ಮಟ್ಕಾ ನಂಬರ್ ಹೇಳುವವರಿಂದ ಉದ್ಧಾರವಾಗಲ್ಲ
Team Udayavani, Dec 23, 2018, 12:55 PM IST
ಸೇಡಂ: ವಚನ ಹೇಳುವ ಬಾಯಲ್ಲಿ ಮಟ್ಕಾ ನಂಬರ್, ಲಿಂಗ ಕೊಡೋ ಕೈಯಲ್ಲಿ ನಿಂಬೆಹಣ್ಣು, ರುದ್ರಾಕ್ಷಿ ಬದಲು ತಾಯಿತ, ಈ ರೀತಿಯ ಮಠಾಧೀಶರ ನಡೆಯಿಂದ ಎಂದಾದರೂ ದೇಶ ಉದ್ಧಾರವಾದೀತೆ ಎಂದು ಶ್ರೀಶೈಲ ಸಾರಂಗ ಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಕೋಡ್ಲಾ ಗ್ರಾಮದ ಉರಿಲಿಂಗ ಪೆದ್ದೀಶ್ವರ ಸಂಸ್ಥಾನ ಮಠದಲ್ಲಿ ಪೀಠಾಧಿಪತಿ ಡಾ| ನಂಜುಂಡ ಸ್ವಾಮೀಜಿ ಅವರಿಗೆ ಪಾಂಡಿಚೇರಿಯ ಪೀಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಡಾಕ್ಟರೆಟ್ ಪದವಿ ಪ್ರದಾನ ಮಾಡಿದ ಪ್ರಯುಕ್ತ ಬಹುಜನ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಮಠಾಧೀಶರ ನಡೆಯಿಂದ ಇಡೀ ಸಮಾಜವೇ ಹದಗೆಟ್ಟು ಹೋಗುತ್ತಿದೆ. ವಚನ ಸಾಹಿತ್ಯ ಪಸರಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಮಠಗಳು ರಾಜಕೀಯ ಮಾಡುತ್ತಿವೆ. ಮೌಡ್ಯ ಆಚರಣೆಗಳನ್ನು ಬಿತ್ತುತ್ತಿವೆ. 12ನೇ ಶತಮಾನಕ್ಕೂ ಮುನ್ನ ಇಂದಿನ ಎಲ್ಲ
ಲಿಂಗಾಯತರೂ ದಲಿತರೇ ಆಗಿದ್ದರು ಎನ್ನುವ ಸತ್ಯ ಅರಿಯಬೇಕಾಗಿದೆ. ದೇಶದಲ್ಲಿರುವ ಎಲ್ಲರೂ ಬುದ್ಧ, ಬಸವ, ಅಂಬೇಡ್ಕರ್ ಮಕ್ಕಳಿದ್ದಂತೆ. ಈ ನಿಟ್ಟಿನಲ್ಲಿ ಎಷ್ಟೇ ವಿರೋಧವಿದ್ದರೂ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಿಯೇ ತೀರುವುದಾಗಿ ಘೋಷಿಸಿದರು.
ಜನವಾದಿ ಮಹಿಳಾ ಸೇವಾ ಸಂಘದ ರಾಜ್ಯಾಧ್ಯಕ್ಷೆ ಕೆ. ನೀಲಾ ಮಾತನಾಡಿ, ಶತಮಾನದ ಶರಣ ಬಸವಣ್ಣ ತಾನು ಮಾದಾರ ಚನ್ನಯ್ಯನ ಮಗ ಎಂದು ನಂಬಿಕೊಂಡು ನಡೆದವರು. ಅವರು ದೇಶದ ಮೊಟ್ಟ ಮೊದಲ ಶರಣ ಸಂಗಾತಿಯಾಗಿದ್ದರು ಎಂದರು. ಮೈಸೂರು ಉರಿಲಿಂಗ ಪೆದ್ದಿ ಶಾಖಾ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮಹಾಂತ ಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಡಾ| ಶಿವರಾಜ ಪಾಟೀಲ, ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ, ಗುರುಮಠಕಲ್‌ನ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಡಾ| ನಂಜುಂಡ ಸ್ವಾಮೀಜಿ ಮಾತನಾಡಿದರು. ಬಸವ ಮಹಾಂತಾಚಾರ್ಯ ಸ್ವಾಮೀಜಿ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ, ಮಾಜಿ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಮತ್ತಿತರರು ಇದ್ದರು. ದೇವಿಂದ್ರಪ್ಪ ತೆಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಮಂತ್ರಿ ಸ್ವಾಗತಿಸಿದರು, ಎಸ್.ಪಿ.ಸುಳ್ಳದ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.