ಗಮನ ಸೆಳೆದ ಶ್ವಾನ ಪ್ರದರ್ಶನ
Team Udayavani, Dec 17, 2018, 5:45 PM IST
ಶಿವಮೊಗ್ಗ: ಹಲವರು ನಾಯಿಯನ್ನು ಬೀದಿಗೆ ಬಿಡುತ್ತಾರೆ. ನಗರದಲ್ಲಿ ಬೀದಿನಾಯಿಗಳ ಹೆಚ್ಚಳಕ್ಕೆ ಇದೂ ಕಾರಣವಾಗಿದೆ. ಆ ಕಾರಣಕ್ಕಾಗಿಯೇ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗವನ್ನು ಬರುವ ದಿನಗಳಲ್ಲಿ ಬೀದಿ ನಾಯಿ ರಹಿತವಾಗಿಸಲು ಇದು ಪೂರಕವಾಗಿದೆ ಎಂದು ಶಿವಮೊಗ್ಗ ಕೆನಲ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಕಾಮತ್ ತಿಳಿಸಿದರು.
ಕೆನಲ್ ಕ್ಲಬ್ ವತಿಯಿಂದ ನಗರದ ಕುವೆಂಪು ರಂಗಮಂದಿರ ಹಿಂಭಾಗದಲ್ಲಿರುವ ಎನ್‌ಇಎಸ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ರಾಜ್ಯಮಟ್ಟದ ಶ್ವಾನ ಪ್ರದರ್ಶನ’ದಲ್ಲಿ ಮಾತನಾಡಿದ ಅವರು, ಶ್ವಾನದ ತಳಿ, ಯಾವ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ, ಎಂತಹ ಆಹಾರ ನೀಡಬೇಕು ಎಂಬಿತ್ಯಾದಿ ಅಂಶಗಳ ಕುರಿತು ಅರಿತುಕೊಳ್ಳದೇ ಶ್ವಾನ ಸಾಕಲು ಹೋಗಬೇಡಿ. ಇದರಿಂದ ಶ್ವಾನವಷ್ಟೇ ಅಲ್ಲದೆ ಸಾಕುವವರಿಗೆ ಸಮಸ್ಯೆ. ಮುಂದೊಂದು ದಿನ ಸಾಕಾಣಿಕೆ ಭಾರವಾಗಿ ಅದನ್ನು ಬೀದಿಗೆ ಬಿಡಲಾಗುತ್ತದೆ. ಇಂತಹ ಕೆಲಸ ಯಾವುದೇ ಕಾರಣಕ್ಕೂ ಮಾಡಬೇಡಿ ಎಂದು ಸಲಹೆ ನೀಡಿದರು.
ತಳಿ ಆಯ್ಕೆಯ ಬಗ್ಗೆ ಗಮನ ಹರಿಸಬೇಕು. ಮಾಹಿತಿ ಇಲ್ಲದೇ ಸಾಕಲು ಮುಂದಾದ ವ್ಯಕ್ತಿಗಳು ಅದರೆಡೆಗೆ ವಿಶೇಷ ಮುತುವರ್ಜಿ ವಹಿಸಬೇಕು. ಶ್ವಾನ ಖರೀದಿಸಿದಾಗ ನೋಡಲು ಆಕರ್ಷಕವಾಗಿರುತ್ತದೆ. ಆದರೆ, ಸಾಕಣೆ ಮಾಡಲಾರಂಭಿಸಿದ್ದ ಕೆಲವೇ ವರ್ಷಗಳಲ್ಲಿ ವಿಚಿತ್ರ ದೇಹಸ್ಥಿತಿ ಹೊಂದುತ್ತದೆ. ಇದರಿಂದಾಗಿ 2007ರಲ್ಲಿ ಆರಂಭವಾಗಿರುವ ಕ್ಲಬ್ ಈವರೆಗೆ ನಾಲ್ಕು ಸಲ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಹಮ್ಮಿಕೊಂಡಿದೆ. ಕಳೆದ ವರ್ಷ ನಡೆದ ಕಾರ್ಯಕ್ರಮದಲ್ಲಿ 160 ಶ್ವಾನಗಳು ಪಾಲ್ಗೊಂಡಿದ್ದವು. ಈ ಸಲ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಒಂದು