ಮೈಕೆಲ್ನಿಂದ ಕೈ ನಾಯಕ ಅಹ್ಮದ್ ಪಟೇಲ್ ಹೆಸರು ಪ್ರಸ್ತಾಪ?
Team Udayavani, Dec 25, 2018, 6:00 AM IST
ನವದೆಹಲಿ: ಬಹುಕೋಟಿ ವಿವಿಐಪಿ ಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರವನ್ನು ಬಂಧಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಹೊರಗೆಡವಿದ್ದಾನೆ.
ಡೀಲ್ಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗಿತ್ತು ಎಂದು ಹೇಳಲಾಗಿರುವ ಟಿಪ್ಪಣಿ ಯಲ್ಲಿರುವ “ಎ.ಪಿ’ ಎಂಬ ಹೆಸರು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, “ಫಾಮ್’ ಎನ್ನುವುದು “ಗಾಂಧಿ ಕುಟುಂಬ’ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಗಿ ಸಿಬಿಐ ಮೂಲಗಳನ್ನು ಉಲ್ಲೇಖೀಸಿ “ಟೈಮ್ಸ್ ನೌ’ ಸುದ್ದಿವಾಹಿನಿ ವರದಿ ಮಾಡಿದೆ.
ಚಾನೆಲ್ ಹೇಳಿಕೊಂಡಿರುವ ಪ್ರಕಾರ, ವಿಚಾರಣೆ ವೇಳೆ ಈ ವಿಷಯ ತಿಳಿಸಿದರೂ, ಕೂಡಲೇ ಆತ ಹೇಳಿಕೆ ನಿರಾಕರಿಸಿದ್ದು, ಅಹ್ಮದ್ ಪಟೇಲ್ ಅಥವಾ ಗಾಂಧಿ ಕುಟುಂಬದವರನ್ನು ಭೇಟಿಯಾಗಿಲ್ಲ. ಈ ಬಗೆಗಿನ ಟಿಪ್ಪಣಿ ಸಿದ್ಧಗೊಳಿಸಿದ್ದು ಮತ್ತೂಬ್ಬ ಮಧ್ಯವರ್ತಿ ಗಿಡೋ ಹಶೆ ಎಂದೂ ಹೇಳಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ, ಎಚ್ಎಎಲ್ನಲ್ಲಿ ಲೈಟ್ ಯುಟಿಲಿಟಿ ಹೆಲಿ ಕಾಪ್ಟರ್ ಯೋಜನೆಯ ಗುತ್ತಿಗೆಗಾಗಿ 15 ಲಕ್ಷ ರೂ. ಲಂಚ ಪಾವತಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಿವೃತ್ತ ಗ್ರೂಪ್ ಕ್ಯಾಪ್ಟನ್ವೊಬ್ಬರಿಗೆ ಅದನ್ನು ಸಂದಾಯ ಮಾಡಲಾಗಿದೆ ಎಂದು ದೈನಿಕವೊಂದು ವರದಿ ಮಾಡಿದೆ.
ವಿದೇಶ ಪ್ರವಾಸಕ್ಕೆ ಅನುಮತಿ: ಸಿಬಿಐ ವಿಚಾರಣೆ ಗೊಳಪಟ್ಟಿರುವ ವಿವಿಐಪಿ ಹೆಲಿಕಾಪ್ಟರ್ ಹಗರಣ ಆರೋಪಿ ಮಾಜಿ ವಾಯುಪಡೆ ಮುಖ್ಯಸ್ಥ ಎಸ್ಪಿ ತ್ಯಾಗಿ ಅವರಿಗೆ ಮಾರ್ಚ್ನಲ್ಲಿ ಅಮೆರಿಕಕ್ಕೆ ತೆರಳಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.