ಹೊರೆಯಾಗುವುದೇ ಕೇಬಲ್, ಡಿಟಿಎಚ್ ಹೊಸ ದರ?
Team Udayavani, Dec 21, 2018, 11:40 AM IST
ಬೆಂಗಳೂರು: ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜನವರಿ 1ರಿಂದ ಕೇಬಲ್ ಹಾಗೂ ಡಿಟಿಎಚ್‌ಗಳಿಗೆ ಹೊಸದರ ನಿಗದಿಪಡಿಸಿರುವ ಕ್ರಮಕ್ಕೆ ಕೇಬಲ್ ಹಾಗೂ ಡಿಟಿಎಚ್ ಆಪರೇಟರ್ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಟ್ರಾಯ್ ಹೊಸದರ ನಿಗದಿ ನಿರ್ಧಾರವನ್ನು ಹಿಂಪಡೆಯಬೇಕು, ಇಲ್ಲವೇ ಹೊಸದರ ನಿಗದಿ ಕ್ರಮದಿಂದ ಗ್ರಾಹಕರಿಗೆ ಯಾವ ರೀತಿಯ ಅನುಕೂಲ ಆಗಲಿದೆ ಎಂಬುದನ್ನು ಬಹಿರಂಗಗೊ ಳಿಸಬೇಕು. ಈ ಕುರಿತು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಸೂಕ್ತ ಕ್ರಮವಹಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಕೇಬಲ್ ಟಿವಿ ಆಪರೇಟರರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್ ಫ್ಯಾಟ್ರಿಕ್ ರಾಜು ತಿಳಿಸಿದ್ದಾರೆ.
ಟ್ರಾಯ್ ನಿಗದಿಪಡಿಸಿರುವ ಹೊಸ ದರದ ಅನ್ವಯ ಹೊಸ ವ್ಯವಸ್ಥೆಯಲ್ಲಿ 100 ಚಾನೆಲ್ ಆಯ್ಕೆಗೆ ಅವಕಾಶ ಇರುತ್ತದೆ. ಅದರಲ್ಲಿ ದೂರದರ್ಶನದ 26 ಚಾನೆಲ್‌ಗಳು ಕಡ್ಡಾಯವಾಗಿರಲಿವೆ. ಜತೆಗೆ, ಶೇ 18ರಷ್ಟು ಜಿಎಸ್‌ಟಿ ತೆರಿಗೆ ಒಳಗೊಂಡು ರೂ. 130 ರೂ ಪಾವತಿಸಬೇಕು. ಹೆಚ್ಚುವರಿಯಾಗಿ 20ರೂ ನೀಡಿದರೆ ಹೆಚ್ಚುವರಿಯಾಗಿ 25 ಚಾನೆಲ್‌ಗಳನ್ನು ಪ್ರಸಾರ ಸಿಗಲಿದೆ. ಉಳಿದಂತೆ ಯಾವುದೇ ಹೊಸ ಚಾನೆಲ್ ನಿಗದಿ ಪಡಿಸಿದರೂ ಟ್ರಾಯ್ ದರ ಹೊಸದಾಗಿ ಪಾವತಿಸಬೇಕು.
ಟ್ರಾಯ್‌ನ ಈ ಕ್ರಮದಿಂದ ಗ್ರಾಹಕರಿಗೆ ಹೆಚ್ಚು ಹೊರೆ ಬೀಳಲಿದೆ. ಉದಾಹರಣೆಗೆ 10 ಚಾನೆಲ್ ಗಳನ್ನು ಗ್ರಾಹಕ ಖರೀದಿಸಿದರೆ ರೂ. 19 ರೂಗಳಂತೆ 190 ಹೆಚ್ಚುವರಿ ಹೊರೆ ಬೀಳಲಿದೆ. ಇದರಿಂದ ಈ ಹಿಂದೆ ಆಪರೇಟರ್ಸ್‌ಗಳು ನಗರ ಭಾಗದಲ್ಲಿ 300ರೂಗಳಿಗೆ 400 ಚಾನೆಲ್ ನೀಡುತ್ತಿದ್ದರು, ಇದಕ್ಕೆ ಹೋಲಿಸಿಕೊಂಡರೆ ಹೊಸ ದರ ನಿಗದಿ ಗ್ರಾಹಕರಿಗೆ ಸಂಕಷ್ಟ ಎಂಬುದು ಕೇಬಲ್ ಆಪರೇಟರ್ಸ್ ವಾದವಾಗಿದೆ.
