ರಣಜಿ: ಕರ್ನಾಟಕ-ಗುಜರಾತ್‌ ಪಂದ್ಯ ಡ್ರಾ

Team Udayavani, Dec 18, 2018, 6:00 AM IST

vinaya-kar.jpg

ಸೂರತ್‌: ಪ್ರಸಕ್ತ ರಣಜಿ ಕ್ರಿಕೆಟ್‌ ಕೂಟದ ಕರ್ನಾಟಕ-ಗುಜರಾತ್‌ ನಡುವಿನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ. ಮೊದಲ ಇನಿಂಗ್ಸ್‌ ಮುನ್ನಡೆ ಪಡೆದ ರಾಜ್ಯ ತಂಡ 3 ಅಂಕ, ಆತಿಥೇಯ ಗುಜರಾತ್‌ 1 ಅಂಕ ಪಡೆದುಕೊಂಡಿತು.

ರಾಜ್ಯಕ್ಕೆ ಒಟ್ಟಾರೆ 3ನೇ ಡ್ರಾ. ಡ್ರಾಗೊಂಡ 3 ಪಂದ್ಯಗಳಲ್ಲೂ ವಿನಯ್‌ ಪಡೆ ಮೊದಲ ಇನಿಂಗ್ಸ್‌ ಮುನ್ನಡೆ ಅಂಕ ಸಂಪಾದಿಸಿಕೊಂಡಿದೆ. ಮಹಾರಾಷ್ಟ್ರ ವಿರುದ್ಧ ಗೆಲುವು, ಸೌರಾಷ್ಟ್ರ ವಿರುದ್ಧ ಸೋಲು ಅನುಭವಿಸಿತ್ತು. ಮುಂದೆ ಶಿವಮೊಗ್ಗದಲ್ಲಿ ಡಿ.22ರಿಂದ ಆರಂಭವಾಗುವ ಪಂದ್ಯದಲ್ಲಿ ರೈಲ್ವೇಸ್‌ ಸವಾಲನ್ನು ಕರ್ನಾಟಕ ಎದುರಿಸಲಿದೆ.

ರಾಜ್ಯಕ್ಕೆ 173 ರನ್‌ ಗುರಿ: ಗುಜರಾತ್‌ 2ನೇ ಇನಿಂಗ್ಸ್‌ನಲ್ಲಿ 345 ರನ್‌ಗಳಿಸಿ ಆಲೌಟಾಯಿತು. 2ನೇ ಇನಿಂಗ್ಸ್‌ನಲ್ಲಿ ರಾಜ್ಯದ ಗೆಲುವಿಗೆ ಒಟ್ಟು 173 ರನ್‌ ಗುರಿ ಸಿಕ್ಕಿತ್ತು. ಇದನ್ನು ಬೆನ್ನಟ್ಟಿದ ರಾಜ್ಯಕ್ಕೆ ಆರಂಭಿಕ ಬ್ಯಾಟ್ಸ್‌ಮೆನ್‌ ಮಾಯಾಂಕ್‌ ಅಗರ್ವಾಲ್‌ (53 ರನ್‌) ಅರ್ಧಶತಕ ಸಿಡಿಸಿ ನೆರವಾಗಿದ್ದು ತಂಡದ ಪರ ದಾಖಲಾದ ವೈಯಕ್ತಿಕ ಶ್ರೇಷ್ಠ ರನ್‌. 2ನೇ ವಿಕೆಟ್‌ಗೆ ಬಂದ ಆರ್‌.ಸಮರ್ಥ್ (33 ರನ್‌) ಸ್ವಲ್ಪ ಗಮನ ಸೆಳೆದರು. ಇವರಿಬ್ಬರೂ ವಿಕೆಟ್‌ ಕಳೆದುಕೊಂಡ ಬಳಿಕ ರಾಜ್ಯದ ರನ್‌ ವೇಗ ಕುಸಿಯಿತು. ಒಟ್ಟಾರೆ 107 ರನ್‌ಗಳಿಸುವಷ್ಟರಲ್ಲಿ ರಾಜ್ಯ ತಂಡದ ಪ್ರಮುಖ 4 ವಿಕೆಟ್‌ ಪತನಗೊಂಡಿದ್ದವು. ದೇವದತ್‌ ಪಡೀಕ್ಕಲ್‌ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರೆ ಶ್ರೇಯಸ್‌ ಗೋಪಾಲ್‌ ಕೇವಲ 3 ರನ್‌ಗೆ ಪೆವಿಲಿಯನ್‌ಗೆ ನಡೆದರು. ಕೊನೆಯ ಹಂತದಲ್ಲಿ ರಾಜ್ಯ ಆಟಗಾರರಿಗೆ ಬ್ಯಾಟಿಂಗ್‌ನಲ್ಲಿ ಜಾದೂ ಮಾಡಲು ಸಾಧ್ಯವಾಗಲಿಲ್ಲ. ಗುಜರಾತ್‌ ಪರ ಅಕ್ಷರ್‌ ಪಟೇಲ್‌ (45ಕ್ಕೆ3) ವಿಕೆಟ್‌ ಕಬಳಿಸಿ ರಾಜ್ಯದ ಓಟಕ್ಕೆ ಬ್ರೇಕ್‌ ಹಾಕಿದರು. ಕೆ.ವಿ.ಸಿದ್ಧಾರ್ಥ್ (10 ರನ್‌) ಹಾಗೂ ಡಿ.ನಿಶ್ಚಲ್‌ (1 ರನ್‌) ಅಜೇಯರಾಗಿ ಉಳಿದರು.

