ಇಂಪಾಗಿ ಹಾಡುವ ಗುಲಾಬಿ ಫಿಂಚ್‌

Team Udayavani, Dec 28, 2018, 4:56 PM IST

2-gsg.jpg

ಈ ಹಕ್ಕಿ ಗುಲಾಬಿಗಿಂತ ಸ್ವಲ್ಪ ದೊಡ್ಡದು. ಆದರೆ, ಗುಬ್ಬಿಯನ್ನು ತುಂಬಾ ಹೋಲುತ್ತದೆ. Common Rosefinch (Carpodacus erythrinus ) RM Sparrow+, ಮನೆ ಗುಬ್ಬಿ ಅಂದರೂ ತಪ್ಪಿಲ್ಲ.  ಇದರ ಇಂಪಾದ ದನಿ ಎಲ್ಲರಿಗೂ ಪ್ರಿಯ. ಅದಲ್ಲದೇ, ಇದೇ ಜಾತಿಗೆ ಸೇರಿದ ಬೇರೆ ಬೇರೆ ಬಣ್ಣದ, ಅನೇಕ ಉಪ ಪ್ರಬೇಧದ ಹಕ್ಕಿಗಳಿವೆ. ಇವೆಲ್ಲವೂ ಕೂಡ ಇಂಪಾದ ಕೂಗಿಗೆ ಪ್ರಸಿದ್ಧಿ ಪಡೆದಿವೆ. 

ಕಾಡಿನ ಹಕ್ಕಿಯಾದರೂ ಇದಕ್ಕೆ ಮನುಷ್ಯರ ಒಡನಾಟ ಇದೆ. ಏಕೆಂದರೆ, ಗಿಳಿ, ಸಾರಿಕಾ ಹಕ್ಕಿಯಂತೆ ಇದನ್ನು ಪಂಜರದಲ್ಲಿ ಇಟ್ಟು ಹೆಚ್ಚಾಗಿ ಸಾಕುತ್ತಾರೆ. ಈ ಹಕ್ಕಿ ಕಾಡಿನಲ್ಲೂ ಸ್ವತ್ಛಂದವಾಗಿ ವಿಹರಿಸುತ್ತದೆ. ಈ ಹಕ್ಕಿ ಸುಮಾರು 15 ಸೆಂ.ಮೀ. ದೊಡ್ಡದಾಗಿರುತ್ತದೆ. ಗಂಡು ಹಕ್ಕಿಯ ಮೈಬಣ್ಣ ಹೆಚ್ಚು ಆಕರ್ಷಕ. ಇದರ ಕಣ್ಣಿನ ಮೇಲಿನ ಬಿಳಿ ಹುಬ್ಬಿನಿಂದ ಹೆಣ್ಣು ಗುಬ್ಬಿಯಾವುದು, ಗಂಡು ಗುಬ್ಬಿಯಾವುದು ಎಂದು ಪಚ್ಚೆ ಹಚ್ಚಲು ಸಹಾಯಕವಾಗಿದೆ. 

ಗಾತ್ರ, ಬಣ್ಣದಲ್ಲಿ ಇದು ಗುಬ್ಬಿಯನ್ನು ಹೋರಿವುದಾದರೂ ದನಿಯಲ್ಲಿ ಫಿಂಚ್‌ ಹಕ್ಕಿಯದ್ದೇ ಸುಮಧುರ ದನಿ.  ಬಲವಾದ ಶಂಕುವಿನ ಆಕಾರದ ಚುಂಚಿನ ತುದಿ ಚೂಪಾಗಿದ್ದು, ದವಸ-ಧಾನ್ಯಗಳನ್ನು ತಿನ್ನಲು ಅನುಕೂಲವಾಗಿದೆ. ಈ ಹಕ್ಕಿಯ ಮೇಲುcಂಚು ಮತ್ತು ಕೆಳಚುಂಚಿನ ನಡುವೆ ಸ್ವಲ್ಪ ಸ್ಥಳ ಇರುವುದರಿಂದಲೇ ಮಧುರ ದನಿ ಹೊರಡಿಸುವುದು. 

ಗುಲಾಬಿಫಿಂಚ್‌, ಚಿಕ್ಕ ಚಿಕ್ಕ ಗುಂಪಿನಲ್ಲಿ, ಅರೆ ಮಲೆನಾಡು ಪ್ರದೇಶದಲ್ಲಿ, ಸಾಗುವಳಿ ಜಾಗದಲ್ಲೂ ಕಾಣಸಿಗುತ್ತದೆ.  ಭಾರತದಲ್ಲಿ ಹಿಮಾಲಯದ 10 ಸಾವಿರ ಅಡಿ ಎತ್ತರದ ಕಾಡಿನಲ್ಲಿ, ಕಾಶ್ಮೀರ, ಟಿಬೆಟ್‌ನಲ್ಲಿ ಸಹ ಇದರ ಇರುನೆಲೆ ಇದೆ.

