ದ್ವಿಚಕ್ರ ವಾಹನ ಕಳ್ಳನ ಬಂಧನ
Team Udayavani, Dec 18, 2018, 12:18 PM IST
ಬೆಂಗಳೂರು: ನಗರ ಸುತ್ತಾಡಲು ಕೀ ಸಮೇತ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೈಸೂರು ಮೂಲದ ವ್ಯಕ್ತಿಯನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಬನ್ನೂರು ತಾಲೂಕಿನ ಸುರೇಶ್ ಅಲಿಯಾಸ್ ಸೂರಿ (45) ಬಂಧಿತ.
ಈತನಿಂದ 3.56 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವಿವಾಹಿತನಾಗಿರುವ ಸುರೇಶ್ ಕೆಲ ವರ್ಷಗಳಿಂದ ನಗರದ ಹೋಟೆಲ್‌ಗಳಲ್ಲಿ ಶುಚಿಗೊಳಿಸುವ ಕೆಲಸ ಮಾಡಿಕೊಂಡಿದ್ದು, ವಿಜಯನಗರದಲ್ಲಿ ಸ್ನೇಹಿತನ ಜತೆ ವಾಸವಾಗಿದ್ದ.
ನಾಲ್ಕೈದು ತಿಂಗಳ ಹಿಂದೆ ಸ್ನೇಹಿತನ ಜತೆ ಜಗಳ ಮಾಡಿಕೊಂಡು ಆತನಿಂದ ದೂರವಾಗಿ ಮೆಜೆಸ್ಟಿಕ್, ರೈಲ್ವೆ ನಿಲ್ದಾಣ ಹಾಗೂ ಕೆಲ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಹೊತ್ತು ಮಲಗುತ್ತಿದ್ದ. ಈ ಮಧ್ಯೆ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು, ಬಿಡುವಿದ್ದ ವೇಳೆಯಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ನಗರವನ್ನು ಸುತ್ತಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಮಾರಾಟ ಮಾಡುತ್ತಿರಲಿಲ್ಲ: ಆರೋಪಿ ಮಲ್ಲೇಶ್ವರದ ಸಂಪಿಗೆ ರಸ್ತೆಯ ಸುತ್ತ-ಮುತ್ತಲಿನ ಅಂಗಡಿ ಮುಗ್ಗಟ್ಟು ಮುಂಭಾಗ ಕೀ ಸಮೇತ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಕದೊಯ್ಯುತ್ತಿದ್ದ. ಆದರೆ, ಎಲ್ಲಿಯೂ ಮಾರಾಟ ಮಾಡುತ್ತಿರಲಿಲ್ಲ.
ಬದಲಾಗಿ ಪೆಟ್ರೋಲ್ ಖಾಲಿ ಆಗುವವರೆಗೂ ನಗರವನ್ನು ಸುತ್ತಾಡಿ ಬಳಿಕ ಮಲ್ಲೇಶ್ವರದ ಆಸು-ಪಾಸಿನ ಮೆಟ್ರೋ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಪಿಯು ಬೋರ್ಡ್ ಜಂಕ್ಷನ್ ಅಥವಾ ಇತರೆ ಜಂಕ್ಷನ್ ಸಮೀಪ ನಿಲ್ಲಿಸಿ ನಾಪತ್ತೆಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ಡಿ.7ರಂದು ಬೆಳಗ್ಗೆ 10.40ರ ಸುಮಾರಿಗೆ ಮಹೇಶ್ ಎಂಬುವವರು ತಮ್ಮ ಹೋಂಡಾ ಆಕ್ಟಿವಾವನ್ನು ಸಂಪಿಗೆ ರಸ್ತೆಯ ಎಸ್‌ಬಿಐ ಬ್ಯಾಂಕ್ ಬಳಿ ನಿಲ್ಲಿಸಿ ಹೋಗಿದ್ದರು. ಅವಸರದಲ್ಲಿ ಕೀಯನ್ನು ದ್ವಿಚಕ್ರ ವಾಹನದಲ್ಲೇ ಬಿಟ್ಟಿದ್ದರು. ಮಧ್ಯಾಹ್ನ ವಾಪಾಸ್ ಬಂದು ನೋಡಿದಾಗ ಸ್ಕೂಟಿ ಇರಲಿಲ್ಲ.
ಈ ಸಂಬಂಧ ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ ಸ್ಥಳದ ಆಸು-ಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಸುಳಿವು ಸಿಕ್ಕಿತ್ತು ಎಂದು ಪೊಲೀಸರು ಹೇಳಿದರು.
ಸ್ಕೂಟಿಗಳೇ ಟಾರ್ಗೆಟ್: ದ್ವಿಚಕ್ರ ವಾಹನಗಳಲ್ಲಿ ನಗರ ಸುತ್ತಾಡುವ ಖಯಾಲಿ ಹೊಂದಿದ್ದ ಸುರೇಶ್‌ಗೆ ಗೇರ್ ಬೈಕ್‌ಗಳನ್ನು ಚಾಲನೆ ಮಾಡಲು ಬರುವುದಿಲ್ಲ. ಹೀಗಾಗಿ ಸ್ಕೂಟಿಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.