ನಿಂಗನ ಗೌಡರ ಪೆನ್ಷನ್ ಸ್ಕೀಂ


Team Udayavani, Dec 24, 2018, 6:00 AM IST

laxmeshwar-krushi-story1.jpg

ವಯಸ್ಸಾದಂತೆ ಮುಂದೇನಪ್ಪ ಅಂತ ರೈತರು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ.  ಅವರು ಅಂದಾಜು ಮಾಡಿಕೊಂಡಿದ್ದಂತೆ  ಬೆಳೆ ಕೈಗೆ ಬರದೇ ಇದ್ದರೆ ಬದುಕು ನಡೆಸುವುದೇ ಕಷ್ಟವಾಗಿಬಿಡುತ್ತದೆ.  ಆದರೆ, ಲಕ್ಷ್ಮೀಶ್ವರದ ನಿಂಗನಗೌಡರಿಗೆ ಈ ತಲೆ ಬಿಸಿ ಇಲ್ಲ. ವೀಳ್ಯದೆಲೆಯ ಬೆಳೆ ಅವರ ಕೈ ಹಿಡಿದೆ. ಪಿಂಚಣಿಯಂತೆ ತಿಂಗಳ ತಿಂಗಳ ಆದಾಯ ತಂದುಕೊಡುತ್ತಿದೆ. 

ರೈತರಿಗೆ ನಿವೃತ್ತಿ ಇದೆಯಾ?
ಈ ಪ್ರಶ್ನೆ ಕೇಳಿದರೆ ಭಯವಾಗುತ್ತದೆ. ಏಕೆಂದರೆ, ಬದುಕ ಬೇಕಾದರೆ ರೈತಾಪಿ ಜನರು ಕೃಷಿ ಮಾಡುತ್ತಲೇ ಇರಬೇಕು. ಈತನಕ ನಡೆದು ಬಂದಿರುವುದೂ, ಈಗ ನಡೆಯುತ್ತಿರುವುದೂ ಹೀಗೆ. ಆದರೆ, ಗದಗ ಜಿಲ್ಲೆಯ ಲಕ್ಷೇ¾ಶ್ವರ ಪಟ್ಟಣದ ಹೊರವಲಯದಲ್ಲಿರುವ (ಲಕ್ಷೇ¾ಶ್ವರ-ಸವಣೂರು ರಸ್ತೆ) ನಿಂಗನಗೌಡರ ಬದುಕಲ್ಲಿ ಒಮ್ಮೆ ಇಣುಕಿದರೆ ಹೀಗೆ ಅನಿಸೊಲ್ಲ. ಸರ್ಕಾರಿ ನೌಕರರಿಗಾದರೆ, ನಿವೃತ್ತಿಯ ನಂತರ ಪಿಂಚಣಿ ಸಿಗುತ್ತದೆ. ದೊಡ್ಡ ಮೊತ್ತದ ಹಣ ಸಿಕ್ಕಿದೆಯೆಂದೇ ಅವರು ಖುಷಿಯಿಂದ ಇರಬಹುದು. ಅದೇ ರೀತಿ, ಕೃಷಿಯನ್ನು ಖಚಿತ ಲೆಕ್ಕಾಚಾರದೊಂದಿಗೆ ಮಾಡಿದರೆ, ವಯಸ್ಸಾದ ನಂತರವೂ ರೈತರು ಸಂತೋಷದಿಂದಲೇ ಜೀವನ ನಡೆಸಬಹುದು ಎಂಬುದು ನಿಂಗನಗೌಡರ ಸ್ಪಷ್ಟ ಮಾತು. ಈ ಹಿರಿಯರಿಗೆ ಈಗ 70 ವರ್ಷ. ಐದು ದಶಕದಿಂದ ವೀಳ್ಯದೆಲೆ ಬೆಳೆಯುತ್ತಾ, ತೋಟವನ್ನು ತಮ್ಮ ಮಕ್ಕಳೇ ಅನ್ನುವಂತೆ ಜೋಪಾನ ಮಾಡಿದ್ದಾರೆ. ಪ್ರತಿಫಲವಾಗಿ ಉತ್ತಮ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ವೃದ್ಧಾಪ್ಯದಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. 

15 ಗುಂಟೆಯಲ್ಲಿ ತೋಟ
ಸುಮಾರು 60 ವರ್ಷದ ಹಿಂದೆ, ನಿಂಗನಗೌಡರ ತಂದೆ ಈ ಜಮೀನಿನಲ್ಲಿ 25 ಅಡಿ ಆಳದ ಬಾವಿ ಕಟ್ಟಿಸಿದ್ದರು. ನಂತರ ಬತ್ತಿದ ಬಾವಿಯಲ್ಲಿ ಬೋರ್‌ವೆಲ್‌ ಕೊರೆಸಿ ತೋಟಗಾರಿಕೆ ಕೃಷಿ ಆರಂಭಿಸಿದರು. ನಾಲ್ಕೈದು ವರ್ಷದ ನಂತರ ಪಿತ್ರಾರ್ಜಿತ ಆಸ್ತಿ ರೂಪದಲ್ಲಿ ಬಂದ ಒಂದೂವರೆ ಎಕರೆಯಲ್ಲಿ ನಿಂಗನಗೌಡ 15 ಗುಂಟೆಯಲ್ಲಿ ಮಾತ್ರ ವೀಳ್ಯದೆಲೆ ಕೃಷಿ ಶುರು ಮಾಡಿದರು.  

