ಎನ್‌.ಪಿ.ಎಸ್‌.ನಲ್ಲಿ ಆಗಲಿರುವ ಜಾಮೂನ್‌ ಬದಲಾವಣೆಗಳು


Team Udayavani, Dec 17, 2018, 6:00 AM IST

nps.jpg

ಇದು ಅತ್ಯಂತ ತಾಜಾ ಖಬರ್‌! ಇದಿನ್ನೂ ಕಾನೂನು ಆಗಿಲ್ಲ. ಆದರೆ ಅಗುವುದು ಖಚಿತ. ಹೆಚ್ಚಾಗಿ ಯಾವುದೇ ಮಾಹಿತಿ ಕಾನೂನಾಗಿ ನೋಟಿಫೈ ಆಗುವವರೆಗೆ ಅದರ ಬಗ್ಗೆ ಕಾಕುವಿನಲ್ಲಿ ಬರೆಯುವ ಪರಿಪಾಠ ನನಗೆ ಇಲ್ಲ. ಅದಕ್ಕೆ ಕಾರಣವೇನೆಂದರೆ ಕಾಕುವಿನಲ್ಲಿ ಒಂದು ಸಂಭಾವ್ಯ ವಿಚಾರವನ್ನು ಹಾಕಿದರು ಕೂಡಾ ಅದೇ ಅಂತಿಮ ವಾಸ್ತವ ಎಂಬ ಭಾವನೆ ಜನರಿಗೆ ಬರುತ್ತದೆ. ಅದರಿಂದ ಹಲವಾರು ಗೊಂದಲಗಳು ಉಂಟಾಗುವುದನ್ನು ತಪ್ಪಿಸಲು ಖಚಿತವಾಗಿ ಕಾನೂನು ಹೊರ ಬರುವವರೆಗೆ ಯಾವುದೇ ಮಾಹಿತಿಯನ್ನು ಕಾಕುವಿನಲ್ಲಿ ಬರೆಯುವ ಪದ್ಧತಿಯನ್ನು ನಾನು ಇಟ್ಟುಕೊಂಡಿಲ್ಲ. ಆದರೂ ಇದೊಂದು ಬಾಂಬ್‌ ನ್ಯೂಸ್‌! ಹಾಗಾಗಿ ಈ ಬಗ್ಗೆ ಒಂದಿಷ್ಟು ಕೊರೆಯಲೇ ಬೇಕು ಎನ್ನುವ ಆಸೆ ಎನ್ನ ಮನದಾಳದಲಿ ಅಂಕುರವಾಗಿದೆ.

ಇತ್ತೀಚೆಗೆ, ಅಂದರೆ ಡಿ. 6, 2018ರಂದು ಒಂದು ಕ್ಯಾಬಿನೆಟ್‌ ನಿರ್ಧಾರ ಹೊರ ಬಂದಿದೆ. ಆ ಪ್ರಕಾರ ನ್ಯಾಶನಲ್‌ ಪೆನ್ಶನ್‌ ಸ್ಕೀಂನಲ್ಲಿ ಕೇಂದ್ರ ನೌಕರರಿಗೆ ಹಲವಾರು ಬದಲಾವಣೆಗಳನ್ನು ತರುವ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲವೂ ಸುಗಮವಾಗಿ ಸಾಗಿದಲ್ಲಿ ಕಾನೂನು ತಿದ್ದುಪಡಿಯೊಂದಿಗೆ ಎಪ್ರಿಲ್‌ 1, 2019ರಿಂದ ಮೊದಲ್ಗೊಂಡು ಆಪ್ಯಾಯಮಾನವಾದ ಕೆಲವು ಬದಲಾವಣೆಗಳು ಎನ್‌.ಪಿ.ಎಸ್‌. ಯೋಜನೆಯಲ್ಲಿ ಬರಲಿದೆ. ಸದ್ಯಕ್ಕೆ ಇದಿನ್ನೂ ಕಾನೂನಾ ಗಿಲ್ಲ ಎನ್ನುವುದನ್ನು ಇನ್ನೊಮ್ಮೆ ಒತ್ತಿ ಹೇಳುತ್ತಿದ್ದೇನೆ. ಜಾಮೂನು ಕೈಗೆ ಬಾರದಿದ್ದರೂ ಬರುವ ಕ್ಷಣಗಳನ್ನು ಎದುರು ನೋಡುತ್ತಾ ಬಾಯಲ್ಲಿ ನೀರೂರಿಸುತ್ತಾ ಕಾಯಲು ಅಡ್ಡಿಯಿಲ್ಲ. 

