ಮನಸೋ ಇಚ್ಛೆ ಭವನಗಳ ಬಳಕೆ ತಡೆಗೆ ಸಮಿತಿ


Team Udayavani, Dec 28, 2018, 11:05 AM IST

m4-manaso.jpg

ಮೈಸೂರು: ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಸಮುದಾಯ ಭವನಗಳ ನಿರ್ವಹಣೆಗಾಗಿ ಪಾಲಿಕೆ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ಮೈಸೂರು ಮಹಾ ನಗರಪಾಲಿಕೆ ತೀರ್ಮಾನಿಸಿದೆ. ಮೇಯರ್‌ ಪುಷ್ಪಲತಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಗರಪಾಲಿಕೆ ಸಾಮಾನ್ಯ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಸರ್ಕಾರದ ಅನುದಾನದಿಂದ ನಿರ್ಮಿಸಿರುವ ಸಮುದಾಯ ಭವನಗಳನ್ನು ಯಾವುದೋ ಜನಾಂಗ, ಸಮುದಾಯ, ಸಂಘಸಂಸ್ಥೆಗಳಿಗೆ ವಹಿಸುತ್ತಿರುವುದರಿಂದ ಅವರು ಸಮುದಾಯ ಭವನಗಳನ್ನು ವ್ಯಾವಹಾರಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಆರೋಗ್ಯ ಶಿಬಿರಗಳಂತಹ ಸೇವಾ ಕಾರ್ಯಗಳಿಗೆ ಲಭ್ಯವಾಗದ ಸಮುದಾಯ ಭವನಗಳನ್ನು ಮನಸೋಇಚ್ಛೆ ಬಾಡಿಗೆ ಪಡೆದು ಮದುವೆ, ಬೀಗರೂಟಗಳಿಗೆ ನೀಡಲಾಗುತ್ತಿದೆ. ಕೆಲ ಸಮುದಾಯ ಭವನಗಳು ಗುಂಪುಗಾರಿಕೆಯಿಂದ ನಿರ್ವಹಣೆ ಕಾಣದೆ ಪಾಳು ಬೀಳುತ್ತಿವೆ ಎಂದು ಸದಸ್ಯರು ಪಕ್ಷಬೇಧ ಮರೆತು ಗಮನಸೆಳೆದರು.

ಬಾಡಿಗೆ ವಸೂಲಿ: ಸದಸ್ಯ ಕೆ.ವಿ.ಶ್ರೀಧರ್‌ ಮಾತನಾಡಿ, ಸಮುದಾಯ ಭವನಗಳು ಯಾರ ಸುಪರ್ದಿಯಲ್ಲಿವೆ? ಸಂಘ ಸಂಸ್ಥೆಗಳು ಸಮುದಾಯ ಭವನಗಳಿಗೆ ಮನಸೋಇಚ್ಛೆ ಬಾಡಿಗೆ ನಿಗದಿಪಡಿಸುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಮುದಾಯ ಆಧಾರಿತವಾದ ಆರೋಗ್ಯ ತಪಾಸಣಾ ಶಿಬಿರ ಮತ್ತಿತರ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಬೇಕು. ಆದರೆ, ಮದುವೆ, ಬೀಗರೂಟ, ಮುಂತಾದ ಕಾರ್ಯಕ್ರಮಗಳಿಗೆ  2,500 ದಿಂದ 5,000 ವರೆಗೆ ಬಾಡಿಗೆ ಪಡೆದು ಕೊಡಲಾಗುತ್ತಿ¤ದೆ. ಆದರಲ್ಲೂ ಕೆಲವು ಸಮುದಾಯ ಭವನಗಳಿಗೆ 12 ರಿಂದ 15 ಸಾವಿರ ರೂ.ಗಳವರೆಗೆ ಬಾಡಿಗೆ ಪಡೆಯಲಾಗುತ್ತಿದೆ ಎಂದು ಹೇಳಿದರು.

ನಿರ್ವಹಣೆ: ಆರೀಫ್ಹುಸೇನ್‌ ಮಾತನಾಡಿ, ಸೂಕ್ತ ನಿರ್ವಹಣೆ ಇಲ್ಲದೆ ಸಮುದಾಯ ಭವನಗಳ ಸ್ಥಿತಿ ಚಿಂತಾಜನಕವಾಗಿದೆ. ಕಿಡಿಗೇಡಿಗಳ ಅನೈತಿಕ ಚಟುವಟಿಕೆಯ ತಾಣವಾಗುವ ಮುನ್ನ ಪಾಲಿಕೆ ಅವುಗಳ ನಿರ್ವಹಣೆಗೆ ಗಮನಹರಿಸಬೇಕು ಎಂದರು.

