ಯಡಿಯೂರಪ್ಪ ಡೋಂಗಿ ಮಣ್ಣಿನ ಮಗ: ಸಿದ್ದರಾಮಯ್ಯ
Team Udayavani, Dec 25, 2018, 9:10 AM IST
ಗೌರಿಬಿದನೂರು: ಮಾಜಿ ಸಿಎಂ ಬಿ.ಎಸ್.ಯುಡಿಯೂರಪ್ಪ ಅವರು ಮಣ್ಣಿನ ಮಗ ಎಂದು ಹಸಿರು ಶಾಲು ಧರಿಸಿ
ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದಾಗ ನೋಟಿನ ಪ್ರಿಂಟಿಂಗ್
ಮಿಷನ್ ಇಟ್ಟಿಲ್ಲ ಎಂದು ಸದನದಲ್ಲಿ ಹೇಳಿದ್ದರು. ಆದರೆ, ನಾನು ಸಹಕಾರಿ ಸಂಘಗಳಲ್ಲಿದ್ದ ರೈತರ 8,165 ಕೋಟಿ ರೂ.ಸಾಲ ಮನ್ನಾ ಮಾಡಿದ್ದೇನೆ. ನಾನೇ ನಿಜವಾದ ಮಣ್ಣಿನ ಮಗ. ಯಡಿಯೂರಪ್ಪ ಡೋಂಗಿ ಮಣ್ಣಿನ ಮಗ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ನಗರದಲ್ಲಿ ಸೋಮವಾರ 50 ಲಕ್ಷ ರೂ. ವೆಚ್ಚದ ಕನಕ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪಕ್ಷಗಳು ಜಯ ಗಳಿಸಿರುವುದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ದಿಕ್ಸೂಚಿಯಾಗಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಜನರಿಗೆ ಹಲವಾರು ಭರವಸೆ ನೀಡಿದ್ದರೂ ಯಾವುದನ್ನು ಈಡೇರಿಸಲಿಲ್ಲ. ವಿದೇಶಗಳಲ್ಲಿರುವ ಕಪ್ಪುಹಣವನ್ನು ತಂದು ಬಡವರ ಖಾತೆಗಳಿಗೆ ಒಂದು ಪೈಸೆಯನ್ನೂ ಹಾಕಲಿಲ್ಲ. ನೋಟು ಅಮಾನ್ಯಿàಕರಣ, ಜಿಎಸ್‌ಟಿಯಿಂದ ಜನಸಾಮಾನ್ಯರಿಗೆ
ತೊಂದರೆಯಾಗಿದೆ. ರೈತರ ಸಾಲಮನ್ನಾ ಮಾಡಿ ಎಂದು ರೈತರು ಪ್ರತಿಭಟಿಸುತ್ತಿದ್ದರೆ ಇದಕ್ಕೊಪ್ಪದ ಮೋದಿ, ಬಂಡವಾಳಶಾಹಿಗಳ ಸಹಸ್ರಾರು ಕೋಟಿ ರೂ.ಮನ್ನಾ ಮಾಡಿದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದ ಹೇಳಿದ್ದ ಅವರಿಗೆ ಕನಿಷ್ಠ 10ಲಕ್ಷ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.
“ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 160ಕ್ಕೂ ಹೆಚ್ಚು ಭರವಸೆ
ಈಡೇರಿಸಿದ್ದೇನೆ. ಅನ್ನಭಾಗ, ಶಾದಿಭಾಗ್ಯ, ಕ್ಷೀರಭಾಗ್ಯ, ಶೂಭಾಗ್ಯ, ವಿದ್ಯಾಸಿರಿ, ಮನಸ್ವಿನಿ ಸೇರಿದಂತೆ ಅನೇಕ
ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲವೂ ಜನರಿಗೆ ತಲುಪಿದೆ’ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.