ನವಿಮುಂಬಯಿ ಹೊಟೇಲ್ ಓನರ್ಸ್ ಓನರ್ಸ್ ಅಸೋಸಿಯೇಶನ್: ಮಹಾಸಭೆ
Team Udayavani, Dec 23, 2018, 5:34 PM IST
ಮುಂಬಯಿ: ನವಿಮುಂಬಯಿ ಹೊಟೇಲ್ ಓನರ್ಸ್ ಅಸೋಸಿಯೇಶನ್‌ನ 31ನೇ ವಾರ್ಷಿಕ ಮಹಾಸಭೆಯು ಅಸೋಸಿ ಯೇಶ್‌ನ ಅಧ್ಯಕ್ಷ ದಯಾನಂದ್ ಎಸ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಡಿ. 19ರಂದು ನವಿಮುಂಬಯಿ ಮಹಾಪೆಯ ಎಂಐಡಿಸಿಯ ರಮಡಾ ಹೊಟೇಲ್ ಸಭಾಗೃಹದಲ್ಲಿ ಜರಗಿತು.
ಮಾಜಿ ಅಧ್ಯಕ್ಷ ಶ್ಯಾಮ್ ಶೆಟ್ಟಿ, ಗೋಪಾಲ್ ವೈ. ಶೆಟ್ಟಿ, ಅಸೋಸಿಯೇಶ್‌ನ ಸದಸ್ಯ ಮನಮೋಹನ್ ಜಗ್ಗಿ, ಸಿ.ಎಂ. ಶೆಟ್ಟಿ ಮೊದಲಾದವರು ಸಲಹೆ ಸೂಚನೆಗಳನ್ನಿತ್ತರು. ಇದೇ ಸಂದರ್ಭದಲ್ಲಿ ನವಿಮುಂಬಯಿ ಪರಿಸರದ ಹಿರಿಯ ಹೊಟೇಲ್ ಉದ್ಯಮಿಗಳಾದ ಐರೋಲಿ ಪ್ರಿಯಾಂಕಾ ರೆಸ್ಟೋ ರೆಂಟ್ ಆ್ಯಂಡ್ ಬಾರ್‌ನ ಮಾಲಕ ವಿಠಲ್ ಎಸ್. ಶೆಟ್ಟಿ, ದಂಪತಿ, ತುಭೆìಯ ಸಂಗೀತ್(ಗಣೇಶ್) ರೆಸ್ಟೋರೆಂಟ್ ಆ್ಯಂಡ್ ಬಾರ್‌ನ ಮಾಲಕ ಮೋಹನ್ ಕಾಶಿರಾಮ್ ಕದಂ, ಕಲಂಬೋಲಿ ಸನ್‌ರೈಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಮಾಲಕ ಸದಾನಂದ ಡಿ. ಶೆಟ್ಟಿ ದಂಪತಿ, ಉರಾಣ್ ಸಹ್ಯಾದ್ರಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಮಾಲಕ ಅಶೋಕ್ ಎಂ. ಶೆಟ್ಟಿ ದಂಪತಿ, ನೆರೂಲ್ ಸೀವುಡ್ ಕೃಷ್ಣ ಪ್ಯೂರ್ ವೆಜ್ ಹೊಟೇಲ್‌ನ ಮಾಲಕ ಕೃಷ್ಣ ಪೂಜಾರಿ ದಂಪತಿಯನ್ನು ಗಣ್ಯರು ಸಮ್ಮಾನಿಸಿ ದರು. ಮಹಾರಾಷ್ಟ್ರ ಮಹಿಳಾ ಫುಟ್ಬಾಲ್ ತಂಡದ ಕ್ಯಾಪ್ಟನ್ ಕು| ಸುಮನ್ ಶೇಖರ್ ಸಾಲ್ಯಾನ್ ಮತ್ತು ಆಕೆಯ ತಂದೆ ಶೇಖರ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ಮಹಾಸಭೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಗೌರವ ಕೋಶಾಧಿಕಾರಿ ಮೋಹನ್ ಜೆ. ಶೆಟ್ಟಿ ವಾರ್ಚಿಕ ಲೆಕ್ಕಪತ್ರಗಳನ್ನು ಸಭೆಯ ಮುಂದಿಟ್ಟರು. ಇದೇ ಸಂದರ್ಭದಲ್ಲಿ ನೂತನ ಆಡಳಿತ ಸಮಿತಿ ಸದಸ್ಯರನ್ನು ಸಭೆಯಲ್ಲಿ ಘೋಷಿಸಲಾಯಿತು. ವೇದಿಕೆಯಲ್ಲಿ ಆಹಾರ್‌ನ ಅಧ್ಯಕ್ಷ ಸಂತೋಷ್ ಶೆಟ್ಟಿ, ಅಸೋಸಿಯೇಶ್‌ನ ಉಪಾಧ್ಯಕ್ಷ ಮಾರುತಿ ಎನ್. ಭೊಯಿರ್, ಜತೆ ಕಾರ್ಯದರ್ಶಿ ರವೀಂದ್ರ ಎನ್. ಶೆಟ್ಟಿ, ಜತೆ ಕೋಶಾಧಿಕಾರಿ ವಿನೋದ್ ಬಿ. ಮ್ಹಾತ್ರೆ ಹಾಗೂ ವಿವಿಧ ವಲಯಗಳ ಉಪಾಧ್ಯಕ್ಷ ಹಿರಿಯಣ್ಣ ಸಿ. ಶೆಟ್ಟಿ (ನೆರೂಲ್), ಶಂಕರ್ ಎಂ. ಶೆಟ್ಟಿ (ಎಪಿಎಂಸಿ), ಶಾಂತಾರಾಮ ಜಿ. ಶೆಟ್ಟಿ (ಸಾನ್‌ಪಾಡ), ಜಯಪ್ರಕಾಶ್ ಆರ್. ಶೆಟ್ಟಿ (ಐರೋಲಿ), ಬಾಸ್ಕರ್ ವೈ. ಶೆಟ್ಟಿ(ಪನ್ವೇಲ್) ಉಪಸ್ಥಿರಿದ್ದರು.
ಚಿತ್ರ,ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.