ಉಡುಪಿ: ಸಾವಯವ ಸಂತೆಗೆ ಮತ್ತೆ ಚಾಲನೆ
Team Udayavani, Dec 17, 2018, 10:11 AM IST
ಉಡುಪಿ: ಮಳೆಗಾಲದ ಸಮಸ್ಯೆಯಿಂದ ನಿಲುಗಡೆಗೊಂಡಿದ್ದ ರವಿವಾರದ ಸಾವಯವ ಸಂತೆ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆ ಆವರಣದಲ್ಲಿ ಡಿ. 16ರಂದು ಮತ್ತೆ ಆರಂಭಗೊಂಡಿತು.
ಬೆಳಗ್ಗೆ 6.30ರಿಂದಲೇ ಗ್ರಾಹಕರು ಆಗಮಿಸಿ ಸಾವಯವ ಉತ್ಪನ್ನಗಳ ಬೇಡಿಕೆಯನ್ನು ಸಾಬೀತುಪಡಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಸಹಾಯಕ ನಿರ್ದೇಶಕ ಚಂದ್ರಶೇಖರ್ ಮತ್ತಿತರ ಗಣ್ಯರೂ ಆಗಮಿಸಿ ಸಾವಯವ ಉತ್ಪನ್ನಗಳನ್ನು ಖರೀದಿಸಿದರು.
ಜಿಲ್ಲೆಯ ಐದು ಸಾವಯವ ಗ್ರಾಮಗಳಿಂದ ಸುಮಾರು 50 ಬಗೆಯ ಹಣ್ಣು, ತರಕಾರಿಗಳನ್ನು ರೈತರು ತಂದಿದ್ದರು. ಚಿಕ್ಕ ಮಗಳೂರಿನಿಂದ ಈರುಳ್ಳಿ, ಟೊಮೆಟೊ, ಕ್ಯಾರೆಟ್, ಬೀಟ್ರೂಟ್, ಅವರೆಕಾಯಿ, ಮೂಲಂಗಿ, ಸೌತೆ ಕಾಯಿ, ಮುಳ್ಳುಸೌತೆಯಂತಹ ಸುಮಾರು 15 ತರಹದ ಉತ್ಪನ್ನಗಳು ಬಂದಿದ್ದವು. ವಿವಿಧ ಬಗೆಯ ಅಕ್ಕಿ, ಸಿರಿಧಾನ್ಯ, ಅವಲಕ್ಕಿ, ಬೇಳೆಕಾಳು, ಸಾಂಬಾರು ಪದಾರ್ಥಗಳು, ಉಪ್ಪು, ಸಕ್ಕರೆ, ಬೆಲ್ಲ ಹೀಗೆ ನಾನಾ ವಿಧದ ಸಾಮಗ್ರಿಗಳನ್ನು ಗ್ರಾಹಕರು ಖರೀದಿಸಿದರು. ಸುಮಾರು ಶೇ. 90 ಉತ್ಪನ್ನಗಳು ಮಾರಾಟವಾಗಿವೆ. ಉಳಿದ ಸಾಮಗ್ರಿಗಳನ್ನು ಉಡುಪಿಯ ಗೋಮಾತಾ ಟ್ರೇಡರ್ನವರು ಖರೀದಿಸಲಿದ್ದಾರೆ ಎಂದು ಉಡುಪಿ, ದ.ಕ., ಚಿಕ್ಕಮಗಳೂರು ಸಾವಯವ ಒಕ್ಕೂಟದ ಸಿಇಒ ಮಂಜುನಾಥ್ “ಉದಯವಾಣಿ’ಗೆ ತಿಳಿಸಿದರು.
ಜನರಿಗೆ ಸಾವಯವದ ಅರಿವು ಆಗಿದೆ
ಜನರಿಗೆ ಸಾವಯವ ಸಂತೆ ಮತ್ತೆ ಆರಂಭಿಸಿದ್ದು ಖುಷಿಯಾಗಿದೆ. ಹಿಂದಿನ ಗ್ರಾಹಕರಲ್ಲದೆ ಹೊಸ ಗ್ರಾಹಕರೂ ಬಂದು ಉತ್ಪನ್ನಗಳನ್ನು ಕೊಂಡೊಯ್ದಿದ್ದಾರೆ. “ಈ ಎರಡು ಮೂರು ತಿಂಗಳಲ್ಲಿ ಸಾವಯವ ಉತ್ಪನ್ನಗಳು ಲಭ್ಯವಾಗದೆ ಇದ್ದದ್ದು ನಮಗೆ ಅರಿವಾಗಿದೆ. ಈ ಅವಧಿಯಲ್ಲಿ ನಮ್ಮ ಆರೋಗ್ಯ ಮತ್ತೆ ಹದಗೆಟ್ಟು ಔಷಧಿಗಳಿಗೆ ಹೆಚ್ಚು ಖರ್ಚಾಯಿತು. ಇನ್ನು ಮುಂದೆ ಸಂತೆಯನ್ನು ನಿಲ್ಲಿಸಬೇಡಿ. ನಿರಂತರವಾಗಿ ಮುಂದುವರಿಸಿ’ ಎಂದು ವಿಶೇಷವಾಗಿ ಮಹಿಳೆಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ದೇವದಾಸ ಹೆಬ್ಟಾರ್, ನಿರ್ದೇಶಕರು, ಉಡುಪಿ, ದ.ಕ., ಚಿಕ್ಕಮಗಳೂರು ಸಾವಯವ ಒಕ್ಕೂಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ
Video: ಚಿಂದಿ ಆಯುವ ಮಕ್ಕಳ ಕೈಯಲ್ಲಿ 500 ರ ಕಂತೆ ಕಂತೆ ನೋಟು… ವಿಡಿಯೋ ವೈರಲ್
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ
Kota: ಬಡವರ ಪಾಲಿಗೆ ಬಾಂಧವ್ಯದ ನೆರಳು
Manipur ಘಟನೆಗಳಿಗೆ ಕ್ಷಮೆ ಕೇಳಿದ ಸಿಎಂ: ಪ್ರಧಾನಿ ಏಕೆ ಭೇಟಿ ನೀಡಿಲ್ಲ ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.