ಉಡುಪಿ ಜಿಲ್ಲೆ:ಆತಂಕಕ್ಕೆ ಕಾರಣವಿಲ್ಲವಾದರೂ ಸುರಕ್ಷಾ ಕ್ರಮ ಅವಶ್ಯ

Team Udayavani, Dec 21, 2018, 10:58 AM IST

kris.jpg

ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿನ ಪ್ರಸಾದದಲ್ಲಿ ವಿಷ ಸೇರಿಸಿದ್ದರ ಘಟನೆಯಿಂದ ಎಚ್ಚೆತ್ತ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ದೇವಸ್ಥಾನಗಳಲ್ಲೂ ಅಡುಗೆ ಕೋಣೆಗೆ ಸಿಸಿ ಟಿವಿ ಅಳವಡಿಸುವುದೂ ಸೇರಿದಂತೆ ಕೆಲವು ನಿಯಮಗಳನ್ನು ಜಾರಿಗೊಳಿಸಿತು. ಈ ಹಿನ್ನೆಲೆಯಲ್ಲಿ ಉದಯವಾಣಿ ವರದಿಗಾರರ ತಂಡ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿನ ದೇವಸ್ಥಾನಗಳ ಸ್ಥಿತಿ ಕುರಿತು ಮಾಹಿತಿ ಕಲೆ ಹಾಕಿತು. ಉಡುಪಿ ಜಿಲ್ಲೆಯ ವಿವರ ಇಲ್ಲಿದೆ. 

ಮಂಗಳೂರಿನಲ್ಲಿರುವಂತೆಯೇ ಉಡುಪಿ ಜಿಲ್ಲೆಯಲ್ಲೂ ಮುಜರಾಯಿ ಇಲಾಖೆ ವ್ಯಾಪ್ತಿಯಡಿ ಒಟ್ಟು 759 ದೇವಸ್ಥಾನಗಳಿವೆ. ಇದಲ್ಲದೇ ವರ್ಗೀಕರಣಗೊಂಡ ದೇವಸ್ಥಾನಗಳೂ ಇವೆ. ಇಲಾಖೆ ದೇವಸ್ಥಾನಗಳಲ್ಲಿ ಗ್ರೂಪ್‌ ಎ ಯಲ್ಲಿ 25, ಬಿಯಲ್ಲಿ 19, ಸಿಯಲ್ಲಿ 759 ದೇವಸ್ಥಾನಗಳಿವೆ. ಆದರೆ ಎಲ್ಲ ದೇವಸ್ಥಾನಗಳಲ್ಲೂ ಭಾರೀ
ಸಂಖ್ಯೆಯಲ್ಲಿ ಅನ್ನ ಸಂತರ್ಪಣೆ ನಡೆಯುವುದು ಕಡಿಮೆ. ಜತೆಗೆ ಎಲ್ಲ ದೇವಸ್ಥಾನಗಳಲ್ಲೂ ನಿತ್ಯ ಅನ್ನ ಸಂತರ್ಪಣೆ ಇಲ್ಲ. ಬಹಳ ಪ್ರಮುಖವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಿತ್ಯ ಅನ್ನ ಸಂತರ್ಪಣೆಯಿದ್ದು, ಸಾವಿರಾರು ಜನರು ಭೋಜನ ಸ್ವೀಕರಿಸುತ್ತಾರೆ.ಜತೆಗೆ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರೀ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯಗಳಲ್ಲಿ ನಿತ್ಯ ಅನ್ನದಾನ ಇದೆ. ಎಲ್ಲೆಡೆಯೂ ಅಡುಗೆ ಕೋಣೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೊಲ್ಲೂರಿನಲ್ಲಿ ಅಡುಗೆ ಕೋಣೆ ಹಾಗೂ ಅನ್ನಛತ್ರದಲ್ಲಿ ಸಿಸಿಟಿವಿ ಇನ್ನೂ ಅಳವಡಿಸಿಲ್ಲ. ಈ ವಾರದಲ್ಲಿ ಅಳವಡಿಸಲಾಗುವುದು ಎಂದು ದೇಗುಲದ ಪ್ರಮುಖರು ಹೇಳಿದ್ದಾರೆ.

ಮಾರಣಕಟ್ಟೆಯಲ್ಲಿ ಅಡುಗೆ ಕೋಣೆ, ಊಟದ ಛತ್ರದಲ್ಲಿ ಈ ಹಿಂದೆಯೇ ಸಿಸಿ ಟಿವಿಯನ್ನು ಅಳವಡಿಸಲಾಗಿದೆ. ಸ್ವತ್ಛತೆ ಕುರಿತೂ ವಿಶೇಷ ಕ್ರಮ ವಹಿಸಲಾಗಿದೆ. ಕಮಲಶಿಲೆಯಲ್ಲಿ ಅಡುಗೆ ಕೋಣೆ ಹಾಗೂ ಊಟದ ಛತ್ರದಲ್ಲಿ ಸಿಸಿಟಿವಿ ವ್ಯವಸ್ಥೆ ಇಲ್ಲವಾದರೂ ಸ್ವತ್ಛತೆ ಕುರಿತು ಕಾಳಜಿ ವಹಿಸಲಾಗಿದೆ ಎಂಬುದು ಸಂಬಂಧಪಟ್ಟವರ ಹೇಳಿಕ

