ಮುಗೀತು ಕೋಟಿ ಲೆಕ್ಕ
Team Udayavani, Dec 19, 2018, 10:31 AM IST
ಜೈಪುರ: 2019ರಲ್ಲಿ ನಡೆಯುವ ಐಪಿಎಲ್‌ಗಾಗಿ ಇಲ್ಲಿ ನಡೆದ ಹರಾಜು ಹಲವು ಅನಿರೀಕ್ಷಿತಗಳನ್ನು, ಪ್ರಶ್ನೆಗಳನ್ನು,
ಅಚ್ಚರಿಗಳನ್ನು ಸೃಷ್ಟಿಸಿದೆ. ಇದುವರೆಗೆ ಬಹುತೇಕ ಪರಿಚಯವೇ ಇಲ್ಲದಿದ್ದ ತಮಿಳುನಾಡಿನ ಕ್ರಿಕೆಟಿಗ ವರುಣ್
ಚಕ್ರವರ್ತಿ ಈ ಬಾರಿ ಹರಾಜಿನಲ್ಲೇ ಗರಿಷ್ಠ 8.4 ಕೋಟಿ ರೂ. ಗಳಿಸಿದ್ದಾರೆ. ಮತ್ತೂಂದು ಎಡಗೈ ವೇಗಿ ಜೈದೇವ್
ಉನಾಡ್ಕತ್ ಕೂಡ ಇಷ್ಟೇ ಮೊತ್ತ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಆರ್‌ಸಿಬಿ ತಂಡ ವೆಸ್ಟ್‌ಇಂಡೀಸ್ ಸ್ಫೋಟಕ
ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್‌ಮೈರ್‌ರನ್ನು ಬುಟ್ಟಿಗೆ ಹಾಕಿಕೊಂಡಿದೆ. ಆರಂಭದಲ್ಲಿ ಮಾರಾಟವಾಗದೇ ಉಳಿದಿದ್ದ
ಯುವರಾಜ್ ಸಿಂಗ್ ಕಡೆಗೂ ಮೂಲಬೆಲೆ 1 ಕೋಟಿ ರೂ. ಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.
ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್, ಅಲೆಕ್ಸ್ ಹೇಲ್ಸ್, ದ.ಆಫ್ರಿಕಾದ ಖ್ಯಾತ ವೇಗಿ ಡೇಲ್ ಸ್ಟೇನ್, ನ್ಯೂಜಿಲೆಂಡ್‌ನ ಬ್ರೆಂಡನ್
ಮೆಕಲಂ ಮಾರಾಟವಾಗದೇ ಉಳಿದರು. ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಇಂಗ್ಲೆಂಡಿಗರು ಮಾರಾಟವಾಗದಿದ್ದದ್ದು
ಸರಿಯೆನಿಸಿದರೂ, ಮೆಕಲಂ, ಡೇಲ್‌ಸ್ಟೇನ್ ಮಾರಾಟವಾಗದಿದ್ದದ್ದು ಯಾಕೆ ಎನ್ನುವುದು ಪ್ರಶ್ನೆಯಾಗಿಯೇ ಉಳಿಯಿತು. ವಿಶ್ವಕಪ್ ಹಿನ್ನೆಲೆಯಲ್ಲಿ ಆಸೀಸ್ ಆಟಗಾರರನ್ನು ಫ್ರಾಂಚೈಸಿಗಳು ಹೆಚ್ಚು ಗಮನಿಸಲಿಲ್ಲ.
2ನೇ ಬಾರಿ ಮಾರಾಟವಾದ ಯುವಿ: ಮೊದಲ ಸುತ್ತಿನಲ್ಲಿ ಮಾರಾಟ ಕಾಣದೇ ಯುವರಾಜ್ ಸಿಂಗ್ ಮುಖಭಂಗಕ್ಕೊಳಗಾಗಿದ್ದರು. ಕಡೆಗೂ ಎರಡನೇ ಸುತ್ತಿನಲ್ಲಿಮತ್ತೆ ಅವರ ಹೆಸರು ಬಂದಾಗ ಮುಂಬೈ ಇಂಡಿಯನ್ಸ್ 1 ಕೋಟಿ ರೂ. ನೀಡಿ ಅವರನ್ನು ಖರೀದಿಸಿತು. ಈ ಹಿಂದೆ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ಮಾರಾಟವಾಗಿದ್ದ ಯುವಿ ಭಾರೀ ಅವಮಾನದಿಂದ ಪಾರಾದರು.
ಆಸೀಸ್, ಇಂಗ್ಲೆಂಡ್ ಆಟಗಾರರತ್ತ ನಿರ್ಲಕ್ಷ್ಯ
ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯುವ ಹಿನ್ನೆಲೆಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ ಆಟಗಾರರ ಫ್ರಾಂಚೈಸಿಗಳು ವಿಶೇಷ ಆಸಕ್ತಿ ತೋರಲಿಲ್ಲ. ಆದರೆ ಉಳಿದ ದೇಶಗಳ ಆಟಗಾರರನ್ನು ಕೊಳ್ಳಲು ಫ್ರಾಂಚೈಸಿಗಳು ಮುಂದಾದರು. ದ.ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಆಟಗಾರರನ್ನುಕೊಳ್ಳಲು ವಿಶೇಷ ಮುತುವರ್ಜಿ ವಹಿಸಲಾಗಿತ್ತು.
16ರ ಪೋರ ಪ‹ಯಾಸ್‌ಗೆ ಕೋಟಿ ರೂ. ನೀಡಿದ ಆರ್‌ಸಿಬಿ
ವಿಶೇಷವೆಂದರೆ ಇನ್ನೂ 16 ವರ್ಷದ ಬಂಗಾಳಿ ಬೌಲರ್ ಪ್ರಯಾಸ್ ರೇ ಬರ್ಮನ್‌ಗೆ ಆರ್‌ಸಿಬಿ ತಂಡ 1.5 ಕೋಟಿ ರೂ. ನೀಡಿ ಖರೀದಿಸಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಈತ ಬಂಗಾಳದ ಪರ ಗರಿಷ್ಠ ವಿಕೆಟ್ ಪಡೆದಿದ್ದರು.
ಆರ್‌ಸಿಬಿಗೆ ಮಾರಾಟವಾದವರು
ಶಿವಂ ದುಬೆ 5 ಕೋಟಿ ರೂ.
ಅಕ್ಷದೀಪ್‌ನಾಥ್ 3.6 ಕೋಟಿ ರೂ.
ಪ್ರಯಾಸ್ ರೇ ಬರ್ಮನ್ 1.5 ಕೋಟಿ ರೂ.
ಹಿಮ್ಮತ್ ಸಿಂಗ್ 65 ಲಕ್ಷ ರೂ.
ಗುರುಕೀರತ್ ಸಿಂಗ್ ಮಾನ್ 50 ಲಕ್ಷ ರೂ.
ಹೆನ್ರಿಚ್ ಕ್ಲಾಸೆನ್ 50 ಲಕ್ಷ
ದೇವದತ್ ಪಡಿಕ್ಕಲ್ 20 ಲಕ್ಷ ರೂ.
ಮಿಲಿಂದ್ ಕುಮಾರ್ 20 ಲಕ್ಷ ರೂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.