ಮುಂಬರುವ ಬದಲಾವಣೆಗಳು:
1. ಸಂಪೂರ್ಣ ಕರಮುಕ್ತ ಹಿಂಪಡೆತ

ಎನ್‌.ಪಿ.ಎಸ್‌. ಕಾನೂನು ಪ್ರಕಾರ 60 ಕಳೆದು ನಿವೃತ್ತಿಯ ಸಂದರ್ಭದಲ್ಲಿ ಶೇ.60 ಮೊತ್ತವನ್ನು ಹಿಂಪಡೆಯಬಹುದಾಗಿದೆ ಉಳಿದ ಶೇ.40 ಕಡ್ಡಾಯವಾಗಿ ಆನ್ಯೂಟಿ (ಮಾಸಿಕ ಪೆನ್ಶನ್‌) ಆಗಿ ಪರಿವರ್ತಿಸಬೇಕು. ಇದೀಗ ಹಿಂಪಡೆಯುವ ಶೇ.60 ಮೊತ್ತವನ್ನು ಸಂಪೂರ್ಣವಾಗಿ ಕರಮುಕ್ತಗೊಳಿಸುವ ನಿರ್ಣಯವನ್ನು ಕ್ಯಾಬಿನೆಟ್‌ ಕೈಗೊಂಡಿದೆ. ಈ ಪ್ರಸ್ತಾಪ ಹೊಸ ಬಜೆಟ್‌ ಮೂಲಕ ಅನುಷ್ಠಾನಕ್ಕೆ ಬರಲಿದೆ. ಸದ್ಯಕ್ಕೆ ಎನ್‌.ಪಿ.ಎಸ್‌. ನಿಂದ ಹಿಂಪಡೆಯುವ ಶೇ.60 ಮೊತ್ತದಲ್ಲಿ ಕೇವಲ ಶೇ.40 ಮಾತ್ರವೇ ಕರ ಮುಕ್ತವಾಗಿದ್ದು ಉಳಿದ ಶೇ.20 ಮೊತ್ತವು ಕರಾರ್ಹವಾಗಿದೆ. ಹಿಂಪಡೆಯದೆ ಉಳಿಸಿಕೊಂಡ, ಆನ್ಯೂಟಿ ಅಥವಾ ಪೆನ್ಶನ್‌ ಆಗುವ ಉಳಿದ ಶೇ.40 ಮೊತ್ತದ ಮೇಲೆ ಲಾಗಾಯ್ತಿನಿಂದಲೂ ಕರ ಇರುವುದಿಲ್ಲ. (ಆದರೆ ಆ ಬಳಿಕ ಬರುವ ಮಾಸಿಕ ಪೆನ್ಶನ್‌ ಮೇಲೆ ಆದಾಯ ಕರ ಇರುತ್ತದೆ. ಅದು ಬೇರೆ ವಿಚಾರ) ಸಂಪೂರ್ಣ ಕರಮುಕ್ತ ಹಿಂಪಡೆತವು ಬಹುಕಾಲದ ಬೇಡಿಕೆಯಾಗಿದ್ದು ಇದು ಕಾರ್ಯಗತವಾದರೆ ಎನ್‌.ಪಿ.ಎಸ್‌. ಸ್ಕೀಂನಲ್ಲಿದ್ದ ಪ್ರಾಮುಖ್ಯ ನ್ಯೂನತೆಯೊಂದು ಇಲ್ಲವಾಗುತ್ತದೆ ಹಾಗೂ ಅದು ಪ್ರಾವಿಡೆಂಟ್‌ ಫ‌ಂಡ್‌ ತುಲನೆಯಲ್ಲಿ ಸರಿಸಮಾನವೆನಿಸುತ್ತದೆ. ಈ ಕರ ಮುಕ್ತ ಹಿಂಪಡೆತ ಸರಕಾರಿ, ಖಾಸಗಿ – ಈ ರೀತಿ ಯಾವುದೇ 
ಎನ್‌.ಪಿ.ಎಸ್‌. ಸದಸ್ಯರಿಗೆ ಅನ್ವಯವಾಗುತ್ತದಂತೆ.

