ಬಸ್ ಬ್ರೇಕ್ ಫೇಲ್: ಹಲವು ವಾಹನಗಳಿಗೆ ಢಿಕ್ಕಿ
Team Udayavani, Dec 23, 2018, 10:20 AM IST
ಮಂಗಳೂರು: ಪಚ್ಚನಾಡಿ ಸೇತುವೆ ಮತ್ತು ರೈಲ್ವೇ ಟ್ರಾಕ್ ಸಮೀಪ ಖಾಸಗಿ ಸಿಟಿಬಸ್ ಬ್ರೇಕ್ ಫೇಲ್ ಆಗಿ ಕಾರು, ಟೆಂಪೋ ಹಾಗೂ ಬೈಕಿಗೆ ಢಿಕ್ಕಿಯಾಗಿ 13 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ಜಯಂತ್, ಕೂಸಪ್ಪ, ಅಬ್ದುಲ್ ರೆಹಮಾನ್, ಮಾರ್ಸೆಲ್ ಮಿನೇಜಸ್, ಗ್ರೇಗರಿ, ಅಭಿನವ್, ಮುಕುಂದ ಭಟ್, ಮ್ಯಾಕ್ಸಿಲ್, ಪ್ರಜ್ವಲ್ ಫೆರ್ನಾಂಡಿಸ್, ಕರುಣಾಕರ ಶೆಟ್ಟಿ, ಮಹಾಲಿಂಗ, ಫ್ರೆಡ್ಡಿ ಫೆರ್ನಾಂಡಿಸ್ ಮತ್ತು ಸರೋಜಿನಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಸಂಜೆ 6.30ರ ವೇಳೆಗೆ ಪಚ್ಚನಾಡಿಗೆ ತೆರಳುತ್ತಿದ್ದ ಫಾತಿಮಾ ಬಸ್ ಚಡಾವಿನಲ್ಲಿ ಬ್ರೇಕ್‌ಫೇಲ್ ಆಗಿದ್ದು, ವಾಹನಗಳಿಗೆ ಢಿಕ್ಕಿ ಹೊಡೆದು ಹೊಂಡಕ್ಕೆ ಬಿದ್ದು ಮರಕ್ಕೆ ತಾಗಿ ನಿಂತಿತು.
ಟೆಂಪೋ ಕೆಟ್ಟು ನಿಂತಿತ್ತು
ಪಚ್ಚನಾಡಿಯಿಂದ ಪದವಿನಂಗಡಿ ಕಡೆಗೆ ಹೋಗುತ್ತಿದ್ದ ಟಾಟಾ ಏಸ್ ಟೆಂಪೋವೊಂದು ಚಡಾವಿನಲ್ಲಿ ಕೆಟ್ಟು ರಸ್ತೆಯಲ್ಲಿ ನಿಂತಿತ್ತು. ಅದನ್ನು ಬದಿಗೆ ಸರಿಸಲು ದೂಡುತ್ತಿದ್ದ ವೇಳೆ ಮುಂಬದಿಯಿಂದ ಬ್ರೇಕ್‌ಫೇಲ್ ಆದ ಬಸ್ಸು ಟೆಂಪೋಗೆ ಢಿಕ್ಕಿಯಾಯಿತು. ಇದೇ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಹಾಗೂ ಬೈಕಿಗೂ ಢಿಕ್ಕಿ ಹೊಡೆಯಿತು. ಟಾಟಾ ಏಸ್ ಟೆಂಪೊ ವಾಹನವನ್ನು ತಳ್ಳುತ್ತಿದ್ದವರಲ್ಲಿ ಹೆಚ್ಚಿನವರಿಗೆ ಗಾಯವಾಗಿದೆ. ಕಾರಿನ ಚಾಲಕ, ಬೈಕ್ ಸವಾರ ಮತ್ತು ಬಸ್ಸಿನಲ್ಲಿದ್ದ ಕೆಲವರಿಗೆ ಗಾಯಗಳಾಗಿವೆ. ಢಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು, ಕಾರಿಗೂ ಹಾನಿಯಾಗಿದೆ.
ಸ್ಥಳೀಯರಿಂದ ನೆರವು
ಸ್ಥಳೀಯರಾದ ಬಾಲಕೃಷ್ಣ ಹಾಗೂ ಮತ್ತಿತರರು ಕಾರಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬೇರೆ ವಾಹನದಲ್ಲಿ ಕಳುಹಿಸಲಾಯಿತು. ಟ್ರಾಫಿಕ್ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.