ಬಿಝಿ ನಿಶ್ವಿ‌ಕಾ

Team Udayavani, Dec 23, 2018, 6:00 AM IST

1.jpg

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯರಾಗಿ ಪರಿಚಯವಾದ ನಟಿಮಣಿಯರ ಪೈಕಿ ಕನ್ನಡದ ಪ್ರತಿಭೆಗಳ ಸಂಖ್ಯೆ ಕೊಂಚ ಹೆಚ್ಚಾಗಿಯೇ ಇದೆ ಎಂಬುದು ಸಮಾಧಾನದ ಸಂಗತಿ. ಹಾಗೇ ಈ ವರ್ಷ ಚಂದನವನಕ್ಕೆ ನಾಯಕಿಯಾಗಿ ಪರಿಚಯವಾದ ಹೊಸ ಮುಖಗಳಲ್ಲಿ ನಿಶ್ವಿ‌ಕಾ ನಾಯ್ಡು ಕೂಡ ಒಬ್ಬರು. ಚಿರಂಜೀವಿ ಸರ್ಜಾ ಅಭಿನಯದ ಅಮ್ಮ ಐ ಲವ್‌ ಯೂ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನಿಶ್ವಿ‌ಕಾ ನಾಯ್ಡು, ನಂತರ ಅನೀಶ್‌ ತೇಜೇಶ್ವರ್‌ ನಾಯಕ ನಟನಾಗಿದ್ದ ವಾಸು ನಾನ್‌ ಪಕ್ಕಾ ಕಮರ್ಷಿಯಲ… ಚಿತ್ರದಲ್ಲೂ ನಾಯಕಿಯಾಗುವ ಅವಕಾಶವನ್ನು ಗಿಟ್ಟಿಸಿಕೊಂಡರು. ಒಂದೇ ವರ್ಷದಲ್ಲಿ ಎರಡು ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ನಿಶ್ವಿ‌ಕಾ, ಕನ್ನಡದ ಚಿತ್ರರಂಗದಲ್ಲಿ ಈ ವರ್ಷ ಭರ್ಜರಿಯಾಗಿಯೇ ಎಂಟ್ರಿಕೊಟ್ಟ ಹೀರೋಯಿನ್‌ ಎಂದು ಕರೆಸಿಕೊಳ್ಳುತ್ತಿದ್ದಾರೆ. 

ಇನ್ನು ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದು, ಶಿಕ್ಷಣವನ್ನು ಪೂರ್ಣಗೊಳಿಸಿರುವ ನಿಶ್ವಿ‌ಕಾ, ಕಾಲೇಜು ದಿನಗಳಲ್ಲೇ ಫ್ಯಾಷನ್‌ ಶೋಗಳಲ್ಲಿ ರ್‍ಯಾಂಪ್‌ವಾಕ್‌, ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಹುಡುಗಿ. ಆರಂಭದಲ್ಲಿ ಸಿನಿಮಾರಂಗಕ್ಕೆ ಬರಬೇಕು ಇಲ್ಲಿ ಹೀರೋಯಿನ್‌ ಆಗಬೇಕು ಎಂಬ ಯಾವ ಉದ್ದೇಶವೂ ಈಕೆಗೆ ಇರಲಿಲ್ಲವಂತೆ. ಕೇವಲ ಹವ್ಯಾಸಕ್ಕಾಗಿ ಫ್ಯಾಷನ್‌ ಮತ್ತಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನಿಶ್ವಿ‌ಕಾ ಇದೀಗ, ಅದರ ಮೂಲಕವೇ ವೃತ್ತಿ ಬದುಕನ್ನು ರೂಪಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ. 

