ಘುಂಗುರೂ ಘುಂಗುರೂ ಮತ್ತೆ ಕೇಳಿದೆ ಸದ್ದು 


Team Udayavani, Dec 28, 2018, 1:20 PM IST

28-december-10.jpg

ನರ್ತಕಿಯರು, ಭರತ ನಾಟ್ಯ ಕಲಾವಿದರು ಹಾಕಿಕೊಳ್ಳುತ್ತಿದ್ದ ಘುಂಗುರೂ ಸದ್ದು ಈಗೀನ ಯವತಿಯರ ಕಾಲಿನಿಂದಲೂ ಕೇಳಿ ಬರುತ್ತಿದೆ. ಹೌದು ಫ್ಯಾಶನ್‌ ಜಗತ್ತಿನಲ್ಲೂ ಈಗ ಎಲ್ಲಡೆ ಘುಂಗುರೂ ಗೆಜ್ಜೆ ನಾದವೇ ಕೇಳುತ್ತಿದೆ.

ಹಣ್ಮಕ್ಕಳಿಗೂ ಕಾಲ್ಗೆಜ್ಜೆಗಳಿಗೂ ಅವಿನಾಭಾವ ಸಂಬಂಧ. ಇದು ಹಳೆ ಕಾಲದಿಂದಲೂ ಮುಂದುವರಿದುಕೊಂಡು ಬಂದ ಸಂಪ್ರದಾಯ. ಹೀಗಾಗಿಯೇ ಇಂದು ಮಾರುಕಟ್ಟೆಯಲ್ಲಿ ವೈವಿಧ್ಯಮಯವಾದ ಗೆಜ್ಜೆಗಳ ಜತೆಗೆ ಇನ್ನಷ್ಟು ಹೊಸತನಗಳು ಸೇರಿಕೊಳ್ಳುತ್ತಿವೆ. ಹಳೆ ಮಾದರಿಯ ಗೆಜ್ಜೆಗಳು ಹೊಸ ಹೊಸ ರೂಪ ತಳೆದು ಬರುತ್ತಿವೆ. ಇದರಲ್ಲಿ ನರ್ತಕಿಯರು ಹಾಕುತ್ತಿದ್ದ ಘುಂಗುರೂ ಗೆಜ್ಜೆ ಈಗೀನ ಲೇಟೆಸ್ಟ್‌ ಫ್ಯಾಶನ್‌.

ಒಂದು ಕಾಲದಲ್ಲಿ ದಪ್ಪ ಡಿಸೈನ್‌ ಹೊಂದಿರುವ ಗೆಜ್ಜೆ ಭಾರೀ ಸದ್ದು ಮಾಡಿತ್ತು. ಮತ್ತೆ ಅತ್ಯಂತ ತೆಳ್ಳನೆಯ ಗೆಜ್ಜೆಗಳು ಮಾರುಕಟ್ಟೆಗೆ ಬಂದವು. ಆದರೆ ಈಗ ಮತ್ತದೇ ದಪ್ಪ ಗೆಜ್ಜೆ ಹೊಂದಿರುವ ಘುಂಗುರೂ ಮಾದರಿಯ ಗೆಜ್ಜೆಗಳು ಅತೀ ಹೆಚ್ಚು ಬೇಡಿಕೆಯಲ್ಲಿವೆ.

ವಿವಿಧ ಬಗೆ
ಘುಂಗುರೂ ಮಾದರಿಯ ಗೆಜ್ಜೆಯನ್ನು ಚಿನ್ನ, ಬೆಳ್ಳಿ, ಬ್ಲ್ಯಾಕ್‌ ಮೆಟಲ್‌, ಆ್ಯಂಟಿಕ್‌ ನೊಂದಿಗೆ ಹೆಣೆಯಲಾಗುತ್ತದೆ. ಇವು ಕೊಂಚ ದುಬಾರಿ. ರೇಷ್ಮೆ, ನೈಲಾನ್‌, ಉಲ್ಲನ್‌ ದಾರಗಳಲ್ಲೂ ಘುಂಗುರೂ ಗೆಜ್ಜೆಗಳ ಹೆಣೆದಿದ್ದು, ಇವುಗಳು ಅತೀ ಕಡಿಮೆ ದರಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿವೆ. ಫ್ಯಾಶನ್‌ಗೆ ತಕ್ಕಂತೆ ಹೊಂದಿಕೊಳ್ಳುವ ವಿವಿಧ ಬಣ್ಣದ ದಾರಗಳಲ್ಲಿ ಕಟ್ಟಿರುವ ಘುಂಗುರೂ ಗೆಜ್ಜೆಗಳು ದಿರಿಸಿಗನುಗುಣವಾಗಿ ಧರಿಸಬಹುದು ಎಂಬ ಕಾರಣಕ್ಕೆ ಇವುಗಳಿಗೆ ಹೆಚ್ಚು ಬೇಡಿಕೆ ಇವೆ. ಗೆಜ್ಜೆಯ ನಾದ ಹೆಚ್ಚು ಇಷ್ಟಪಡುವವರಿಗಾಗಿ ಹಾಗೂ ಸಿಂಪಲ್‌ ಗೆಜ್ಜೆಯನ್ನು ಇಷ್ಟ ಪಡುವವರಿಗಾಗಿ ಹಲವು ಆಯ್ಕೆಗಳೂ ಇವೆ. ಇವು ಸಾಂಪ್ರದಾಯಿಕ ಶುಭ ಸಮಾರಂಭಗಳಿಗೆ ಹೆಚ್ಚಿನ ಲುಕ್‌ ನೀಡುತ್ತಿದ್ದು , ಕಾಲುಗಳು ಅಂದವಾಗಿ ಕಾಣುವಂತೆ ಮಾಡುತ್ತವೆ. ಗೊಂಚಲಾಗಿ ಇರುವ ಈ ಗೆಜ್ಜೆಗಳು ಜಾಸ್ತಿ ಸಪ್ಪಳವಿಲ್ಲದೆ ಅಂದವನ್ನು ಇಮ್ಮಡಿಗೊಳಿಸುತ್ತವೆ. ಇದನ್ನು ಚಿನ್ನ, ಬೆಳ್ಳಿಯಲ್ಲೂ ಮಾಡಿಸಬಹುದು.