ಚಳಿಗಾಲದಲ್ಲಿ ಭಾರತದ ದಕ್ಷಿಣ ಭಾಗದಲ್ಲಿ ಕಾಣಸಿಗುತ್ತದೆ. ಕಾಡಿನಲ್ಲಿರುವ ಬಸರಿ, ಅತ್ತಿ, ಬೂರಲ ಮರಗಳೆಂದರೆ ಈ ಹಕ್ಕಿಗೆ ತುಂಬಾ ಇಷ್ಟ.   ಬೂರಲ ಹೂವು ಮತ್ತು ಮೊಗ್ಗುಗಳನ್ನು ತಿನ್ನುವುದು ಎಂದರೆ ಇದಕ್ಕೆ ಹಬ್ಬ. ವಲಸೆ ಬಂದಾಗ ದವಸ ಧಾನ್ಯಗಳನ್ನು ತಿನ್ನುತ್ತವೆ. ಹೂವಿನ ಮಕರಂದ ಹೀರುವಾಗ ಪರಾಗ ಸ್ಪರ್ಶವೂ ಆಗುತ್ತದೆ. 

 ಕೀಟ, ಧಾನ್ಯ, ಮಕರಂದ ಗುಲಾಬಿ ಫಿಂಚ್‌ನ ಪ್ರಮುಖ ಆಹಾರ. ಧಾನ್ಯಗಳನ್ನು ತಿನ್ನಲೆಂದು ಈ ಹಕ್ಕಿಗಳು ಗುಂಪಾಗಿ ಹೊಲಗಳಿಗೆ ದಾಳಿ ಮಾಡುತ್ತವೆ.  ಪ್ರಾಯಕ್ಕೆ ಬಂದಾಗ ಗಂಡು ಹಕ್ಕಿಯ ನೆತ್ತಿ, ಎದೆಯ ಮೇಲಿನ ಗುಲಾಬಿ ಬಣ್ಣ ಎದ್ದು ಕಾಣುತ್ತದೆ. ಹೊಟ್ಟೆ ಭಾಗದಲ್ಲಿ ತಿಳಿ ಹಳದಿ ಛಾಯೆಯ ಬಿಳಿಬಣ್ಣದಿಂದ ಕೂಡಿರುತ್ತದೆ.  ಚುಂಚು ತಿಳಿ ಗುಲಾಬಿ ಬಣ್ಣದ್ದು. ದಟ್ಟ ಕಂದು ಗೆರೆಯ ರೆಕ್ಕೆ ಇದಕ್ಕಿದೆ. ರೆಕ್ಕೆಯ ಅಂಚಿನಲ್ಲಿ ಕಂದು ಬಣ್ಣದ ಎರಡು ರೇಖೆ ಇದೆ. ಗಂಡು 3 ಭಿನ್ನ ದನಿಯಲ್ಲಿ ಕೂಗುತ್ತದೆ.  ಅದು ಏರು ಸ್ವರದಲ್ಲಿರುತ್ತದೆ. ಹೀಗೆ ಮಂದ್ರ, ಏರು ಸ್ವರದಲ್ಲಿ ಕೂಗುವ ಗಂಡು ಹಕ್ಕಿ ತನ್ನ ಟೆರಿಟರಿಯನ್ನು  ಎದುರಾಳಿಗೆ ತಿಳಿಸಲು ಹೀಗೆ ಮಾಡುತ್ತದೆ. ಅಪಾಯ ಎದುರಾದಾಗ ಎಲ್ಲ ಹಕ್ಕಿಗಳೂ ಒಮ್ಮೆಲೇ ಚದುರಿ ಬೇರೆ ಬೇರೆಯಾಗುತ್ತವೆ. ಮತ್ತೆ ಸೇರಬೇಕಾದಾಗ ಭಿನ್ನ ದನಿ ಹೊರಡಿಸಿ, ಒಟ್ಟಾಗುತ್ತವೆ. ತನ್ನ ಸಂಗಾತಿಯನ್ನು ಹುಡುಕಿಕೊಳ್ಳಲೂ ಕೂಡ ಗಂಡು ಹಕ್ಕಿ ಇಂಥದೇ ಸ್ವರದಲ್ಲಿ ಕೂಗುತ್ತದೆ. 

 ಜೂನ್‌, ಆಗಸ್ಟ್‌ ಇದು ಮರಿಮಾಡುವ ಸಮಯ. ಕಾಡು ಗುಲಾಬಿಯಂಥ ಗಿಡಗಳ ಪೊದೆಯಲ್ಲಿ ನಾರು ಬೇರು, ಹತ್ತಿಯನ್ನು ಸೇರಿಸಿ ಬಟ್ಟಲಿನಾಕಾರದಲ್ಲಿ ಗೂಡು ಕಟ್ಟುತ್ತದೆ. ಈ ಹಕ್ಕಿ  ನಾಲ್ಕರಿಂದ 5 ನೀಲಿ ಬಣ್ಣದ ಆಯತ ವರ್ತುಲಾಕಾರದ ಕಂದು ಚುಕ್ಕೆ ಇರುವ ಮೊಟ್ಟೆ ಇಡುತ್ತದೆ.  ಗಂಡು-ಹೆಣ್ಣು ಎರಡೂ ಮರಿಗಳ ಪಾಲನೆ ಪೋಷಣೆ ಮಾಡುತ್ತದೆ.  ಗುಟುಕು ನೀಡುವ ಸಂದರ್ಭದಲ್ಲೂ ಗಂಡು-ಹೆಣ್ಣು ಎರಡೂ ಕೆಲಸ ಹಂಚಿಕೊಳ್ಳುತ್ತವೆ. 

ಪಿ.ವಿ.ಭಟ್‌ ಮೂರೂರು 

ಟಾಪ್ ನ್ಯೂಸ್

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.