ಕಷ್ಟ ಆಗುತ್ತೆ, ಆದ್ರೂ ಮರೀತೀನಿ!
Team Udayavani, Dec 25, 2018, 6:00 AM IST
ನಿದ್ರೆಯ ಬೇಡವಾಗಿದೆ ಈ ಕಂಗಳಿಗೆ. ನಿನ್ನ ಕನಸುಗಳೇ ದುಃಸ್ವಪ್ನವಾಗಿ ಕಾಡುತ್ತಿರುವಾಗ. ಪ್ರೀತಿಯ ಮಹಲಿನಲ್ಲಿದ್ದ ನನ್ನನ್ನು ಇದ್ದಕ್ಕಿದ್ದಂತೆ ವಿರಹದ ಬೀದಿಗೆ ತಂದು ನಿಲ್ಲಿಸಿ, ಎದೆಯ ತುಂಬಾ ಬೇಗುದಿಯ ತುಂಬಿ ಹೋದವಳನ್ನೇ ನೆನೆಯುತ್ತಾ ನಿಂತಿರುವಾಗ ಹುಣ್ಣಿಮೆಯೂ ಕಪ್ಪಾದಂತೆ ಭಾಸವಾಗುತ್ತಿದೆ.
ನಿನ್ನ ಸೂಜಿಗಲ್ಲಿನಂಥ ಕಣ್ಣುಗಳ ನೆನಪು ಸೂಜಿಯಂತೆ ಘಾಸಿಗೊಳಿಸುತ್ತಿವೆ. ವಿರಹದ ನೋವಿಗೆ ಬೆಳದಿಂಗಳ ಬೆಳಕು ತಂಪೆರಚುತ್ತದೆ ಎಂದುಕೊಂಡರೆ, ನಿನ್ನ ನೆನಪುಗಳು ಬ್ಯಾಂಡೇಜ್ ಪಟ್ಟಿಯಲ್ಲಿ ಅವಿತು ಕೂತು ಉಪ್ಪು ಸವರುತ್ತಿವೆ. ನಿನ್ನ ಮರೆಯಲು ಏನೆಲ್ಲಾ ಮಾಡಿದೆ. ಆದರೂ ಅಂತರಾತ್ಮದಲ್ಲಿ ನಿನ್ನ ನೆನಪುಗಳು ಗಟ್ಟಿಯಾಗಿ ಕುಳಿತಿವೆ. ಜಿಗಿದಷ್ಟು ಆಳ, ಮೊಗೆದಷ್ಟು ಒರತೆ, ಸುರಿದಷ್ಟು ಸೋನೆ, ಎಣಿಸಿದಷ್ಟು ನಕ್ಷತ್ರ, ಅಸಂಖ್ಯ ಅಲೆಗಳಂತೆ.. ನಿನ್ನ ನೆನಪುಗಳು. ಮೌನವಾಗಿ ಸೋಲೊಪ್ಪಿಕೊಳ್ಳಲೂ ಆಗದೆ, ನಿನ್ನ ನೆನಪುಗಳನ್ನು ಗೆಲ್ಲಲೂ ಆಗದೆ ಸಂದಿಗ್ಧ ವೇದನೆಯಲ್ಲಿದ್ದೇನೆ.
ನಿನ್ನನ್ನು ನಾನು ಎಷ್ಟು ನಂಬಿದ್ದೆ, ಎಷ್ಟು ಪ್ರೀತಿಸಿದ್ದೆ. ಛೇ, ತಿರುಗುಬಾಣವಾಗಿ ನನ್ನನ್ನೇ ಚುಚ್ಚಿಬಿಟ್ಟೆಯಲ್ಲ!
ನನ್ನೆದೆಯ ನೋವನ್ನು ಹರವಿಕೊಂಡು ಅನುಕಂಪ ಗಿಟ್ಟಿಸುವ ಮನಸ್ಸಿಲ್ಲ. ವಿರಹದಿಂದ ಅಳುತ್ತಿರುವ ಹೃದಯ ನಿನ್ನನ್ನು ನೋಡಲು ಹಪಹಪಿಸುತ್ತಿದೆ. ಕೊನೆಯ ಸಲ ನಿನ್ನನ್ನೊಮ್ಮೆ ನೋಡಿ, ಎದೆಯ ಭಾರವನ್ನು ಇಳಿಸಿ ಬಿಡುತ್ತೇನೆ. ಎಷ್ಟು ಕಷ್ಟವಾದರೂ ಸರಿ, ಪ್ರಯಾಸವಾದರೂ ಸರಿ. ನಿನ್ನನ್ನು ಮರೆತೇ ಮರೆಯುತ್ತೇನೆ. ಪ್ಲೀಸ್ ಒಮ್ಮೆ ಬಾ..
– ಹನುಮಂತ.ಮ.ದೇಶಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.