ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್ಸ್‌: ಸಿಂಧು ಸ್ವರ್ಣ ಸಂಭ್ರಮ


Team Udayavani, Dec 17, 2018, 6:00 AM IST

ap12162018000074b.jpg

ಗ್ವಾಂಗ್‌ಝೂ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು “ಫೈನಲ್‌ ಸೋಲಿನ ಕಂಟಕ’ದಿಂದ ಮುಕ್ತರಾಗಿದ್ದಾರೆ. ಸ್ವರ್ಣ ಸಂಭ್ರಮದಲ್ಲಿ ತೇಲಾಡಿದ್ದಾರೆ. 

ಗ್ವಾಂಗ್‌ಝೂನಲ್ಲಿ ನಡೆದ ವರ್ಷಾಂತ್ಯದ “ಬಿಡಬ್ಲ್ಯುಎಫ್ ಟೂರ್‌ ಫೈನಲ್ಸ್‌’ ಬ್ಯಾಡ್ಮಿಂಟನ್‌ ಕೂಟದ ಚಾಂಪಿಯನ್‌ಶಿಪ್‌ ಗೆದ್ದು ದೇಶದ ಬ್ಯಾಡ್ಮಿಂಟನ್‌ ಇತಿಹಾಸದಲ್ಲಿ ನೂತನ ಅಧ್ಯಾಯವೊಂದನ್ನು ಬರೆದಿದ್ದಾರೆ. ಇದು ಭಾರತಕ್ಕೆ ಒಲಿದ ಮೊತ್ತಮೊದಲ ಬಿಡಬ್ಲ್ಯುಎಫ್ ಟೂರ್‌ ಫೈನಲ್ಸ್‌ ಪ್ರಶಸ್ತಿ ಎಂಬುದು ಖುಷಿಯನ್ನು ಇಮ್ಮಡಿಗೊಳಿಸಿದೆ.

ರವಿವಾರ ನಡೆದ ವನಿತಾ ಸಿಂಗಲ್ಸ್‌ ಫೈನಲ್‌ನಲ್ಲಿ 2017ರ ವಿಶ್ವ ಚಾಂಪಿಯನ್‌ ಜಪಾನಿನ ನೊಜೊಮಿ ಒಕುಹಾರ ಅವರನ್ನು ಸಿಂಧು 21-19, 21-17 ನೇರ ಗೇಮ್‌ಗಳಿಂದ ಸೋಲಿಸಿದರು. ಇದು ಈ ವರ್ಷ ಸಿಂಧು ಅವರಿಗೆ ಒಲಿದ ಮೊದಲ ಪ್ರಶಸ್ತಿಯಾಗಿದೆ. 2018ರ ಋತುವಿನುದ್ದಕ್ಕೂ ಪ್ರಶಸ್ತಿ ಬರಗಾಲದಲ್ಲಿದ್ದ ಹೈದರಾಬಾದಿ ಆಟಗಾರ್ತಿ, ವರ್ಷದ ಕೊನೆಯ ಕೂಟದಲ್ಲಿ ಬಂಗಾರವನ್ನು ಬೇಟೆಯಾಡುವ ಮೂಲಕ ಅಮೋಘ ಸಾಧನೆಗೈದರು.

ಸಿಂಧು ಎಚ್ಚರಿಕೆಯ ಆಟ
ಸಾಮಾನ್ಯವಾಗಿ ಇತ್ತೀಚಿನ ಕೂಟಗಳ ಫೈನಲ್‌ ತನಕ ಬಂದು ಪ್ರಶಸ್ತಿಯನ್ನು ಕೈಚೆಲ್ಲುತ್ತಿದ್ದ ಸಿಂಧು ಈ ಬಾರಿ ಎಚ್ಚರಿಕೆಯ ಆಟವಾಡಿದರು. ಹಿಂದಿನ ತಪ್ಪು ಮರುಕಳಿಸಬಾರದು ಎಂಬ ದೃಢ ಸಂಕಲ್ಪದಿಂದ ಆಡಿದ್ದು ಸ್ಪಷ್ಟವಾಗಿತ್ತು. ಇದರಲ್ಲಿ ಧಾರಾಳ ಯಶಸ್ಸು ಕಂಡರು.