2. ಹೆಚ್ಚುವರಿ ದೇಣಿಗೆ ಶೇ.14 
ಸದ್ಯಕ್ಕೆ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಅನ್ವಯವಾಗುವಂತೆ ಅವರ ಎನ್‌.ಪಿ.ಎಸ್‌. ದೇಣಿಗೆ ಸರಕಾರದಿಂದ ಸಂಬಳದ ಶೇ.10 ಹಾಗೂ ನೌಕರರಿಂದ ಶೇ.10 ಜಮೆಯಾಗುತ್ತದೆ. ಆದರೆ ಈಗಿನ ಕ್ಯಾಬಿನೆಟ್‌ ನಿರ್ಧಾರದ ಅನುಸಾರ ಕೇಂದ್ರ ಸರಕಾರ ಭವಿಷ್ಯದಲ್ಲಿ ಶೇ.14 ದೇಣಿಗೆ ನೀಡಲಿದೆ. ನೌಕರರ ದೇಣಿಗೆ ಹಾಗೆಯೇ ಶೇ.10ದಲ್ಲಿಯೇ ಮುಂದುವರಿಯಲಿದೆ. ಸದ್ಯದ ಈ ಕ್ಯಾಬಿನೆಟ್‌ ನಿರ್ಧಾರವು ಕೇವಲ ಕೇಂದ್ರ ಸರಕಾರದ ನೌಕರರಿಗೆ ಮಾತ್ರ ಅನ್ವಯಿಸುವಂತೆ ಇದೆ ಎನ್ನುವುದನ್ನೂ ಕೂಡಾ ಗಮನಿಸಿರಿ. 

3. ಹೂಡಿಕೆಯಲ್ಲಿ ಸ್ವಾತಂತ್ರ್ಯ
ಸದ್ಯಕ್ಕೆ ಸರಕಾರಿ ನೌಕರರ ಎನ್‌.ಪಿ,ಎಸ್‌. ಯೋಜನೆಯಲ್ಲಿ ಫ‌ಂಡ್‌ ಮ್ಯಾನೇಜರ್‌ ಮತ್ತು ಹೂಡಿಕಾ ಕ್ಷೇತ್ರದ (ಈಕ್ವಿಟಿ/ಡೆಟ್‌) ಬಗ್ಗೆ ನೌಕರರಿಗೆ ವಿಶೇಷ ಆಯ್ಕೆ ಇರಲಿಲ್ಲ. ಅವೆÇÉಾ ಸರಕಾರಿ ನಿಯಮಗಳ ಅನ್ವಯ ನಡೆಯುತ್ತಾ ಬಂದಿವೆ. ಖಾಸಗಿ ವಲಯದ ಎನ್‌.ಪಿ.ಎಸ್‌.ನಲ್ಲಿ ಮಾತ್ರವೇ ಸದಸ್ಯರಿಗೆ ಅಂತಹ ಆಯ್ಕೆಗಳು ಇದ್ದವು. ಆದರೆ ಇನ್ನು ಮುಂದೆ ಸರಕಾರಿ ನೌಕರರಿಗೂ ಅಂತಹ ವಿಶೇಷ ಆಯ್ಕೆಗಳು ಸಿಗಲಿವೆ. ಇದು ಕೂಡಾ ಒಂದು ಉತ್ತಮ ಬೆಳ ವಣಿಗೆಯೇ. ಪ್ರತಿಯೊಬ್ಬರು ಕೂಡಾ ಅವರವರ ಭಾವಕ್ಕೆ ಮತ್ತು ಅವರವರ ಭಕುತಿಗೆ ಅನುಸಾರವಾಗಿ ಹೂಡಿಕೆ ಮಾಡಬಹುದು. 

