ಶೇ.33 ಪರೋಕ್ಷ ತೆರಿಗೆ ವಿಧಿಸಿದವರು ಆತ್ಮಾವಲೋಕನ ಮಾಡಲಿ: ಜೇಟ್ಲಿ
Team Udayavani, Dec 24, 2018, 3:36 PM IST
ಹೊಸದಿಲ್ಲಿ : ಸರಕು ಮತ್ತು ಸೇವಾ ತೆರಿಗೆ ಎಂಬ ಜಿಎಸ್‌ಟಿ ಜಾರಿಗೆ ಬಂದು ಕೇವಲ 18 ತಿಂಗಳಾಗಿದ್ದು ಐಷಾರಾಮಿ ಮತ್ತು ಆರೋಗ್ಯಕ್ಕೆ ಸಾಧುವಲ್ಲದ ವಸ್ತುಗಳ ಹೊರತು ಉಳಿದೆಲ್ಲವುಗಳನ್ನು ಶೇ.28ರ ತೆರಿಗೆ slab ನಿಂದ ಹೊರತರುವ ಮೊದಲ ಹಂತದ ಕೆಲಸ ಈಗ ಪೂರ್ಣವಾಗುವತ್ತ ಸಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ಆದರೆ ದಶಕಗಳ ಕಾಲ ಶೇ.33ರ ಪರೋಕ್ಷ ತೆರಿಗೆಯನ್ನು ಹೇರಿ ಜನರನ್ನು ಶೋಷಿಸುತ್ತಾ ಬಂದವರು, ರಾಜಕೀಯ ಪ್ರೇರಿತರಾಗಿ ಜನರಲ್ಲಿ ತಪ್ಪು ಅಭಿಪ್ರಾಯಗಳನ್ನು ಹುಟ್ಟಿಸುವ ದುರುದ್ದೇಶದಲ್ಲಿ ಜಿಎಸ್‌ಟಿ ಯನ್ನು ಕ್ಷುಲ್ಲಕವಾಗಿ ಟೀಕಿಸುತ್ತಾ ಬಂದವರು ಈಗ ಗಂಭೀರ ಆತ್ಮಾವಕಲೋಕನ ಮಾಡಬೇಕು’ ಎಂದು ಜೇಟ್ಲಿ ತಮ್ಮ ವಿಸ್ತೃತ ಟ್ವೀಟ್ ನಲ್ಲಿ ಹಿಂದಿನ ಕಾಂಗ್ರೆಸ್ ಸರಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಕೇಂದ್ರ ಸರಕಾರ ಶೇ.28ರ ಜಿಎಸ್‌ಟಿ slab ನಿಂದ 23 ಸರಕುಗಳನ್ನು ಹೊರತಂದಿತ್ತು. ಅದರ ಪರಿಣಾಮವಾಗಿ ಮೂವೀ ಟಿಕೆಟ್‌ಗಳು, ಟಿವಿ ಮತ್ತು ಮಾನಿಟರ್ ಸ್ಕ್ರೀನ್‌ಗಳು, ಪವರ್ ಬ್ಯಾಂಕ್ ದರಗಳು ಗಮನಾರ್ಹವಾಗಿ ಕಡಿಮೆಯಾಗಿದ್ದವು. ಮಾತ್ರವಲ್ಲದೆ ಘನೀಕೃತ ಮತ್ತು ಸಂರಕ್ಷಿಸಲ್ಪಟ್ಟ ತರಕಾರಿಗಳಿಗೆ ಲೆವಿ ವಿನಾಯಿತಿ ನೀಡಲಾಗಿತ್ತು. ಈ ಇಳಿಸಲ್ಪಟ್ಟ ದರಗಳು ಜನವರಿ 1ರಿಂದಲೇ ಜಾರಿಗೆ ಬರುವುದೆಂದು ಸರಕಾರ ಘೋಷಿಸಿತ್ತು.
ಶೇ.31 ಪರೋಕ್ಷ ತೆರಿಗೆ ಹೇರುವ ಮೂಲಕ ಜನರನ್ನು ದಮನಿಸುತ್ತಾ ಬಂದಿದ್ದ ಹಿಂದಿನ ಸರಕಾರ, ಬೇಜವಾಬ್ದಾರಿಯ ರಾಜಕಾರಣ ಮತ್ತು ಬೇಜವಾಬ್ದಾರಿಯ ಅರ್ಥಶಾಸ್ತ್ರದಿಂದ ದೇಶದ ಆರ್ಥಿಕತೆ ತಳಮಟ್ಟವನ್ನು ಕಾಣುವ ಸಾಧನೆಯನ್ನು ಮಾತ್ರವೇ ಮಾಡಿತು ಎಂದು ಜೇಟ್ಲಿ ತಮ್ಮ ಟ್ವೀಟ್ ನಲ್ಲಿ ಕಟಕಿಯಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.