ದುರಸ್ತಿ ಸಂದರ್ಭ ವಿದ್ಯುತ್‌ ಶಾಕ್‌: ಇಬ್ಬರು ಅಸ್ವಸ್ಥ  


Team Udayavani, Dec 16, 2018, 10:22 AM IST

shock.jpg

ಪುತ್ತೂರು: ಕಂಬದಲ್ಲಿ ದುರಸ್ತಿ ನಿರತ ಕಾರ್ಮಿಕರಿಬ್ಬರು ವಿದ್ಯುತ್‌ ಶಾಕ್‌ ತಗುಲಿ ಅಸ್ವಸ್ಥಗೊಂಡ ಘಟನೆ ನಗರದಲ್ಲಿ ನಡೆದಿದೆ.

ಶನಿವಾರ ಇಲ್ಲಿನ ಮುಖ್ಯ ರಸ್ತೆಯ ಮಾçದೆ ದೇವುಸ್‌ ಚರ್ಚ್‌ ಎದುರು ಎಲ್‌.ಟಿ. ಲೈನ್‌ನಲ್ಲಿ ಬೈಂಡಿಂಗ್‌ ನಡೆಯುತ್ತಿದ್ದು, ಮೆಸ್ಕಾಂ ಸಿಬಂದಿ ಜತೆಗೆ ಬೆಂಗಳೂರಿನ ಅರವಿಂದ ಎಲೆಕ್ಟ್ರಿಕಲ್‌ ಗುತ್ತಿಗೆ ಸಂಸ್ಥೆಯ 10 ಮಂದಿ ಕೆಲಸ ಮಾಡುತ್ತಿದ್ದರು. 

ವಿದ್ಯುತ್‌ ಶಾಕ್‌ ತಗುಲಿ ಓರ್ವ ಕಾರ್ಮಿಕ ಕಂಬದಿಂದ ಎಸೆಯಲ್ಪಟ್ಟರೆ, ಮತ್ತೋರ್ವ ಕಂಬದಲ್ಲೇ ಕೂತ ಸ್ಥಿತಿಯಲ್ಲಿ 10 ನಿಮಿಷ ಇದ್ದರು. ಬಳಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಆಘಾತಕ್ಕೆ ಒಳಗಾದ ಕಾರ್ಮಿಕರು ನಂಜನಗೂಡು ತಾಲೂಕಿನ ಕಸಿವಿನಹಳ್ಳಿ ಸೂರಳ್ಳಿ ಗ್ರಾಮದವರು. ಕಾರ್ಮಿಕ ರವಿ (19) ಕಂಬದಿಂದ ಎಸೆಯಲ್ಪಟ್ಟವರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ. ಮತ್ತೋರ್ವ ಕಾರ್ಮಿಕ ಬಸವನಾಯಕ್‌ (30) ತೀವ್ರ ಗಾಯಗೊಂಡಿದ್ದಾರೆ. 

ಸಾರ್ವಜನಿಕ ಆಕ್ಷೇಪ 
ಬಸವ ನಾಯಕ್‌ ಶಾಕ್‌ನಿಂದ ಕೂತ ಸ್ಥಿತಿಯಲ್ಲೇ ಇದ್ದಾಗ ಉಳಿದ ಕಾರ್ಮಿಕರು ಕಂಬಕ್ಕೆ ಹತ್ತಿ ಹಗ್ಗದ ಸಹಾಯದಿಂದ ಅವರನ್ನು ಇಳಿಸುವ ಯತ್ನ ಮಾಡಿದರು. ಈ ವೇಳೆ ಮೆಸ್ಕಾಂ ಸಿಬಂದಿ ಯಾವುದೇ ಪ್ರಯತ್ನ ಮಾಡದೇ ಮಾರ್ಗದರ್ಶನದಲ್ಲಿ ಸಮಯ ಕಳೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಈ ವೇಳೆ ಎಚ್ಚೆತ್ತುಕೊಂಡ ಮೆಸ್ಕಾಂ ಸಿಬಂದಿ ಕಂಬಕ್ಕೆ ಹತ್ತಿ ಗುತ್ತಿಗೆ ಕಾರ್ಮಿಕರೊಂದಿಗೆ ಸೇರಿ ಬಸವ ನಾಯಕನನ್ನು ಇಳಿಸುವಲ್ಲಿ ಸಹಕರಿಸಿದರು. 

ನಗರದ ಹೃದಯಭಾಗದಲ್ಲಿ ಈ ಘಟನೆ ನಡೆದ ಕಾರಣ ಅರ್ಧ ಗಂಟೆ ಟ್ರಾಫಿಕ್‌ ಜಾಮ್‌ ಉಂಟಾಯಿತು. ಗಾಯಾಳುವನ್ನು ರಿಕ್ಷಾದಲ್ಲಿ ಕೊಂಡೊಯ್ಯಲೂ ಹರಸಾಹಸ ಪಡಬೇಕಾಯಿತು.

ವಿದ್ಯುತ್‌ ಇರಲಿಲ್ಲ
ಪುತ್ತೂರು ನಗರ ಹಾಗೂ ಗ್ರಾಮಾಂತರದ ಕೆಲವು ಕಡೆಗಳಲ್ಲಿ ದುರಸ್ತಿಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗಿನಿಂದ ಎಲ್ಲೆಡೆ ವಿದ್ಯುತ್‌ ಸ್ಥಗಿತಗೊಳಿಸಲಾಗಿತ್ತು.  ಆದರೂ ವಿದ್ಯುತ್‌ ಶಾಕ್‌ಗೆ ಒಳಗಾಗಿರುವುದು ಚರ್ಚೆಗೆ ಕಾರಣವಾಯಿತು.

ದುರಸ್ತಿ ವೇಳೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದಾಗ್ಯೂ ಇನ್ವರ್ಟರ್‌, ಜನರೇಟರ್‌ಗಳು ಬಳಕೆಯಾ ಗುತ್ತಿರುವುದರಿಂದ ಮತ್ತು ಅವುಗಳಲ್ಲಿ ಅಟೋ ಮೆಟಿಕ್‌ ಚೇಂಜ್‌ ಓವರ್‌ಗಳು ಇರುವುದರಿಂದ ಕರೆಂಟ್‌ ರಿಟರ್ನ್ ಆಗಿದೆ. ಅಪಾಯವಾಗಿಲ್ಲ. ಕಾರ್ಮಿಕ ಬೆಳಗ್ಗಿನಿಂದ ಆಹಾರ ಸೇವಿಸ ದ್ದರಿಂದ ನಿಶ್ಶಕ್ತಿ ಉಂಟಾಗಿದೆ. ಇಬ್ಬರೂ ಚೇತರಿಸಿಕೊಂಡಿದ್ದಾರೆ. ಒಂದು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಬಹುದು.
– ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಪುತ್ತೂರು

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!

1

Bantwal: ಶಂಭೂರಿನ ಎಂಆರ್‌ಎಫ್‌ ತಿಂಗಳಲ್ಲಿ ಸಿದ್ಧ

5-bantwala

Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

3-sulya

Aranthodu: ನೇಣು ಬಿಗಿದು ಯವಕ ಆತ್ಮಹತ್ಯೆ

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.