ಕೈ ತಪ್ಪಿದ ಸಚಿವ ಸ್ಥಾನ:ಕಲಬುರಗಿಯಲ್ಲಿ ಅಜಯಸಿಂಗ್ ಅಭಿಮಾನಿಗಳ ಆಕ್ರೋಶ
Team Udayavani, Dec 23, 2018, 1:01 PM IST
ಕಲಬುರಗಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಜೇವರ್ಗಿ ಕ್ಷೇತ್ರದ ಶಾಸಕ ಡಾ| ಅಜಯ್ ಸಿಂಗ್ ಅವರಿಗೆ ಸ್ಥಾನಸಿಗದೇ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಶನಿವಾರ ಜೇವರ್ಗಿ ಪಟ್ಟಣದಲ್ಲಿ ಏಕಾಏಕಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಹೈ ಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಡಾ| ಅಜಯಸಿಂಗ್ ಎರಡನೇ ಬಾರಿಗೆ ಶಾಸಕರಾಗಿದ್ದಾರಲ್ಲದೇ ಅವರ ತಂದೆ ದಿ. ಧರ್ಮಸಿಂಗ್ ಕ್ರಾಂಗ್ರೆಸ್‌ಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಧರ್ಮಸಿಂಗ್ ಅವರಿಂದು ಇದ್ದಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಸಚಿವ ಸ್ಥಾನ ನೀಡದೇ ದ್ರೋಹ ಬಗೆಯಲಾಗಿದೆ. ಈಗಲಾದರೂ ಪರಿಸ್ಥಿತಿ ಅರಿತು ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜಶೇಖರ ಸಿರಿ, ಸಿದ್ದಲಿಂಗರೆಡ್ಡಿ ಇಟಗಾ, ಚಂದ್ರಕಾಂತ ಯಂಕಂಚಿ, ರಹಿಮಾನ್ ಪಟೇಲ, ಬಹದ್ಧೂರ ರಾಠೊಡ, ಪ್ರಕಾಶ ಪುಲಾರೆ, ನೀಲಕಂಠ ಅವುಂಟಿ, ರವಿ ಕೋಳಕೂರ, ಬೆಣ್ಣೆಪ್ಪ ಕೊಂಬಿನ, ಸಕ್ರೆಪ್ಪಗೌಡ ಹರನೂರ, ತುಕಾರಾಮ ಚವ್ಹಾಣ ಗುಡೂರ, ತಿಪ್ಪಣ್ಣ ಕನಕ, ಶರಣು ಗುತ್ತೇದಾರ, ಬಸಣ್ಣ ಸರಕಾರ, ಬೀದಿ ವ್ಯಾಪಾರಿ ಸಂಘದ ಅಧ್ಯಕ್ಷರಾದ ಇಮಾಮಸಾಬ್ ಭಾಗವಾನ ಮಿರ್ಚಿ, ಫಯಾಜ ಜಮಾದಾರ, ದೌಲಪ್ಪ ಮದನ, ಮಲ್ಲಿಕಾರ್ಜುನ ಕೆಲ್ಲೂರ, ಶ್ರೀಮಂತ ಧನಕರ್, ಮಲ್ಲಣ್ಣ ಕೊಡಚಿ, ಸುನಿಲ ಹಳ್ಳಿ, ಮಲ್ಲಮ್ಮ ಕೊಂಬಿನ, ಸಿದ್ಧು ಶರ್ಮಾ ಜನಿವಾರ, ದೇವಿಂದ್ರ ಮುದಬಾಳ, ಮರೆಪ್ಪ ಸರಡಗಿ, ಸಿದ್ರಾಮ ಕಟ್ಟಿ, ಭೀಮಾಶಂಕರ ಜನಿವಾರ, ಪ್ರಶಾಂತಗೌಡ ಮಾಲಿ ಪಾಟೀಲ ಜೈನಾಪೂರ, ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಷ ಸೇವಿಸಿದ ಯುವಕ
ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದುದ್ದಕ್ಕೆ ಬೇಸರಗೊಂಡ ಅವರ ಅಭಿಮಾನಿಯೊಬ್ಬ ವಿಷ ಸೇವಿಸಿದ್ದಾನೆ. ಡಾ| ಅಜಯ್‌ಸಿಂಗ್ ಕಟ್ಟಾ ಅಭಿಮಾನಿಯಾಗಿರುವ 35 ವರ್ಷದ ಚಿಕ್ಕ ಜೇವರ್ಗಿ ಗ್ರಾಮದ ಮಹ್ಮದ್ ಜಿಲಾನಿ ಮುನ್ಸಿ ವಿಷ ಸೇವಿಸಿದ ಯುವಕ. ಶಾಸಕರಿಗೆ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿಷ ಸೇವಿಸಿದ್ದಾನೆ. ಈತನೀಗ ಜೇವರ್ಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹ್ಮದ ಜಿಲಾನಿ ಚಿಕಿತ್ಸೆಗೆ ಸ್ವಲ್ಪ ಮಟ್ಟಿಗೆ ಸ್ಪಂಧಿಸುತ್ತಿದ್ದು, ಎರಡೂಮೂರು ದಿನಗಳ ಕಾಲ ಸ್ಪಷ್ಟವಾಗಿ ಏನೂ ಹೇಳಲಿಕ್ಕೆ ಸಾಧ್ಯವಿಲ್ಲ ಎಂದು ಚಿಕಿತ್ಸೆ ನೀಡಿದ ಡಾ| ರಾಘವೇಂದ್ರ ಕುಲಕರ್ಣಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.