ನೃತ್ಯ ನೂತನ


Team Udayavani, Dec 15, 2018, 3:59 PM IST

2ww.jpg

 ಡ್ಯಾನ್ಸ್‌ ಮಾಡಿದರೆ ಬಟ್ಟೆ ಮಣ್ಣಾಗುತ್ತೆ ಅಂತಲೋ, ಬಿದ್ದು ಗಾಯ ಮಾಡಿಕೊಂಡು ಬಿಡುತ್ತೇವೆ ಅಂತಲೋ, ಇಲ್ಲಾ ನಗೆಪಾಟಲಿಗೀಡಾಗುತ್ತೇವೆ ಎನ್ನು ಕಾರಣಕ್ಕೋ ನಮ್ಮಲ್ಲನೇಕರು ಡ್ಯಾನ್ಸ್‌ ಮಾಡಲು ಹಿಂದೇಟು ಹಾಕುತ್ತೇವೆ. ಅಂಥದ್ದರಲ್ಲಿ ಇಲ್ಲಿ ಅಂಗವಿಕಲರು ಡ್ಯಾನ್ಸ್‌ ಮಾಡುತ್ತಾ ಸಮಾಜಕ್ಕೆ ಸಂದೇಶವನ್ನೂ ಸಾರುತ್ತಿದ್ದಾರೆ…

ಪ್ರತಿಬಾರಿ ಡ್ಯಾನ್ಸ್‌ ಮಾಡುವಾಗ ನನ್ನೊಳಗೆ ಅಧ್ಯಾತ್ಮಿಕ ಶಕ್ತಿ ಜಾಗೃತಗೊಳ್ಳುವುದನ್ನು ಗಮನಿಸಿದ್ದೇನೆ. ಡ್ಯಾನ್ಸ್‌ ಎಂದರೆ ಕೈಕಾಲು ಕುಣಿಸುವುದು ಮಾತ್ರವೇ ಅಲ್ಲ. ಡ್ಯಾನ್ಸ್‌ ಎಂದರೆ ಆತ್ಮವನ್ನು ಸಾûಾತ್ಕರಿಸಿಕೊಳ್ಳುವ ಮಾರ್ಗ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಈ ಮಾತನ್ನು ಹೇಳಿದ್ದು ಮತ್ಯಾರೂ ಅಲ್ಲ ಪಾಪ್‌ಸ್ಟಾರ್‌, ಮೈಕೆಲ್‌ ಜಾಕ್ಸನ್‌. ನರ್ತಿಸುವುದೆಂದರೆ ಶಿಸ್ತುಬದ್ಧವಾಗಿ ಯಾವುದೇ ಪ್ರಕಾರವೊಂದಕ್ಕೆ ಕಟ್ಟುಬಿದ್ದೇ ಕುಣಿಯಬೇಕೆಂದಿಲ್ಲ. ನೋಡಿದವರು ಏನಂದುಕೊಂಡಾರೆಂಬ ಯೋಚನೆಯಿಲ್ಲದೆ, ತನ್ಮಯತೆಯಿಂದ ಹೆಜ್ಜೆ ಹಾಕಿದರೂ ಸಾಕು, ಮನಸ್ಸು ಸಂತಸದಿಂದ ಪುಟಿದೇಳುವುದು. ಆತ್ಮವಿಶ್ವಾಸ ಮೈದುಂಬಿಕೊಳ್ಳುವುದು. ಅದೇ “ತಾಂಡವ್‌’ ನೃತ್ಯ ಕಾರ್ಯಕ್ರಮದ ಉದ್ದೇಶ. 

