ದಾವಣಗೆರೆಯಲ್ಲಿ ಟೀಂ ಮೋದಿ ಉದ್ಘಾಟನೆ-ಜಾಥಾ
Team Udayavani, Dec 17, 2018, 4:14 PM IST
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಹುದ್ದೆಗೇರಿಸುವ ಪ್ರಮುಖ ಉದ್ದೇಶ ಹಾಗೂ ಮತ್ತೂಮ್ಮೆ ಮೋದಿಗಾಗಿ… ಎಂಬ ಧ್ಯೇಯದೊಂದಿಗೆ ಮುಂಬರುವ ಲೋಕಸಭಾ ಚುನಾವಣೆವರೆಗೆ ಕಾರ್ಯ ನಿರ್ವಹಿಸಲಿರುವ ಟೀಂ ಮೋದಿ… ಭಾನುವಾರ ದಾವಣಗೆರೆಯಲ್ಲಿ ಉದ್ಘಾಟನೆಗೊಂಡಿತು.
ಟೀಂ ಮೋದಿ… ಉದ್ಘಾಟನೆಯ ಹಿನ್ನೆಲೆಯಲ್ಲಿ ಜಯದೇವ ವೃತ್ತದಿಂದ ರಾಜನಹಳ್ಳಿ ಹನುಮಂತಪ್ಪ ಛತ್ರ ವೃತ್ತ, ಹಳೆ
ಪಿಬಿ ರಸ್ತೆ, ಎವಿಕೆ ಕಾಲೇಜು ರಸ್ತೆ ಮೂಲಕ ರಾಂ ಆ್ಯಂಡ್ ಕೋ ವೃತ್ತದವರೆಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಯದೇವ ವೃತ್ತದಲ್ಲಿ ನರೇಂದ್ರ ಮೋದಿ ವೇಷಧಾರಿ ಕಾರ್ತಿಕ್ ಬಲೂನ್ ಹಾರಿ ಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿದ್ದವರು, ಹರ್ ಹರ್ ಮೋದಿ… ಘರ್ ಘರ್ ಮೋದಿ…, ಭಾರತ್ ಮಾತಾ ಕೀ ಜೈ.. ಮೋದಿ…ಮತ್ತೂಮ್ಮೆ ಮೋದಿ…. ಎಂಬ ಘೋಷಣೆ ಕೂಗಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಾಲ್ಕೂವರೆ ವರ್ಷದಲ್ಲಿ ವಿಶ್ವವೇ ನಿಬ್ಬೆರಗಾಗುವಂತಹ ಅನೇಕ ಯೋಜನೆ, ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಮತ್ತೆ ಅವರೇ ಪ್ರಧಾನಿ ಆಗಬೇಕು ಎಂಬ ಪ್ರಮುಖ ಉದ್ದೇಶ ಮತ್ತು ಧ್ಯೇಯದೊಂದಿಗೆ ಟೀಂ ಮೋದಿ.. ಕಾರ್ಯ ನಿರ್ವಹಿಸಲಿದೆ. ಪ್ರತಿಯೊಬ್ಬರ ಮನೆಗೆ ತೆರಳಿ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಸಾಧನೆಗಳ ಪರಿಚಯ, ಮನವರಿಕೆ ಮಾಡಿಕೊಡಲಾಗುವುದು. ಮೋದಿ ಅವರೇ ಮತ್ತಮ್ಮೆ ಪ್ರಧಾನಿ ಆಗ ಬಯಸುವಂತಹವರು ತಮಗೆ ಬೆಂಬಲ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಟೀಂ ಮೋದಿ…ತಂಡದ ಡೈಮಂಡ್ ಶಾರದಾ, ಪ್ರೇರಣಾ ಪವನ್, ಮನೋಜ್ ಸಾವರ್ಕರ್, ಮೇಘರಾಜ್, ಮಾರುತಿ,
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಎಚ್.ಸಿ. ಜಯಮ್ಮ, ಸರೋಜಾ ದೀಕ್ಷಿತ್, ಭಾಗ್ಯ ಪಿಸಾಳೆ, ರಾಜನಹಳ್ಳಿ ಶಿವಕುಮಾರ್, ಪ್ರಸನ್ನ ಕುಮಾರ್, ಪವನ್ ಕುಮಾರ್, ಎಂ. ಟಿಪ್ಪುಸುಲ್ತಾನ್, ಗೌತಮ್ ಜೈನ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.