ದೇವರ ಪ್ರಸಾದದಲ್ಲಿ ವಿಷ ಸೇರಿದ್ದು ಹೇಗೆ?
Team Udayavani, Dec 16, 2018, 6:00 AM IST
ಚಾಮರಾಜನಗರ/ಮೈಸೂರು: ಹನೂರು ಬಳಿಯ ಸುಳುವಾಡಿಯ ದೇಗುಲದ ಪ್ರಸಾದದಲ್ಲಿ ವಿಷ ಸೇರಿದ್ದು ಹೇಗೆ…?
ಸದ್ಯಕ್ಕೆ ಎಲ್ಲೆಡೆ ಚರ್ಚೆಯಾಗುತ್ತಿರುವುದು ಇದೇ ವಿಷಯ. ಪ್ರಸಾದದಲ್ಲಿ ವಿಷ ಬೆರೆಸಿದ್ದೇ ಆದಲ್ಲಿ ಹಾಕಿದ್ದು ಯಾರು ಎಂಬ ಪ್ರಶ್ನೆ ಎದ್ದಿದೆ. ಈ ಬೆಳವಣಿಗೆಯ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಸಾವಿಗೆ ಕಾರಣವಾದ ಪ್ರಸಾದದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪ್ರಸಾದದಲ್ಲಿ ವಿಷ ಸೇರಿದೆಯೇ ಎಂಬ ಬಗ್ಗೆ ಗೊತ್ತಾಗಲಿದೆ ಎಂದಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದಿದ್ದಾರೆ.
ಇನ್ನು ಘಟನೆ ನಡೆದ ಸುಳುವಾಡಿ ದೇಗುಲದ ಸುತ್ತಮುತ್ತಲಿನ ಗ್ರಾಮಗಳಲ್ಲಿ ದುಃಖ ಮಡುಗಟ್ಟಿದೆ. ಸಾವಿಗೀಡಾದ 11 ಮಂದಿಯ ಶವಗಳನ್ನು ಶವಪರೀಕ್ಷೆ ನಂತರ ಅವರವರ ಗ್ರಾಮಗಳಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಬಿದರಹಳ್ಳಿಯಲ್ಲಿ ಶಾಂತರಾಜು, ಗೋಪಿಯಮ್ಮ, ಮತ್ತು ಪ್ರೀತನ್, ಎಂ.ಜಿ.ದೊಡ್ಡಿಯಲ್ಲಿ ಪಾಪಣ್ಣ, ವಡ್ಡರದೊಡ್ಡಿಯಲ್ಲಿ ಶಕ್ತಿವೇಲು, ತೋಮಿಯರ್‌ಪಾಳ್ಯದಲ್ಲಿ ರಾಚಯ್ಯ, ಸುಳುವಾಡಿಯಲ್ಲಿ ಅನಿತಾ, ದೊಡ್ಡಾಣೆಯಲ್ಲಿ ಅಣ್ಣಯ್ಯಪ್ಪ, ಮಾರ್ಟಳ್ಳಿಯಲ್ಲಿ ಕೃಷ್ಣನಾಯಕ್, ತುಳಸೀಕೆರೆಯಲ್ಲಿ ದೊಡ್ಡಮಾದಯ್ಯ ಹಾಗೂ ಹಳೆಯೂರು ಗ್ರಾಮದಲ್ಲಿ ಶಿವಕುಮಾರ್ ಅವರ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.
76 ಮಂದಿ ಆರೋಗ್ಯ ಸ್ಥಿರ
ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 76 ಮಂದಿ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಸ್ವಸ್ಥಗೊಂಡಿದ್ದ 79 ಮಂದಿಯನ್ನು ಮೈಸೂರಿಗೆ ಕರೆತರಲಾಗಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಏಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ 48 ಅಥವಾ 72 ಗಂಟೆಗಳ ಕಾಲ ಇವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ. ಜತೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಇನ್ನೂ ಒಂದು ವಾರ ಬೇಕಾಗಬಹುದು ಎಂಬುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮಾತು.
ಹುಟ್ಟುಹಬ್ಬದಂದೇ ಸಾವು
ಕೊಳ್ಳೇಗಾಲ ತಾಲೂಕು ಬಿದರಹಳ್ಳಿಯ ಕೂಲಿ ಕಾರ್ಮಿಕ ಷಣ್ಮುಖ ಅವರ ಮೂವರು ಮಕ್ಕಳ ಪೈಕಿ ದುರಂತದಲ್ಲಿ ಅಸ್ವಸ್ಥನಾಗಿದ್ದ 6 ವರ್ಷದ ಪ್ರೀತಂನನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟ ಪ್ರೀತಂ ಹಿರಿಯ ಮಗ. ಆರು ವರ್ಷದ ಹಿಂದೆ ಶುಕ್ರವಾರವೇ ಜನಿಸಿದ್ದ ಪ್ರೀತಂ ದುರಂತದಲ್ಲಿ ಸತ್ತಿದ್ದು ಕೂಡ ಶುಕ್ರವಾರವೇ. ಜೊತೆಗೆ ಡಿ.14ರಂದೇ ಆತನ 6ನೇ ಹುಟ್ಟುಹಬ್ಬ, ವಿಧಿ ಅವನನ್ನು ಬಿಡಲಿಲ್ಲ ಎಂದು ಕಣ್ಣೀರಾದರು ಮೃತ ಪ್ರೀತಂ ತಂದೆ ಷಣ್ಮುಖ.
