ಸಾಮಾಜಿಕ ಕಳಕಳಿಯ ಚಿತ್ರ

Team Udayavani, Dec 21, 2018, 6:00 AM IST

70.jpg

ಚಿತ್ರರಂಗಕ್ಕೆ ಈಗಾಗಲೇ ಎಲ್ಲಾ ಕ್ಷೇತ್ರಗಳಿಂದಲೂ ಆಗಮಿಸಿದ ವರ್ಗವಿದೆ. ಆ ಸಾಲಿಗೆ ಪ್ರೊಫೆಸರ್‌ವೊಬ್ಬರ ಹೊಸ ಆಗಮನವಾಗಿದೆ. ಅವರ ಹೆಸರು ಡಾ.ದೇವರಾಜ್‌. ಇದೇ ಮೊದಲ ಸಲ ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತ ಮಾಡುವುದರ ಜೊತೆಗೆ ನಿರ್ದೇಶಕರೂ ಆಗಿದ್ದಾರೆ. ಚೊಚ್ಚಲ ನಿರ್ದೇಶನದ ಚಿತ್ರಕ್ಕೆ “ಸಪ್ಲಿಮೆಂಟರಿ’ ಎಂದು ಹೆಸರಿಡಲಾಗಿದೆ. ಈಗಾಗಲೇ ಸದ್ದಿಲ್ಲದೆ ಚಿತ್ರ ಮುಗಿಸಿರುವ ನಿರ್ದೇಶಕರು, ಇತ್ತೀಚೆಗೆ ಟೀಸರ್‌ ತೋರಿಸುವುದರ ಜೊತೆಗೆ ಹಾಡುಗಳನ್ನು ಬಿಡುಗಡೆ ಮಾಡಿದರು. ಅಂದು ಹಿರಿಯ ನಿರ್ದೇಶಕ ಭಗವಾನ್‌ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಹಾರೈಸಿದರು. ಕಿರುತೆರೆ ನಟರಾದ ವಿಜಯ್‌ ಸೂರ್ಯ, ಚಂದುಗೌಡ ಸಾಕ್ಷಿಯಾದರು.

ಮೊದಲು ಮಾತಿಗಿಳಿದ ನಿರ್ದೇಶಕರು, “ವ್ಯಕ್ತಿ ತನ್ನ ಬದುಕಿನಲ್ಲಿ ಫೇಲ್‌ ಆಗಿಬಿಟ್ಟರೆ, ಅವನಿಗೆ ಮತ್ತೂಂದು ಅವಕಾಶ ಇದ್ದೇ ಇರುತ್ತೆ. ಅದೇ “ಸಪ್ಲಿಮೆಂಟರಿ’. ಅಲ್ಲಿ ತನ್ನ ಬದುಕಿನ ಏರಿಳಿತ, ನೋವು-ನಲಿವು, ಕಷ್ಟ,ನಷ್ಟಗಳನ್ನೆಲ್ಲಾ ಸರಿಯಾಗಿಸುವ ಅವಕಾಶ ಇರುತ್ತೆ. ಪ್ರತಿಯೊಬ್ಬರ ಲೈಫ‌ಲ್ಲೂ ಸಪ್ಲಿಮೆಂಟರಿ ಎಂಬುದಿರುತ್ತೆ. ಆ ನಂತರ ಸರಿಯಾಗಿ ಆಲೋಚನೆ ಮಾಡಿದರೆ ಮಾತ್ರ ಅಲ್ಲಿ ಪಾಸ್‌ ಆಗಲು ಸಾಧ್ಯವಿದೆ. ಇಲ್ಲಿ ಗುರು ಮತ್ತು ಶಿಷ್ಯನ ಸಂಬಂಧ ಇಟ್ಟುಕೊಂಡು ಕಥೆ ಹೆಣೆದಿದ್ದೇನೆ. ಇದು ಈಗಿನ ಯುವಕರಿಗೆ ಹೇಳಿಮಾಡಿಸಿದ ಕಥೆ. ಈಗಿನ ವಾಟ್ಸಾಪ್‌, ಫೇಸ್‌ಬುಕ್‌ನಲ್ಲೇ ಕಾಲ ಕಳೆಯುವ ಯುವ ಸಮೂಹಕ್ಕೊಂದು ಸಂದೇಶವಿದೆ. ಹಾಗಂತ ನೀತಿ ಪಾಠವಿಲ್ಲ. ಮನರಂಜನೆ ಜೊತೆಗೊಂದು ಸಂದೇಶವಿದೆ. ಚಿತ್ರದಲ್ಲಿ ಆರು ಹಾಡುಗಳಿವೆ. ಆ ಪೈಕಿ ನಾಲ್ಕು ಹಾಡುಗಳಿಗೆ ನಾನು ಸಂಗೀತ ನೀಡಿದ್ದೇನೆ. ನಿರ್ಮಾಪಕ ಮಹೇಂದ್ರ ಮುನ್ನೋತ್‌ ಅವರ ಸಹಕಾರ ಇರದೇ ಇದ್ದರೆ, ಈ ಚಿತ್ರ ಇಲ್ಲಿಯವರೆಗೆ ಬರುತ್ತಿರಲಿಲ್ಲ’ ಎಂದು ಹೇಳಿಕೊಂಡರು ದೇವರಾಜ್‌.

