ತ್ರಿಗುಣಗಳು ಯಾವುವು? ಅವನ್ನು ಗುರುತಿಸುವುದು ಹೇಗೆ?
Team Udayavani, Dec 29, 2018, 5:16 AM IST
ವಿಶ್ವವು ತ್ರಿಗುಣಾತ್ಮಕವಾದುದು. ತ್ರಿಗುಣಗಳೆಂದರೆ ಸಣ್ತೀಗುಣ, ರಜೋಗುಣ ಮತ್ತು ತಮೋಗುಣ. ಈ ಮೂರು ಮುಖ್ಯ ಗುಣಗಳಿಂದ ಕೂಡಿದ ಜಗತ್ತಿನಲ್ಲಿ ಈ ಮೂರೂ ಗುಣಗಳು ಮಿಶ್ರವಾದ ಜೀವಿಗಳಿವೆ. ಇವುಗಳಿಂದ ಮಾನವರಾದ ನಾವೂ ಹೊರತಲ್ಲ. ಪ್ರತಿಯೊಬ್ಬರ ಸ್ವಭಾವದ ಮೇಲೆ ಪ್ರಭಾವ ಬೀರುವ ಈ ಮೂರೂ ಗುಣಗಳು ನಮ್ಮ ಸ್ವಭಾವವು ಒಮ್ಮೊಮ್ಮೆ ಒಂದೊಂದು ರೀತಿ ತೋರಿಬರುವುದಕ್ಕೆ ಕಾರಣವಾಗಿವೆ. ಒಂದಕ್ಕಿಂದ ಒಂದು ಭಿನ್ನವಾದ ವೃತ್ತಿಗಳಿಂದ ಕೂಡಿದ ಇವು ಅದಕ್ಕನುಗುಣವಾಗಿ ನಮ್ಮ ನಡತೆಯಲ್ಲಿ ಬದಲಾವಣೆಯನ್ನುಂಟು ಮಾಡುತ್ತವೆ.
ಈ ಗುಣಗಳ ವೃತ್ತಿ ನಿರೂಪಣೆಯಾದರೂ ಏನು?
ಶಮ, ದಮ, ತಿತಿಕ್ಷಾ (ಮನಸ್ಸಿನ ಸಂಯಮ, ಇಂದ್ರಿಯನಿಗ್ರಹ, ಸಹಿಷ್ಣುತೆ)ವಿವೇಕ, ಸತ್ಯ, ದಯೆ, ಸ್ಮೃತಿ, ಸಂತೋಷ, ತ್ಯಾಗ, ವಿಷಯಗಳ ಕುರಿತು ಅನಿಚ್ಛೆ, ಲಜ್ಜೆ, ಆತ್ಮರತಿ, ದಾನ, ವಿನಯ, ಸರಳತೆ ಇವುಗಳು ಸಣ್ತೀಗುಣದ ವೃತ್ತಿಗಳು. ಇಚ್ಛೆ, ಪ್ರಯತ್ನ, ಮದ, ತೃಷ್ಣೆ, ಗರ್ವ, ಭೇದಬುದ್ಧಿ, ವಿಷಯಭೋಗ, ಯುದ್ಧಾದಿಗಳಲ್ಲಿ ಮದಜನಿತ ಉತ್ಸಾಹ, ಸ್ವಕೀರ್ತಿಯಲ್ಲಿ ಪ್ರೀತಿ, ಹಾಸ್ಯ, ಪರಾಕ್ರಮ, ಹಠ ಇವು ರಜೋಗುಣದ ವೃತ್ತಿಗಳಾಗಿವೆ. ಇನ್ನು ಅಸಹಿಷ್ಣುತೆ, ಲೋಭ, ಸುಳ್ಳು, ಹಿಂಸೆ, ಯಾಚನೆ, ಡಂಭಾಚಾರ, ಕಲಹ, ಶೋಕ, ಮೋಹ, ವಿಷಾದ, ದೀನತೆ, ನಿಷ್ಠೆ, ಆಸೆ, ಭಯ, ಅಕರ್ಮಣ್ಯತೆ ಇವುಗಳೆಲ್ಲಾ ತಮೋಗುಣದ ವೃತ್ತಿಗಳಾಗಿವೆ. ಈ ಮೂರೂ ಗುಣಗಳ ಸಮ್ಮಿಶ್ರದಿಂದಲೇ ಮಾನವನು ಧರ್ಮ, ಅರ್ಥ, ಕಾಮರೂಪೀ ಪುರುಷಾರ್ಥಗಳನ್ನು ಸಾಧಿಸುತ್ತಾನೆ. ಸಣ್ತೀಗುಣದಿಂದ ಶ್ರದ್ಧೆಯೂ, ರಜೋಗುಣದಿಂದ ಆಸಕ್ತಿಯೂ, ತಮೋಗುಣದಿಂದ ಧನವೂ ಪ್ರಾಪ್ತಿಯಾಗುವುದರಿಂದ ಈ ಮೂರೂ ಗುಣಗಳ ಮಿಶ್ರಣದಿಂದಲೇ ಕ್ರಿಯೆಗಳು ನಡೆಯುತ್ತವೆ.
ನಮ್ಮಲ್ಲಿ ಯಾವ ಗುಣಜಾಗೃತವಾಗಿದೆಯೆಂಬುದನ್ನು ತಿಳಿಯುವುದು ಹೇಗೆ?
ಸಾತ್ತಿ$Ìಕ ಗುಣವೇ ಶ್ರೇಷ್ಠವೂ ಮೋಕ್ಷ$ದಾಯಕವೂ ಆಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಇಂದ್ರಿಯಗಳ ಕಾರಣದಿಂದ ನಮ್ಮ ವೃತ್ತಿಯು ಸಾತ್ತಿ$Ìಕ, ರಾಜಸ ಮತ್ತು ತಾಮಸ ಗುಣಗಳಿಂದ ಪ್ರಭಾವಿತವಾಗುತ್ತದೆ. ಈ ಗುಣಗಳಲ್ಲಿ ಯಾವ ಗುಣ ನಮ್ಮಲ್ಲಿ ಹೆಚ್ಚಿದೆ ಎಂಬುದನ್ನು ತಿಳಿದುಕೊಳ್ಳಲು ಮಧಾºಗವತದಲ್ಲಿ ಸುಲಭ ಉಪಾಯಗಳನ್ನು ಹೇಳಲಾಗಿದೆ. ಯಾವಾಗ ಮನಸ್ಸು ಪ್ರಸನ್ನವಾಗುವುದೋ ಇಂದ್ರಿಯಗಳು ಶಾಂತವಾಗುವುದೋ, ದೇಹವು ನಿರ್ಭೀತವಾಗುವುದೋ, ಮನಸ್ಸಿನಲ್ಲಿ ಆಸಕ್ತಿಗಳಿಲ್ಲವಾಗುವುದೋ ಆಗ ಸಣ್ತೀಗುಣವು ವೃದ್ಧಿಯಾಗಿದೆ ಎಂದರ್ಥ. ಬುದ್ಧಿಚಾಂಚಲ್ಯ, ಜ್ಞಾನೇಂದ್ರಿಯಗಳು ಅಸಂತುಷ್ಟವಾಗಿರುವುದು, ಕರ್ಮೇಂದ್ರಿಯಗಳು ವಿಕಾರದಿಂದ ಕೂಡಿರುವುದು, ಮನಸ್ಸು ಭಾÅಂತವಾಗಿ ಶರೀರವು ಅಸ್ವಸ್ಥವಾದಾಗ ರಜೋಗುಣ ಹೆಚ್ಚಿದೆ ಎಂದು ಅರಿಯಬೇಕು. ಯಾವಾಗ ಚಿತ್ತವು