ಕಂಬಳ ಕ್ಷೇತ್ರದ ಸಾಧಕ ವಿನು ವಿಶ್ವನಾಥ ಶೆಟ್ಟಿ ನಿಧನ


Team Udayavani, Dec 24, 2018, 10:16 AM IST

vinu.jpg

ಪಡುಬಿದ್ರಿ/ಕಾಪು: ಕಂಬಳ ಕ್ಷೇತ್ರದ ಸಾಧಕ, ಸಮಾಜ ಸುಧಾರಕ, ಪ್ರಾಣಿ ಪ್ರೇಮಿ ಮೂಡು ಬಿದಿರೆಯ ಕರಿಂಜೆ ವಿನು ವಿಶ್ವನಾಥ ಶೆಟ್ಟಿ (52) ಅವರು ಡಿ. 23ರಂದು ಬಂಟ್ವಾಳದ ಹೊಕ್ಕಾಡಿ ಗೋಳಿ ಕಂಬಳದಿಂದ ವಾಪ
ಸಾಗುವ ವೇಳೆ ಹೃದಯಾ ಘಾತದಿಂದ ನಿಧನ ಹೊಂದಿದರು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

15 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಅವರು ದಿಲ್ಲಿಯ ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದರು. ಮೂಲತಃ ಮೂಡುಬಿದಿರೆಯವರಾದ ವಿನು ಅವರು ಕಾಪು ಹಾಗೂ ಪಡುಬಿದ್ರಿಯ ಪಾದೆಬೆಟ್ಟಿನಲ್ಲಿ ವಾಸವಾಗಿದ್ದರು. ಪಾದೆಬೆಟ್ಟಿನಲ್ಲಿ ಕೋಣಗಳಿಗೆಂದೇ ಸ್ವಿಮ್ಮಿಂಗ್‌ ಪೂಲ್‌, ಹವಾನಿಯಂತ್ರಿತ ಕೊಠಡಿ ಹಾಗೂ ಸಂಗೀತ ವ್ಯವಸ್ಥೆಯನ್ನೂ ಅಳವಡಿಸಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಕೊಡುಗೈ ದಾನಿಯಾಗಿದ್ದರು.

ಕಾರ್ಮಿಕರ ಬಗ್ಗೆ ಒಲವು
ಕೋಣಗಳ ಆರೈಕೆ ಮಾಡುವ ಕೆಲಸ ದಾಳುಗಳ ಬಗ್ಗೆಯೂ ವಿಶೇಷ ಒಲವು ಹೊಂದಿದ್ದ ಶೆಟ್ಟರು ಅವರ ಬದುಕಿಗೆ ಪೂರಕವಾಗಿ ಮನೆ ಸಹಿತ ವಿಶೇಷ ವ್ಯವಸ್ಥೆಗಳನ್ನೂ ಕಲ್ಪಿಸಿಕೊಟ್ಟಿದ್ದರ‌ು. ಕಾರ್ಮಿಕ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸ, ಮದುವೆ – ಮುಂಜಿಗಳಿಗೆ ನಿರಂತರ ಸಹಕಾರ, ವೈದ್ಯಕೀಯ – ಆಸ್ಪತ್ರೆ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದರು. ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ತಾಳಿಯನ್ನೂ ನೀಡುತ್ತಿದ್ದರು.

1999ರಲ್ಲಿ ಪಾಂಚು, ಕುಟ್ಟಿ ಎಂಬ ಕೋಣಗಳ ಮೂಲಕ ಕಂಬಳ ಕ್ಷೇತ್ರಕ್ಕೆ ಪರಿಚಿತರಾದ ವಿನು ವಿಶ್ವನಾಥ ಶೆಟ್ಟರು ಆ ವರ್ಷ 15 ಕಂಬಳಗಳಲ್ಲಿ 13 ಪದಕಗಳನ್ನು ಗೆಲ್ಲುವ ಮೂಲಕ ಗುರುತಿಸಿಕೊಂಡಿದ್ದಾರೆ. ಕಂಬಳ ಕ್ಷೇತ್ರಕ್ಕಾಗಿ ಈಚೆಗಿನ ನ್ಯಾಯಾಲಯದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದು ಸಣ್ಣ ಮಟ್ಟಿನ ಕಂಬಳವಾಗಲೀ, ದೊಡ್ಡ ವ್ಯವಸ್ಥಾಪನದ ಕಂಬಳವಾಗಲೀ ಎಲ್ಲೆಡೆಗೆ ತಮ್ಮ ಕೋಣಗಳನ್ನು ಒಯ್ಯುತ್ತಿದ್ದರು. ಹಗ್ಗ ಕಿರಿಯ ವಿಭಾಗದಲ್ಲೂ ಅವರ ಕೋಣಗಳೇ ಪ್ರಥಮ ಸ್ಥಾನ ಬಾಚಿಕೊಳ್ಳುತ್ತಿದ್ದು ಸದ್ಯ ಹಿರಿಯ ವಿಭಾಗದಲ್ಲೂ ಇದನ್ನು ಮುಂದುವರಿಸಿರುವುದೂ ದಾಖಲೆ ಎನಿಸಿದೆ. 

