ಲಾಲ್ ಬಾಗ್ ಸೌಂದರ್ಯ ವೃದ್ಧಿಯಾಗಲಿ
Team Udayavani, Dec 23, 2018, 1:19 PM IST
ಸಂಜೆಯ ವೇಳೆ ತಿರುಗಾಡಲು ಲಾಲ್ ಬಾಗ್ ಅತ್ಯುತ್ತಮ ತಾಣವಾಗುತ್ತಿದೆ ಎಂದರೆ ತಪ್ಪಾಗಲಾರದು. ಸಂಜೆ ವೇಳೆ ಇಲ್ಲಿನ ಮಹಾನಗರ ಪಾಲಿಕೆಯ ಕಟ್ಟಡದ ಮುಂಭಾಗದಲ್ಲಿರುವ ದಂಡೆಯಲ್ಲಿ ಕುಳಿತು ಹೆಚ್ಚಿನವರು ನಗರದ ಸೌಂದರ್ಯವನ್ನು ಸವಿಯುವ ದೃಶ್ಯ ಈಗ ಸಾಮಾನ್ಯವಾಗಿದೆ. ಹೀಗಾಗಿ ಈ ಪ್ರದೇಶವನ್ನು ಇನ್ನಷ್ಟು ಆಕರ್ಷಣೀಯಗೊಳಿಸಲು ಸಂಬಂಧಪಟ್ಟವರು ಚಿಂತನೆ ನಡೆಸಬೇಕಿದೆ.
. ಪಾಲಿಕೆ ಕಟ್ಟಡದ ಮುಂಭಾಗದಲ್ಲಿರುವ ದಂಡೆಗೆ ಕಬ್ಬಿಣದ ಆಕರ್ಷಕ ಬೇಲಿಯನ್ನು ಅಳವಡಿಸುವುದರಿಂದ ದಂಡೆಯ ಮೇಲೆ ಕುಳಿತುಕೊಳ್ಳುವವರಿಗೆ ಆರಾಮವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದಂತಾಗುತ್ತದೆ ಮತ್ತು ರಕ್ಷಣೆಯನ್ನು ನೀಡಿದಂತಾಗುತ್ತದೆ. . ಈ ಪ್ರದೇಶದಲ್ಲಿ ಕೆಲವು ಕಲ್ಲು ಬೆಂಚುಗಳನ್ನು ಅಳವಡಿಸಬಹುದು.
. ರಸ್ತೆಯಂಚಿನ ಖಾಲಿ ಜಾಗದಲ್ಲಿ ಮರಗಿಡಗಳನ್ನು ನೆಡಬಹುದು.
. ರಸ್ತೆ ವಿಭಾಜಕದಲ್ಲಿ ಹೂ ಕುಂಡಗಳನ್ನು ಇರಿಸುವುದು.
. ವೃತ್ತದಲ್ಲಿ ನೀರಿನ ಚಿಲುಮೆಗಳನ್ನು ಅಳವಡಿಸಬಹುದು.
. ಕಟ್ಟಡದ ಎಡಭಾಗದಲ್ಲಿ ಬಸ್ ತುಂಗುದಾಣಕ್ಕೆ ಅಡ್ಡವಾಗಿರುವ ದೊಡ್ಡ ಫಲಕವನ್ನು ಸ್ವಲ್ಪ ಸರಿಸಿ ಲಾಲ್ ಬಾಗ್‌ನ ಸಂಪೂರ್ಣ ದೃಶ್ಯವನ್ನು ಕಾಣುವಂತೆ ಮಾಡಬಹುದು. ಇನ್ನೊಂದು ಡಿಜಿಟಲ್ ಬೋರ್ಡ್ ಅಳವಡಿಸಲು ಕ್ರಮಕೈಗೊಳ್ಳಬಹುದು.
. ತ್ಯಾಜ್ಯ ಸಂಗ್ರಹಕ್ಕೆ ಈಗಾಗಲೇ ಎರಡು ಪ್ಲಾಸ್ಟಿಕ್ ಡಬ್ಬಗಳಿದ್ದು, ಇನ್ನೊಂದೆರಡು ಇಟ್ಟರೆ ಅನುಕೂಲವಾಗುವುದು. ಪಾಲಿಕೆ ಕಟ್ಟಡ ಸುಂದರವಾಗಿ ಕಾಣುವಂತೆ ಹವಾ ನಿಯಂತ್ರಣ ಯಂತ್ರಗಳನ್ನು ಕಟ್ಟಡ ಹಿಂಬದಿ ಅಳವಡಿಸುವುದು, ತಂತಿಗಳನ್ನು ಬಿಗಿಗೊಳಿಸುವುದು, ಅಗತ್ಯವಿದ್ದರೆ ಮಾತ್ರ ಒಂದೆರಡು ಫಲಕ ಒಂದೇ ಕಡೆ ಇರಿಸುವುದು. ಈ ಎಲ್ಲ ಕ್ರಮಗಳನ್ನು ಕೈಗೊಂಡರೆ ಲಾಲ್‌ಬಾಗ್ ಅತ್ಯಂತ ಸುಂದರ ತಾಣವಾಗುವುದು ಮಾತ್ರವಲ್ಲ ಪ್ರವಾಸಿಗರನ್ನೂ ತನ್ನತ್ತ ಸೆಳೆಯಬಲ್ಲದು.
ವಿಶ್ವನಾಥ್ ಕೋಟೆಕಾರ್, ಕೋಡಿಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.