ಕೋಟೆ: ಪ್ರಯಾಣ ಸುಗಮ, ನಿಟ್ಟುಸಿರು ಬಿಟ್ಟ ಸಂಚಾರಿಗಳು


Team Udayavani, Dec 20, 2018, 3:15 AM IST

kota-road-19-12.jpg

ಕಟಪಾಡಿ: ತೀರಾ ಹದಗೆಟ್ಟು, ವಾಹನ ಸಂಚಾರಕ್ಕೆ ಕಷ್ಟ ಸಾಧ್ಯವಾಗಿದ್ದ ಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಕಟಪಾಡಿ-ಕೋಟೆ-ಮಟ್ಟು ಸಂಪರ್ಕದ ಪ್ರಮುಖ ಮೀನುಗಾರಿಕಾ ಇಲಾಖಾ ರಸ್ತೆಯು ಇದೀಗ ದುರಸ್ತಿ ಕೆಲಸ ಕಾರ್ಯ ನಡೆಯುವ ಮೂಲಕ ನಿತ್ಯ ಸಂಚಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಈ ಬಾರಿಯ ಮಳೆಗಾಲಕ್ಕೂ ಮುನ್ನವೇ ಈ ರಸ್ತೆಯು ಹೊಂಡ ಬಿದ್ದಿದ್ದು ವಾಹನ ಸಂಚಾರಕ್ಕೂ ಕಷ್ಟವಾಗುತ್ತಿತ್ತು. ಮೊದಲೇ ಅಗಲ ಕಿರಿದಾದ ರಸ್ತೆ ಇದಾಗಿದ್ದು ಮಳೆ ಸುರಿದ ಅನಂತರದಲ್ಲಿ ಬೃಹತ್‌ ಗಾತ್ರದ ಹೊಂಡಗಳ ಸಹಿತ ಕೆಲವೆಡೆ ಡಾಂಬರು ಕಿತ್ತು ಹೋಗಿ ಮಣ್ಣು, ಜಲ್ಲಿಯ ರಸ್ತೆಯಾಗಿ ಮಾರ್ಪಾಟಾಗಿ ಸಂಚಾರಿಗಳು ಸಂಕಷ್ಟಕ್ಕೀಡಾಗಿದ್ದರು. ಜನರ, ವಾಹನ ಸವಾರರ ಈ ನಿತ್ಯ ಬವಣೆಯ ಬಗ್ಗೆ ಉದಯವಾಣಿ ವರದಿಯನ್ನು ಪ್ರಕಟಿಸಿ ಇಲಾಖೆಯು ಗಮನ ಹರಿಸುವಂತೆ ಮಾಡಿತ್ತು. ಇದೀಗ ಈ ಪ್ರಮುಖ ಮೀನುಗಾರಿಕಾ ರಸ್ತೆಯು ದುರಸ್ತಿಯನ್ನು ಕಾಣುವ ಮೂಲಕ ಈ ಭಾಗದ ಜನರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

ರಿಂಗ್‌ ಮಾದರಿಯ ಸಂಪರ್ಕ ರಸ್ತೆ
ಈ ರಸ್ತೆಯು ಪ್ರಮುಖವಾಗಿ ಮೀನುಗಾರರು ಹೆಚ್ಚು ಅವಲಂಬಿತವಾಗಿರುವ ಈ ಭಾಗದ ಪ್ರಮುಖ ರಿಂಗ್‌ ಮಾದರಿಯ ಸಂಪರ್ಕ ರಸ್ತೆಯು ಇದಾಗಿದ್ದು, ಕೆನರಾ ಬ್ಯಾಂಕ್‌ ಬಳಿ, ಅಂಬಾಡಿ ಜಂಕ್ಷನ್‌ ಬಳಿ ಸಹಿತ  ಅಲ್ಲಲ್ಲಿ ಹೊಂಡ ಬಿದ್ದು, ಡಾಂಬರು ಕಿತ್ತು ಬಂದಿದ್ದು, ರಸ್ತೆ ಸಂಚಾರ ತ್ರಾಸದಾಯಕವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಶಾಲಾ ವಾಹನಗಳೂ ಈ ರಸ್ತೆಯಲ್ಲಿ ಸಂಚರಿಸುತ್ತವೆ. ಪಾದಾಚಾರಿಗಳು ವಾಹನ ಬಂದಾಗ ಓಡಿ ಹೋಗಿ ಸುರಕ್ಷಿತ ಸ್ಥಳದಲ್ಲಿ ನಿಲ್ಲದಿದ್ದಲ್ಲಿ ಕೆಸರು ನೀರಿನ ಪ್ರೋಕ್ಷಣೆಗೊಳಗಾಗುತ್ತಿದ್ದರು.

