ನಿರ್ದೇಶಕ ಕಲಾ ಸಾಮ್ರಾಟ್ ಎಸ್. ನಾರಾಯಣ್ ತಾಯಿ ವಿಧಿವಶ
Team Udayavani, Dec 19, 2018, 5:28 PM IST
ಸ್ಯಾಂಡಲ್ವುಡ್ ನಟ, ನಿರ್ದೇಶಕ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ತಾಯಿ ನಿಧನರಾಗಿದ್ದಾರೆ. ಎಸ್. ನಾರಾಯಣ್ ತಾಯಿ ಕಮಲಮ್ಮ ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಿಂದಾಗಿ ಸುಮಾರು 25 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ 11 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
84 ವರ್ಷದ ಕಮಲಮ್ಮ ಅವರಿಗೆ 3 ಜನ ಗಂಡು ಮಕ್ಕಳು. ದಿವಂಗತ ಎಸ್. ವರದರಾಜ್, ನಿರ್ದೇಶಕ ಎಸ್. ನಾರಾಯಣ್ ಹಾಗೂ ಸಿನೆಮಾ ನಿರ್ದೇಶಕ ಎಸ್. ಗೋವಿಂದ್ ಕಮಲಮ್ಮ ಅವರ ಪುತ್ರರು. ಕಮಲಮ್ಮ ಅವರ ಅಂತ್ಯಕ್ರಿಯೆಯನ್ನು ಭದ್ರಾವತಿಯ ಹೊಳೆಹೊನ್ನೂರು ರಸ್ತೆಯಲ್ಲಿರುವ ಚಿತಾಗರದಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.