ಬಿಹಾರದಲ್ಲಿ ಮಹಾ ಘಟಬಂಧನ ಸೇರಿಕೊಂಡ ಉಪೇಂದ್ರ ಕುಶ್ವಾಹ
Team Udayavani, Dec 20, 2018, 5:29 PM IST
ಪಟ್ನಾ : ಬಿಜೆಪಿ ನೇತೃತ್ವದ ಎನ್ಡಿಎ ಕೂಟದಿಂದ ಬೇರ್ಪಟ್ಟ ಬಳಿಕ ಆರ್ಎಸ್ಎಲ್ಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರು ಇಂದು ಗುರುವಾರ ಬಿಹಾರದಲ್ಲಿನ ಮಹಾ ಘಟಬಂಧನವನ್ನು ಸೇರಿಕೊಂಡರು.
ಬಿಜೆಪಿ ಜತೆಗಿನ ಸಂಬಂಧವನ್ನು ಆರ್ಎಸ್ಎಲ್ಪಿ ಈ ತಿಂಗಳ ಆದಿಯಲ್ಲಿ ಕಡಿದುಕೊಂಡ ಬಳಿಕ ಇದೀಗ ಕುಶ್ವಾಹ ಅವರು ಯುಪಿಎ ಘಟಕ ಪಕ್ಷಗಳೊಂದಿಗೆ ಮಾತುಕತೆಯಲ್ಲಿ ತೊಡಗಿಕೊಂಡಿದ್ದಾರೆ.
ಜನಸಾಮಾನ್ಯರ ಭಾವನೆಗಳು ಮತ್ತು ಆಶೋತ್ತರಗಳಿಗೆ ಸ್ಪಂದಿರುವ ಜನರನ್ನು ಸೇರಿಕೊಳ್ಳುವುದು ಅಗತ್ಯವೆಂದು ನಾನು ಭಾವಿಸಿದ್ದೇನೆ ಎಂಬುದಾಗಿ ಕುಶ್ವಾಹ ಇಂದು ಗುರುವಾರ ಹೇಳಿದರು.
ಕುಶ್ವಾಹ ಬಿಹಾರದಲ್ಲಿನ ಮಹಾ ಘಟಬಂಧನವನ್ನು ಸೇರಿಕೊಳ್ಳುವ ಮೂಲಕ ರಾಜ್ಯದಲ್ಲಿ ಎನ್ಡಿಎ ವಿರುದ್ಧದ ಶಕ್ತಿ ಇನ್ನಷ್ಟು ಬಲಗೊಳ್ಳುವುದೆಂದು ನಾವು ಭಾವಿಸಿದ್ದೇವೆ ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಹೇಳಿದ್ದಾರೆ. ಕುಶ್ವಾಹ ಜತೆಗಿನ ಅಹ್ಮದ್ ಪಟೇಲ್ ಸಭೆಯಲ್ಲಿ ಆರ್ಜೆಡಿ ಯ ತೇಜಸ್ವಿ ಯಾದವ್ ಮತ್ತು ಹಿಂದುಸ್ಥಾನ್ ಆವಾಮ್ ಮೋರ್ಚಾ ನಾಯಕ ಜೀತನ್ ರಾಮ್ ಮಾಂಜಿ ಕೂಡ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.