ದೊಂದಿ ಬೆಳಕಿನ ಯಕ್ಷಗಾನಕ್ಕೆ ಮನಸೋತ ಯಕ್ಷ ರಸಿಕರು
Team Udayavani, Dec 17, 2018, 12:19 PM IST
ತೆಕ್ಕಟ್ಟೆ : ಆಧುನಿಕ ಭರಾಟೆಯಲ್ಲಿ ನಲುಗುತ್ತಿರುವ ಯಕ್ಷಗಾನಕ್ಕೆ ಜೀವ ಕಳೆ ತುಂಬುವ ನಿಟ್ಟಿನಿಂದ ಹುಭಾಶಿಕ ಕೊರಗ ಯುವ ಕಲಾ ವೇದಿಕೆ ಬಾರಕೂರು ಆಶ್ರಯದಲ್ಲಿ ಮಕ್ಕಳ ಮನೆ ಕುಂಭಾಸಿ ಸಾಂಸ್ಕೃತಿಕ ಬೆಳವಣಿಗೆ ಸಹಾಯಾರ್ಥ ಹೊಸತೊಂದು ಪ್ರಯತ್ನ ಮಾಡಿ ಯಶಸ್ಸು ಕಂಡಿದೆ. ಪ್ರಶಾಂತ್ ಮಲ್ಯಾಡಿ ಸಂಯೋಜನೆಯೊಂದಿಗೆ ಬಡಗಿನ ಅತಿಥಿ ಕಲಾವಿದ ಕೂಡುವಿಕೆಯಲ್ಲಿ ನಡುತಿಟ್ಟಿನ ಪಾರಂಪರಿಕ ಯಕ್ಷಗಾನ ಶೈಲಿಯಲ್ಲಿ ಡಿ.15ರಂದು ಕುಂಭಾಸಿ ಅಂಬೇಡ್ಕರ್ ನಗರದಲ್ಲಿ ಪ್ರದರ್ಶನಗೊಂಡ ದೊಂದಿ ಬೆಳಕಿನ ಯಕ್ಷಗಾನ ಕಲಾರಸಿಕರನ್ನು ತನ್ನೆಡೆಗೆ ಸೆಳೆಯುವಲ್ಲಿ ಸಫಲವಾಗಿದೆ.
ದೊಂದಿ ಬೆಳಕಿನ ಯಕ್ಷಗಾನ ಯಾವುದೇ ಬಗೆಯ ವಿದ್ಯುತ್ ಬೆಳಕಿನ ವ್ಯವಸ್ಥೆಗಳಿಲ್ಲದೆ ಸಂಪೂರ್ಣ ದೊಂದಿ ಬೆಳಕಿನಲ್ಲೇ ನಡೆಯುವ ಯಕ್ಷಗಾನದ ಪ್ರಾಕಾರವಾಗಿದೆ. ಕೋಟದಲ್ಲಿ ನಡೆದ ಈ ವಿಶೇಷ ಯಕ್ಷಗಾನಕ್ಕೆ ದೊಂದಿ ಬೆಳಕನ್ನು ಕೋಟದ ರಾಮಚಂದ್ರ ಆಚಾರ್ಯ ಅವರು ಅಚ್ಚಕಟ್ಟಾಗಿ ಒದಗಿಸಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಮಂಡಿ ಕಲಾವಿದರು ಯಕ್ಷಗಾನಕ್ಕಾಗಿ ಬಣ್ಣ ಹಚ್ಚಿದ್ದಾರೆ. ಚಂಡೆ ವಾದಕ ಮಾ| ಸುದೀಪ್ ಅವರ ಚೆಂಡೆ ವಾದನ ದೊಂದಿ ಬೆಳಕಿನ ಯಕ್ಷಗಾನಕ್ಕೆ ಮತ್ತಷ್ಟು ಮೆರಗು ನೀಡಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಮಕ್ಕಳಿಗೆ ಹೊಸತನ ಕಲಿಕೆಯ ಉದ್ದೇಶ
ಮಕ್ಕಳಿಗೆ ಹೊಸತನ ಕಲಿಸಬೇಕು ಎನ್ನುವ ಮೂಲ ಉದ್ದೇಶದಿಂದ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಬೇಕು ಎನ್ನುವ ಆಶಯವಿದೆ.
- ಗಣೇಶ್ ವಿ., ಕೊರಗ ಮುಖಂಡ
ಯಕ್ಷಗಾನದ ಮೂಲ ಸ್ವರೂಪ ಮತ್ತೆ ನೆನಪು ಆಧುನಿಕತೆಯ ನಡುವೆ ಮರೆಯಾಗುತ್ತಿರುವ ಸಾಂಪ್ರದಾಯಿಕ ಶೈಲಿ ಯಕ್ಷಗಾನದ ಮೂಲ ಸ್ವರೂಪವನ್ನು ಮತ್ತೆ ನೆನಪಿಸಬೇಕು ಎನ್ನುವ ನಿಟ್ಟಿನಿಂದ ಎಲ್ಲರ ಸಹಕಾರದೊಂದಿಗೆ ಮೊದಲ ಬಾರಿಗೆ ಯಾವುದೇ ವಿದ್ಯುತ್ ಬೆಳಕನ್ನು ಬಳಸದೆ ಕೇವಲ ದೊಂದಿ ಬೆಳಕನ್ನು ಸೃಷ್ಟಿಸಿ ಬಯಲು ಯಕ್ಷಗಾನ ಪ್ರದರ್ಶನ ನಡೆಸಿದ್ದೇವೆ. ಕಾರ್ಯಕ್ರಮದ ಯಶಸ್ಸಿಗೆ ಹಿರಿಯ ಯಕ್ಷಗಾನ ಕಲಾವಿದರ ಅನಿಸಿಕೆ, ಅಭಿಪ್ರಾಯವೇ ಕಾರಣ.
-ಪ್ರಶಾಂತ್ ಮಲ್ಯಾಡಿ ,
ಕಾರ್ಯಕ್ರಮ ಸಂಯೋಜಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Guns and Roses Review: ನೆತ್ತರ ಹಾದಿ ಪ್ರೇಮ್ ಕಹಾನಿ
Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.