62 ನಿಮಿಷಗಳ ತನಕ ನಡೆದ ಈ ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಇಬ್ಬರಲ್ಲೂ ಫೈನಲ್‌ ಜೋಶ್‌ ತುಂಬಿತ್ತು. ಮೊದಲ ಗೇಮ್‌ನ ಆರಂಭದಲ್ಲಿ ಒಕುಹಾರ ಹಲವು ತಪ್ಪುಗಳನ್ನು ಮಾಡಿದ್ದರಿಂದ ಸಿಂಧು ಮುನ್ನಡೆ ಕಾಯ್ದುಕೊಂಡರು. ಮತ್ತೆ ಎಚ್ಚರಿಕೆಯ ಆಟವಾಡಿದ ಒಕುಹಾರ ಮುನ್ನಡೆಗೆ ಹತ್ತಿರವಾದರೇ ಹೊರತು ಸಿಂಧು ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. 6-14ರ ಹಿನ್ನಡೆಯಲ್ಲಿದ್ದ ಒಕುಹಾರ 16-16 ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ಸಿಂಧು ಅತ್ಯುತ್ತಮ ಡ್ರಾಪ್‌ ಶಾಟ್‌ ಹೊಡೆದು ಮೊದಲ ಗೇಮ್‌ ಜಯಿಸಿದರು.

ದ್ವಿತೀಯ ಗೇಮ್‌ನಲ್ಲೂ ಇದೇ ಆಟ ಮುಂದುವರಿಸಿದ ಸಿಂಧು 6-4 ಅಂಕಗಳ ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ ಎದುರಾಳಿಯನ್ನು ತಪ್ಪು ಹೊಡೆತಗಳಿಗೆ ಪ್ರೇರೇಪಿಸಿದ ಜಪಾನೀ ಆಟಗಾರ್ತಿ 7-7 ಅಂಕಗಳ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಅನಂತರ ಸಿಂಧು ಎಚ್ಚರಿಕೆಯ ಆಟಕ್ಕಿಳಿದ ಸಿಂಧುಗೆ 17-16 ಅಂಕಗಳ ಸಣ್ಣ ಮುನ್ನಡೆ ಲಭಿಸಿತು. ಅಂತರ ಕಾಯ್ದುಕೊಳ್ಳುತ್ತ ಬಂದ ಸಿಂಧು ಎರಡೇ ಗೇಮ್‌ಗಳಲ್ಲಿ ಗೆದ್ದು ಬಂದರು.

ಚಾಂಪಿಯನ್ಸ್‌
ವರ್ಷ    ಪುರುಷರ ಸಿಂಗಲ್ಸ್‌    ವನಿತಾ ಸಿಂಗಲ್ಸ್‌
2008    ಲೀ ಚಾಂಗ್‌ ವೀ    ಝೂ ಮಿ
2009    ಲೀ ಚಾಂಗ್‌ ವೀ    ವೊಂಗ್‌ ಮ್ಯೂ ಚೂ
2010    ಲೀ ಚಾಂಗ್‌ ವೀ    ವಾಂಗ್‌ ಶಿಕ್ಸಿಯಾನ್‌
2011    ಲಿನ್‌ ಡಾನ್‌    ವಾಂಗ್‌ ಯಿಹಾನ್‌
2012    ಚೆನ್‌ ಲಾಂಗ್‌    ಲೀ ಕ್ಸೆರುಯಿ
2013    ಲೀ ಚಾಂಗ್‌ ವೀ    ಲೀ ಕ್ಸೆರುಯಿ
2014    ಚೆನ್‌ ಲಾಂಗ್‌    ತೈ ಜು ಯಿಂಗ್‌
2015    ಕೆಂಟೊ ಮೊಮೊಟ    ನೊಜೊಮಿ ಒಕುಹಾರ
2016    ವಿಕ್ಟರ್‌ ಅಲೆಕ್ಸೆನ್‌    ತೈ ಜು ಯಿಂಗ್‌
2017    ವಿಕ್ಟರ್‌ ಅಲೆಕ್ಸೆನ್‌    ಅಕಾನೆ ಯಮಾಗುಚಿ
2018    ಶಿ ಯುಕಿ    ಪಿ.ವಿ. ಸಿಂಧು

