ಕಾಮನ್ ಸೆನ್ಸ್ ಇದೆಯಾ? ಬಿಜೆಪಿ ಸಂಸದರ ಬಹಿರಂಗ ಕಿತ್ತಾಟ!
Team Udayavani, Dec 25, 2018, 1:08 PM IST
ಬೆಳಗಾವಿ: ಬಿಜೆಪಿ ಸಂಸದ ಸುರೇಶ್ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಸಾರ್ವಜನಿಕವಾಗಿ ನೂರಾರು ಜನರ ಎದುರೇ ವಾಗ್ವಾದ ನಡೆಸಿದ್ದಾರೆ.
ಮಂಗಳವಾರ ಬೆಳಗಾವಿಯಲ್ಲಿ ನಡೆದ ರೈಲ್ವೇ ಓವರ್ ಬ್ರಿಡ್ಜ್ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಇಬ್ಬರ ಜಗಳಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಸಾಕ್ಷಿಯಾಗಿದ್ದಾರೆ.
ಸಮಾರಂಭಕ್ಕೆ ಆಗಮಿಸಿದ್ದ ರಾಜ್ಯಸಭಾ ಸದಸ್ಯ ಕೋರೆ ಅವರು ಉದ್ದೇಶ ಪೂರ್ವಕವಾಗಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿಲ್ಲ ಎಂದು ವೇದಿಕೆಗೆ ಬರಲು ನಿರಾಕರಿಸಿದ್ದಾರೆ.
ಈ ವೇಳೆ ಸಂಸದ ಅಂಗಡಿ ಅವರು ಕಾಮನ್ ಸೆನ್ಸ್ ಇದೆಯಾ ನಿಮಗೆ ಬನ್ರೀ ಎಂದು ಗದರಿದ್ದಾರೆ. ಇದಕ್ಕುತ್ತರವಾಗಿ ಕೋರೆ ಅವರು ನಾನು ಬರಲ್ಲ, ಏನು ದಾದಾಗಿರಿ ಮಾಡುತ್ತಿರಾ ಎಂದಿದ್ದಾರೆ.
ಇಬ್ಬರು ಕೆಲ ಹೊತ್ತು ವಾಗ್ವಾದ ಕೆಲವರಿಗೆ ಪುಕ್ಕಟೆ ಮನೋರಂಜನೆ ನೀಡಿದರೆ ಇನ್ನು ಕೆಲವರಿಗೆ ಇಬ್ಬರನ್ನು ವೇದಿಕೆಗೆ ಕರೆಯುವುದೂ ಸವಾಲೆನಿಸಿತು. ಸಚಿವ ಸತೀಶ್ ಜಾರಕಿ ಹೊಳಿ ಅವರು ನಗುತ್ತಾ ಕುಳಿತಿದ್ದರು.ಈ ವೇಳೆ ಕೋರೆ ಅವರನ್ನು ಸಂಸದ ಅಂಗಡಿ ವೇದಿಕೆ ಒತ್ತಾಯ ಪೂರ್ವಕವಾಗಿ ಎಳೆದೊಯ್ದರು.
ವೇದಿಕೆಯಲ್ಲೂ ಟಾಂಗ್
ಸಮಾರಂಭದ ವೇದಿಕೆಯಲ್ಲೂ ಟಾಂಗ್ ನೀಡಿದ ಕೋರೆ, ಈ ಬ್ರಿಡ್ಜ್ಗೆ ಸುರೇಶ್ ಅಂಗಡಿ ಅವರ ಸ್ಮರಣಾರ್ಥ ಅವರ ಹೆಸರು ಇಡಬೇಕು ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಟಾಂಗ್ ನೀಡಿದರು.
ಫ್ರೆಂಡ್ಲಿ ಫೈಟ್
ಈ ಬಗ್ಗೆ ಮಾಧ್ಯಮಗಳು ಕೇಳಿದಾಗ ಪ್ರತಿಕ್ರಿಯೆ ನೀಡಿದ ಸಂಸದ ಅಂಗಡಿ ನಾವಿಬ್ಬರು ನಿತ್ಯವೂ ಜಗಳ ಆಡುತ್ತೇವೆ, ಕೋರೆ ಅವರು ನಮ್ಮ ಹಿರಿಯ ನಾಯಕರು. ಇದು ಫ್ರೆಂಡ್ಲಿ ಫೈಟ್ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.