ಯುಪಿಎ ಸೇರಿದ ಕುಶ್ವಾಹಾ
Team Udayavani, Dec 21, 2018, 6:00 AM IST
ಹೊಸದಿಲ್ಲಿ: ಬಿಹಾರದಲ್ಲಿನ ಸ್ಥಾನ ಹೊಂದಾಣಿಕೆಯಿಂದ ಅತೃಪ್ತಿಗೊಂಡು ಎನ್‌ಡಿಎಯಿಂದ ಹೊರಬಿದ್ದಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ)ದ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಗುರುವಾರ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸೇರ್ಪಡೆಯಾಗಿದ್ದಾರೆ.
ಹೊಸದಿಲ್ಲಿಯಲ್ಲಿ ಬಿಹಾರದಲ್ಲಿನ ಕಾಂಗ್ರೆಸ್ ಉಸ್ತುವಾರಿ ಶಕ್ತಿಸಿನ್ಹ ಗೋಹಿಲ್, ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಕೇಂದ್ರದ ಮಾಜಿ ಸಚಿವ ಕುಶ್ವಾಹಾ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆ ಮುನ್ನವೇ ಮೈತ್ರಿ ಕೂಟ ರಚನೆಯ ಪ್ರಯತ್ನಗಳು ಬಿರು ಸಾಗಿಯೇ ನಡೆದಿರುವುದು ಇದರಿಂದ ಸಾಬೀತಾಗಿದೆ.
ಎನ್‌ಡಿಎಯಲ್ಲಿ ತಮಗೆ ಅವಮಾನ ಮಾಡಲಾಗಿತ್ತು ಎಂದು ಹೇಳಿಕೊಂಡಿರುವ ಕುಶ್ವಾಹಾ, “ಈಗ ಕಾಂಗ್ರೆಸ್ ನೇತೃತ್ವದ ಯುಪಿ ಎಯ ಭಾಗವಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಮೈತ್ರಿ ಮಾಡಿಕೊಂಡದ್ದಕ್ಕೆ ಪೂರಕವಾಗಿ ಫೆ.2ರಂದು ಪಾಟ್ನಾದಲ್ಲಿ ಜನಾ ಕ್ರೋಶ ರ್ಯಾಲಿ ಆಯೋಜಿಸಿರುವುದಾಗಿಯೂ ತಿಳಿಸಿದ್ದಾರೆ.
ಆರ್‌ಎಲ್‌ಎಸ್‌ಪಿ ಸೇರ್ಪಡೆಯಿಂದಾಗಿ ಬಿಹಾರದಲ್ಲಿ ಯುಪಿಎ ಬಲ ವೃದ್ಧಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಆರ್‌ಜೆಡಿ, ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಅವರ ಹಿಂದುಸ್ತಾನಿ ಅವಾಮಿ ಮೋರ್ಚಾ (ಸೆಕ್ಯುಲರ್)ಈಗಾಗಲೇ ಮಹಾ ಮೈತ್ರಿ ಕೂಟದ ಭಾಗವೇ ಆಗಿದ್ದಾರೆ. ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಶೇ.6ರಷ್ಟು ಇರುವ ಕುಶ್ವಾಹಾ ಸಮುದಾಯ ಇದುವರೆಗೆ ಬಿಜೆ ಪಿಗೆ ಬೆಂಬಲ ನೀಡುತ್ತಿತ್ತು. ಹಾಲಿ ಬೆಳವಣಿಗೆ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸಮು ದಾಯ ಎನ್‌ಡಿಎ ತೊರೆದು ಯುಪಿಎಯತ್ತ ಒಲವು ವ್ಯಕ್ತಪಡಿಸಲಿದೆಯೇ
ಎಂಬ ಪ್ರಶ್ನೆ ಎದುರಾಗಿದೆ.
ಪಾಸ್ವಾನ್-ಶಾ ಭೇಟಿ: ಆರ್‌ಎಲ್‌ಎಸ್‌ಪಿ ಬಳಿಕ ಸ್ಥಾನ ಹೊಂದಾಣಿಕೆಗೆ ಅತೃಪ್ತಿ ಗೊಂಡಿ ರುವ ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿ ಕೂಡ ಎನ್‌ಡಿಎ ಸಖ್ಯ ತೊರೆಯುವ ಎಚ್ಚರಿಕೆ ನೀಡಿತ್ತು. ಹೀಗಾಗಿ, ಗುರುವಾರ ಪಾಸ್ವಾನ್ ಜತೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತುಕತೆ ನಡೆಸಿ ದ್ದಾರೆ. ಹಿಂದುಳಿದ ವರ್ಗಗಳ ಪ್ರಮುಖ ನಾಯಕ ಕುಶ್ವಾಹಾ ಎನ್‌ಡಿಎ ತೊರೆ ದಿರುವ ಹಿನ್ನೆಲೆಯಲ್ಲಿ ಪಾಸ್ವಾನ್ ಜತೆಗೆ ಮಾತುಕತೆ ನಡೆಸುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಸಲಹೆ ನೀಡಿರುವ ಹಿನ್ನೆಲೆ ಯಲ್ಲಿ ಈ ಬೆಳವಣಿಗೆ ನಡೆದಿದೆ.
