ಅಕಾಡೆಮಿ ಚಾವಡಿಯಲ್ಲಿ ತುಳು ಯಕ್ಷ ಸಿರಿಯ ಮಿನದನ
Team Udayavani, Dec 21, 2018, 6:05 AM IST
ತುಳುನಾಡಿಗರು ಗಾಢವಾಗಿ ನೆಚ್ಚಿರುವ ಎರಡು ಕ್ಷೇತ್ರಗಳೆಂದರೆ ಒಂದು ನಾಟಕ; ಮತ್ತೂಂದು ಯಕ್ಷಗಾನ. ಇವೆರಡಕ್ಕೂ ಮಣೆ ಹಾಕುವ ಮೂಲಕ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಸಕ್ತ ತಂಡ ಹೊಸಬಗೆಯ ಭರವಸೆಯನ್ನು ಮೂಡಿಸಿದೆ. ಕಳೆದ ವರ್ಷ ಮಂಗಳೂರು ಪುರಭವನದಲ್ಲಿ ಒಂದು ವಾರದ “ತುಳು ನಾಟಕ ಪಂತೊ’ ಏರ್ಪಡಿಸಿ ಹಳೆಯ ನಾಟಕಗಳ ಪ್ರದರ್ಶನ ಮತ್ತು ಅಗಲಿದ ನಾಟಕಕಾರರ ಸಂಸ್ಮರಣೆ ಮಾಡುವುದರೊಂದಿಗೆ ಒಂದು ಕಾಲದ ತುಳು ರಂಗಭೂಮಿಯನ್ನು ಮತ್ತೆ ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿದೆ. ಇದೀಗ ಬೆಳ್ಳಿಹಬ್ಬದ ಸಡಗರದಲ್ಲಿ “ತುಳು ಯಕ್ಷಸಿರಿ’ಯ ಮಿನದನವನ್ನು ಸಾûಾತ್ಕರಿಸಿದ್ದು ಅಕಾಡೆಮಿಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು.
ಡಿ.2ರಿಂದ 9ರ ವರೆಗೆ ಉರ್ವಸ್ಟೋರ್‌ನಲ್ಲಿರುವ ತುಳು ಭವನದ ಸಿರಿ ಚಾವಡಿಯಲ್ಲಿ ಜರಗಿದ ಎಂಟು ದಿನಗಳ ತುಳು ಯಕ್ಷಸಿರಿ ನೆಂಪು-ತಮ್ಮನ ಮತ್ತು ಯಕ್ಷಗಾನ ಪ್ರದರ್ಶನಗಳಿಗೆ ಸಿಮೀತವಾಗಿತ್ತು. ಅದುವರೆಗೆ ಹಗಲಿನ ವೇಳೆ ನಿಗದಿತ ಪ್ರೇಕ್ಷಕರನ್ನಷ್ಟೇ ಗುರಿಯಾಗಿಸಿ ನಡೆಯುತ್ತಿದ್ದ ಚಾವಡಿ ಲೇಸ್ ಮತ್ತು ಸಭೆ ಸಮಾರಂಭಗಳಿಗೆ ಮೀಸಲಾಗಿದ್ದ ತುಳು ಚಾವಡಿ ರಾತ್ರಿ ಹೊತ್ತಿನಲ್ಲೂ ಅಧಿಕ ಸಂಖ್ಯೆಯ ಕಲಾಭಿಮಾನಿಗಳನ್ನು ಸೆಳೆಯಬಲ್ಲದು ಎಂಬುದಕ್ಕೆ ಇದು ಸಾಕ್ಷಿಯಾಯಿತು.ಪ್ರತಿದಿನ ಎರಡೂವರೆ ಗಂಟೆ ಅವಧಿಯ ಎಂಟು ತುಳು ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿತ್ತು. ಮೊದಲ ದಿನದ ಪ್ರಸಂಗ ತಾರಾನಾಥ ಬಲ್ಯಾಯ ವಿರಚಿತ “ಬ್ರಹ್ಮ ಬೈದ್ಯೆರ್’. ಇದರಲ್ಲಿ ಪೂರ್ಣಿಮಾ ಯತೀಶ್ ರೈ ನೇತೃತ್ವದ ಮಹಿಳಾ ಕಲಾವಿದೆಯರೇ ಪಾತ್ರವಹಿಸಿದುದು ವಿಶೇಷ. ಎರಡನೆಯ ದಿನ ಸೂಡ ಹರೀಶ್ ಶೆಟ್ಟಿ ಅವರ ರಚನೆಯ “ತುಳುನಾಡ ಸಿರಿ’ ಪ್ರದರ್ಶನಗೊಂಡಿತು.
ಇದರಲ್ಲಿ ವೃತ್ತಿಪರ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಮೋಹನ ಮುಚ್ಚಾರು, ಕರುಣಾಕರ ಶೆಟ್ಟಿ ಬೆಳ್ತಂಗಡಿ ಮೊದಲಾದವರು ಪಾತ್ರವಹಿಸಿದ್ದರು. ಮೂರನೇಯದ್ದು ದಿ| ನಾರಂಪಾಡಿ ಸುಬ್ಬಯ್ಯ ಶೆಟ್ಟಿ ಅವರ “ಕೋರªಬ್ಬು ಬಾರಗ’. ಸದಾಶಿವ ಕುಲಾಲ್ ವೇಣೂರು, ಜಗದೀಶ್ ನಲ್ಕ, ಮುರಳೀಧರ ಕನ್ನಡಿಕಟ್ಟೆ, ರತ್ನಾಕರ ಆಚಾರ್ಯ, ಸುಂದರ ಬಂಗಾಡಿ, ಸುನೀಲ್ ಪಲ್ಲಮಜಲು, ಶಂಭುಕುಮಾರ್ ಮತ್ತಿತರರು ಪಾತ್ರಧಾರಿಗಳಾಗಿದ್ದರು.