“ಎಬಿಸಿಡಿ’ ಎಂಬ ನೃತ್ಯ ಸೂತ್ರ
ನಟ, ನೃತ್ಯಪಟು ಪ್ರಭುದೇವ ಅವರು “ಎಬಿಸಿಡಿ (ಎನಿ ಬಡಿ ಕ್ಯಾನ್‌ ಡ್ಯಾನ್ಸ್‌)’ ಸಿನಿಮಾ ಮಾಡಿರಬಹುದು ಆದರೆ ನಿಜಕ್ಕೂ ಯಾರು ಬೇಕಾದರೂ ಡ್ಯಾನ್ಸ್‌ ಮಾಡಬಹುದು ಎಂಬುದನ್ನು ಸಾಬೀತುಪಡಿಸುತ್ತಿರುವುದು ಬೆಂಗಳೂರಿನ “ತಾಂಡವ್‌’ ಕಾರ್ಯಕ್ರಮ. ಇಲ್ಲಿ ಕಣ್ಣಿಲ್ಲದವರು ನರ್ತಿಸುತ್ತಾರೆ. ವೀಲ್‌ಚೇರಿನಲ್ಲಿ ಕುಳಿತವರು ಡ್ಯಾನ್ಸ್‌ ಮಾಡುತ್ತಾ ಪ್ರೇಕ್ಷಕರಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡುತ್ತಾರೆ. ಸೆರೆಬ್ರಲ್‌ ಪಾಲ್ಸಿಯಿಂದ ಬಳಲುತ್ತಿರುವವರನ್ನೂ ವೇದಿಕೆ ಮೇಲೆ ನೋಡಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ವಯಸ್ಸಿನ ಮಿತಿಯಿಲ್ಲ, ಯಾವುದೇ ರೀತಿ ರಿವಾಜುಗಳಿಲ್ಲ. ಅಂಬೆಗಾಲಿಕ್ಕುವ ಮಕ್ಕಳೂ ಭಾಗವಹಿಸುತ್ತಾರೆ. ಕೋಲು ಹಿಡಿದ ವಯಸ್ಸಾದವರೂ ತಮ್ಮ ಸಾಥಿಯೊಡನೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಹರೆಯಕ್ಕೆ ಜಾರುತ್ತಾರೆ. ಟ್ರಾನ್ಸ್‌ಜೆಂಡರ್‌, ಎಲ್‌ಜಿಬಿಟಿ ಸಮುದಾಯದವರಿಗೂ ತಾಂಡವ್‌ನ ಸದಾ ಬಾಗಿಲು ತೆರೆದಿದೆ. ಹೀಗಾಗಿ ನಿಜಕ್ಕೂ ಎಬಿಸಿಡಿ (ಎನಿ ಬಡಿ ಕ್ಯಾನ್‌ ಡ್ಯಾನ್ಸ್‌) ಸೂತ್ರವನ್ನು “ತಾಂಡವ್‌’ ಅನುಷ್ಠಾನಕ್ಕೆ ತರುತ್ತಿದೆ. 2014ರಿಂದ ನಡೆಯುತ್ತಿರುವ ತಾಂಡವ್‌ ನೃತ್ಯ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಲೇ ಇದೆ. ಇದರ ಹಿಂದಿನ ರೂವಾರಿಗಳು ವಿಶಾಲ್‌ ಮತ್ತು ವಿಷ್ಣು. ಈ ಇಬ್ಬರು ಅಣ್ಣ ತಮ್ಮಂದಿರು ಇಡೀ ಬೆಂಗಳೂರಿಗರನ್ನೇ ಡ್ಯಾನ್ಸ್‌ ಮಾಡಿಸಲು ಹೊರಟಿದ್ದಾರೆ. 

ಪ್ರತಿವರ್ಷ ನಾಮಕರಣ
ಸೆ¾„ಲೀಸ್‌ ಎನ್‌.ಜಿ.ಓ.ದ ಭಾಗವಾಗಿರುವ “ತಾಂಡವ್‌’ ಕಾರ್ಯಕ್ರಮಕ್ಕೆ ಪ್ರತಿವರ್ಷ ಒಂದು ವಿಷಯವನ್ನು ಆರಿಸಿಕೊಳ್ಳುತ್ತಾರೆ. ಆ ವಸ್ತುವಿಗೆ ಅನುಗುಣವಾಗಿ ಕಾರ್ಯಕ್ರಮದ ಹೆಸರನ್ನು ಕೊಂಚ ಬದಲಾಯಿಸಿಕೊಳ್ಳಲಾಗುತ್ತದೆ. ಉದಾಹರಣೆಗೆ, ಕಳೆದ ಬಾರಿಯ ಕಾರ್ಯಕ್ರಮದ ಹೆಸರು “ರುದ್ರ ತಾಂಡವ’ ಎಂದಿತ್ತು. ಈ ಬಾರಿಯ ವಿಷಯ ಮಹಿಳಾ ಸಬಲೀಕರಣ, ಹೀಗಾಗಿ “ಲಾಸ್ಯ ತಾಂಡವ’ 

