ಮಾಯಾಂಕ್‌ರನ್ನು ಅವಮಾನಿಸಿದ ಆಸೀಸ್ ಕಮೆಂಟೇಟರ್
Team Udayavani, Dec 27, 2018, 6:00 AM IST
ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕರ್ನಾಟಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್‌ರನ್ನುಆಸ್ಟ್ರೇಲಿಯದ ವೀಕ್ಷಕ ವಿವರಣೆಗಾರ ಕೆರಿ ಓ ಕೀಫ್ ಅವಮಾನಿಸಿದ್ದಾರೆ.
ಮಾಯಾಂಕ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ವೀಕ್ಷಕ ವಿವರಣೆ ನಡೆಸುತ್ತಿದ್ದ ಮಾಜಿ ಕ್ರಿಕೆಟಿಗ ಕೀಫ್, ಮಾಯಾಂಕ್ ರಣಜಿಯಲ್ಲಿ ಬಾರಿಸಿದ ತ್ರಿಶತಕವನ್ನು ಪ್ರಸ್ತಾಪಿಸಿ ಅಪಹಾಸ್ಯ ಮಾಡಿದರು. “ರಣಜಿಯಲ್ಲಿ ಮಾಯಾಂಕ್ ತ್ರಿಶತಕ ಸಿಡಿಸಿದ್ದಾರೆ. ಅದು ಯಾವುದೋ ಕ್ಯಾಂಟೀನ್ ಹುಡುಗರ ಅಥವಾ ಹೋಟೆಲ್ ವೈಟರ್ ವಿರುದ್ಧ ಹೊಡೆದಿರಬಹುದು’ ಎಂದು ಟೀಕಿಸಿದ್ದಾರೆ. ಇದೇ ವೇಳೆ ಆಸೀಸ್ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಕೂಡ ಮಾತನಾಡಿದ್ದಾರೆ. ಭಾರತದಲ್ಲಿ ಮಾಯಾಂಕ್ ಬ್ಯಾಟಿಂಗ್ ಸರಾಸರಿ ಶೇ.50, ಇದು ಆಸ್ಟ್ರೇಲಿಯದಲ್ಲಿ ಸರಾಸರಿ 40 ಆಗಿದೆ ಎನ್ನುವ ಮೂಲಕ ಭಾರತದ ದೇಶಿ ಕ್ರಿಕೆಟ್ ಕೂಟವನ್ನು ಪರೋಕ್ಷವಾಗಿ ಕಳಪೆ ಎಂದಿದ್ದಾರೆ. ಇವರಿಬ್ಬರ ಟೀಕೆಗೆ ಮಾಯಾಂಕ್ ಅರ್ಧಶತಕ ಸಿಡಿಸುವ ಮೂಲಕ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಕೀಫ್ ಬೆಂಡೆತ್ತಿದ್ದ ಟ್ವೀಟಿಗರು
ಮಾಯಾಂಕ್ ವಿರುದ್ಧ ಆಸೀಸ್ ಮಾಜಿ ಕ್ರಿಕೆಟಿಗ ಅವಮಾನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಟ್ವೀಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಿಷಭ್ ಸಿಂಗ್ ಎಂಬ ಅಭಿಮಾನಿಯೊಬ್ಬರು ಕೀಫ್ ಜನ್ಮ ಜಾಲಾಡಿದ್ದಾರೆ. ಕೀಫ್ ಅವರೆ, ಮಾಯಾಂಕ್ ಮೊದಲ ಟೆಸ್ಟ್‌ನಲ್ಲೇ ಅರ್ಧಶತಕ ಸಿಡಿಸಿದ್ದಾರೆ. ನೀವು 24 ಟೆಸ್ಟ್ ಪಂದ್ಯ ಆಡಿ 1 ಅರ್ಧಶತಕ ದಾಖಲಿಸಿದ್ದೀರಿ. ಈಗ ಹೇಳಿ ನಿಜವಾದ ಕ್ಯಾಂಟೀನ್ ಕ್ರಿಕೆಟಿಗ ಯಾರು ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Lokayukta ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿಯಿಂದ ಪ್ರತಿಭಟನೆ
Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್
Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.