ವನಿತಾ ಚಾಲೆಂಜರ್ ಟ್ರೋಫಿ ಕ್ರಿಕೆಟ್: ಶಿಖಾ, ಪೂನಂ, ಮೋನಾ ನಾಯಕಿಯರು
Team Udayavani, Dec 23, 2018, 6:00 AM IST
ಹೊಸದಿಲ್ಲಿ: ಜನವರಿ ಮೂರರಿಂದ ಆಂಧ್ರಪ್ರದೇಶದ ಮುಲಪುಡುವಿನಲ್ಲಿ ನಡೆಯುವ ವನಿತಾ ಏಕದಿನ ಚಾಲೆಂಜರ್ ಟ್ರೋಫಿ ಕ್ರಿಕೆಟ್ ಸರಣಿಗಾಗಿ 3 ತಂಡಗಳನ್ನು ಪ್ರಕಟಿಸಲಾಗಿದೆ.
ಇಂಡಿಯಾ ರೆಡ್, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್ ಹೆಸರಿನ ಈ ತಂಡಗಳನ್ನು ಕ್ರಮವಾಗಿ ಶಿಖಾ ಪಾಂಡೆ, ಪೂನಂ ರಾವತ್ ಮತ್ತು ಮೋನಾ ಮೆಶ್ರಮ್ ಮುನ್ನಡೆಸಲಿದ್ದಾರೆ. ಭಾರತದ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರ್ತಿಯರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಜೆಮಿಮಾ ರೋಡ್ರಿಗಸ್, ತನಿಯಾ ಭಾಟಿಯ, ಏಕ್ತಾ ಬಿಷ್ಟ್, ರಾಜೇಶ್ವರಿ ಗಾಯಕ್ವಾಡ್ ಅವರೆಲ್ಲ ಈ ಸರಣಿಯಿಂದ ದೂರ ಉಳಿಯಲಿದ್ದಾರೆ. ಬಿಗ್ ಬಾಶ್‌ನಲ್ಲಿ ಆಡುತ್ತಿರುವ ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧನಾ ಕೂಡ ಹೊರಗುಳಿಯುವರು.
ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಅವಕಾಶ ಪಡೆಯದ ವೇದಾ ಕೃಷ್ಣಮೂರ್ತಿ “ಇಂಡಿಯಾ ರೆಡ್’ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಂಡಗಳು
ಇಂಡಿಯಾ ರೆಡ್: ಶಿಖಾ ಪಾಂಡೆ (ನಾಯಕಿ), ಎನ್. ಅನುಷಾ, ಶಿವಿ ಪಾಂಡೆ, ವೇದಾ ಕೃಷ್ಣಮೂರ್ತಿ, ವೃಶಾಲಿ ಭಗತ್, ಜಾಸಿಯಾ ಅಖ್ತರ್, ಜಾನ್ಸಿ ಲಕ್ಷ್ಮೀ, ಕೋಮಲಾ ಝಂಜಾದ್, ಶಾಂತಿ ಕುಮಾರಿ, ರಾಧಾ ಯಾದವ್, ಹಲೀìನ್ ಡಿಯೋಲ್, ಆರ್. ಕಲ್ಪನಾ, ತರುನ್ನಮ್ ಪಠಾಣ್.
ಇಂಡಿಯಾ ಬ್ಲೂ: ಪೂನಂ ರಾವತ್ (ನಾಯಕಿ), ಪ್ರಿಯಾ ಪೂನಿಯ, ತನುಶ್ರೀ ಸರ್ಕಾರ್, ಭಾರತಿ ಫುಲ್ಮಾಲಿ, ಅದಿತಿ ಶರ್ಮ, ತಮನ್ನಾ ನಿಗಂ, ಮಾನ್ಸಿ ಜೋಶಿ, ರೀಮಾ ಲಕ್ಷ್ಮೀ ಎಕ್ಕಾ, ಮನಾಲಿ ದಕ್ಷಿಣಿ, ತನುಜಾ ಕನ್ವರ್, ಜಿ. ತೃಷಾ, ಸುಷ್ಮಾ ವರ್ಮ, ಮಿನ್ನು ಮಣಿ.
ಇಂಡಿಯಾ ಗ್ರೀನ್: ಮೋನಾ ಮೆಶ್ರಮ್ (ನಾಯಕಿ), ಡಿ. ಹೇಮಲತಾ, ಶೆಫಾಲಿ ವರ್ಮ, ತೇಜಲ್ ಹಸಬಿ°ಸ್, ಅನಿತಾ ಲೋಧಿ, ಸ್ನೇಹಾ ರಾಣ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಶುಭಲಕ್ಷ್ಮೀ, ದೇವಯಾನಿ ಪ್ರಸಾದ್, ಎಸ್.ಬಿ. ಕೀರ್ತನಾ, ಶ್ವೇತಾ ವರ್ಮ, ಸುಶ್ರೀ ದಿವ್ಯದರ್ಶಿನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.