ಮನೆಯೇ ಮೊದಲ ನೃತ್ಯಶಾಲೆ
ಎಷ್ಟೋ ಬಾರಿ ಆಸಕ್ತಿ ಇದ್ದರೂ ಅಂಗವಿಕಲರು ನೃತ್ಯ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ. ಅದನ್ನು ಮನಗಂಡೇ ಆಟ್ಟಂ ಎಂಬ ನತ್ಯಶಾಲೆಯನ್ನು ತಾಂಡವ್‌ನ ಮಾತೃ ಸಂಸ್ಥೆ “ಸೆ¾„ಲೀಸ್‌’ ನಡೆಸುತ್ತಿದೆ. ನೃತ್ಯ ತರಬೇತುದಾರರೇ ಖುದ್ದಾಗಿ ಆಸಕ್ತರ ಮನೆಗಳಿಗೆ ಹೋಗಿ ವಾರ ವಾರ ನೃತ್ಯವನ್ನು ಕಲಿಸಿ ಬರುತ್ತಾರೆ. ನೃತ್ಯ ತರಬೇತುದಾರರೆಂದರೆ ವೃತ್ತಿಪರ ನೃತ್ಯಪಟುಗಳಲ್ಲ, ಸ್ವಯಂಸೇವಕರು. ವಾರದ ದಿನಗಳಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗುವ ಅವರು ವಾರಾಂತ್ಯದಲ್ಲಿ ನೃತ್ಯವನ್ನು ಹೇಳಿಕೊಡುತ್ತಾರೆ. ಅವರಲ್ಲಿ ಶ್ರುತಿಯೂ ಒಬ್ಬರು. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅವರು ನೃತ್ಯಪಾಠ ಮಾಡಿಬರುತ್ತಾರೆ. ಅದರಲ್ಲಿ ಆತ್ಮಸಂತೋಷ ಕಂಡುಕೊಂಡಿರುವ ಅವರು “ನೃತ್ಯ ಎನ್ನುವುದು ಬರಿ ಕಲೆಯಲ್ಲ. ಆತ್ಮವಿಶ್ವಾಸದ ಪ್ರತೀಕ. ಸಮಾಜಕ್ಕೆ ಸಂದೇಶ ಸಾರುವ ಪ್ರಭಾವಶಾಲಿ ಮಾಧ್ಯಮ’ ಎನ್ನುತ್ತಾರೆ.

ಸೋಷಿಯಲ್‌ ಡ್ಯಾನ್ಸ್‌
ತಾಂಡವ್‌ ಕಾರ್ಯಕ್ರಮದಲ್ಲಿ ಶಾಸ್ತ್ರೀಯ, ಬಾಲಿವುಡ್‌, ಹಿಪ್‌ ಹಾಪ್‌ ಮತ್ತು ಸೋಷಿಯಲ್‌ ಡ್ಯಾನ್ಸ್‌ ಕೂಡಾ ಇರಲಿದೆ. “ಸೋಷಿಯಲ್‌ ಸೈನ್ಸ್‌’ ಅನ್ನು ನಾವೆಲ್ಲರೂ ಶಾಲೆಯಲ್ಲಿ ಓದಿ ಪಾಸು ಮಾಡಿದ್ದೇವೆ. ಇದೇನಪ್ಪಾ ಸೋಷಿಯಲ್‌ ಡ್ಯಾನ್ಸ್‌ ಎಂದುಕೊಳ್ಳುತ್ತಿರುವವರಿಗೆ ಇಲ್ಲಿದೆ ಉತ್ತರ. ಸೋಷಿಯಲ್‌ ಡ್ಯಾನ್ಸ್‌ ಎನ್ನುವುದು ಆಫ್ರಿಕಾದ ಬುಡಕಟ್ಟು ಜನಾಂಗವೊಂದರ ನೃತ್ಯ. ಅದರಲ್ಲಿ ಮೊದಲಿಗೆ ಒಬ್ಬರು ನೃತ್ಯವನ್ನು ಶುರುಮಾಡುತ್ತಾರೆ. ಸ್ವಲ್ಪ ನಂತರ ಅವರಿಗೆ ಒಬ್ಬರು ಜೊತೆಯಾಗುತ್ತಾರೆ. ಹೀಗೆ ನಿಮಿಷಗಳುರುಳುತ್ತಿದ್ದಂತೆಯೇ ಇಡೀ ಸಮುದಾಯವೇ ನೃತ್ಯದಲ್ಲಿ ಭಾಗಿಯಾಗುತ್ತದೆ. ಅದನ್ನು ನೋಡುವುದೇ ಒಂದು ಸೊಗಸು. ಹೇಳಬೇಕೆಂದರೆ, ಅಂಗವಿಕಲರು ಸೋಷಿಯಲ್‌ ಡ್ಯಾನ್ಸ್‌ ಮಾಡುವುದರ ಮೂಲಕ ಸಮಾಜಕ್ಕೆ ಸೋಷಿಯಲ್‌ ಸೈನ್ಸ್‌ ಪಾಠ ಹೇಳಿಕೊಡಲಿದ್ದಾರೆ.