ಯಾವ ದಿರಿಸಿಗೆ ಸೂಕ್ತ
ಸೀರೆ, ಲಂಗಧಾವಣಿ, ಆಫ್ ಸಾರಿ, ಚೋಲಿ ಹೀಗೆ ವಿವಿಧ ರೀತಿಯ ದಿರಿಸಿಗೆ ಹೊಂದಿಕೊಳ್ಳುತ್ತದೆ. ಕಾಲುಗಳು ದಪ್ಪವಿದ್ದರೆ ತೆಳುವಾದ ಗೆಜ್ಜೆಗಳನ್ನು ಹಾಕುವುದರಿಂದ ಸುಂದರವಾಗಿ ಕಾಣುತ್ತದೆ. ಅದೇ ಕಾಲುಗಳು ತೆಳುವಾಗಿದ್ದರೆ ಸ್ವಲ್ಪ ದಪ್ಪದಾದ ಗೆಜ್ಜೆಗಳನ್ನು ಧರಿಸಿದರೆ ಹೆಚ್ಚು ಅಂದವಾಗಿರುತ್ತದೆ. ಬೆಳ್ಳಗಿರುವವರಿಗೆ ಮೆಟಲ್‌, ಬಣ್ಣ ಬಣ್ಣದ ಗೆಜ್ಜೆಗಳು ಹೊಂದಿಕೆಯಾಗುತ್ತವೆ.

ಚಪ್ಪಲಿಗೂ ಮ್ಯಾಚ್‌ ಆಗಲಿ
ಕಾಲಿಗೆ ಹಾಕುವ ಚಪ್ಪಲಿಯೂ ಗೆಜ್ಜೆಯೊಂದಿಗೆ ಮ್ಯಾಚ್‌ ಆದರೆ ಕಾಲುಗಳು ಹೆಚ್ಚು ಅಂದವಾಗಿ ಕಾಣುತ್ತವೆ. ಹೀಗಾಗಿ ಸೂಕ್ತವಾದ ಬಣ್ಣಗಳ ಆಯ್ಕೆ ಇಲ್ಲಿ ಅತೀ ಮುಖ್ಯ.

ಮೆಟಲ್‌ ಗೆಜ್ಜೆಗಳಿಗೆ ಬೇಡಿಕೆ
ಹಿಂದೆಲ್ಲ ಚಿನ್ನ, ಬೆಳ್ಳಿಯ ಗೆಜ್ಜೆಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಈಗ ಚಿನ್ನ, ಬೆಳ್ಳಿ ಬಿಟ್ಟು ಮೆಟಲ್‌, ನೂಲಿನಿಂದ ನೇಯ್ದ ಗೆಜ್ಜೆಗಳಿಗೆ ಯುವತಿಯರು ಮನ ಸೋತಿದ್ದಾರೆ. ಹೀಗಾಗಿ ಇಂಥ ಗೆಜ್ಜೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಸುಮಾ  1000 ರೂ. ನಿಂದ ಪ್ರಾರಂಭವಾಗಿ 25 ಸಾವಿರ ರೂ. ವರೆಗೂ ಬೆಲೆ ಬಾಳುವ ಗೆಜ್ಜೆಗಳು ಲಭ್ಯವಿವೆ.

ಕಾಲಿಗೆ ಮಾತ್ರವಲ್ಲ
ಘುಂಗು ರೂವನ್ನು ಕಾಲಿಗೆ ಮಾತ್ರ ಹಾಕಿ ಕೊಳ್ಳು ವುದು ಎಂದು ತಿಳಿದುಕೊಳ್ಳಬೇಡಿ. ಕೈ ಬಳೆ, ಕುತ್ತಿಗೆ ಸರ, ಕಿವಿಯೋಲೆಗಳಲ್ಲೂ ಘುಂಗು ರೂವನ್ನು ಹೆಣೆಯಲಾಗುತ್ತದೆ. ಹೆಚ್ಚಾಗಿ ಮೆಟಲ್‌ ಮತ್ತು ದಾರದಿಂದ ಇವುಗಳನ್ನು ಮಾಡಲಾಗಿರುತ್ತದೆ. ಫ್ಯಾಶನ್‌ ಜಗತ್ತಿನಲ್ಲಿ ಇದಕ್ಕೂ ಹೆಚ್ಚು ಬೇಡಿಕೆ ಇವೆ.

 ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.