10 ಲಕ್ಷ ಎಲ್ಲೋಯ್ತು?: ಬಿ.ವಿ. ಮಂಜುನಾಥ್‌ ಮಾತನಾಡಿ, ಜಯನಗರದಲ್ಲಿರುವ ಪೈ.ಬಸವಯ್ಯ ಸಮುದಾಯ ಭವನದಲ್ಲಿ ಆರೋಗ್ಯ ಶಿಬಿರ ನಡೆಸಲು ಅವಕಾಶ ಕೊಡಲಿಲ್ಲ. ಅಲ್ಲದೆ, ಕಾಂಪೌಂಡ್‌ ಮತ್ತು ಅಡುಗೆ ಮನೆ ನಿರ್ಮಾಣ ಕಾಮಗಾರಿಗೆ 10 ಲಕ್ಷ ರೂ. ಎಂದು ಫ‌ಲಕದಲ್ಲಿ ಬರೆಯಲಾಗಿದೆ. ಆದರೆ, ಅಲ್ಲಿ ಕಾಂಪೌಂಡಾಗಲಿ, ಅಡುಗೆ ಮನೆಯಾಗಲಿ ನಿರ್ಮಾಣವಾಗಿಲ್ಲ ಎಂದು ಗಮನಸೆಳೆದರು. ಸದಸ್ಯರ ಚರ್ಚೆ ಬಳಿಕ ಮೇಯರ್‌ ಪುಷ್ಪಲತಾ, ಸಮುದಾಯ ಭವನಗಳ ನಿರ್ವಹಣೆಗಾಗಿ ನಗರ ಪಾಲಿಕೆ ಸದಸ್ಯರನ್ನೊಳಗೊಂಡಂತೆ ಸಮಿತಿ ರಚಿಸುವುದಾಗಿ ಆದೇಶಿಸಿದರು.

ಪಕ್ಕಾ ಮನೆ ಯೋಜನೆ: ಕಂದಾಯ ಬಡಾವಣೆಯಲ್ಲಿನ ಮನೆಗಳಿಂದ ಪಾಲಿಕೆ ತೆರಿಗೆ ವಸೂಲು ಮಾಡುವುದರಿಂದ ನಗರ ಪಾಲಿಕೆ ವ್ಯಾಪ್ತಿಯ ಕಂದಾಯ ಬಡಾವಣೆಗಳಿಗೆ ನಾಗರಿಕ ಸೌಲಭ್ಯ ಕಲ್ಪಿಸಿಕೊಡುವುದರಲ್ಲಿ ತಪ್ಪಿಲ್ಲ ಎಂದು ಹಲವು ಸದಸ್ಯರು ಅಭಿಪ್ರಾಯಪಟ್ಟರು. ಈ ಬಗ್ಗೆ ಸ್ಪಷ್ಟನೆ ನೀಡಿದ ಪಾಲಿಕೆ ಆಯುಕ್ತ ಜಗದೀಶ್‌, ತೆರಿಗೆ ಸಂಗ್ರಹಿಸಿದ ಮೇಲೆ ಸೌಲಭ್ಯ ಕಲ್ಪಿಸುವುದು ನಗರ ಪಾಲಿಕೆಯ ಕರ್ತವ್ಯ. ಆದರೆ, ಬಡಾವಣೆ ಮತ್ತೂಂದು ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ನಮ್ಮ ಹಂತದಲ್ಲಿ ತೀರ್ಮಾನಿಸಲು  ಆಗುವುದಿಲ್ಲ ಎಂದರು. 