ವೇಳೆ, ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಬರುವ ದಿನಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮ ಆಯೋಜಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಎಂಎಲ್‌ಸಿ ರುದ್ರೇಗೌಡ, 18ನೇ ಶತಮಾನದಿಂದ ನಾಯಿಗಳಲ್ಲಿನ ವಿಶೇಷ ಗುಣ ಮನಗಂಡು ಸಾಮಾಜಿಕ ಕಾರಣಕ್ಕಾಗಿ ಇದನ್ನು ಬಳಸಲು ಶುರುಮಾಡಲಾಯಿತು. ಇದಕ್ಕೂ ಮುಂಚೆಯೂ ನಾಯಿಗಳನ್ನು ಸಾಕಲಾಗುತ್ತಿತ್ತು. ಆದರೆ, ಶೋಧ ಕಾರ್ಯ ಮತ್ತಿತರ ಕೆಲಸಗಳಿಗೆ ಬಳಸುತ್ತಿರಲಿಲ್ಲ. ಇದರಲ್ಲಿರುವ ಸೂಕ್ಷ್ಮತೆ, ನಿಯತ್ತಿನಿಂದಾಗಿ ಸೇನೆ, ಪೊಲೀಸ್ ಇಲಾಖೆಯಲ್ಲೂ ಸ್ಥಾನಮಾನ ನೀಡಲಾಗಿದೆ. ಪ್ರಕೃತಿ
ಅನಾಹುತಗಳಾದಾಗ ದೇಹಗಳನ್ನು ಹುಡುಕುವುದೂ ಸೇರಿ ಬಾಂಬ್ ಶೋಧಕ್ಕೂ ಬಳಸಲಾಗುತ್ತಿದೆ.
ಶ್ವಾನಗಳನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಸಲಹೆ ನೀಡಿದರು. ವಾಯುವಿಹಾರಕ್ಕಾಗಿ ಕರೆತಂದಾಗ ವಿದೇಶಗಳಲ್ಲಿ ಅನುಸರಿಸುವಂತೆ ಇಲ್ಲಿಯೂ ಪ್ರಾಣಿ ಸಾಕುವವರು ಕೆಲ ಅಂಶಗಳೆಡೆಗೆ ಗಮನ ಹರಿಸಬೇಕು. ಪರಿಸರ ಹಾಳಾಗದಂತೆ ನೋಡಿಕೊಳ್ಳಬೇಕು. ಮಾನವ ಸ್ನೇಹಿ ನಾಯಿಗಳು ಅಪಾಯಕಾರಿ ಆಗಬಾರದು. ಬೀದಿನಾಯಿಗಳ ಸಂಖ್ಯೆ ತಡೆಗೆ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಕ್ಲಬ್‌ನವರು ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಸದಾಶಿವ ಮಾತನಾಡಿ, ಪ್ರಾಣಿಗಳೊಂದಿಗೆ ಹೆಚ್ಚಿನ ಒಡನಾಟ ರೂಪಿಸಿಕೊಂಡಲ್ಲಿ ತಾನಾಗಿಯೇ ದಯೆ, ಪ್ರೀತಿ ಮೂಡುತ್ತದೆ ಎಂದರು.
ಪರೋಪಕಾರಂನ ತ್ಯಾಗರಾಜ್ ಸೇರಿ ಎಲ್ಲ ಸದಸ್ಯರು, ಪ್ರದೀಪ್ ಸ್ಟೀವನ್‌ಸನ್ ಅವರನ್ನು ಸನ್ಮಾನಿಸಲಾಯಿತು. ಜೆಎನ್‌ಎನ್‌ಸಿಇ ಡೀನ್ ಡಾ| ಕೆ.ಸಿ. ವೀರಣ್ಣ, ತೀರ್ಪುಗಾರ ವಿಶ್ವಾಸ್ ಭರದ್ವಾಜ್, ವೈಜನಾಥ್, ಸತೀಶ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.