ಸಮಾಜದ ಕಟ್ಟುಪಾಡುಗಳನ್ನು, ಸಿದ್ಧಸೂತ್ರಗಳನ್ನು ಮೀರಲು ನೃತ್ಯ ಒಂದು ಶಕ್ತಿಶಾಲಿ ಮಾಧ್ಯಮ. ಪ್ರತಿಯೊಬ್ಬರೊಳಗೂ ವೇದಿಕೆ ಮೇಲೆ ನರ್ತಿಸಿ ಹಗುರಾಗಬೇಕೆನ್ನುವ ಮಗು ಇರುತ್ತದೆ. ನಾವದಕ್ಕೆ ವೇದಿಕೆಯನ್ನಷ್ಟೇ ಕಲ್ಪಿಸುತ್ತಿದ್ದೇವೆ.
– ವಿದುಷಿ, ಸ್ವಯಂಸೇವಕಿ

ಕಾರ್ಯಕ್ರಮವನ್ನು ಪೂರ್ತಿನೆರವಿನಿಂದ ನಡೆಸುತ್ತಿದ್ದೇವೆ. ಇಡೀ ಕಾರ್ಯಕ್ರಮಕ್ಕೆ ಒಬ್ಬರೇ ಸ್ಪಾನ್ಸರ್‌ ಅನ್ನು ಹುಡುಕಿಕೊಳ್ಳಬಹುದು. ಆದರೆ ನಮಗದು ಬೇಕಿಲ್ಲ. ಸಮುದಾಯವನ್ನು ಒಗ್ಗೂಡಿಸಬೇಕೆಂಬುದೇ ತಾಂಡವ್‌ವ ಉದ್ದೇಶ ಆಗಿರೋದರಿಂದ  ಕ್ರೌಡ್‌ ಫ‌ಂಂಡಿಂಗ್‌ ಮತ್ತು ದಾನಿಗಳಿಂದ ಚಿಕ್ಕಪುಟ್ಟ ಸಹಾಯವನ್ನೇ ನೆಚ್ಚಿಕೊಂಡಿದ್ದೇವೆ. ಹನಿ ಹನಿ ಸೇರಿಯೇ ಸಮುದ್ರ ನಿರ್ಮಿಸುವುದೇ ಶ್ರೇಷ್ಠ ಎನ್ನುವುದೇ ನಮಗೆ ಮೇಲು.
– ವಿಶಾಲ್‌, ತಾಂಡವ್‌ ಸಹಸ್ಥಾಪಕ

ಎಲ್ಲಿ?: ಕಲ್ಯಾಣಮಂಟಪ ಲಾನ್‌, ಡ್ಯು ಆರ್ಟ್‌ ಕೆಫೆ ಎದುರು, ಕೋರಮಂಗಲ
ಯಾವಾಗ?: ಡಿಸೆಂಬರ್‌ 16, ಬೆಳಗ್ಗೆ 10- ರಾತ್ರಿ 7
ಸಂಪರ್ಕ: 7602169292

 ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.