3*3 ಅಂತರದಲ್ಲಿ 1,700 ವೀಳ್ಯದೆಲೆ ಸಸಿಗಳನ್ನು ನಾಟಿ ಮಾಡಿ, ಹೊರಗಿನ ಗಾಳಿ ತಡೆಯಲು ತೋಟದ ಸುತ್ತ ಬಾಳೆಗಿಡ, 40 ತೆಂಗು ಹಾಕಿದರು. ಬೇಸಿಗೆಯಲ್ಲಿ ಐದು ದಿನಕ್ಕೊಮ್ಮೆ, ಉಳಿದ ದಿನಗಳಲ್ಲಿ 8-10 ದಿನಕ್ಕೆ ನೀರು ಹಾಯಿಸುತ್ತಾ, ಕೊಟ್ಟಿಗೆ ಗೊಬ್ಬರ ನೀಡುತ್ತಾ ಬಂದರು.  ಅಂತರ ಬೆಳೆಗಳಾಗಿ ನುಗ್ಗೆಕಾಯಿ, ಚೊಗತ್ತಿ, ಗುರ್ಲ್ಗಿಡ ಬೆಳೆಸಿದರು. ಇವು ವೀಳ್ಯದೆಲೆ ಬಳ್ಳಿ ಹಬ್ಬಲು ಸಹಕಾರಿ. ಹೀಗೆ ಮೂರು ವರ್ಷ ವೀಳ್ಯದೆಲೆ ಸಸಿಗಳನ್ನು ಜೋಪಾನವಾಗಿ ಬೆಳೆಸಿದ ನಂತರ 20-25 ದಿನಕ್ಕೊಮ್ಮೆ ವೀಳ್ಯದೆಲೆ ಕಟಾವಿಗೆ ಬಂತು. 

ಖರ್ಚು ಕಡಿಮೆ-ಅಧಿಕ ಲಾಭ
ತಿಂಗಳಿಗೊಮ್ಮೆ ವೀಳ್ಯದೆಲೆ ಕಟಾವು ಮಾಡಿದರೂ ವರ್ಷಕ್ಕೆ ಹೆಚ್ಚು-ಕಡಿಮೆ 12-14 ಬಾರಿ ಎಲೆ ಕಟಾವಿಗೆ ಬರುತ್ತದೆ. ಪ್ರತಿ ತಿಂಗಳಿಗೆ ಐದು ಅಂಡಗಿ (12 ಸಾವಿರ ಎಲೆ ಇರುವ ಮೂಟೆ) ಇಳುವರಿ ಬರುತ್ತದೆ. ಅದನ್ನು ಹತ್ತಿರದ ಲಕ್ಷೇ¾ಶ್ವರ ಮತ್ತು ಸವಣೂರು ಮಾರುಕಟ್ಟೆಗೆ ರವಾನಿಸುತ್ತಾರೆ. ಎಲೆ ಕಟಾವಿಗೆ ಮತ್ತು ತಿಂಗಳಿಗೊಮ್ಮೆ ಎಲೆ ಬಳ್ಳಿ ಕಟ್ಟಲು ಆಳುಗಳ ಕೂಲಿ ಸೇರಿದಂತೆ ತಿಂಗಳಿಗೆ ಆರು ಸಾವಿರ ರೂ. ಖರ್ಚು ತೆಗೆದರೂ 20-25 ಸಾವಿರ ರೂ. ಆದಾಯ ಗ್ಯಾರಂಟಿ. ಅಂತರ ಬೆಳೆಗಳಾದ ನುಗ್ಗೆ, ತೆಂಗು, ಬಾಳೆಯಿಂದಲೂ ತಿಂಗಳಿಗೆ 30 ಸಾವಿರ ರೂ.ಅನ್ನು ನಿಂಗನಗೌಡ ಪಾಟೀಲರು ಸಂಪಾದಿಸುತ್ತಿದ್ದಾರೆ. ತೋಟದ ತ್ಯಾಜ್ಯದಿಂದ ಗೊಬ್ಬರ ತಯಾರಿಸುತ್ತಾರೆ. ವರ್ಷಕೊಮ್ಮೆ (ಚಳಿಗಾಲದಲ್ಲಿ) ಬಳ್ಳಿ ಕೆಲಸ ಮಾಡಿಸುತ್ತಾರೆ. ನಾಲ್ಕು ಎಕರೆ ಭೂಮಿಯಲ್ಲಿ ಜೋಳ, ಕಂಟಿ ಶೇಂಗಾ, ವಿವಿಧ ತರಕಾರಿ, ಹತ್ತಿ ಬೆಳೆಯುತ್ತಾರೆ. ಈ 15 ಗುಂಟೆಯಲ್ಲಿ ಬರುವ ತೋಟದ ಆದಾಯದಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡು,  ಮೂವರು ಹೆಣ್ಣು ಮಕ್ಕಳನ್ನು ಓದಿಸಿ, ಮದುವೆ ಮಾಡಿದ್ದಾರೆ. “ಇಷ್ಟು ವರ್ಷ  ತೋಟವನ್ನು ಜೋಪಾನವಾಗಿ ಮಾಡಿದ್ದರಿಂದ  ಇಳಿ ವಯಸ್ಸಿನಲ್ಲಿ ಸ್ವಾವಲಂಬಿ ಜೀವನಕ್ಕೆ ಊರುಗೋಲು ಆಗಿದೆ. ನಿತ್ಯ ತೋಟಕ್ಕೆ ಹೋಗದಿದ್ದರೆ ಏನೋ ಕಳೆದುಕೊಂಡ ಭಾವನೆ ಬರುತ್ತದೆ’ ಎನ್ನುತ್ತಾರೆ ನಿಂಗನಗೌಡ ಪಾಟೀಲ.

– ಶರಣು ಹುಬ್ಬಳ್ಳಿ

ಟಾಪ್ ನ್ಯೂಸ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

3-aranthodu

Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.