ದುಬಾೖಯಲ್ಲಿ ಹೊಟೇಲ್‌ ಉದ್ಯಮವನ್ನು ವಿನು ವಿಶ್ವನಾಥ ಶೆಟ್ಟಿ ಹೊಂದಿದ್ದು ಅವಿಭಜಿತ ಜಿಲ್ಲೆಯಲ್ಲೂ ಉದ್ಯಮಿಯಾಗಿಯೂ ಹೆಸರು ಗಳಿಸಿದ್ದರು. ಬಂಟ ಸಮಾಜದ ಅಭ್ಯುದಯಕ್ಕೂ ಕೊಡುಗೆ ಸಲ್ಲಿಸಿದ್ದಾರೆ.

ಗೆಲುವಿನ ಸಂಭ್ರಮದಲ್ಲಿ ಮರಳುತ್ತಿದ್ದಾಗ…
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಎಲಿಯನಡುಗೋಡು ಗ್ರಾಮದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ನಡೆದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವೇ ವಿನು ವಿಶ್ವನಾಥ ಶೆಟ್ಟಿ ಪಾಲ್ಗೊಂಡ ಕೊನೆಯ ಕಂಬಳ. ಬೆಳಗ್ಗೆ ಸುಮಾರು ಹತ್ತೂವರೆ ಗಂಟೆಗೆ ತಮ್ಮದೇ ಕಾರನ್ನು ಚಲಾಯಿಸಿಕೊಂಡು ಬಂದಿದ್ದ ಅವರು ಕಂಬಳ ಸಂಘಟಕರಲ್ಲಿ, ತಮ್ಮ ಓಟದ ಕೋಣಗಳ ತಂಡದವರಲ್ಲಿ, ತೀರ್ಪುಗಾರರಲ್ಲಿ ಮಾತುಕತೆ ನಡೆಸಿದ್ದರು.

ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಅವರ ಓಟದ ಕೋಣಗಳು ರಾತ್ರಿ ಸೆಮಿಫೈನಲ್‌ ಹಂತಕ್ಕೆ ತಲುಪಿದಾಗ ಮೆಡಲ್‌ ಪಡೆದುಕೊಂಡೇ ಹೋಗುವುದಾಗಿ ಗೆಳೆಯರಲ್ಲಿ ತಿಳಿಸಿದ್ದರು. ಫೈನಲ್‌ ಹಂತಕ್ಕೆ ಬಂದಾಗ ಬಹಳ ಸಂತಸದಲ್ಲಿದ್ದರು ಎಂದು ನಿಕಟವರ್ತಿಗಳು ತಿಳಿಸಿದ್ದಾರೆ. ರಾತ್ರಿ ಆರೋಗ್ಯದಲ್ಲಿ ಏನೋ ಏರುಪೇರಾಗುತ್ತಿರುವುದಾಗಿ ಕೆಲಸದವರಲ್ಲಿ ತಿಳಿಸಿದ್ದರು. ತಮ್ಮ ಕೋಣಗಳು ಬಹುಮಾನದ ಸನಿಹ ಇವೆ ಎಂಬ ಖುಷಿಯಲ್ಲಿ ಅನಾರೋಗ್ಯದತ್ತ ಹೆಚ್ಚು ಗಮನಹರಿಸಿರಲಿಲ್ಲ. ಮಧ್ಯಾಹ್ನ ಬಹುಮಾನ ವಿತರಣೆಯ ಬಳಿಕ (ಅವರ ತಂಡದ ಮುಖ್ಯಸ್ಥರು ಬಹುಮಾನ ಸ್ವೀಕರಿಸುತ್ತಾರೆ) ಕಾಪುವಿಗೆ ಹೊರಟಿದ್ದರು. ಸಿದ್ದಕಟ್ಟೆ ಬಳಿ ಎದೆ ನೋವು ಕಾಣಿಸಿದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಹೋಗಿದ್ದರು. ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದ್ದರು. ಬಳಿಕ ವಿನು ಅವರು ತನ್ನ ಸ್ನೇಹಿತರಿಗೆ ಕರೆಮಾಡಿದ್ದರು. ಅವರು ಆಗಮಿಸಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಾಗ ತುಂಬೆ ಆಸ್ಪತ್ರೆ ಬಳಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಹೊಕ್ಕಾಡಿಗೋಳಿ ಕಂಬಳದಲ್ಲಿ ಅವರ ಕೋಣಗಳು ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದವು. ಈ ಬಾರಿಯ ಐದು ಕಂಬಳ ಕೂಟಗಳಲ್ಲಿ ಪೈವಳಿಕೆ ಹೊರತುಪಡಿಸಿ ನಾಲ್ಕರಲ್ಲಿ ಅವರ ಕೋಣಗಳು ಪದಕ ಪಡೆದಿವೆ.

ಟಾಪ್ ನ್ಯೂಸ್

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.