ಪ್ರಸಾದ ಖಾಲಿ, 30 ಮಂದಿ ಮಾಲಾಧಾರಿಗಳು ಪಾರು
ದೇಗುಲದಲ್ಲಿನ ಪ್ರಸಾದ ಖಾಲಿಯಾಗಿದ್ದರಿಂದ 30 ಮಂದಿ ಓಂ ಶಕ್ತಿ ಮಾಲಾಧಾರಿಗಳು ಅಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ಮೇಲ್ ಮರುವತ್ತೂರಿನ ಆದಿ ಪರಾಶಕ್ತಿ ದೇವಾಲಯಕ್ಕೆ ತೆರಳಲು ಬಿದರಹಳ್ಳಿ, ವಡಕೆಹಳ್ಳ ಸುತ್ತಮುತ್ತಲಿನ ಸುಮಾರು 60 ಮಂದಿ ಮಾಲೆ ಹಾಕಿಸಿಕೊಂಡಿದ್ದರು. 30 ಜನರಿದ್ದ ಒಂದು ತಂಡ ಮುಂದೆ ಹೋಗಿತ್ತು. ಆ ಸಂದರ್ಭದಲ್ಲಿ ಕೆಲವರು ಬಾತ್ ಸೇವಿಸಿದರು. ಇನ್ನು ಕೆಲವರು ಬಾತ್‌ನಲ್ಲಿ ಏನೋ ಕೃತಕ ವಾಸನೆ ಬರುತ್ತಿದೆ ಎಂದು ಬಿಸಾಡಿದ್ದರು.ಇನ್ನು 30 ಜನರಿದ್ದ ಎರಡನೇ ತಂಡ ಹೋಗುವ ವೇಳೆಗೆ ಬಾತ್ ಖಾಲಿಯಾಗಿತ್ತು. ನಮಗೆ ಪ್ರಸಾದ ಸಿಗಲಿಲ್ಲ ಎಂಬ ಬೇಸರವಾಯಿತು. ತಾಯಿ ನಮಗೆ ಪ್ರಸಾದ ಕೊಡಲಿಲ್ಲವಲ್ಲ ಎಂದು ನೊಂದುಕೊಂಡಿದ್ದೆವು. ಆದರೆ ಘಟನೆ ಬಳಿಕ ಆ ತಾಯಿಯೇ ನಮ್ಮನ್ನು ಕಾಪಾಡಿದ್ದಾಳೆ. ಆ ತಾಯಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಪಾರಾದ ವಡಕೆಹಳ್ಳ ಗೋಪಾಲ್ ತಿಳಿಸಿದರು.
ಮಾಹಿತಿ ಲಭ್ಯವಿಲ್ಲ
ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಇನ್ನೂ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾ ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಹೇಳಿದ್ದಾರೆ. ಸದ್ಯ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದುವರೆಗೂ ಯಾವುದೇ ಸುಳಿವು ದೊರೆತಿಲ್ಲ. ಕೆಲ ಮಾಹಿತಿಗಳು ಲಭ್ಯವಾಗಿವೆ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಆಹಾರದ ಮಾದರಿಯನ್ನು ಮೈಸೂರಿನ ಫೋರೆನ್ಸಿಕ್ ಸೈನ್ಸ್ ಲ್ಯಾಬ್‌ಗ ಕಳುಹಿಸಿಕೊಡಲಾಗಿದ್ದು ಭಾನುವಾರ ವರದಿ ಬರುವ ನಿರೀಕ್ಷೆಯಿದೆ. ಶವಪರೀಕ್ಷೆ ವರದಿ ಸಹ ಭಾನುವಾರ ದೊರಕಲಿದ್ದು, ಬಳಿಕವಷ್ಟೇ ಮಹತ್ವದ ಸುಳಿವು ದೊರಕುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಫುಡ್ ಪಾಯಿಸನ್‌ನಿಂದ ಈ ದುರಂತ ಸಂಭವಿಸಿಲ್ಲ, ಯಾರೋ ಪಾತಕಿಗಳು ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಈಗಾಗಲೇ ಘಟನೆ ಬಗ್ಗೆ ತನಿಖೆಗೆ ಮುಖ್ಯಮಂತ್ರಿಯವರು ಆದೇಶ ಮಾಡಿದ್ದಾರೆ. ನಾನು ಕೂಡ ಅವರೊಂದಿಗೆ ಮಾತನಾಡಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತೇನೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.