ಠಾಣೆ ಗೋಡೆಗಳ ಮೇಲೆ ರಕ್ಷಣಾ ಜಾಗೃತಿ
Team Udayavani, Dec 26, 2018, 12:05 PM IST
ಬೆಂಗಳೂರು: ಪೊಲೀಸ್ ಠಾಣೆಗಳೆಂದರೆ ಸಹಜವಾಗಿ ಜನಸಾಮಾನ್ಯರಲ್ಲಿ ಇನ್ನೂ ಭಯದ ಭಾವನೆಯಿದೆ. ಇದನ್ನು ದೂರವಾಗಿಸುವ ನಿಟ್ಟಿನಲ್ಲಿ ವೈಟ್‌ಫೀಲ್ಡ್ ಠಾಣೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಠಾಣೆಯ ಕಾಂಪೌಂಡ್‌ನ ಎರಡು ಭಾಗದ ಗೋಡೆಗಳ ಮೇಲೆ ಪ್ರಮುಖವಾಗಿ ಮಹಿಳೆಯರು ಹಾಗೂ ಮಕ್ಕಳ ಚಿತ್ರ ಬಿಡಿಸಲಾಗಿದೆ. ನಾವು ನಿಮ್ಮೊಂದಿಗಿದ್ದೇವೆ. ನಿಮ್ಮ ರಕ್ಷಣೆಗಿದ್ದೇವೆ ಎಂಬ ಸಂದೇಶ ಸಾರುವ ಕಲಾತ್ಮಕ ಚಿತ್ರಕಲೆಗಳ ಮೂಲಕ ಜನಸ್ನೇಹಿ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಲಾಗಿದೆ.
ಅಂತಾರಾಷ್ಟ್ರೀಯ ಕಲಾವಿದರಾದ ನಿಲೋಫರ್ ಸುಲೈಮಾನ್ ಮತ್ತು ಇವರ ಪುತ್ರಿ ಶಿಲೋ ಅವರ ಮುಂದಾಳತ್ವದಲ್ಲಿ ಸ್ಥಳೀಯರು, ಮಕ್ಕಳು ಹಾಗೂ ಪೊಲೀಸರು ಜತೆಗೂಡಿ ಠಾಣೆಯ ಪ್ರವೇಶದ್ವಾರದ ಎರಡು ಭಾಗದ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿದ್ದಾರೆ. ಮಹಿಳೆ ಮತ್ತು ಮಕ್ಕಳ ರಕ್ಷಣೆ, ಸಂಚಾರ ಸಮಸ್ಯೆ ನಿವಾರಣೆಯ ಘೋಷವಾಕ್ಯಗಳೂ ಸೇರಿವೆ.
ಠಾಣೆ ಬಲಭಾಗದ ಕಾಂಪೌಂಡ್ ಗೋಡೆ ಮೇಲೆ ಮಹಿಳಾ ರಕ್ಷಣೆ ಕುರಿತು ಚಿತ್ರ ರಚಿಸಲಾಗಿದ್ದು, ಇದರಲ್ಲಿ ಮಹಿಳೆಯೊಬ್ಬರ ಭಾವಚಿತ್ರ ಬಿಡಿಸಲಾಗಿದೆ. ಅದು ಠಾಣೆಯ ಮಹಿಳಾ ಪೇದೆ ಲಕ್ಷ್ಮೀ ಅವರದಾಗಿದ್ದು, ಭಾವಚಿತ್ರದ ಪಕ್ಕದಲ್ಲೇ “ರಕ್ಷಣೆ’ ಎಂಬ ಘೋಷ ವಾಕ್ಯ ಬರೆಯಲಾಗಿದೆ. ಇದರ ಉದ್ದೇಶ ಯಾವುದೇ ಮಹಿಳೆಯರು ತಮ್ಮ ಸಮಸ್ಯೆಗಳನ್ನು ನೇರವಾಗಿ ಮಹಿಳಾ ಸಿಬ್ಬಂದಿ ಜತೆಯೇ ಹೇಳಿಕೊಳ್ಳಬಹುದು ಎಂದು ಠಾಣೆಯ ಅಧಿಕಾರಿಗಳು ಹೇಳುತ್ತಾರೆ.
