ರಾಷ್ಟ್ರಪತಿ ಭೇಟಿ ಹಿನ್ನೆಲೆ: ಶ್ರೀಕೃಷ್ಣ ಮಠ ದರ್ಶನ ನಿರ್ಬಂಧ
Team Udayavani, Dec 26, 2018, 12:53 PM IST
ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿ. 27ರಂದು ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಡುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 6ರಿಂದ ಅಪರಾಹ್ನ 3 ಗಂಟೆವರೆಗೆ ಸಾರ್ವಜನಿಕರಿಗೆ ದರ್ಶನ, ಭೋಜನ, ಪ್ರಸಾದ ವಿತರಣೆ ನಡೆಯುವುದಿಲ್ಲ.
ಅಪರಾಹ್ನ 12.10ಕ್ಕೆ ರಾಷ್ಟ್ರಪತಿಗಳು ಶ್ರೀ ಪೇಜಾವರ ಮಠಕ್ಕೆ ಭೇಟಿ ಕೊಡಲಿದ್ದು 12.40ರ ವರೆಗೆ ಪೇಜಾವರ ಸ್ವಾಮೀಜಿಯವರ ಜತೆ ಮಾತುಕತೆ ನಡೆಸಲಿದ್ದಾರೆ. 12.45ಕ್ಕೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ, ಪ್ರಸಾದ ಸ್ವೀಕರಿಸಿದ ಬಳಿಕ 1.05 ಗಂಟೆಗೆ ನಿರ್ಗಮಿಸುವರು. ಈ ಹಿನ್ನೆಲೆಯಲ್ಲಿ ಆ ದಿನ ಬೆಳಗ್ಗೆ 8 ಗಂಟೆಯೊಳಗೆ ಶ್ರೀಕೃಷ್ಣ ಮಠದ ಎಲ್ಲ ಪೂಜೆಗಳನ್ನು ಸ್ವಾಮೀಜಿಯವರು ನೆರವೇರಿಸುವರು.
ಪೇಜಾವರ ಮಠಕ್ಕೆ ಸುಣ್ಣಬಣ್ಣ!
ಪೇಜಾವರ ಮಠದಲ್ಲಿ ಸುಣ್ಣ ಬಣ್ಣ ಕೊಡುವ ಕೆಲಸ ಭರದಿಂದ ನಡೆಯುತ್ತಿದೆ. ಏರ್ ಕೂಲರ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಪೇಜಾವರ ಮಠದಲ್ಲಿರುವ ವಿದ್ಯಾರ್ಥಿಗಳನ್ನು ಪ್ರಹ್ಲಾದ ಗುರುಕುಲಕ್ಕೆ ಸ್ಥಳಾಂತರಿಸಲಾಗಿದೆ. ರಾಮ ವಿಟuಲ ಸಭಾಭವನ ಮತ್ತು ಪೇಜಾವರ ಮಠದ ಎರಡು ಛತ್ರಗಳಲ್ಲಿ ಶಿಷ್ಟಾಚಾರದಂತೆ ಭದ್ರತಾ ಪಡೆಯವರಿಗೆ ಕೊಠಡಿಗಳನ್ನು ಕಾದಿರಿಸಲಾಗಿದೆ. ರಥಬೀದಿಯ ಸುತ್ತಲಿನ ಛತ್ರಗಳ ಕೋಣೆಗಳನ್ನು ಪೊಲೀಸರಿಗೆ ಬಿಟ್ಟುಕೊಡಲಾಗಿದೆ. ಇದರೊಂದಿಗೆ ರಥಬೀದಿ ಸುತ್ತಲಿನ ಅಂಗಡಿಗಳನ್ನು ಡಿ.26ರ ಮಧ್ಯಾಹ್ನ 12ರಿಂದ ಡಿ.27ರ ಅಪರಾಹ್ನ 4 ಗಂಟೆಯವರೆಗೆ ಮುಚ್ಚಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.