ಜ್ಞಾನೇಂದ್ರಿಯಗಳ ಮೂಲಕ ಶಬ್ದಾದಿ ವಿಷಯಗಳನ್ನು ಅರಿಯಲು ಅಸಮರ್ಥವಾದಾಗ ಮತ್ತು ಖನ್ನವಾಗಿ ಲೀನವಾಗತೊಡಗಿದಾಗ, ಮನಸ್ಸು ಬರಿದಾಗಿ, ಅಜ್ಞಾನವಿಷಾದಗಳು ಹೆಚ್ಚಿದಾಗ ತಮೋಗುಣವು ವೃದ್ಧಿಯಾಗಿದೆ ಎಂದರ್ಥ. ಹೀಗೆ ಕಾಲಕಾಲಕ್ಕೆ ನಮ್ಮ ಮನಸ್ಸಿನ ನಡೆಯನ್ನು ಪರೀಕ್ಷಿಸಿಕೊಳ್ಳುವ ಮೂಲಕ ಯಾವ ಗುಣದಿಂದ ನಾವು ಪ್ರಭಾವಿತರಾಗಿದ್ದೇವೆ ಎಂಬುದನ್ನು ಅರಿಯಬಹುದು.
ಮನಸ್ಸಿನ ನಿಯಂತ್ರಣದಿಂದ ಸಾತ್ತ್ವಿಕಗುಣವನ್ನೇ ಹೆಚ್ಚೆಚ್ಚು ಬೆಳೆಸಿಕೊಂಡಾಗ ನಾವು ನೆಮ್ಮದಿಯ ಜೀವನವನ್ನು ಅನುಭವಿಸುವುದಲ್ಲದೆ ಇತರರಿಗೂ ಇದರಿಂದ ಒಳ್ಳೆಯದೇ ಆಗುತ್ತದೆ. ಅಸೂಯೆ, ಕ್ರೋಧ, ಮದಾದಿ ಸಂಗತಿಗಳು ಪರಸ್ಪರರಲ್ಲಿ ಸಹಬಾಳ್ವೆಗೆ ತೊಂದರೆಯನ್ನುಂಟುಮಾಡುತ್ತವೆ. ಶರೀರದಿಂದ ಬಿಡುಗಡೆ ಹೊಂದಲು ಸಣ್ತೀಗುಣವೇ ಸುಲಭ ಮಾರ್ಗ. ಏಕೆಂದರೆ ಸಣ್ತೀಗುಣದಿಂದ ಸ್ವರ್ಗವೂ, ರಜೋಗುಣದಿಂದ ಮತ್ತೆ ಮನುಷ್ಯಲೋಕವೂ ಹಾಗೂ ತಮೋಗುಣದಿಂದ ನರಕವೂ ಪ್ರಾಪ್ತಿಯಾಗುತ್ತದೆ. ಸಾ ತ್ತ್ವಿಕತೆ ನಮ್ಮಲ್ಲಿ ಇಲ್ಲವಾದಾಗ ರಜತಮೋಗುಣಗಳಿಂದಾಗಿ ಭೂಲೋಕವೇ ನರಕವಾಗುತ್ತದೆ. ಇವತ್ತು ಇದೇ ಕಾರಣದಿಂದಾಗಿಯೇ ನಾವು ಬದುಕುತ್ತಿರುವ ಈ ನೆಲ ನರಕರೂಪವನ್ನು ಪಡೆದುಕೊಳ್ಳುತ್ತಿದೆಯೇ? ಎಂಬ ಪ್ರಶ್ನೆಯನ್ನು ನಮ್ಮಲ್ಲಿ ನಾವು ಕೇಳಿಕೊಳ್ಳಬೇಕಾಗಿದೆ; ಬದಲಾವಣೆಯನ್ನು ತರಬೇಕಿದೆ.
ವಿಷ್ಣು ಭಟ್, ಹೊಸ್ಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.