ಈ ಗೋಡೆಯ ಮೇಲೆ ಗಮನ ಸೆಳೆಯುವ ಮತ್ತೂಂದು ಸಂಗತಿ ಎಂದರೆ, ಗೋಡೆಯ ಮೇಲಿರುವ ಒಂದು ಪ್ರಶ್ನೆ. ನಿಮ್ಮನ್ನು ರಕ್ಷಿಸುತ್ತಿರುವುದು ಯಾವುದು? ಎಂದು ಇಂಗ್ಲಿಷ್‌ನಲ್ಲಿ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಕೆಲವರು, ಆತ್ಮವಿಶ್ವಾಸ, ಸೌಂದರ್ಯ, ಕುಟುಂಬ ಎಂದು ಉತ್ತರಿಸಿದರೆ, ಕೆಲ ಪೊಲೀಸ್ ಸಿಬ್ಬಂದಿ ನಮ್ಮ ಸಮವಸ್ತ್ರ ನಮ್ಮನ್ನು ಕಾಪಾಡುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
“ಮಕ್ಕಳ ಹಕ್ಕು ರಕ್ಷಣೆ ನಮ್ಮೆಲ್ಲರ ಹೊಣೆ’: ಕಾಂಪೌಂಡ್‌ನ ಎಡಭಾಗದಲ್ಲಿರುವ ಗೋಡೆ ಮೇಲೆ “ಮಕ್ಕಳ ಹಕ್ಕು ರಕ್ಷಣೆ ನಮ್ಮೆಲ್ಲರ ಹೊಣೆ’ ಘೋಷ ವಾಕ್ಯದಡಿ ಮಕ್ಕಳ ಹಕ್ಕು ರಕ್ಷಣೆ ಕುರಿತು ಚಿತ್ರ ಬರೆಯಲಾಗಿದ್ದು, ಮಕ್ಕಳ ಬಾಲ್ಯದ ದಿನಗಳು, ಪರಿಸರ ಕಾಳಜಿ, ಮಕ್ಕಳ ಮೇಲೆ ಒತ್ತಡ ಹೇರಬೇಡಿ ಎಂಬೆಲ್ಲ ಸಂದೇಶವನ್ನು ಚಿತ್ರದಲ್ಲಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪೊಲೀಸರು ಶ್ರೀಸಾಮಾನ್ಯರ ಸ್ನೇಹಿತರು ಎಂಬ ಭಾವನೆ ಮೂಡಿಸುವ ಸಲುವಾಗಿ ಚಿತ್ರಗಳನ್ನು ರಚಿಸಲಾಗಿದೆ. ಪ್ರಮುಖವಾಗಿ ಮಹಿಳೆ ಮತ್ತು ಮಕ್ಕಳ ಹಕ್ಕು ರಕ್ಷಣೆ ಬಗ್ಗೆಯೇ ಹೆಚ್ಚು ಆದ್ಯತೆ ನೀಡಲಾಗಿದೆ. ಮುಂದಿನಗಳಲ್ಲಿ ಪೋಕೊÕà, ಬಾಲ್ಯವಿವಾಹದಂತದ ಪೀಡುಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು ಎಂದರು.
ಸರ್ಕಾರೇತರ ಸಂಸ್ಥೆ ವೈಟ್‌ಫೀಲ್ಡ್ ರೈಸಿಂಗ್ ಜತೆ ಸೇರಿ ವೈಟ್‌ಫೀಲ್ಡ್ ಠಾಣೆ ಕಾಂಪೌಂಡ್ ಗೋಡೆಗಳ ಮೇಲೆ ಸಾಮಾಜಿಕ ಕಳಕಳಿ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಚಿತ್ರಗಳನ್ನು ಬಿಡಿಸಲಾಗಿದೆ.
-ಸೀಮಂತ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ.
ಮಹಿಳೆ ಮತ್ತು ಮಕ್ಕಳ ರಕ್ಷಣೆ ಘೋಷ ವಾಕ್ಯದಡಿ ಚಿತ್ರಗಳನ್ನು ರಚಿಸಲಾಗಿದೆ. ಜನಸ್ನೇಹಿ ಪೊಲೀಸ್ ಉದ್ದೇಶದಿಂದ ಠಾಣೆಯ ಗೋಡೆಗಳ ಮೇಲೆ ಚಿತ್ರಗಳ ರಚನೆಗೆ ಅವಕಾಶ ಕೊಡಲಾಗಿದೆ.
-ಅಬ್ದುಲ್ ಅಹದ್, ವೈಟ್‌ಫೀಲ್ಡ್ ವಲಯ ಡಿಸಿಪಿ
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Manada Kadalu: ಯುವ ಜೋಡಿಗಳ ʼಮನದ ಕಡಲುʼ; ಮತ್ತೆ ಒಂದಾದ ಮುಂಗಾರು ಮಳೆ ಟೀಂ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.