ಕೇರಳದ ಸಾವಿರಾರು ಅನಾಥ ಮಕ್ಕಳ ಬೇಡಿಕೆಗಳನ್ನು ಪೂರೈಸಿರುವ ವಿಶ್ ಟ್ರೀ, ಮೊದಲ ಬಾರಿಗೆ ಬೆಂಗಳೂರಿಗೆ ಕಾಲಿಟ್ಟಿದೆ. ದೃಕ್ಷ್ಯಾ ಟ್ರಸ್ಟ್, ಸದ್ಯಕ್ಕೆ ತನ್ನ ವೆಬ್‌ಸೈಟ್ ಮೂಲಕವೇ ದಾನಿಗಳಿಂದ ಗಿಫ್ಟ್ಗಳನ್ನು ಸಂಗ್ರಹಿಸುತ್ತಿದೆ. ಈಗಾಗಲೇ ವಿವಿಧ ಅನಾಥಾಲಯಗಳ, 750 ಮಕ್ಕಳ ಬೇಡಿಕೆಗಳನ್ನು ಸಂಗ್ರಹಿಸಿದ್ದು, ದಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಂದು ವಾರದಲ್ಲಿಯೇ 200 ಬೇಡಿಕೆಗಳನ್ನು ಜನ ಪೂರೈಸಿದ್ದಾರೆ. ಮೊದಲಿಗೆ ಟ್ರಸ್ಟ್, ಕೇವಲ 75 ಮಕ್ಕಳ ಬೇಡಿಕೆಗಳನ್ನು ಸಂಗ್ರಹಿಸಿ, ಅದನ್ನು 3 ವಾರದಲ್ಲಿ ಪೂರೈಸುವ ಗುರಿ ಹೊಂದಿತ್ತು. ಆದರೆ, ಫೇಸ್‌ಬುಕ್ ಪೇಜ್ ಮೂಲಕ, ಜನರಿಂದ ಜನರಿಗೆ ಮಾಹಿತಿ ಸಿಕ್ಕಿ, ಕೇವಲ 7 ಗಂಟೆಗಳಲ್ಲಿ ಅಷ್ಟೂ ಮಕ್ಕಳ ಆಸೆಗಳು ಈಡೇರಿದವು. ನಂತರ, ಹೆಚ್ಚೆಚ್ಚು ಅನಾಥಾಲಯಗಳಿಗೆ ಭೇಟಿ ನೀಡಿ, ಬೇಡಿಕೆಗಳನ್ನು ಸಂಗ್ರಹಿಸಲಾಗಿದೆ. ಈಗಾಗಲೇ 500 ಮಕ್ಕಳ ಆಶಯ ಈಡೇರಿದೆ.
ನೀವೂ ಸಾಂತಾ ಆಗಬಹುದು…
ನಿಮಗೂ ಸೀಕ್ರೆಟ್ ಸಾಂತಾ ಆಗೋ ಇಚ್ಛೆಯಿದ್ದರೆ, drikshya.com ಭೇಟಿ ಕೊಟ್ಟು, ನಿಮ್ಮ ವಿವರಗಳನ್ನು ನೀಡಿ. ನೀವು ಯಾವ ವಯಸ್ಸಿನ ಮಗುವಿಗೆ, ಏನನ್ನು ಕಳಿಸಬೇಕು ಮತ್ತು ಯಾವ ವಿಳಾಸಕ್ಕೆ ಕಳಿಸಬೇಕು ಎಂಬ ಮಾಹಿತಿಯನ್ನು ಟ್ರಸ್ಟ್ ನೀಡುತ್ತದೆ. ಹೀಗೆ ದಾನಿಗಳು ಆನ್‌ಲೈನ್ ಮೂಲಕ ಕಳಿಸಿದ ಗಿಫ್ಟ್ಗಳನ್ನು ಸಂಗ್ರಹಿಸಿ, ವಸ್ತುಗಳು ಗಿಫ್ಟ್ ಕೊಡಲು ಸೂಕ್ತವಾಗಿದೆಯೇ ಎಂದು ಪರಿಶೀಲಿಸಿ, ಬಣ್ಣದ ಪೇಪರ್‌ನಲ್ಲಿ ಪ್ಯಾಕ್ ಮಾಡಿ, ಸ್ವಯಂ ಸೇವಕರು ಅನಾಥಾಲಯದ ಮಕ್ಕಳಿಗೆ ತಲುಪಿಸುತ್ತಾರೆ. ಯಾವ ದಿನ ನಿಮ್ಮ ಗಿಫ್ಟ್, ಮಗುವಿನ ಕೈ ಸೇರುತ್ತದೆ ಎಂಬ ಮಾಹಿತಿಯನ್ನೂ ನೀಡುತ್ತಾರೆ. ಸಮಯವಿದ್ದರೆ ನೀವೂ ಆ ದಿನ ಖುದ್ದಾಗಿ ಹೋಗಿ, ಮಗುವಿನ ಕಣಿ¾ಂಚನ್ನು ನೋಡಬಹುದು.