4. ಟಯರ್‌-2 ಖಾತೆಗೆ ಕರ ವಿನಾಯಿತಿ 
ಈವರೆಗೆ ಎನ್‌.ಪಿ.ಎಸ್‌. ಖಾತೆಯಲ್ಲಿನ ಟಯರ್‌-1 ಉಪಖಾತೆಗೆ ಮಾತ್ರ ಕರ ವಿನಾಯಿತಿ ಸಿಗುತ್ತಲಿತ್ತು. ಟಯರ್‌-2 ಉಪಖಾತೆಗೆ ಯಾವುದೇ ವಿನಾಯಿತಿ ಇರುತ್ತಿರಲಿಲ್ಲ. ಅದು ಕೇವಲ ಒಂದು ಬ್ಯಾಂಕಿನ ಸೇವಿಂಗ್ಸ್‌ ಖಾತೆಯಂತೆ ನಡೆಯುತ್ತಿತ್ತು. ಇನ್ನು ಮುಂದೆ, ಅಂದರೆ ಈ ಪ್ರಸ್ತಾವಗಳು ಕಾನೂನಾಗಿ ಬಂದ ಬಳಿಕ ಸರಕಾರಿ ನೌಕರರ ಟಯರ್‌-2 ಉಪಖಾತೆಗೂ ಕರವಿನಾ ಯಿತಿ ಲಭಿಸಲಿದೆ. ಕರವಿನಾಯಿತಿಯು ಸೆಕ್ಷನ್‌ 80ಸಿ ಅಡಿಯಲ್ಲಿ ಉಳಿದ ಹೂಡಿಕೆಗಳೊಂದಿಗೆ (ಪಿ.ಎಫ್, ವಿಮೆ, ಸ್ಕೂಲ್‌ ಫೀಸ್‌, ಎನ್‌.ಎಸ್‌.ಸಿ. ಇತ್ಯಾದಿಗಳು) ಒಟ್ಟಾರೆ ರೂ. 1.5 ಲಕ್ಷದವರೆಗೆ ಲಭಿಸಲಿದೆ. ಆದರೆ ಅಂತಹ ಹೂಡಿಕೆಗೆ 3 ವರ್ಷದ ಲಾಕ್‌ಇನ್‌ ಬರಲಿದೆ. ಇದರೊಂದಿಗೆ ಎನ್‌.ಪಿ.ಎಸ್‌.ನ ಟಯರ್‌-2 ಖಾತೆಯು ಮ್ಯೂಚುವಲ್‌ ಫ‌ಂಡಿನ ಇ.ಎಲ್‌ಎಸ್‌.ಎಸ್‌. (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್‌ ಸ್ಕೀಮ್‌) ಯೋಜನೆಗೆ ತತ್ಸಮಾನವಾಗಲಿದೆ. 

ಇವಿಷ್ಟು ಈ ಬಾರಿ ಪ್ರಕಟವಾದ ಎನ್‌.ಪಿ.ಎಸ್‌. ಯೋಜನೆಯ ಸುಧಾರಣಾ ಕ್ರಮಗಳು. ಮೊದಲೇ ಒಂದು ಉತ್ತಮ ಯೋಜನೆಯಾಗಿದ್ದ ಈ ರಾಷ್ಟ್ರೀಯ ಪಿಂಚಣಿ ಯೋಜನೆ ಈ ಬದಲಾವಣೆಗಳೊಂದಿಗೆ ಪಿ.ಎಫ್. ಹಾಗೂ ಇ.ಎಲ….ಎಸ್‌.ಎಸ್‌. ಯೋಜನೆಗಳ ತುಲನೆಯಲ್ಲಿ ಇನ್ನಷ್ಟೂ ಉತ್ತಮವಾಗಲಿದೆ.

ಇನ್ನು ಎನ್‌.ಪಿ.ಎಸ್‌. ಯೋಜನೆಯ ಇನ್ನಿತರ ಪ್ರಾಮುಖ್ಯ ಅಂಶಗಳ ಮೆಲೆ ಗಮನ ಹರಿಸೋಣ: 

ಕರಗೊಂದಲಗಳು 
ನ್ಯೂ ಪೆನ್ಶನ್‌ ಸ್ಕಿಂ ಅಥವಾ ನ್ಯಾಶನಲ್‌ ಪೆನ್ಶನ್‌ ಸ್ಕೀಂ ಬಗ್ಗೆ ಸಾಕಷ್ಟು ಜನ ಜಾಗೃತಿ ಈಗಾಗಲೇ ಏರ್ಪಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಅದರ ಮೇಲೆ ನೀಡಿರುವ ಕರ ವಿನಾಯಿತಿಯೇ ಆಗಿದೆ. ಈ ಯೋಜನೆಯ ಮೇಲೆ ಸಿಗುವ ಹಾಗೂ ಬೇರಾವ ಯೋಜನೆಗೂ ಸಿಗದ ಹೆಚ್ಚುವರಿಯಾದ ರೂ. 50,000ದ ಕರ ವಿನಾಯಿತಿ ಇದರ ಹೆಗ್ಗಳಿಕೆ ಹಾಗೂ ಆ ಕಾರಣಕ್ಕಾಗಿಯೇ ಅನೇಕ ಜನರು, ಮುಖ್ಯ ವಾಗಿ ಉದ್ಯೋಗಿ ವರ್ಗದವರು ಇದರ ಬಗ್ಗೆ ಆಸಕ್ತಿವಹಿಸುತ್ತಿದ್ದಾರೆ. 