ಪುರುಷರ ವಿಭಾಗದಲ್ಲಿ ಶಿ ಯುಕಿ ಚಾಂಪಿಯನ್‌
ಪುರುಷರ ವಿಭಾಗದ ಪ್ರಶಸ್ತಿ ಆತಿಥೇಯ ಚೀನದ ಶಿ ಯುಕಿ ಪಾಲಾಯಿತು. ಫೈನಲ್‌ನಲ್ಲಿ ಅವರು ಜಪಾನಿನ ಕೆಂಟೊ ಮೊಮೊಟ ವಿರುದ್ಧ 21-12, 21-11 ಅಂತರದ ಸುಲಭ ಜಯ ಸಾಧಿಸಿದರು.

ಪಿ.ವಿ. ಸಿಂಧು ಅವರಂತೆ ಶಿ ಯುಕಿ ಪಾಲಿಗೂ ಇದು ಮೊದಲ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್‌ ಪ್ರಶಸ್ತಿಯಾಗಿದೆ. ಇವರಿಬ್ಬರೂ 2015ರ ಚಾಂಪಿಯನ್‌ ಆಟಗಾರರನ್ನು ಸೋಲಿಸಿದ್ದು ವಿಶೇಷವಾಗಿತ್ತು.

“ನೀವೇಕೆ ಪ್ರತೀ ಸಲವೂ ಫೈನಲ್‌ನಲ್ಲಿ ಸೋಲುತ್ತೀರಿ ಎಂಬ ಪ್ರಶ್ನೆ ನನಗಿನ್ನು ಎದುರಾಗದು. ಈಗ ಚಿನ್ನ ಗೆದ್ದಿದ್ದೇನೆ ನೋಡಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. 2018ರ ಋತುವನ್ನು ಸುಂದರವಾದ ಗೆಲುವಿನೊಂದಿಗೆ ಮುಗಿಸಿದ್ದೇನೆ. ಇದನ್ನು ಬಣ್ಣಿಸಲು ಪದಗಳಿಲ್ಲ. ಇದಕ್ಕಾಗಿ ಹೆಮ್ಮೆಯಾಗುತ್ತಿದೆ. ಅಭಿಮಾನಿಗಳು ಗ್ವಾಂಗ್‌ಝೂ ತನಕ ಬಂದು ಪಂದ್ಯ ವೀಕ್ಷಿಸಿದ್ದಾರೆ. ನನ್ನ ಮೇಲೆ ಅಭಿಮಾನ. ಪ್ರೀತಿ ಇರಿಸಿ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆಗಳು’
– ಪಿ.ವಿ. ಸಿಂಧು

ಸಿಂಧು ಗೆದ್ದ 5 ಪ್ರಮುಖ ಪ್ರಶಸ್ತಿಗಳು
1. 2013ರ ಮಲೇಶ್ಯ ಓಪನ್‌ನಲ್ಲಿ ಬಂಗಾರ

2013ರ ಮಲೇಶ್ಯ ಓಪನ್‌ನಲ್ಲಿ ಗು ಜುವಾನ್‌ ಅವರನ್ನು 21-17, 17-21, 21-19 ಅಂತರದಿಂದ ಮಣಿಸುವ ಮೂಲಕ ಪಿ.ವಿ. ಸಿಂಧು ತಮ್ಮ ವೃತ್ತಿಬದುಕಿನ ಮೊದಲ ಗ್ರ್ಯಾನ್‌ಪ್ರಿ ಚಿನ್ನದ ಪದಕವನ್ನು ಜಯಿಸಿದರು.

