ಉಡುಪಿ: 5 ದಿಬ್ಬಗಳಲ್ಲಿ ಮರಳುಗಾರಿಕೆ ಆರಂಭ
Team Udayavani, Dec 19, 2018, 9:27 AM IST
ಉಡುಪಿ: ಉಡುಪಿ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯ ಉಪ್ಪೂರು, ಹಾವಂಜೆ ಮತ್ತು ಮೂಡುತೋನ್ಸೆಯ ಐದು ದಿಬ್ಬಗಳಲ್ಲಿ ಮರಳುಗಾರಿಕೆ ಆರಂಭಗೊಂಡಿದೆ.
ರಾಜಧನ ಪಾವತಿಸಿರುವ 33 ಮಂದಿ ಪರವಾನಿಗೆದಾರರ ಪೈಕಿ 12 ಮಂದಿ ಮರಳು ದಿಬ್ಬ ತೆರವು (ಮರಳುಗಾರಿಕೆ) ಆರಂಭಿಸಿದ್ದು, ಈ ಪೈಕಿ ಓರ್ವರು ನಿರ್ಮಿತಿ ಕೇಂದ್ರಕ್ಕೆ ವಿತರಣೆ ಮಾಡಿದ್ದಾರೆ. ಉಳಿದವರು ವಿತರಣೆ ಇನ್ನಷ್ಟೇ ಆರಂಭಿಸ ಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಐದು ದಿಬ್ಬಗಳಲ್ಲಿ 16,910 ಮೆಟ್ರಿಕ್ ಟನ್ ಮರಳು ಲಭ್ಯವಿದೆ. ಇದು ಸುಮಾರು 1,691 ಲೋಡ್‌ಗಳಷ್ಟಾಗುತ್ತದೆ. ಇದರಲ್ಲಿ ಶೇ. 10ರಷ್ಟನ್ನು ಅಂದರೆ 169 ಲೋಡ್ ಸರಕಾರಿ ಯೋಜನೆಗಳ ಕಾಮಗಾರಿ ನಡೆಸುವ ನಿರ್ಮಿತಿ ಕೇಂದ್ರಕ್ಕೆ ಮೀಸಲಿಡಬೇಕಾಗಿದೆ. ಈಗ ಗುರುತಿಸಲಾಗಿರುವ ದಿಬ್ಬಗಳ ಪೈಕಿ ಕೆಲವು ದಿಬ್ಬಗಳಲ್ಲಿ ಕೇವಲ 2 ದಿನಗಳಿಗೆ ಮಾತ್ರ ಮರಳು ದೊರೆಯಲಿದೆ. ಉಳಿದ ಕೆಲವು ದಿಬ್ಬಗಳಲ್ಲಿ 5-6 ದಿನಗಳ ಕಾಲ ತೆಗೆಯಬಹುದಾದಷ್ಟು ಮರಳು ಇದೆ.
ಅನಂತರ ಮರಳುಗಾರಿಕೆ ಮುಂದುವರಿಸಲಾಗದು. ಮತ್ತೂಮ್ಮೆ ನಡೆಸಲಾಗಿರುವ ಬೇಥಮೆಟ್ರಿಕ್ ಸಮೀಕ್ಷೆಯಂತೆ ಸುಮಾರು 25 ಲಕ್ಷ ಮೆಟ್ರಿಕ್ ಟನ್ ಮರಳು ಸಿಗಬಹುದೆಂದು ಹೇಳಲಾಗುತ್ತಿದೆ. ಅದು ಹೌದಾದರೆ ಎಲ್ಲ 171 ಮಂದಿ ಪರವಾನಿಗೆದಾರರಿಗೆ ಲೀಸ್ ದೊರೆಯಬಹುದೆಂಬ ನಿರೀಕ್ಷೆ ಇದೆ. ಆಗ ಮರಳಿಗೆ ಬೆಲೆಯೂ ಕಡಿಮೆಯಾಗಬಹುದು ಎಂದು ಮರಳು ದೋಣಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.