ಗ್ರಾಮೀಣ ಭಾಗದ ಗ್ರಾಹಕರಿಗೂ ಇದರಿಂದ ಹೆಚ್ಚಿನ ಸಂಕಷ್ಟ. ಬಹುತೇಕ ಅನಕ್ಷರಸ್ಥರಾಗಿರುವ ಗ್ರಾಹಕರಿಗೆ ಹೊಸ ದರವ್ಯವಸ್ಥೆ, ತಮಗಿಷ್ಟ ಬಂದ ಚಾನೆಲ್ ಬೇಕು ಎಂದರೆ ಮುಂಗಡವಾಗಿಯೇ ಹಣ ನೀಡಿ ಖರೀದಿಸಬೇಕು ಎಂಬುದು ಹೇಗೆ ಅರ್ಥವಾಗಲಿದೆ ಎನ್ನುವ ಅಂಶವನ್ನೂ ಮುಂದಿಡುತ್ತಾರೆ. ಟ್ರಾಯ್ ದೇಶದ ಕೇಬಲ್ ಆಪರೇಟರ್ಸ್ ಅಥವಾ ತಜ್ಞರ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿಲ್ಲ. ಕಾರ್ಫೋರೇಟ ಸಂಸ್ಥೆಗಳಿಗೆ ಅನುಕೂಲ ಮಾಡಲು ಈ ನಿರ್ಧಾರ ತೆಗೆದುಕೊಂಡಿದೆ. ಇದರ ಪರಿಣಾಮ ರಾಜ್ಯದ 17 ಸಾವಿರ ಕೇಬಲ್ ಆಪರೇಟರ್ಸ್ ಹಾಗೂ ಅವರ ಜತೆ ಕೆಲಸ ಮಾಡುವ ಹುಡುಗರ ಉದ್ಯೋಗದ ಮೇಲೆ ನೇರ ಪರಿಣಾಮ ಬೀಳಲಿದೆ ಎಂದು ಫ್ಯಾಟ್ರಿಕ್ ರಾಜು ಆರೋಪಿಸಿದರು.
ಟ್ರಾಯ್ ಏನು ಹೇಳುತ್ತಿದೆ?
ಗ್ರಾಹಕರ ಆಯ್ಕೆಯ ಚಾನೆಲ್‌ಗಳನ್ನು ಮಾತ್ರವೇ ನೀಡುವ ಉದ್ದೇಶ ಅನಗತ್ಯವಾಗಿ ಚಾನೆಲ್‌ಗಳು ಹೇರುವ ಪದ್ಧತಿಗೆ
ಕಡಿವಾಣ ಹಾಕುವ ಸಲುವಾಗಿ ಹೊಸ ದರ ನಿಗದಿಪಡಿಸಲಾಗಿದೆ, ಇದರಿಂದ ಗ್ರಾಹಕನ ಆಯ್ಕೆ ಸ್ವಾತಂತ್ರ್ಯಕ್ಕೆ ಹೆಚ್ಚು ಆದ್ಯತೆ ದೊರೆಯಲಿದೆ. ಗ್ರಾಹಕರ ಹಿತಾಸಕ್ತಿಯ ಉದ್ದೇಶವೇ ಇದರ ಮೂಲ ಉದ್ದೇಶವಾಗಿದೆ. ಹೊಸ ದರ ನಿಗದಿ ಕುರಿತ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಟ್ರಾಯ್ ಹೇಳುತ್ತಿದೆ.
ಡಿ29ರಿಂದ ಗ್ರಾಹಕರಿಗೆ ಶಾಕ್!
ಹೊಸದರ ನಿಗದಿ ಹಿನ್ನೆಲೆಯಲ್ಲಿ ಡಿ29ರಿಂದ ಉಚಿತವಾಗಿ ನೀಡಲಾಗುತ್ತಿರುವ 26 ಚಾನೆಲ್‌ಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಚಾನೆಲ್‌ಗಳು ಬರುವುದಿಲ್ಲ. ಈ ಸಂಬಂಧ ಟ್ರಾಯ್, ಗ್ರಾಹಕರ ಆಯ್ಕೆ ಚಾನೆಲ್‌ಗಳ ದರವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು. ಗ್ರಾಹಕರು ಡಿ.29ಕ್ಕೂ ಮುನ್ನವೇ ಡಿಜಿಟಲ್ ಹಾಗೂ ಕೇಬಲ್ ಆಪರೇಟರ್ಸ್‌ಗಳ ಮೊದಲೇ ಹಣ ಪಾವತಿಸಿ ರಿಚಾರ್ಜ್ ಮಾಡಿಸಿಕೊಳ್ಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.