ಈ ಸ್ಕೀಮಿನಲ್ಲಿ ವಾರ್ಷಿಕ ರೂ.1.5 ಲಕ್ಷದವರೆಗೆ 80ಸಿ ಕರಲಾಭ ಸಿಗುತ್ತದೆ. (ಈ ಸೆಕ್ಷನ್‌ ಅಡಿಯಲ್ಲಿ ಎನ್‌ಪಿಎಸ್‌ ಅಲ್ಲದೆ ಪಿಪಿಎಫ್, ಎನ್‌ಎಸ್‌ಸಿ, ಇಎಲ್‌ಎಸ್‌ಎಸ್‌, 5-ವಾರ್ಷಿಕ ಎಫ್ಡಿ, ಟ್ಯೂಷನ್‌ ಫೀಸ್‌ ಇತ್ಯಾದಿ ಹಲವಾರು ಯೋಜನೆಗಳೂ ಸೇರಿವೆ). ಅದಲ್ಲದೆ 2015ರಿಂದ ಆರಂಭಗೊಂಡಂತೆ ಇದೇ ಸ್ಕೀಮಿಗೆ ಹೊಸ ಸೆಕ್ಷನ್‌ 80ಸಿಸಿಡಿ(1ಬಿ) ಅನುಸಾರ ಇನ್ನೊಂದು ರೂ. 50,000 ಮೊತ್ತದ ಪ್ರತ್ಯೇಕ ಕರವಿನಾಯಿತಿ ಲಭಿಸುತ್ತದೆ. ಈ 50,000 ಕರ ವಿನಾಯಿತಿ ಇದೊಂದೇ ಸ್ಕೀಮಿಗೆ ಸಿಗುತ್ತದಲ್ಲದೆ ಬೇರಾವ ಸ್ಕೀಮಿನಲ್ಲೂ ಲಭ್ಯವಿಲ್ಲ. ಈ ಕಾರಣಕ್ಕೆ ಎನ್‌ಪಿಎಸ್‌ ಸ್ಕೀಮಿನ ಘನತೆ ಮತ್ತು ಉಪಯುಕ್ತತೆ ಇನ್ನಷ್ಟು ಹೆಚ್ಚಿದೆ. ಇವೆರಡೂ ಅಲ್ಲದೆ ಉದ್ಯೋಗದಾತರು ನಿಮ್ಮ, ತಮ್ಮ ದೇಣಿಗೆಯನ್ನು ನಿಮ್ಮ ಖಾತೆಗೆ ನೀಡಿದರೆ ಆ ಮೊತ್ತವೂ ಕೂಡಾ ಇನ್ನೊಂದು ಪ್ರತ್ಯೇಕ ಸೆಕ್ಷನ್‌ 80 ಸಿಸಿಡಿ(2) ಪ್ರಕಾರ ಕರ ವಿನಾಯಿತಿಗೆ ಒಳಪಡುತ್ತದೆ. ಹಾಗಾಗಿ 3 ಪ್ರತ್ಯೇಕ ಸೆಕ್ಷನ್‌ಗಳ ಅಡಿಯಲ್ಲಿ ಕರಲಾಭ ಇರುವ ಈ ಯೋಜನೆ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿದೆ. ಓದುಗರು ಈ ಮೂರೂ ಸೆಕ್ಷನ್‌ಗಳನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಅಥೆìçಸಿಕೊಂಡು ವ್ಯವಹರಿಸಬೇಕು. ಇವುಗಳ ಬಗ್ಗೆ ಸಾಕಷ್ಟು ಗೊಂದಲಗಳು ಸುಳಿದಾಡುತ್ತಿವೆ. ಉದ್ಯೋಗದಾತರು ನೀಡುವ 80ಸಿಸಿಡಿ(2) ದೇಣಿಗೆಯನ್ನೇ ತಮ್ಮ 80ಸಿಸಿಡಿ(1ಬಿ) ಎಂದು ನಂಬಿ ತಣ್ಣನೆ ಕೂತು ವರ್ಷಾಂತ್ಯದಲ್ಲಿ ಕರಲಾಭ ವಂಚಿತರಾದವರು ಹಲವರಿದ್ದಾರೆ. 