2. ರಿಯೋ ಒಲಿಂಪಿಕ್ಸ್‌ ಬೆಳ್ಳಿ
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇರಿಸಿದ ಸಿಂಧು ಬೆಳ್ಳಿ ಪದಕ ಗೆದ್ದರು. ಕ್ಯಾರೋಲಿನಾ ಮರಿನ್‌ ವಿರುದ್ಧ ಮೊದಲ ಗೇಮನ್ನು 21-19ರಿಂದ ಗೆದ್ದರೂ ಉಳಿದೆರಡು ಗೇಮ್‌ಗಳಲ್ಲಿ ಎಡವಿ ಚಿನ ತಪ್ಪಿಸಿಕೊಂಡರು.

3. 2016ರ ಚೀನ ಓಪನ್‌ ಸೀರಿಸ್‌ನಲ್ಲಿ ಸ್ವರ್ಣ
ಒಲಿಂಪಿಕ್‌ ಬಳಿಕ ಹಿನ್ನಡೆ ಅನುಭವಿಸಿದ್ದ ಸಿಂಧು 2016ರ ಚೀನ ಓಪನ್‌ ಸೂಪರ್‌ ಸೀರಿಸ್‌ ಗೆದ್ದು ಸಂಭ್ರಮಿಸಿದರು. ಫೈನಲ್‌ನಲ್ಲಿ ಸುನ್‌ ಯು ಅವರನ್ನು ಮಣಿಸಿದರು. ಸೈನಾ ಬಳಿಕ ಈ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿದರು.

4. 2017ರ ಇಂಡಿಯಾ ಓಪನ್‌ನಲ್ಲಿ ಚಿನ್ನ
ಕಳೆದ ವರ್ಷ ನಡೆದ ತವರಿನ “ಇಂಡಿಯಾ ಓಪನ್‌’ ಫೈನಲ್‌ನಲ್ಲಿ ಕ್ಯಾರೋಲಿನಾ ಮರಿನ್‌ ಅವರನ್ನು ಮಣಿಸಿ ಸೇಡು ತೀರಿಸಿಕೊಂಡ ಸಿಂಧು ಚಿನ್ನಕ್ಕೆ ಕೊರಳೊಡ್ಡಿದರು. ಪ್ರಶಸ್ತಿಯ ಹಾದಿಯಲ್ಲಿ ಸೈನಾ ನೆಹ್ವಾಲ್‌, ಸುಂಗ್‌ ಜಿ ಹ್ಯುನ್‌ ಅವರನ್ನು ಮಣಿಸಿದ್ದರು.

5. ಬಿಡಬ್ಲ್ಯು ಟೂರ್‌ ಫೈನಲ್ಸ್‌ 2018 ಚಾಂಪಿಯನ್‌
ಸತತವಾಗಿ ಫೈನಲ್‌ ಸೋಲನುಭವಿಸುತ್ತಿದ್ದ ಸಿಂಧುಗೆ ಪುನರ್ಜನ್ಮ ನೀಡಿದ ಪಂದ್ಯಾವಳಿ. ಒಕುಹಾರ ವಿರುದ್ಧ ನೇರ ಗೇಮ್‌ಗಳ ಗೆಲುವು. ಈ ಪ್ರಶಸ್ತಿ ಜಯಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ.

ಟಾಪ್ ನ್ಯೂಸ್

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-dr

Veerendra Heggade 77ನೇ ವರ್ಷಕ್ಕೆ ಪಾದಾರ್ಪಣೆ: ಗಣ್ಯರಿಂದ ಶುಭ ಹಾರೈಕೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.