ವಾಹನ ದಟ್ಟಣೆಯ ರಸ್ತೆ 
ಮೊದಲೇ ಅಗಲ ಕಿರಿದಾದ ರಸ್ತೆ ಇದಾಗಿದ್ದು, ನಿತ್ಯ 7 ಬಸ್ಸುಗಳು ಈ ಭಾಗದಲ್ಲಿ ನಿಗದಿತ ವೇಳಾಪಟ್ಟಿಯಂತೆ ಜನಸೇವೆಯನ್ನು ನೀಡುತ್ತಿದೆ. ಇದರೊಂದಿಗೆ ಬೈಕ್‌, ಕಾರು, ರಿಕ್ಷಾ, ಟೆಂಪೋ, ಸರಕು ಸಾಗಾಟದ ವಾಹನಗಳು ಅಧಿಕವಾಗಿ ಈ ಭಾಗದಲ್ಲಿ ಸಂಚರಿಸುತ್ತಿರುವುದರಿಂದ ವಾಹನ ದಟ್ಟಣೆಯೂ ಅಧಿಕವಾಗಿದೆ. ಬೈಕ್‌, ಸೈಕಲ್‌ ಸವಾರರ ಸಂಚಾರ ನಿತ್ಯ ಸರ್ಕಸ್‌ನಂತಾಗಿದ್ದು, ಕೆಲ ಸವಾರರು ಬಿದ್ದು ಗಾಯಗೊಂಡ ಘಟನೆಗಳೂ ಸಂಭವಿಸಿತ್ತು.

ಈ ರಸ್ತೆಯು ಪಡುಭಾಗದಲ್ಲಿ ಕೈಪುಂಜಾಲು -ಮಟ್ಟು-ಕಟಪಾಡಿ, ಮಟ್ಟು-ಉದ್ಯಾವರ ಕೊಪ್ಲ-ಕಡೆತೋಟ-ಕನಕೋಡ-ಮಲ್ಪೆ  ಸಂಪರ್ಕಕ್ಕೆ   ರಿಂಗ್‌ ರಸೆ ¤ಮಾದರಿಯಲ್ಲಿ  ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ಭಾಗದ ಮಾತ್ರವಲ್ಲದೇ ಉದ್ಯಾವರ ಭಾಗದ ಜನರೂ ಇದನ್ನೇ ಪ್ರಮುಖ ಸಂಪರ್ಕ ರಸ್ತೆಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಹತ್ತು ಲಕ್ಷ ರೂ. ಬಳಕೆ
ಮೀನುಗಾರಿಕಾ ಕೊಂಡಿ ರಸ್ತೆ ದುರಸ್ತಿಯ ಯೋಜನೆಯಡಿ ಕಟಪಾಡಿ-ಕೋಟೆ-ಮಟ್ಟು  ಸಂಪರ್ಕದ ಪ್ರಮುಖ ಮೀನುಗಾರಿಕಾ ಇಲಾಖಾ ರಸ್ತೆಯ ದುರಸ್ತಿ ಕೆಲಸ ಕಾರ್ಯವನ್ನು ಸುಮಾರು 10 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು ನಡೆಸಲಾಗಿದೆ.
– ಉದಯ ಕುಮಾರ್‌, ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಇಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ

ತಾತ್ಕಾಲಿಕ ಪರಿಹಾರ
ಈ ರಸ್ತೆಯು ತಾತ್ಕಾಲಿಕವಾಗಿ ದುರಸ್ತಿಗೊಂಡಿದ್ದು ಸಂಚಾರಕ್ಕೆ ಅನುಕೂಲವಾಗಿದೆ. ಕಾಂಕ್ರೀಟಿಕರಣಗೊಂಡು ದ್ವಿಪಥವಾಗಿ ವಿಸ್ತರಿಸಿಕೊಂಡು ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಾಣಗೊಂಡಲ್ಲಿ  ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂಬ ಆಶಯ ನಮ್ಮದು.
– ಮನೋಹರ್‌ ಜೆ. ಸಾಲ್ಯಾನ್‌, ಉಪಾಧ್ಯಕ್ಷ, ರಿಕ್ಷಾ ಯೂನಿಯನ್‌, ಕಟಪಾಡಿ

ಟಾಪ್ ನ್ಯೂಸ್

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deeee

Udupi; ಮಕ್ಕಳ ರಕ್ಷಣೆ ಕಾಯ್ದೆ ಅನುಷ್ಠಾನ ಅಗತ್ಯ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.