ಈಶಾನ್ಯ ಅಭಿವೃದ್ಧಿಗೆ ಹಸಿರು ನಿಶಾನೆ: ಬೋಗಿಬೀಲ್ ಸೇತುವೆ ಉದ್ಘಾಟನೆ
Team Udayavani, Dec 26, 2018, 6:00 AM IST
ಬೋಗಿಬೀಲ್ (ಅಸ್ಸಾಂ): ಅಸ್ಸಾಂನ ದಿಬ್ರೂಗಢ ಸಮೀಪ ಬೋಗಿಬೀಲ್ ಎಂಬಲ್ಲಿ ಬ್ರಹ್ಮಪುತ್ರಾ ನದಿಗೆ ಕಟ್ಟಲಾದ ರೈಲು – ರಸ್ತೆ ಸೇತುವೆಯನ್ನು ಪ್ರಧಾನಿ ಮೋದಿ ಮಂಗಳವಾರ ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ದೇಶದ ಪ್ರಥಮ, ಏಶ್ಯದ ದ್ವಿತೀಯ ಅತಿ ಉದ್ದದ ರೈಲು ಮತ್ತು ರಸ್ತೆ ಸೇತುವೆ. ಉದ್ಘಾಟನೆ ಬಳಿಕ ಮೋದಿ ಅವರು ಈ ಸೇತುವೆ ಮೂಲಕ ಸಂಚರಿಸುವ ತೀನ್ಸುಕಿಯ – ನಹರ್ಲಗುನ್ ಇಂಟರ್ಸಿಟಿ ಎಕ್ಸ್ಪ್ರಸ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ರೈಲು ವಾರದಲ್ಲಿ ಐದು ದಿನ ಸಂಚರಿಸಲಿದ್ದು , ಅಸ್ಸಾಂನ ತೀನ್ಸುಕಿಯ ಮತ್ತು ಅರುಣಾಚಲ ಪ್ರದೇಶದ ನಹರ್ಲಗುನ್ ಪಟ್ಟಣಗಳ ಮಧ್ಯೆ 10 ತಾಸುಗಳಷ್ಟು ಪ್ರಯಾಣ ಅವಧಿ ಕಡಿಮೆಯಾಗಲಿದೆ. ಈ ಸೇತುವೆ ಯೋಜನೆಗೆ 1997-98ರಲ್ಲಿ ಅಂಗೀಕಾರ ನೀಡಲಾಗಿತ್ತು.
2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಕಾಮಗಾರಿಗೆ ಚಾಲನೆ ನೀಡಿದ್ದು, ಅವರ ಜನ್ಮದಿನದಂದೇ ಉದ್ಘಾಟನೆಯಾಗಿದೆ. ಕೆಳಗೆ ಡಬಲ್ಲೈನ್ ಬ್ರಾಡ್ಗೇಜ್ ರೈಲು ಮಾರ್ಗ ಮತ್ತು ಮೇಲೆ ತ್ರಿಪಥ ಹೆದ್ದಾರಿಯನ್ನು ಒಳಗೊಂಡಿರುವ ಕಾರಣ ಇದು ಡಬಲ್ ಡೆಕರ್ ಸೇತುವೆ.
ಏನೇನು ಲಾಭ?
– ದಿಬ್ರೂಗಢದಿಂದ ಇಟಾನಗರಕ್ಕೆ ರಸ್ತೆ ದೂರ 150 ಕಿ.ಮೀ. ಇಳಿಕೆ ಮತ್ತು ರೈಲು ಮಾರ್ಗ ದೂರ 705 ಕಿ.ಮೀ. ಇಳಿಕೆ.
– ಅರುಣಾಚಲ ಪ್ರದೇಶದ ಅನೇಕ ಜಿಲ್ಲೆಗಳ ಸಂಪರ್ಕ ಸಮಸ್ಯೆಗೆ ಪರಿಹಾರ.
– ಅರುಣಾಚಲದಲ್ಲಿನ ಚೀನ ಗಡಿಗೆ ರಕ್ಷಣಾ ಪಡೆಗಳು ಮತ್ತು ಸೇನಾ ಸಾಮಗ್ರಿಗಳ ಕ್ಷಿಪ್ರ ರವಾನೆಗೆ ಸಹಾಯಕ.
– ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನವನ್ನೂ ಇಳಿಸಲು ಸಾಧ್ಯ.
– ದಿಬ್ರೂಗಢ ವಿವಿ ಮತ್ತು ಅಸ್ಸಾಂ ಮೆಡಿಕಲ್ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ರೋಗಿಗಳು ದೋಣಿ ಮೂಲಕ ನದಿ ದಾಟಬೇಕಿತ್ತು.
– ಇದು ದೇಶದ ಮೊದಲ ಮತ್ತು ಏಕೈಕ ಸಂಪೂರ್ಣ ವೆಲೆxಡ್ ಸೇತುವೆ. ಇದಕ್ಕಾಗಿ ಐರೋಪ್ಯ ಕೋಡ್ ಮತ್ತು ಗುಣಮಟ್ಟ ಅನುಸರಿಸಲಾಗಿದೆ.
– ಸೇತುವೆ 7.0 ರಿಕ್ಟರ್ ಪ್ರಮಾಣದ ಭೂಕಂಪ ಸಂಭವಿಸಬಹುದಾದ ಸೆಸ್ಮಿಕ್ ಝೋನ್ 5ರಲ್ಲಿ ಬರುತ್ತದೆ. ಹೀಗಾಗಿ ಸ್ಥಿರತೆ ಕಾಪಾಡಲು ಭೂಕಂಪ ತಾಳಿಕೊಳ್ಳಬಲ್ಲ ಸಂರಚನೆಗಳ ಜತೆಗೆ ಭಾರೀ ಸ್ಪಾ éನ್ (1,700 ಎಂಟಿ) ಅಳವಡಿಸಲಾಗಿದೆ.
ಬೋಗಿಬೀಲ್ ಸೇತುವೆ ಭಾರತಕ್ಕೆ ಸಮಗ್ರ ಸಂಪರ್ಕ ಕಲ್ಪಿಸುವ ಸೂಚಕ. ನಮ್ಮ ಸರಕಾರದ ಯೋಜನೆ ಸಾಕಾರಗೊಳ್ಳಲು ಮಾಜಿ ಪ್ರಧಾನಿಗಳಾದ ವಾಜಪೇಯಿ, ಡಾ| ಮನಮೋಹನ್ ಸಿಂಗ್ ಮತ್ತು ಹಾಲಿ ಪ್ರಧಾನಿ ಮೋದಿ ಕೊಡುಗೆ ಸಲ್ಲಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.