ಮಕ್ಕಳು ಏನೆಲ್ಲಾ ಕೇಳ್ತಾರೆ?
ಫ್ರಾಕ್, ವಾಚ್, ಸ್ಪೈಡರ್‌ಮ್ಯಾನ್ ಮ್ಯಾನ್ ದಿರಿಸು, ಬಾರ್ಬಿ ಗೊಂಬೆ, ಉಗುರು ಬಣ್ಣ, ನೆಚ್ಚಿನ ಆಟಗಾರನ ಹೆಸರಿರೋ ಫುಟ್‌ಬಾಲ್ ಜೆರ್ಸಿ, ಕಲರಿಂಗ್ ಬುಕ್, ಶೂಗಳು… ಹೀಗೆ ತಮ್ಮ ಕನಸಿನ ವಸ್ತುಗಳಿಗಾಗಿ ಮಕ್ಕಳು ಬೇಡಿಕೆ ಇಟ್ಟಿದ್ದಾರೆ. ಕೆಲ ಮಕ್ಕಳು, “ನಂಗೆ ಇಂಥ ಬಣ್ಣದ್ದು, ಹೀಗೇ ಇರುವ ಫ್ರಾಕ್ ಕೊಡಿಸಿ’ ಅಂತ ಕೇಳಿದ್ದಾರೆ.
ನಿಮ್ಮ ಗಿಫ್ಟ್ ಎಲ್ಲೆಲ್ಲಿಗೆ ತಲುಪುತ್ತೆ?
ಬಾಣಸವಾಡಿ ಸ್ಲಂ ಏರಿಯಾ, ಆಶಾನಿಲಯ, ಸೇಂಟ್ ಪ್ಯಾಟ್ರಿಕ್ ಬಾಯ್ಸ… ಹೋಂ, ಗುಡ್ ಶೆಫರ್ಡ್ ಹೋಂ ಫಾರ್ ಗರ್ಲ್ಸ್, ಎಲಿಜಬೆತ್ ಟ್ರಸ್ಟ್ ಮುಂತಾದ ಸಂಸ್ಥೆಗಳ, 6-18 ವರ್ಷದ ಮಕ್ಕಳಿಗೆ.
ಹುಡುಗರ ವಾಚ್ ಕೇಳಿದ ಹುಡುಗಿ!