ಮಾಹಿತಿ ನೀಡಿ: ನಗರ ಪಾಲಿಕೆಯ ಪರವಾಗಿ ಹೈಕೋರ್ಟ್‌ನಲ್ಲಿ ವಕಾಲತ್ತು ವಹಿಸಿರುವ ಎಂ.ಪಿ. ಉಮಾದೇವಿ ಮತ್ತು ಎಚ್‌.ಸಿ. ಶಿವರಾಮು ಅವರ ಪೈಕಿ ಶಿವರಾಮು ಅವರನ್ನು ಕೈಬಿಟ್ಟು, ಮೋಹನ್‌ ಭಟ್‌ ಅವರನ್ನು ನೇಮಕ ಮಾಡಿಕೊಳ್ಳಲು ಸದಸ್ಯರ ಅಭಿಪ್ರಾಯದಂತೆ ಮೇಯರ್‌ ಆದೇಶ ನೀಡಿದರು. ಜೊತೆಗೆ ವಕೀಲರಿಗೆ ಪೂರಕವಾಗಿ ಪಾಲಿಕೆ ಅಧಿಕಾರಿಗಳು ಅಗತ್ಯ ಮಾಹಿತಿ ಮತ್ತು ದಾಖಲೆ ಒದಗಿಸಬೇಕು. ಒಂದು ವೇಳೆ ಪ್ರಕರಣದಲ್ಲಿ ಸೋಲುಂಟಾದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವಾಗ್ವಾದ: ಸ್ಥಾಯಿ ಸಮಿತಿಯಲ್ಲಿ ಚರ್ಚಿಸಿದ್ದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್‌ ಕಟ್ಟಡ ಮರು ನಿರ್ಮಾಣ ವಿಷಯವನ್ನು ಕೌನ್ಸಿಲ್‌ ಸಭೆಗೆ ಏಕೆ ತಂದಿಲ್ಲ ಎಂದು ಸದಸ್ಯ ನಾಗರಾಜು ಪ್ರಶ್ನಿಸಿದರು. ಈ ವಿಚಾರ ನಾಗರಾಜು ಮತ್ತು ಅಯೂಬ್‌ ಖಾನ್‌ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಸಭೆಯಲ್ಲಿ ಉಪ ಮೇಯರ್‌ ಶಫಿ ಅಹಮ್ಮದ್‌  ಹಾಜರಿದ್ದರು.

ಪಾರ್ಕ್‌, ವೃತ್ತಕ್ಕೆ ಯಾರ್ಯಾರದೋ ಹೆಸರಿಡಬೇಡಿ: ಮೈಸೂರಿಗೆ ಸಂಬಂಧ ಪಡದವರು, ನಗರಕ್ಕೆ ಅವರ ಕೊಡುಗೆ ಏನೂ ಇಲ್ಲದಿದ್ದರು ನಿಧನರಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ನಗರದ ಉದ್ಯಾನ, ರಸ್ತೆ, ವೃತ್ತಗಳಿಗೆ ಅವರ ಹೆಸರಿಡುವುದು ಬೇಡ ಎಂದು ಬಿಜೆಪಿ ಸದಸ್ಯೆ ಸುನಂದಾ ಫಾಲನೇತ್ರ ಆಗ್ರಹಿಸಿದರು. ಲಲಿತ ಮಹಲ್‌ ವೃತ್ತಕ್ಕೆ ಮಾಜಿ ಎಂಎಲ್‌ಸಿ, ಮೈಸೂರು ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ದಿ.ಎಂ. ಮಲ್ಲಿಕಾರ್ಜುನಸ್ವಾಮಿ ಅವರ ಹೆಸರಿಡುವಂತೆ ಪ್ರಸ್ತಾವನೆ ಬಂದಿದೆ.

ಅವರು ಇದ್ದಿದ್ದು ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಏಕೆ ಅವರ ಹೆಸರಿಡಬೇಕು. ಮೈಸೂರಿನವರ ಹೆಸರನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಮಕರಣ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದರು. ಕುವೆಂಪುನಗರದ ಗಗನಚುಂಬಿ ರಸ್ತೆಯ ಡಿವೈಡರ್‌ ಮಾದರಿಯ ಉದ್ಯಾನಕ್ಕೆ ಮಾಜಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಹೆಸರಿಟ್ಟು, ಅವರಿಗೆ ಅಗೌರವ ಸೂಚಿಸುವುದು ಬೇಡ. ಬೇರೊಂದು ವೃತ್ತಕ್ಕೋ, ಉದ್ಯಾನಕ್ಕೋ ನಾಮಕರಣ ಮಾಡೋಣ ಎಂದರು.

ಟಾಪ್ ನ್ಯೂಸ್

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

12(1

Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

1-sn

Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.