ಶ್ರೀ ಕೃಷ್ಣ ಮಠದಲ್ಲಿ ಸದ್ಯಕ್ಕಿಲ್ಲ
ಶ್ರೀಕೃಷ್ಣಮಠದಲ್ಲಿ ನಿತ್ಯ ಅನ್ನಸಂತರ್ಪಣೆ ನಡೆಯುವುದಾದರೂ ಇದು ಮುಜರಾಯಿ ಇಲಾಖೆಗೆ ಸೇರಿಲ್ಲ. ಇಲ್ಲಿ ಸಾಮಾನ್ಯ ದಿನಗಳಲ್ಲಿ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಸೇರಿ ಸುಮಾರು ಹತ್ತು ಸಾವಿರ ಮಂದಿ ಊಟ ಮಾಡುತ್ತಾರೆ. ಶಾಲೆಗಳಿಗೆ ರಜೆ ಇರುವಾಗ, ವಿಶೇಷ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿಗೆ ಇರುತ್ತದೆ. ಪ್ರಸ್ತುತ ಭೋಜನ ಶಾಲೆಯಲ್ಲಿ ಸಿಸಿಟಿವಿ ವ್ಯವಸ್ಥೆ ಇದೆ. ಆದರೆ ಅಡುಗೆ ಕೋಣೆಗೆ ಅಳವಡಿಸಬೇಕಿದೆ. ಆನೆಗುಡ್ಡೆ  ದೇವಸ್ಥಾನದಲ್ಲಿ ನಿತ್ಯ ಭೋಜನವಿದೆ. ಇದಲ್ಲದೆ ಅಂಬಲಪಾಡಿ, ಕಾಪು ಮಾರಿಗುಡಿ, ಬನ್ನಂಜೆ ಮಹಾಲಿಂಗೇಶ್ವರ ಮೊದಲಾದ ಸುಮಾರು 20 ದೇವಸ್ಥಾನಗಳಲ್ಲಿ ಸೋಮವಾರ, ಮಂಗಳವಾರ, ಶುಕ್ರವಾರ ಹೀಗೆ ಒಂದೊಂದೆಡೆ ಒಂದೊಂದು ದಿನ ಭೋಜನ ಪ್ರಸಾದದ ವಿತರಣೆ ನಡೆಯುತ್ತಿದೆ. 

ಮಂದಾರ್ತಿ ದೇವಸ್ಥಾನದಲ್ಲಿ ಶುಕ್ರವಾರ, ಮಂಗಳವಾರ ಮಧ್ಯಾಹ್ನ ,ರಾತ್ರಿ ಸೇರಿ 3,000 ಜನರು, 1,000 ವಿದ್ಯಾರ್ಥಿಗಳು, ಉಳಿದ ದಿನ ಭಕ್ತರು, ವಿದ್ಯಾರ್ಥಿಗಳು ಸೇರಿ ಸುಮಾರು 2 ಸಾವಿರ ಮಂದಿ ಭೋಜನ ಮಾಡುತ್ತಾರೆ. ಮಂದಾರ್ತಿ ದೇವಸ್ಥಾನದ ಅಡುಗೆ ಕೋಣೆ, ಸಾಮಾನು ಇಡುವ ಕೋಣೆ, ಭೋಜನಶಾಲೆ
ಸೇರಿ 18, ದೇವಸ್ಥಾನದ ವಠಾರದಲ್ಲಿ 18, ಬೀದಿಯಲ್ಲಿ ನಾಲ್ಕು ಒಟ್ಟು 40 ಸಿಸಿಟಿವಿ ಅಳವಡಿಸಲಾಗಿದೆ.
ಇದಲ್ಲದೇ ಪೆರ್ಡೂರು, ನೀಲಾವರ, ಮಾರಣಕಟ್ಟೆ, ಮುಂಡ್ಕೂರು ದೇವಸ್ಥಾನಗಳಲ್ಲಿ ನಿತ್ಯ ಅನ್ನಸಂತರ್ಪಣೆಯಿದ್ದು, ಸ್ವತ್ಛತೆಗೆ ಗಮನಕೊಡಲಾಗಿದೆ.

ಅಳವಡಿಕೆಗೆ ಕ್ರಮ
ಜಿಲ್ಲೆಯ ಎ ಮತ್ತು ಬಿ ಶ್ರೇಣಿಯ ದೇವಸ್ಥಾನಗಳ ಪಾಕಶಾಲೆ, ಸಾಮಾನು ದಾಸ್ತಾನು ಕೋಣೆಗಳಿಗೆ ಸಿಸಿಟಿವಿ ಅಳವಡಿಸಿದ್ದು, ಉಳಿದವು ಜಾರಿಯಲ್ಲಿದೆ.
ಪ್ರಶಾಂತ ಶೆಟ್ಟಿ,ತಹಶೀಲ್ದಾರ್‌, ಮುಜರಾಯಿ ಇಲಾಖೆ, ಉಡುಪಿ.

ಅಳವಡಿಸಲು ಸಮಸ್ಯೆ ಇಲ್ಲ. ಶ್ರೀಕೃಷ್ಣಮಠದ ಭೋಜನ ಶಾಲೆಯಲ್ಲಿ ಸಿಸಿಟಿವಿ ಈಗಾಗಲೇ ಇದೆ. ಮುಂದೆ ಅಡುಗೆ ಕೋಣೆಗೂ ಅಳವಡಿಸಬೇಕೆಂದರೆ ಅಳವಡಿಸಬಹುದು.
 ಪ್ರಹ್ಲಾದ ಆಚಾರ್ಯ, ಆಡಳಿತಾಧಿಕಾರಿ, ಶ್ರೀಕೃಷ್ಣ ಮಠ ಪರ್ಯಾಯ ಶ್ರೀಪಲಿಮಾರು ಮಠ, ಉಡುಪಿ. 

ಟಾಪ್ ನ್ಯೂಸ್

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.