ಸದ್ಯದ ಪರಿಸ್ಥಿತಿಯಲ್ಲಿ ಎನ್‌ಪಿಎಸ್‌ಗೆ ಹೂಡಿಕೆಯ ಆಧಾರದಲ್ಲಿ ಮೇಲೆ ತಿಳಿಸಿದಂತಹ ಕರವಿನಾಯಿತಿ ಇದೆ. ವಾರ್ಷಿಕ ಪ್ರತಿಫ‌ಲದ ಮೇಲೂ ಪ್ರತಿವರ್ಷವೆಂಬಂತೆ ಕರಕಟ್ಟಬೇಕಾಗಿಲ್ಲ. ಆದರೆ 60ರ ವಯಸ್ಸಿನಲ್ಲಿ ಖಾತೆಯಲ್ಲಿ ಶೇಖರವಾದ ಒಟ್ಟು ಮೊತ್ತದ ಶೇ.60 ಹಿಂಪಡೆಯಬಹುದು. ಮೊದಲೇ ಹೇಳಿದಂತೆ ಸದ್ಯಕ್ಕೆ ಒಟ್ಟು ಮೊತ್ತದ ಶೇ.40 ಮಾತ್ರ ಕರಮುಕ್ತ ಆದಾಯವಾಗಿದೆ. ಹಾಗಾಗಿ ಶೇ.40 ಮಾತ್ರ ಹಿಂಪಡೆದು ಉಳಿದ ಶೇ.60 ಅನ್ನು ಆನ್ಯೂಟಿ ಆಗಿ ಪರಿವರ್ತಿಸಬಹುದು. ಹಿಂಪಡೆಯದೆ ಆನ್ಯೂಟಿಯಾಗಿ ಪರಿವರ್ತಿಸಿಕೊಂಡ ಮೊತ್ತದ ಮೇಲೆ ನಿಯಮಿತವಾಗಿ ಬರುವ ಆನ್ಯೂಟಿ ಪೆನ್ಶನ್‌ ಮೇಲೆ ಆದಾಯ ಕರ ಇರುತ್ತದೆ. 

ಇಲ್ಲಿ ಹಿಂಪಡೆಯುವ ಮೊತ್ತ ಗರಿಷ್ಠ ಶೇ.60, ಅಂದರೆ ಅದರಿಂದ ಕೆಳಗಿನ ಯಾವ ಮೊತ್ತವನ್ನಾದರೂ ಹಿಂಪಡೆಯಬಹುದು , ಶೇ. 0 ಕೂಡಾ. ಅಂದರೆ ನೂರಕ್ಕೆ ನೂರು ಶತಮಾನ ಆನ್ಯೂಟಿ ಕೂಡಾ ಪಡೆಯಬಹುದು. ಅಲ್ಲದೆ ಈ ಹಿಂಪಡೆತಕ್ಕೆ ಸಮಯಾವಕಾಶವೂ ಇದೆ. ಆನ್ಯೂಟಿ ಆರಂಭವಾದ 60 ವರ್ಷದ ಬಳಿಕ 3 ವರ್ಷಗಳೊಳಗೆ ಯಾವಾಗ ಬೇಕಾದರೂ ಆರಂಭಿಸಬಹುದು ಹಾಗೂ ಹಿಂಪಡೆಯುವ ಮೊತ್ತ 60 ಕಳೆದು 10 ವರ್ಷಗಳ ಒಳಗೆ ಯಾವಾಗ ಬೇಕಾದರೂ ಆರಂಭಿಸಬಹುದು. ಈ ಅವಕಾಶವನ್ನು ಕರ ಉಳಿತಾಯದ ದೃಷ್ಟಿಯಿಂದ ಬಳಸಿಕೊಳ್ಳಬಹುದು. 