ಶತಕ ವಂಚಿತ ಮನ್‌ಪ್ರೀತ್‌, ರುಜುಲ್‌: ಇದಕ್ಕೂ ಮೊದಲು ಅಂತಿಮ ದಿನ 2ನೇ ಇನಿಂಗ್ಸ್‌ 3 ವಿಕೆಟ್‌ಗೆ 187 ರನ್‌ನಿಂದ ಬ್ಯಾಟಿಂಗ್‌ ಮುಂದುವರಿಸಿದ ಗುಜರಾತ್‌ ತೀವ್ರ ಆಘಾತ ಅನುಭವಿಸಿತು. 3ನೇ ದಿನ ಅಜೇಯ 82 ರನ್‌ಗಳಿಸಿ ಕ್ರೀಸ್‌ನಲ್ಲಿದ್ದ ರುಜುಲ್‌ ಭಾನುವಾರದ ರನ್‌ಗೆ ಕೇವಲ 9 ರನ್‌ಗಳಿಸಿ ಔಟಾದರು. 9 ರನ್‌ಗಳಿಂದ ಶತಕವನ್ನೂ ತಪ್ಪಿಸಿಕೊಂಡರು. ಆಗ ತಂಡದ ಮೊತ್ತ 4 ವಿಕೆಟ್‌ಗೆ 214 ರನ್‌ ಆಗಿತ್ತು. ಅಂತಿಮ ದಿನ ಮನ್‌ಪ್ರೀತ್‌ ಜುನೇಜ (98 ರನ್‌) ಹಾಗೂ ಧ್ರುವ್‌ ರಾವಲ್‌ (30 ರನ್‌) ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ ಮನ್‌ಪ್ರೀತ್‌ 98 ರನ್‌ಗಳಿಸಿದ್ದಾಗ ಗೌತಮ್‌ ಎಸೆತದಲ್ಲಿ ಬೌಲ್ಡ್‌ ಆದರು. 2 ರನ್‌ ಅಂತರದಿಂದ ಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ಗುಜರಾತ್‌ ಪರ ಅಂತಿಮ ದಿನ ಎರಡು ಶತಕಗಳು ಕೈತಪ್ಪಿದ್ದು ಹೈಲೈಟ್ಸ್‌.

ಟಾಪ್ ನ್ಯೂಸ್

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

1-horoscope

Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-virat-Kohli

Australia; ಮಂಗಳೂರಿಗನ ಸಲೂನ್‌ನಲ್ಲಿ ಕೊಹ್ಲಿ ರಿಲ್ಯಾಕ್ಸ್‌: ವಿರಾಟ್‌ ನಡೆಗೆ ಕಿರಣ್‌ ಫಿದಾ

1-eqwewqe

Adelaide Test: ಭಾರತಕ್ಕೆ ಹಗಲು-ರಾತ್ರಿ ಅಭ್ಯಾಸ ಪಂದ್ಯ

K L RAhul

KL Rahul ಆರಂಭಿಕನಾಗಿಯೇ ಉಳಿಯಲಿ: ಪೂಜಾರ ಸಲಹೆ

1-kar

Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.