ಸದ್ಯ ನಿಶ್ವಿ‌ಕಾ ಪಡ್ಡೆಹುಲಿ, ಜಂಟಲ್‌ವುನ್‌  ಸೇರಿದಂತೆ ಇನ್ನೂ ಹೆಸರಿಡದ ಒಂದೆರಡು ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ನಿಶ್ವಿ‌ಕಾ, “ಚಿತ್ರರಂಗಕ್ಕೆ ನಾನು ಪ್ರವೇಶ ಪಡೆದಿದ್ದು ತೀರಾ ಆಕಸ್ಮಿಕ. ಮೊದಲ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಾಗ, ಹೊಸ ಅನುಭವ ಹೇಗಿರುತ್ತದೆ ನೋಡೋಣ ಎಂದು ಒಪ್ಪಿಕೊಂಡೆ. ಅದಾದ ಬಳಿಕ ಮತ್ತೂಂದು ಒಳ್ಳೆಯ ಚಿತ್ರ ಸಿಕ್ಕಾಗಲೂ ಅದನ್ನು ಬಿಡಲು ಮನಸ್ಸಾಗಲಿಲ್ಲ. ಈ ಎರಡೂ ಚಿತ್ರಗಳು ನನಗೇ ಗೊತ್ತಿಲ್ಲದಂತೆ ನನ್ನನ್ನು ಕನ್ನಡದಲ್ಲಿ ನಾಯಕ ನಟಿಯಾಗಿ ಮಾಡಿದವು. ಈಗ ಸದ್ಯಕ್ಕೆ ಮೂರ್‍ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಪ್ರತಿ ಚಿತ್ರದಲ್ಲೂ ಪಾತ್ರಗಳು ಭಿನ್ನವಾಗಿವೆ. ನನಗೆ ನಾಯಕಿಯಾಗಿಯೇ ಪಾತ್ರಗಳು ಸಿಗಬೇಕು ಅಂತೇನಿಲ್ಲ. ಆದರೆ, ನನಗೆ ಸಿಗುವ ಪಾತ್ರಗಳಿಗೆ ಒಂದಷ್ಟು ಪ್ರಾಮುಖ್ಯತೆ ಇರಬೇಕು ಎಂದು ಬಯಸುತ್ತೇನೆ’ ಎನ್ನುತ್ತಾರೆ ನಿಶ್ವಿ‌ಕಾ. 

ಇನ್ನು ನಿಶ್ವಿ‌ಕಾ ಕನ್ನಡ ಭಾಷೆಯನ್ನು ಸ್ವತ್ಛವಾಗಿ ಮಾತನಾಡುವುದರಿಂದ ತಮ್ಮ ಪಾತ್ರಗಳಿಗೆ ತಾವೇ ಡಬ್ಬಿಂಗ್‌ ಮಾಡಲು ಕೂಡ ಉತ್ಸುಕರಾಗಿದ್ದಾರೆ. ಅಚ್ಚ ಕನ್ನಡ ಮಾತನಾಡಲು ಬರುವುದರಿಂದ ಮತ್ತು ಕನ್ನಡದ ನೇಟಿವಿಟಿಯ ಕಥೆಗೆ ನಿಶ್ವಿ‌ಕಾ ಹೆಚ್ಚು ಹೋಲಿಕೆಯಾಗುತ್ತಾರೆ. ಹಾಗಾಗಿ ತನಗೆ ಸಿಗುತ್ತಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡರೆ, ನಿಶ್ವಿ‌ಕಾ ನಾಯ್ಡುಗೆ ಭವಿಷ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಎಲ್ಲ ಲಕ್ಷಣಗಳು ಇದೆ ಎನ್ನುತ್ತಾರೆ ಚಿತ್ರರಂಗದ ಮಂದಿ. ಅದೆನೇ ಇರಲಿ, ಎರಡೇ ಚಿತ್ರಗಳಲ್ಲಿ ಒಂದಷ್ಟು ಭರವಸೆ ಮೂಡಿಸಿರುವ ನಿಶ್ವಿ‌ಕಾ ನಾಯ್ಡು ಭವಿಷ್ಯದಲ್ಲಿ ಎಂತಹ ಪಾತ್ರಗಳಿಗೆ ಜೀವ ತುಂಬಲಿದ್ದಾರೆ ಎನ್ನುವ ಕುತೂಹಲ ಸಿನಿಪ್ರಿಯರಲ್ಲಿದೆ.

ಟಾಪ್ ನ್ಯೂಸ್

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.