ಅಸಲು ವಿಚಾರವೇನೆಂದರೆ ಸೆಪ್ಟೆಂಬರ್‌ನಲ್ಲಿ ಶಾ-ನಿತೀಶ್ ನಡುವಿನ ಮಾತುಕತೆ ವೇಳೆ 50:50 ಸ್ಥಾನ ಹೊಂದಾಣಿಕೆ ಘೋಷಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಲೋಕ ಜನ ಶಕ್ತಿ ಪಕ್ಷಕ್ಕೆ 4 ಲೋಕಸಭಾ ಕ್ಷೇತ್ರಗಳು ಮತ್ತು ಅಸ್ಸಾಂನಿಂದ 1 ರಾಜ್ಯಸಭಾ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಕುಶ್ವಾಹಾ ಎನ್‌ಡಿಎ ತೊರೆದ ಹಿನ್ನೆಲೆಯಲ್ಲಿ ಎಲ್‌ಜೆಪಿಗೆ 6 ಸ್ಥಾನ ನೀಡುವ ಬಗ್ಗೆ ತಿಳಿಸ ಲಾಗಿತ್ತು. ರಾಜ್ಯಸಭೆ ಸ್ಥಾನದ ಬಗ್ಗೆ ಬಿಜೆಪಿ ಮೌನವಾಗಿ ರುವುದು ಸದ್ಯದ “ಅತೃಪ್ತಿ’ಯ ಹಿಂದಿನ ಕತೆ. ರಾಂ ವಿಲಾಸ್ ಪಾಸ್ವಾನ್ ಮತ್ತು ಪುತ್ರ ಚಿರಾಗ್ ಪಾಸ್ವಾನ್ ಮಾತನಾಡಿ ಬಿಜೆಪಿ ಜತೆಗೆ ಯಾವುದೇ ಅಸಮಾಧಾನ ಇಲ್ಲ. ಸ್ಥಾನ ಹೊಂದಾಣಿಕೆ ಮತ್ತು ಇತರ ವಿಚಾರ ಗಳ ಬಗ್ಗೆ ಪುತ್ರ ಚಿರಾಗ್ ಪಾಸ್ವಾನ್ ಜತೆಗೆ ಮಾತನಾಡ ಬೇಕು ಎಂದಿದ್ದಾರೆ ರಾಂ ವಿಲಾಸ್ ಪಾಸ್ವಾನ್.
ಫೆಡರಲ್ ಫ್ರಂಟ್ ರಚನೆಗೆ ಒಲವು
ತೆಲಂಗಾಣ ಚುನಾವಣೆಯಲ್ಲಿ ಗೆದ್ದಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಈಗ ಫೆಡರಲ್ ಫ್ರಂಟ್ ರಚನೆ ಪ್ರಸ್ತಾಪ ವನ್ನು ಮುಂಚೂಣಿಗೆ ತರಲು ಮುಂದಾದ್ದಾರೆ. ಈ ನಿಟ್ಟಿನಲ್ಲಿ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷದ ನಾಯಕರ ಜತೆಗೆ ಮಾತುಕತೆ ನಡೆಸಲು ಪಕ್ಷದ ಸಂಸದ ಬಿ.ವಿನೋದ್ ಕುಮಾರ್ ಮುಂದಾಗಿದ್ದಾರೆ. ತಮ್ಮ ತಮ್ಮ ರಾಜ್ಯಗಳಲ್ಲಿ ಪ್ರಭಾವ ಶಾಲಿಗಳಾಗಿರುವ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಫೆಡರಲ್ ಫ್ರಂಟ್ ರಚಿಸುವ ಇರಾದೆ ಇದೆ. ಎಲ್ಲರೂ ಒಗ್ಗೂಡಿದರೆ ಕಾಂಗ್ರೆಸ್ ಅಥವಾ ಬಿಜೆಪಿ ನೇತೃತ್ವದ ಮೈತ್ರಿ ಕೂಟದ ವಿರುದ್ಧ ಪ್ರಬಲ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಎನ್‌ಡಿಎಯನ್ನು ತೊರೆದು ಎಲ್‌ಜೆಪಿ ಸದ್ಯದಲ್ಲೇ ಯುಪಿಎ ಸೇರಲಿದೆ ಎಂಬ ವಿಶ್ವಾಸ ನಮ್ಮದು. ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಯತ್ನ ಬಿಜೆಪಿಯಿಂದ ನಡೆಯುತ್ತಿದೆ.
– ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ
ಎನ್‌ಡಿಎ ಅಭಿವೃದ್ಧಿಯ ಅಜೆಂಡಕ್ಕೆ ಬದ್ಧವಾಗಿರಲೇಬೇಕು. ಇಲ್ಲದಿದ್ದರೆ ಅದರ ಮೇಲೆ ಜನರು ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ಬರುವುದು ಖಚಿತ. ಹಾಗಿದ್ದರೆ ಮಾತ್ರ 2014ರ ಜನಾದೇಶ ಮತ್ತೆ ಸಿಗುತ್ತದೆ.
– ಚಿರಾಗ್ ಪಾಸ್ವಾನ್, ಎಲ್‌ಜೆಪಿ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.