ಕುಳಾಯಿ ಮಾಧವ ಭಂಡಾರಿಯವರ “ಅಬ್ಬರದ ಬಬ್ಬರ್ಯೆ’ ಪ್ರಸಂಗವನ್ನು ನಾಲ್ಕನೆಯ ದಿನ ಆಡಿತೋರಿಸಲಾಯ್ತು. ದಯಾನಂದ ಶೆಟ್ಟಿ ಜಪ್ಪು, ರಮೇಶ್ ಕುಲಶೇಖರ, ಲಕ್ಷ್ಮಣ ಕುಮಾರ್ ಮರಕಡ, ರಕ್ಷಿತ್ ಪಡ್ರೆ, ಸುರೇಶ್ ಕೊಲಕಾಡಿ, ನಾಗೇಶ್ ಕುಲಶೇಖರ್ ಮುಂತಾದವರು ವೇಷಧಾರಿಗಳಾಗಿದ್ದರು. ಯಕ್ಷಸಿರಿಯ ಐದನೇ ಪ್ರಸಂಗದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ “ಕುಡಿಯನ ಕಣ್¡’ ಸದಾಶಿವ ಆಳ್ವ ತಲಪಾಡಿ, ಪುಷ್ಪರಾಜ್ ಕುಕ್ಕಾಜೆ, ಪದ್ಮನಾಭ ಮಾಸ್ತರ್, ದಯಾನಂದ ಪಿಲಿಕೂರು ಇದರಲ್ಲಿ ಪಾತ್ರವಹಿಸಿದ್ದರು. ಒಂದು ಕಾಲದಲ್ಲಿ ಕರ್ನಾಟಕ ಮೇಳದಲ್ಲಿ ಜಯಭೇರಿಗಳಿಸಿದ್ದ “ಕೋಟಿ-ಚೆನ್ನಯ’ ಆರನೇ ದಿನ ಪ್ರದರ್ಶನಗೊಂಡಿತು. ಇದು ದಿ| ಪಂದಬೆಟ್ಟು ವೆಂಕಟರಾಯರ ಪ್ರಸಂಗವನ್ನು ಸಂಕ್ಷಿಪ್ತಗೊಳಿಸಿದ ಪ್ರಸ್ತುತಿ. ಕೆ.ಹೆಚ್. ದಾಸಪ್ಪ ರೈ, ಸರಪಾಡಿ ಅಶೋಕ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಮಹಾವೀರ ಪಾಂಡಿ, ಕದ್ರಿ ನವನೀತ ಶೆಟ್ಟಿ, ಗಣೇಶ್ ಕನ್ನಡಿಕಟ್ಟೆ, ದಿನೇಶ್ ಕೋಡಪದವು, ವಾಮನ್ ಕುಮಾರ್ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡರು.
ಏಳನೆಯ ಆಖ್ಯಾನ “ಬಾಲೆಮಾನಿ ಮಾಯಂದಾಲ್’. ಸಂತೋಷ್ ಪೂಜಾರಿ ಕರಂಬಾರ್ ರಚಿಸಿದ ಈ ಪ್ರಸಂಗದಲ್ಲಿ ಕೊಳ್ತಿಗೆ ನಾರಾಯಣ ಗೌಡ, ಗಣೇಶ ಚಂದ್ರಮಂಡಲ, ತಿಮ್ಮಪ್ಪ ಮಿಜಾರು, ಉದಯಕುಮಾರ್ ಧರ್ಮಸ್ಥಳ, ಶ್ರೀಧರ ಮಲ್ಲೂರು ಮೊದಲಾದವರು ಪಾತ್ರ ನಿರ್ವಹಿಸಿದರು. ಕೊನೆಯ ದಿನದ ಪ್ರಸಂಗ ಅನಂತರಾಮ ಬಂಗಾಡಿಯವರ “ಸಿರಿಕಿಟೆ¡ ಚಂದಪಾಲಿ’. ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಅಂಬಾಪ್ರಸಾದ ಪಾತಾಳ, ಕಡಬ ದಿನೇಶ್ ಶೆಟ್ಟಿ, ಪ್ರಶಾಂತ್ ಸಿ.ಕೆ., ಅಶ್ವಥ್ ಆಚಾರ್ಯ, ವಿಶ್ವನಾಥ ಪದು¾ಂಜ, ಶಶಿಧರ ಬಾಚಕೆರೆ, ಸಂದೇಶ್ ಬೆಳ್ಳೂರು ಮೊದಲಾದವರು ವೇಷ ಧರಿಸಿದ್ದರು. ಪ್ರತಿದಿನವೂ ನುರಿತ ಕಲಾವಿದರ ಹಿಮ್ಮೇಳ ಗಮನಸೆಳೆಯಿತು.
– ಭಾಸ್ಕರ ರೈ ಕುಕ್ಕುವಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.