ಬಾಂಗ್ಲಾ ಚುನಾವಣೆ ಬುಡಮೇಲು ಮಾಡಲು ಪಾಕ್ ಯತ್ನ: ಹಸೀನಾ
Team Udayavani, Dec 27, 2018, 12:07 PM IST
ಢಾಕಾ : ”ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್ಪಿ)ಯ ಸಹಾಯ ಪಡೆದು ಪಾಕಿಸ್ಥಾನ, ಬಾಂಗ್ಲಾದೇಶದ ಮಹಾ ಚುನಾವಣೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದೆ” ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ.
ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ಇದೇ ಡಿ.30ರಂದು ನಡೆಯುತ್ತಿದೆ. ಪ್ರಧಾನಿ ಹಸೀನಾ ಅವರ ಆವಾಮಿ ಲೀಗ್ ಮತ್ತು ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್ಪಿ) ವಿರುದ್ಧ ತೀವ್ರ ರಾಜಕೀಯ ಕದನ ನಡೆಯಲಿದೆ.
‘ಬಾಂಗ್ಲಾದೇಶದ 11ನೇ ಮಹಾ ಚುನಾವಣೆಯನ್ನು ಬುಡಮೇಲು ಮಾಡುವ ಸಂಚನ್ನು ಪಾಕ್ ಐಎಸ್ಐ ಹೊಂದಿದ್ದು ಅದು ಬಿಎನ್ಪಿ ನಾಯಕರ ನೆರವಿನೊಂದಿಗೆ ಪಿತೂರಿ ನಡೆಸುತ್ತಿದೆ’ ಎಂದು ಪ್ರಧಾನಿ ಶೇಖ್ ಹಸೀನಾ ಆರೋಪಿಪಿಸಿದರು.
“ನಾವು ಕೇವಲ ಪಾಕಿಸ್ಥಾನವನ್ನು ಮತ್ತು ಐಎಸ್ಐ ಅನ್ನು ಮಾತ್ರವೇ ಏಕೆ ದೂರಬೇಕು ? ನಾವು ದೂರುವುದಿದ್ದರೆ ಬಿಎನ್ಪಿ ಅನ್ನು ಕೂಡ ದೂರಬೇಕು. ಏಕೆಂದರೆ ಅದು ದೇಶದಲ್ಲಿನ ಪ್ರಜಾಸತ್ತೆಯನ್ನು ನಾಶ ಮಾಡುವುದಕ್ಕೆ ಐಎಸ್ಐ ನಿಂದ ಲಂಚ ಪಡೆಯುತ್ತಿದೆ. ಬಿಎನ್ಪಿ ಗೆ ದೇಶದ ಮೇಲಾಗಲೇ ಜನತೆಯ ಮೇಲಾಗಲೀ ಪ್ರೀತಿ ಇಲ್ಲ. ಬಿಎನ್ಪಿಗೆ ದೇಶ ಅಭಿವೃದ್ಧಿ ಹೊಂದುವುದು ಬೇಕಾಗಿಲ್ಲ; ಅದಕ್ಕೆ ಪ್ರಜಾಸತ್ತೆಯ ಮೇಲೂ ಗೌರವವಿಲ್ಲ” ಎಂದು ಹಸೀನಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.