ಉರುಳು ಸೇವೆ ಮಾಡುತ್ತೆ ಪೆನ್ಸಿಲ್ !
Team Udayavani, Dec 20, 2018, 6:00 AM IST
ಪರೀಕ್ಷೆ ಸುಲಭವಿದ್ದರೆ, ಡಿಸ್ಟಿಂಕ್ಷನ್ ಬಂದರೆ, ಆಟದಲ್ಲಿ ಜಯ ಗಳಿಸಿದರೆ ಇನ್ನೂ ಅನೇಕ ಕಾರಣಗಳಿಗೆ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತೇವೆ. ಸಾಮಾನ್ಯವಾಗಿ ದೊಡ್ಡವರು ಉರುಳು ಸೇವೆ ಮಾಡ್ತೀನಿ ಅಂತ ಹರಕೆ ಕಟ್ಟುತ್ತಾರೆ. ಅದೇ ರೀತಿ ನಾವು ಹೇಳಿದಂತೆ ಉರುಳು ಸೇವೆ ಮಾಡೋ ಪೆನ್ಸಿಲ್ಲನ್ನು ನೋಡಿದ್ದೀರಾ? ಮ್ಯಾಜಿಕ್‌ನಿಂದ ಪೆನ್ಸಿಲನ್ನೂ ಉರುಳು ಸೇವೆ ಮಾಡಿಸಬಹುದು! ಒಂದಿಷ್ಟು ಅಭಿನಯ, ತಂತ್ರಗಾರಿಕೆ, ಸಮಯ ಹೊಂದಾಣಿಕೆ, ಕೈ ಚಳಕ ಎಲ್ಲವನ್ನೂ ಬೆರಸಿ, ಬೆರಗು ಮೂಡಿಸೋ ಕಲೆಯನ್ನು ಕರಗತ ಮಾಡಿಕೊಳ್ಳಬಹುದು.
ಪ್ರದರ್ಶನ:
ಜಾದೂಗಾರ ಟೇಬಲ್ ಮೇಲೆ ಪ್ರೇಕ್ಷಕರಿಗೆ ಎದುರಾಗಿ, ಅಡ್ಡಕ್ಕೆ ಒಂದು ಪೆನ್ಸಿಲ್ ಇಡುತ್ತಾನೆ. ನಂತರ ತನ್ನ ತೋರುಬೆರಳನ್ನು ಚೆನ್ನಾಗಿ ತಲೆಗೆ ತಿಕ್ಕಿ ಪೆನ್ಸಿಲ್‌ನ ಮುಂದೆ, ಅಂದರೆ ಪೆನ್ಸಿಲ್‌ನಿಂದ 5- 6 ಅಂಗುಲದಷ್ಟು ದೂರದಿಂದ, ಅದನ್ನೇ ಕೇಂದ್ರೀಕರಿಸಿ ಹಿಡಿದು, ತನ್ನ ಕೈಯನ್ನು ಮುಂದಕ್ಕೆ ಸರಿಸುತ್ತಾ ಹೋದಂತೆ ಪೆನ್ಸಿಲ್ ಕೂಡ ಉರುಳುತ್ತಾ ಬೆರಳನ್ನೇ ಹಿಂಬಾಲಿಸುತ್ತಾ ಸಾಗುತ್ತದೆ. ಟೇಬಲ್‌ನ ತುದಿಯವರೆಗೂ ಪೆನ್ಸಿಲ್‌ಅನ್ನು ಕರೆದೊಯ್ದ ಜಾದೂಗಾರ, ಪ್ರೇಕ್ಷಕರು ಎಷ್ಟು ಬಾರಿ ಕೇಳಿದರೂ ಈ ಮ್ಯಾಜಿಕ್ ಮಾಡಿ ತೋರಿಸುತ್ತಾನೆ.
ಬೇಕಾಗುವ ವಸ್ತುಗಳು:
ಒಂದು ಪೆನ್ಸಿಲ್
ಮಾಡುವ ವಿಧಾನ:
ಟೇಬಲ್ ಮೇಲೆ ಎದುರಾಗಿ, ಅಡ್ಡಡ್ಡಲಾಗಿ ಪೆನ್ಸಿಲ್ಲನ್ನು(ಆರಂಭದಲ್ಲಿ ಪೆನ್ಸಿಲ್ ಬದಲಿಗೆ ಸ್ಟ್ರಾ ಉಪಯೋಗಿಸಿದರೆ ಉತ್ತಮ) ಇಟ್ಟು ಅದನ್ನು ಕೇಂದ್ರೀಕರಿಸಿ ನೋಡುತ್ತಾ, ತಲೆಗೆ ಬೆರಳು ಉಜ್ಜಿ ಅದರ ಮುಂದೆ ಗೆರೆ ಎಳೆಯುತ್ತಾ ಹೋದಂತೆ ಪೆನ್ಸಿಲ್ ಬೆರಳನ್ನು ಹಿಂಬಾಲಿಸುತ್ತದೆ ಎಂದೆನಲ್ಲವೇ? ಇಲ್ಲಿ ಬೆರಳನ್ನು ತಲೆಗೆ ಉಜ್ಜುವುದು ಮತ್ತು ಗೆರೆ ಎಳೆಯುವುದು ಎÇÉಾ ಪ್ರೇಕ್ಷಕರನ್ನು ಗೊಂದಲಗೊಳಿಸಲು ಮಾಡಿದ ತಂತ್ರಗಳು. ಅಸಲಿಗೆ ನೀವು ಬಗ್ಗಿ, ಪೆನ್ಸಿಲ್ ಅನ್ನೇ ಕೇಂದ್ರೀಕರಿಸಿ ನೋಡುವ ನೆಪದಲ್ಲಿ ಪೆನ್ಸಿಲ್‌ನ ಸನಿಹಕ್ಕೆ ಬಂದು, ಬಾಯಿಂದ ಯಾರಿಗೂ ಗೊತ್ತಾಗದ ಹಾಗೆ ಗಾಳಿ ಊದಿದರಾಯಿತಷ್ಟೆ! ಊದಿದ ಗಾಳಿಯ ಬಲದಿಂದ ಪೆನ್ಸಿಲ್ ಮುಂದಕ್ಕೆ ಓಡುತ್ತದೆಯೇ ವಿನಃ ಬೆರಳನ್ನು ಹಿಂಬಾಲಿಸಿರುವುದಿಲ್ಲ. ಸುಲಭ ಅಲ್ಲವೇ? ಇನ್ನೂ ನಿಖರವಾಗಿ ಈ ಮ್ಯಾಜಿಕ್ ಕಲಿಯಲು ಕೆಳಗಿನ ವಿಡಿಯೊ ಕೊಂಡಿ ಬಳಸಿ.
ವಿಡಿಯೊ ಕೊಂಡಿ- goo.gl/av1Eww
ಗಾಯತ್ರಿ ಯತಿರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.