ಆಲಂಕಾರಿನಲ್ಲಿ ಹುಚ್ಚ ವೆಂಕಟ್ ಹುಚ್ಚಾಟ
Team Udayavani, Dec 22, 2018, 10:17 AM IST
ಆಲಂಕಾರು: ಚಲನಚಿತ್ರ ನಟ ಹುಚ್ಚ ವೆಂಕಟ್ ಆಲಂಕಾರು ಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ಒಂದಿಷ್ಟು ಹುಚ್ಚಾಟ ನಡೆಸಿ ಜನರಿಗೆ ಪುಕ್ಕಟೆ ಮನೋರಂಜನೆ ಒದಗಿಸಿದ್ದಾರೆ.
ಮಡಿಕೇರಿಯಲ್ಲಿ ಗುರುವಾರ ಬೆಳಗ್ಗಿನಿಂದ ರಾತ್ರಿಯವರೆಗೆ ಚಿತ್ರೀಕರಣ ನಿರತರಾಗಿದ್ದ ಹುಚ್ಚ ವೆಂಕಟ್, ಶುಕ್ರವಾರ ಬೆಳಗ್ಗೆ ಮಂಗಳೂರು ಮೂಲಕ ಉಡುಪಿಗೆ ಹೊರಟಿದ್ದರು. ಮುಂಜಾನೆ ಏಳು ಗಂಟೆಯ ಹೊತ್ತಿಗೆ ಕಾರು ಚಲಾಯಿಸಿಕೊಂಡು ಆಲಂಕಾರಿಗೆ ಆಗಮಿಸಿದ್ದರು. ಕಾರಿನಿಂದ ಇಳಿದು ಕೈಗಳೆರಡನ್ನು ಬೆನ್ನಹಿಂದೆ ಕಟ್ಟಿಕೊಂಡು ಜೋರಾಗಿ ಹಾಡು ಹೇಳುತ್ತ, ತನ್ನಷ್ಟಕ್ಕೆ ತಾನು ಮಾತನಾಡುತ್ತ, ನಗುತ್ತ ರಸ್ತೆಯ ಉದ್ದಗಲಕ್ಕೂ ನಡೆದಾಡಿದರು.
ನಾನೇ ವೆಂಕಟ್, ಎಂಚ ಉಲ್ಲಾರ್!
ಕೊನೆಗೆ ಕಡಬ ಮೂಲದ ವ್ಯಕ್ತಿಯೋರ್ವರ ಫ್ಲವರ್‌ಸ್ಟಾಲ್‌ಗೆ ತೆರಳಿ ನಾಲ್ಕು ಗುಲಾಬಿ ಹೂ ಖರೀದಿಸಿದರು. ಈ ವೇಳೆ ಪೇಟೆಯಲ್ಲಿದ್ದ ಬೆರಳೆಣಿಕೆಯ ಜನರು ಅವರ ಚಲನವಲನದ ಬಗ್ಗೆ ಸಂಶಯಿಸಿ ಕುತೂಹಲದಿಂದ ನೋಡತೊಡಗಿದರು. ಅಷ್ಟರಲ್ಲಿ ವೆಂಕಟ್ ಬೆಳಗಿನ ಉಪಾಹಾರಕ್ಕಾಗಿ ಸ್ಥಳೀಯ ಹೊಟೇಲ್‌ಗೆ ನುಗ್ಗಿದ್ದು, ಅವರು ಎಡಗೈಯಲ್ಲಿ ತಿನ್ನುವುದನ್ನು ನೋಡಿದ ಜನರು “ಈತ ಹುಚ್ಚ ವೆಂಕಟ್ ಅಲ್ಲವೇ?’ ಎಂದು ತುಳುವಿನಲ್ಲಿ ತಮ್ಮೊಳಗೆ ಮಾತನಾಡಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಹೌದು ನಾನೇ ವೆಂಕಟ್, ಎಂಚ ಉಲ್ಲಾರ್’ ಎಂದು ನೆರೆದಿದ್ದ ಜನರನ್ನು ಕೇಳಿದರು. ಸುದ್ದಿ ತಿಳಿದು ಅಭಿಮಾನಿಗಳು ಗುಂಪುಗೂಡಿ ಸೆಲ್ಫಿಗೆ ಪ್ರಯತ್ನಿಸಿದರಾದರೂ ವೆಂಕಟ್ ಸೆಲ್ಫಿಗೆ ನಿರಾಕರಿಸಿದ ಕಾರಣ ಕೆಲವರಿಗೆ ಮಾತ್ರ ಮಾತ್ರ ಅವಕಾಶ ಸಿಕ್ಕಿತ್ತು.
ಹುಚ್ಚ ವಂಕಟ್ ಅವರನ್ನು ಹೊಟೇಲ್ ಹೊರಗೆ ಹೂ ಕೊಟ್ಟು ಸ್ವಾಗತಿಸಬೇಕು ಎಂದು ನಿರ್ಧರಿಸಿ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ವೆಂಕಟ್ ಚಹಾ ಕುಡಿದು ಅಲ್ಲೇ ಬಿಲ್ ಪಾವತಿಸಿ ಕೈಯನ್ನೂ ತೊಳೆಯದೆ ಅಭಿಮಾನಿಗಳಿಂದ ತಪ್ಪಿಸಿಕೊಂಡು ಸುಮಾರು 300 ಮೀ. ದೂರದಲ್ಲಿದ್ದ ತನ್ನ ಕಾರಿನ ಬಳಿಗೆ ಓಡಿದರು. ಜನರು ಹಿಂಬಾಲಿಸಿ ಬಂದು ಎಷ್ಟೇ ಕರೆದರೂ ಕೇಳದೆ ಕಾರು ಚಲಾಯಿಸಿಕೊಂಡು ಪ್ರಯಾಣ ಮುಂದುವರಿಸಿದರು. ಹದಿನೈದು ದಿನಗಳ ಹಿಂದೆಯೂ ವೆಂಕಟ್ ಆಲಂಕಾರಿಗೆ ತನ್ನ ಸ್ನೇಹಿತರ ಜತೆ ಆಗಮಿಸಿ ಗ್ರಾ.ಪಂ. ಬಳಿಯಲಿ ಹೊಟೇಲ್ ಒಂದರಲ್ಲಿ ಉಪಾಹಾರ ಸೇವಿಸಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.