ನಿರ್ಮಾಪಕ ಮಹೇಂದ್ರ ಮುನ್ನೋತ್‌ ಅವರಿಗೆ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ತೃಪ್ತಿ ಇದೆಯಂತೆ. “ಸಿನಿಮಾ ಮನರಂಜನೆ ಕ್ಷೇತ್ರ. ಇದು ಅದರೊಂದಿಗೆ ಸಾಗುವ ಚಿತ್ರವಾದರೂ, ಇಲ್ಲೊಂದು ಪವರ್‌ಫ‌ುಲ್‌ ಆಗಿರುವ ಸಂದೇಶವಿದೆ. ಸಾಮಾಜಿಕ ಕಳಕಳಿ ಇಟ್ಟುಕೊಂಡು ಮಾಡಿರುವ ಚಿತ್ರವಿದು. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತಹ ಅನೇಕ ಅಂಶಗಳು ಇಲ್ಲಿವೆ. ಜೊತೆಗೆ ಪೋಷಕರಿಗೂ ಅರ್ಥವಾಗಿಸುವ ಕಥೆ ಇಲ್ಲಿದೆ. ನನ್ನ ಚಿತ್ರರಂಗದ ಜೀವನದ ಸಪ್ಲಿಮೆಂಟರಿ ಇದು’ ಎಂಬುದು ಮಹೇಂದ್ರ ಮುನ್ನೋತ್‌ ಮಾತು.

ನಾಯಕ ಖುಷ್‌ ಅವರಿಗೆ ಇದು ಮೊದಲ ಚಿತ್ರ. ಅವರಿಗಿಲ್ಲಿ ಸಾಕಷ್ಟು ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆಯಂತೆ. “ಸಪ್ಲಿಮೆಂಟರಿ’ ಅಂದರೆ ಎಕ್ಸಾಂ ಕುರಿತು ಅಲ್ಲ. ಬದುಕಿನ ಸಪ್ಲಿಮೆಂಟರಿ ವಿಷಯವೂ ಇಲ್ಲಿದೆ. ಎಕ್ಸಾಂ ಫೇಲ್‌ ಆದವರು, ಲವ್ವಲ್ಲಿ ಫೇಲ್‌ ಆದವರು, ಬಿಜಿನೆಸ್‌ನಲ್ಲಿ ಫೇಲ್‌ ಆದವರು ಸೇರಿದಂತೆ ಬದುಕಿನ ಅನೇಕ ಘಟ್ಟಗಳಲ್ಲಿ ಫೇಲ್‌ ಆದವರ ಕುರಿತ ವಿಷಯವೂ ಇಲ್ಲಿದೆ’ ಎಂದರು ಅವರು.

ನಾಯಕಿ ಶ್ರದ್ಧಾಭಟ್‌ ಅವರಿಗೆ ಇದು ಎರಡನೇ ಚಿತ್ರವಂತೆ. ಅವರಿಗಿಲ್ಲಿ ಎರಡು ಶೇಡ್‌ ಇರುವ ಪಾತ್ರ ಸಿಕ್ಕಿದೆಯಂತೆ. ಸಂಗೀತ ನಿರ್ದೇಶಕ ರಾಘವ್‌ ಸುಭಾಷ್‌ ಅವರು ಎರಡು ಹಾಡುಗಳಿಗೆ ಸಂಗೀತ ನೀಡಿದ ಬಗ್ಗೆ ಹೇಳಿಕೊಂಡರು. ಅಂದು ಭಗವಾನ್‌, ವಿಜಯ್‌ ಸೂರ್ಯ, ಚಂದುಗೌಡ ಸೇರಿದಂತೆ ಇತರರು ಚಿತ್ರಕ್ಕೆ ಶುಭಕೋರಿದರು.

ಟಾಪ್ ನ್ಯೂಸ್

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

Pune: ಪಿಜ್ಜಾ ಆರ್ಡರ್‌ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು

Pune: ಪಿಜ್ಜಾ ಆರ್ಡರ್‌ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು

Temple rights belong to Tantris, not the government: Kerala Minister

Kerala: ದೇಗುಲ ಸಂಪ್ರದಾಯ ಬದಲು ಹಕ್ಕು ತಂತ್ರಿಗ‌ಳದ್ದು, ಸರ್ಕಾರದಲ್ಲ: ಕೇರಳ ಸಚಿವ

Abujhmad: Four Naxalites killed in gunfight; one policeman martyred

Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್‌ ಹುತಾತ್ಮ

4-crime

Chikkamagaluru: ತಾಯಿ ಮನೆಗೆ ಬರಲಿಲ್ಲ ಎಂದು ಮಾವನ ಮೇಲೆ ಮಚ್ಚು ಬೀಸಿದ ಅಳಿಯ

UP: ವಿವಾಹದ ಮಧ್ಯೆ ಬಾತ್‌ರೂಮ್‌ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ

UP: ವಿವಾಹದ ಮಧ್ಯೆ ಬಾತ್‌ರೂಮ್‌ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ

Isro grows cowpea seeds sprout in space in just four days

ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

Pune: ಪಿಜ್ಜಾ ಆರ್ಡರ್‌ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು

Pune: ಪಿಜ್ಜಾ ಆರ್ಡರ್‌ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು

Temple rights belong to Tantris, not the government: Kerala Minister

Kerala: ದೇಗುಲ ಸಂಪ್ರದಾಯ ಬದಲು ಹಕ್ಕು ತಂತ್ರಿಗ‌ಳದ್ದು, ಸರ್ಕಾರದಲ್ಲ: ಕೇರಳ ಸಚಿವ

Abujhmad: Four Naxalites killed in gunfight; one policeman martyred

Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್‌ ಹುತಾತ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.