60ರ ಮುನ್ನ
60 ವರ್ಷ ಆಗುವ ಮುನ್ನ ಕೆಲಸ ಕಳೆದುಕೊಂಡೋ ಅಥವಾ ಇನ್ನಾವುದಾದರೂ ಕಾರಣಕ್ಕೆ ಎನ್‌ಪಿಎಸ್‌ ಕಂತುಗಳನ್ನು ಮುಂದುವರಿಸಲಾರದೆ ಖಾತೆಯನ್ನು ಕೈಬಿಡಬೇಕಾದವರು ಏನುಮಾಡಬೇಕು? ಅಂಥವರು ಕನಿಷ್ಠ ಶೇ.80 ಮೊತ್ತವನ್ನು ಆನ್ಯೂಟಿಗೆ ಪರಿವರ್ತಿಸಿಕೊಂಡು ಉಳಿದ ಗರಿಷ್ಟ ಶೇ.20 ವನ್ನು ಹಿಂಪಡೆಯಬಹುದು. ಈಗ ಈ ಶೇ.20 ಮೊತ್ತ ಕರಮುಕ್ತವಾಗಿದೆ.

ಭಾಗಶಃ ಹಿಂಪಡೆತ 
ಎನ್‌ಪಿಎಸ್‌ನಲ್ಲಿ ತೊಡಗಿಸಿದ ಮೊತ್ತವನ್ನು 60 ತುಂಬುವ ಮೊದಲೂ ಕೂಡಾ ಭಾಗಶಃ ಹಿಂಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ ಖಾತೆಗೆ ಕನಿಷ್ಠ 10 ವರ್ಷ ತುಂಬಿರಬೇಕು. ಹಿಂಪಡೆತದ ಪ್ರಮಾಣವು ಸ್ವಂತ ದೇಣಿಗೆಯ ಮೊತ್ತದ ಶೇ.25ಕ್ಕೆ ಸೀಮಿತವಾಗಿದೆ ಹಾಗೂ 2017ರ ಬಜೆಟ್ಟಿನಲ್ಲಿ ಈ ಮೊತ್ತಕ್ಕೆ ಕರ ವಿನಾಯಿತಿ ನೀಡಲಾಗಿದೆ. ಭಾಗಶಃ ಹಿಂಪಡೆತದ ಸೌಲಭ್ಯವನ್ನು ಈ ಕೆಳಗಿನ ಕಾರಣಗಳಿಗೆ ಮಾತ್ರ ನೀಡಲಾಗಿದೆ. 

1.ಮಕ್ಕಳ ವಿದ್ಯಾಭ್ಯಾಸಕ್ಕೆ
2. ಮಕ್ಕಳ ಮದುವೆಗಾಗಿ
3.ಮೊದಲನೆಯ ಮನೆಯ ನಿರ್ಮಾಣ/ಫ್ಲಾಟ್‌ ಖರೀದಿಗೆ
4. ಕೆಲ ನಿಗದಿತ ರೋಗಗಳ ಚಿಕಿತ್ಸೆಗಾಗಿ – ಸ್ವಂತ, ಗಂಡ/ಹೆಂಡತಿ/ಮಕ್ಕಳು/ಅವಲಂಬಿತ ಹೆತ್ತವರು
ಈ ರೀತಿಯ ಭಾಗಶಃ ಹಿಂಪಡೆತಗಳನ್ನು ಗರಿಷ್ಟ 3 ಬಾರಿ ಮಾತ್ರ ಮಾಡಲು ಸಾಧ್ಯ ಹಾಗೂ ಒಂದು ಹಿಂಪಡೆತ ಮತ್ತು ಇನ್ನೊಂದರ ನಡುವೆ ಕನಿಷ್ಠ 5 ವರ್ಷಗಳ ಅವಧಿ ಇರಬೇಕು. (ಅನಾರೋಗ್ಯದ ಸಂದರ್ಭಕ್ಕೆ ಈ ಕಾನೂನು ಅನ್ವಯಿಸುವುದಿಲ್ಲ)
ಮೃತ್ಯು 60ರ ಮೊದಲು ಖಾತೆದಾರರ ಮೃತ್ಯು ಸಂಭವಿಸಿದಲ್ಲಿ ಒಟ್ಟು ಮೊತ್ತವನ್ನು ನಾಮಿನಿಗೆ ನೀಡಲಾಗುವುದು. ನಾಮಿನಿಯು ಏಕಗಂಟಿನಲ್ಲಿ ದುಡ್ಡನ್ನು ಪಡಕೊಳ್ಳಬಹುದು ಅಥವಾ ಸಂಪೂರ್ಣವಾಗಿ ಆನ್ಯೂಟಿಯಾಗಿಯೂ ಪಡಕೊಳ್ಳಬಹುದು. ಸರಕಾರಿ ಎನ್‌.ಪಿ.ಎಸ್‌. ಸ್ಕೀಮಿನಲ್ಲಿ ಶೇ.80 ಆನ್ಯೂಟಿ ಕಡ್ಡಾಯ. ಹಿಂಪಡೆದ ಮೊತ್ತ ಸಂಪೂರ್ಣ ಕರ ಮುಕ್ತವಾಗಿದೆ.
 