ಒಂದು ಹುಡುಗಿ ತನಗೆ, “ಬಾಯ್ಸ… ವಾಚ್ ಬೇಕು’ ಅಂತ ಕೇಳಿದ್ದಳು. ಆಕೆಗೆ 14 ವರ್ಷ. ಅವಳನ್ನು ಕರೆದು, “ನಿಂಗ್ಯಾಕೆ ಅದೇ ಗಿಫ್ಟ್ ಬೇಕು?’ ಅಂತ ಕೇಳಿದಾಗ, ಇದು ನನಗಲ್ಲ, ನನ್ನ ತಮ್ಮನಿಗೆ ಅಂದಳಂತೆ! ನಿನಗೆ ಏನೂ ಬೇಡವಾ ಅಂತ ಕೇಳಿದಾಗ, “ಉಹೂಂ, ತಮ್ಮನಿಗೇ ಕೊಡಿಸಿ’ ಅಂದಳು. ಕೊನೆಗೆ ಅವಳಿಗೆ ಮತ್ತು ಅವಳ ತಮ್ಮನಿಗೆ, ಇಬ್ಬರಿಗೂ ಗಿಫr… ಸಿಕ್ಕಿತು. ಆಕೆ ನ್ಪೋರ್ಟ್ಸ್ನಲ್ಲಿ ಮುಂದಿದ್ದು, ಅವಳ ಬಳಿ ನ್ಪೋರ್ಟ್ಸ್ ಶೂ ಇಲ್ಲ ಅಂತ ತಿಳಿದಾಗ, ವಿಶ್ ಟ್ರೀ ಮೂಲಕ ಒಂದು ಜೊತೆ ನ್ಪೋರ್ಟ್ಸ್ ಶೂ ನೀಡಲಾಗಿತ್ತು.
ನೀವು ಗಮನಿಸಿರಬಹುದು, ತುಂಬಾ ಜನ ಅನಾಥಾಲಯಗಳಿಗೆ ದಾನ ನೀಡುತ್ತಾರೆ. ಹಬ್ಬ, ಹುಟ್ಟಿದ ಹಬ್ಬದ ದಿನಗಳಂದು ಬಟ್ಟೆ, ಸಿಹಿತಿಂಡಿ, ಆಟಿಕೆಗಳನ್ನು ಕಳಿಸುತ್ತಾರೆ. ಆದರೆ, ಯಾರೂ ನಾವು ಕಳಿಸಿರುವುದು ಅಲ್ಲಿನ ಮಕ್ಕಳಿಗೆ ಖುಷಿ ನೀಡುತ್ತದಾ ಎಂದು ಯೋಚಿಸುವುದಿಲ್ಲ. ಅನಾಥ ಮಕ್ಕಳಿಗೂ ಆಸೆಗಳಿರುತ್ತವೆ. ಇಂಥದ್ದೇ ಆಟಿಕೆ ಬೇಕು, ಇಂಥ ಬಣ್ಣದ ಡ್ರೆಸ್ ಹಾಕ್ಕೋಬೇಕು ಅಂತೆಲ್ಲಾ. ನಾವು ಚಿಕ್ಕವರಿ¨ªಾಗ ಅಪ್ಪ - ಅಮ್ಮನ ಬಳಿ ಹೋಗಿ, ನಂಗೆ ಇದೇ ಬೇಕು, ಅದೇ ಬೇಕು ಅಂತ ಹಠ ಮಾಡುತ್ತಿದ್ದೆವಲ್ಲಾ ಹಾಗೆ. ಆದರೆ, ಎಲ್ಲರ ಬದುಕಿನಲ್ಲೂ ಹೆತ್ತವರೆಂಬ ಸಾಂತಾ ಕ್ಲಾಸ್ ಇರುವುದಿಲ್ಲವಲ್ಲ? ಆ ಮಕ್ಕಳ ಸಣ್ಣ ಕನಸುಗಳನ್ನು ಈಡೇರಿಸುವ ಕಲ್ಪನೆಯೇ ಈ ವಿಶ್ ಟ್ರೀ.
– ಮೊಹಮ್ಮದ್ ಮುಸ್ತಾಫ, ದೃಕ್ಷ್ಯಾ ಸ್ಥಾಪಕ
ಹೆಚ್ಚಿನ ಮಾಹಿತಿಗೆ: 9947721963, www.drikshya.com, [email protected]
ಪ್ರಿಯಾಂಕ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.