ಖಾತೆ ತೆರೆಯುವುದು ಹೇಗೆ 
ಎನ್‌ಪಿಎಸ್‌ ಅನ್ನು ಪಿಓಪಿ ಕೇಂದ್ರಗಳಲ್ಲಿ ತೆರೆಯಬಹುದು. ಪಾಯಿಂಟ್‌ ಆಫ್ ಪ್ರಸೆನ್ಸ್‌ ಅಥವಾ ಪಿಓಪಿ ಎಂದು ಕರೆಯಲ್ಪಡುವ ಈ ಸೇವಾ ಕೇಂದ್ರಗಳು ದೇಶದ ಬಹುತೇಕ ಎಲ್ಲಾ ಸರಕಾರಿ/ಖಾಸಗಿ ಬ್ಯಾಂಕುಗಳಲ್ಲಿ, ಪೋಸ್ಟಾಫೀಸಿನಲ್ಲಿ, ಕಾರ್ವಿ/ಕ್ಯಾಮಸ್‌ನಂತಹ ಸೇವಾ ಕೇಂದ್ರಗಳಲ್ಲಿ ಇವೆ. ಈ ಸಂಸ್ಥೆಗಳು ತಮ್ಮ ಎಲ್ಲಾ ಬ್ರಾಂಚುಗಳಲ್ಲೂ ಸೇವಾ ಕೇಂದ್ರಗಳನ್ನು ತೆರೆದಿರದಿದ್ದರೂ ಮುಖ್ಯ ಪಟ್ಟಣಗಳ ಮುಖ್ಯ ಬ್ರಾಂಚುಗಳಲ್ಲಿ ಎನ್‌ಪಿಎಎಸ್‌ ಖಾತೆಯನ್ನು ತೆರೆಯುವ ಸೌಲಭ್ಯವನ್ನು ನೀಡುತ್ತವೆ. ಈ ಬಗ್ಗೆ ವಿಚಾರಿಸಿ ನಿಮಗೆ ಅನುಕೂಲವಾದೆಡೆ ಎನ್‌ಪಿಎಸ್‌ ಖಾತೆಗೆ ಅರ್ಜಿ ಗುಜರಾಯಿಸಬಹುದು. 

ಫಾರ್ಮ್/ದಾಖಲೆಗಳು 
ಎನ್‌ಪಿಎಸ್‌ ಖಾತೆಗೆ ಅಗತ್ಯವಾದ ಎಲ್ಲಾ ಫಾರ್ಮುಗಳು ಬ್ಯಾಂಕುಗಳ ವೆಬ್‌ಸೈಟ್‌ ಅಥವಾ ಎನ್‌ಪಿಎಸ್‌ಸಿಆರ್‌ಎ ವೆಬ್‌ಸೈಟಿನಲ್ಲಿ ಪಡೆಯಬಹುದು. ಖಾತೆ ತೆರೆಯಲು ಸಿಎಸ್‌ಆರ್‌-1 ಫಾರ್ಮ್ ಅನ್ನೂ ಹೂಡಿಕೆಗೆ ಎನ್‌ಸಿಐಎಸ್‌ ಫಾರ್ಮನ್ನೂ ಬಳಸಬೇಕು. ಖಾತೆ ತೆರೆಯಲು ಈ ಕೆಳಗಿನ ದಾಖಲೆಗಳು ಅಗತ್ಯ:
1. ಸೂಕ್ತವಾಗಿ ತುಂಬಿದ ಆರ್ಜಿ ನಮೂನೆ, ಫೋಟೊ ಸಹಿತ
2.ವಿಳಾಸ ಪುರಾವೆ 
3.ಪ್ಯಾನ್‌ ಕಾರ್ಡ್‌ ಪ್ರತಿ
4.ಬ್ಯಾಂಕ್‌ ಪುರಾವೆ

ಟಾಪ್ ನ್ಯೂಸ್

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.